ನವದೆಹಲಿ: ಪ್ರತಿದಿನ ಸೋಷಿಯಲ್ ಮೀಡಿಯಾ(Social Media)ದಲ್ಲಿ ನೂರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ಸಖತ್ ಸದ್ದು ಮಾಡಿದರೆ, ಇನ್ನು ಕೆಲವು ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸುತ್ತವೆ. ಅದೇ ರೀತಿಯ ಮತ್ತೊಂದು ವಿಡಿಯೋ ಇದೀಗ ವೈರಲ್(Viral Video) ಆಗುತ್ತಿದೆ.
ನೀವು ಇಂಟರ್ನೆಟ್ ಜಗತ್ತಿನಲ್ಲಿ(Internet World) ಸಕ್ರಿಯರಾಗಿದ್ದರೆ ದೇಸಿ ಜುಗಾಡ್‌ನ ವಿಡಿಯೋ(Desi Jugaad)ಗಳನ್ನು ನೋಡಿರುತ್ತೀರಿ. ಕೆಲವು ಜನರ ಮೆದುಳು ಹೇಗೆ ಕೆಲಸ ಮಾಡುತ್ತದೆ ಅಂತಾ ಅನೇಕರು ಆಶ್ಚರ್ಯ ಪಡುತ್ತಾರೆ. ಇವರನ್ನು ನೋಡಿದ ನಂತರ ನೀವು ನಗಲು ಪ್ರಾರಂಭಿಸುತ್ತೀರಿ..? ಏನ್ ತಲೆಯಪ್ಪಾ ಅಂತಾ ನೀವು ಒಂದುಕ್ಷಣ ಅಚ್ಚರಿಪಡುತ್ತೀರಿ. ಬಸ್ ನಲ್ಲಿ ಸೀಟು ಹಿಡಿಯಲು ಈ ವ್ಯಕ್ತಿ ಮಾಡಿರುವ ಈ ವಿಡಿಯೋ ನೋಡಿದರೆ ನೀವು ಕೂಡ ಹೊಟ್ಟೆ ಹುಣ್ಣಾಗುವಂತೆ ನಗುಗುವುದು ಗ್ಯಾರೆಂಟಿ.
ಇದನ್ನೂ ಓದಿ: Bank Holidays : ಬ್ಯಾಂಕ್ ಗ್ರಾಹಕರೆ ಗಮನಿಸಿ : 9 ದಿನ ಬ್ಯಾಂಕ್ ಬಂದ್ - ಫುಲ್ ಲಿಸ್ಟ್ ಇಲ್ಲಿದೆ ನೋಡಿ
ಹೆಂಡತಿಗೆ ಬಸ್ ಹತ್ತಿಸಲು ವ್ಯಕ್ತಿ ಏನು ಮಾಡಿದ್ದಾನೆ ನೋಡಿ
ಕೆಲವೊಮ್ಮೆ ಬಸ್ ಅಥವಾ ರೈಲಿನಲ್ಲಿ ಸೀಟುಗಳನ್ನು ಹಿಡಿಯಲು ಜನರು ಮಾಡುವ ಸರ್ಕಸ್ ಬಗ್ಗೆ ನಾವು ನೋಡೇ ಇರ್ತಿವಿ. ಕರ್ಚಿಫ್ ಹಾಕುವುದು, ನೀರಿನ ಬಾಟಲ್ ಇಡುವುದು, ತಾವು ತಂದ ಬ್ಯಾಗ್ ಇಟ್ಟು ಸೀಟುಗಳನ್ನು ರಿಸರ್ವ್ ಮಾಡುವ ಜನರಿಗೇನು ಕಮ್ಮಿಯಿಲ್ಲ. ಬಸ್ ಹತ್ತಿದ ತಕ್ಷಣ ಸೀಟನ್ನು ಆಕ್ರಮಿಸಿಕೊಳ್ಳಲು ಜನರು ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ. ಹೀಗೆ ಮಾಡದಿದ್ದರೆ ನಿಮಗೆ ಸೀಟು ಸಿಗುವುದು ಡೌಟ್. ಸಾಮಾಜಿಕ ಜಾಲತಾಣ(Social Media)ಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಬಸ್ಸಿನಲ್ಲಿ ಸೀಟು ಸಿಗದ ಕಾರಣ ಬೇರೆ ಹಾದಿ ಹಿಡಿದಿದ್ದಾರೆ. ಬಸ್ಸಿನಲ್ಲಿ ಕುಳಿತಿದ್ದ ಪ್ರಯಾಣಿಕನು ತನ್ನ ಹೆಂಡತಿಯನ್ನು ಒಳಗೆ ಹತ್ತಿಲು ಬೇರೆ ಲೇವಲ್ ನಲ್ಲಿಯೇ ಯೋಚಿಸಿದ್ದಾನೆ.
ಬಸ್ಸಿನ ಕಿಟಕಿಯಿಂದ ಹತ್ತಿಸಿದ!
ಬಸ್ ಹತ್ತಿದ ವ್ಯಕ್ತಿಯೊಬ್ಬ ತನ್ನ ಹೆಂಡತಿಗೂ ಸೀಟು ಹಿಡಿಯಲು ಮಾಡಿರುವ ಪ್ಲಾನ್ ನೋಡಿ ಇದೀಗ ಇಂಟೆರ್ನೆಟ್ ಬಳಕೆದಾರರೇ ಗಾಬರಿಯಾಗಿದ್ದಾರೆ. ಬಸ್ಸಿನ ಒಳಗಡೆ ಹೋದ ಆತ ಬಾಗಿಲಿನಿಂದ ಬಂದರೆ ತನ್ನ ಹೆಂಡತಿಗೆ ಸೀಟು(Wife and Husband) ಸಿಗುವುದಿಲ್ಲವೆಂಬುದನ್ನು ಅರಿತು ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ತನ್ನ ಹೆಂಡತಿಯನ್ನು ಹಿಂಬದಿಯ ಸೀಟಿನ ಕಿಟಕಿಯ ಬಳಿ ಬರುವಂತೆ ಹೇಳಿದ್ದಾನೆ. ಒಪನ್ ಆಗಿದ್ದ ಕಿಟಕಿಯ ಮೂಲಕವೇ ಹೆಂಡತಿಯ ಕೈಗಳನ್ನು ಹಿಡದು ಬಸ್ಸಿನ ಒಳಗೆ ಎಳೆದುಕೊಂಡಿದ್ದಾನೆ. ಇನ್‌ಸ್ಟಾಗ್ರಾಂನಲ್ಲಿ ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ವೈರಲ್(Trending News) ಆಗಿದ್ದು, ಸಾವಿರಾರು ಜನರು ಲೈಕ್ ಮತ್ತು ಶೇರ್ ಮಾಡಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ನೀವು ವಿಡಿಯೋ ನೋಡಿ ಒಂದ್ಸಾರಿ ನಕ್ಕುಬಿಡಿ.
ಇದನ್ನೂ ಓದಿ: Retirement Planning : ನಿವೃತ್ತಿ ಹೂಡಿಕೆಗೆ PPF ಅಥವಾ NPS ಯಾವುದು ಉತ್ತಮ? ಲೆಕ್ಕಾಚಾರ ಇಲ್ಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.