Center Releases List Of Immunity Boosters - ಇಮ್ಯೂನಿಟಿ ಹೆಚ್ಚಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಈ ಲಿಸ್ಟ್, ಏನೇನು ಶಾಮೀಲಾಗಿವೆ

Center Releases List Of Immunity Boosters - ಇಮ್ಯೂನಿಟಿ ಹೆಚ್ಚಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಈ ಲಿಸ್ಟ್, ಏನೇನು ಶಾಮೀಲಾಗಿವೆ.

Written by - Nitin Tabib | Last Updated : May 7, 2021, 03:46 PM IST
  • ಕೊವಿಡ್ ಸೋಂಕಿನಿಂದ ಚೇತರಿಸಿಕೊಳ್ಳುವವರು ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸಬೇಕು.
  • ಈ ಕುರಿತು ಸಲಖೆ ನೀಡಿದೆ ಕೇಂದ್ರ ಸರ್ಕಾರ.
  • ಇಲ್ಲಿದೆ ಕೇಂದ್ರ ಸರ್ಕಾರ ಸೂಚಿಸಿರುವ ಇಮ್ಯೂನಿಟಿ ಬೂಸ್ಟರ್ ಪಟ್ಟಿ
Center Releases List Of Immunity Boosters - ಇಮ್ಯೂನಿಟಿ ಹೆಚ್ಚಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಈ ಲಿಸ್ಟ್, ಏನೇನು ಶಾಮೀಲಾಗಿವೆ title=
Immunity Booster List (File Photo)

ನವದೆಹಲಿ: Center Releases List Of Immunity Boosters - ಕೊವಿಡ್ 19 ನಿಂದ ಚೇತರಿಸಿಕೊಳ್ಳುತ್ತಿರುವ ಜನರು ತಮ್ಮ ದೇಹದ ರೋಗ ಪ್ರತಿರೋಧಕ ಶಕ್ತಿ ಮತ್ತು ಊರ್ಜೆಯನ್ನು ಹೆಚ್ಚಿಸುವಲ್ಲಿ ಗಮನ ಕೇಂದ್ರೀಕರಿಸಬೇಕು. ಕೇಂದ್ರ ಸರ್ಕಾರ (Central Government) ತನ್ನ mygovindia ಟ್ವಿಟ್ಟರ್ ಹ್ಯಾಂಡಲ್ ಮೂಲಕ ಕೊವಿಡ್ 19 (Covid-19) ಪ್ರಕೋಪದ ನಡುವೆಯೇ ನೈಸರ್ಗಿಕವಾಗಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಖಾದ್ಯ ಪದಾರ್ಥಗಳ ಪಟ್ಟಿಯನ್ನೇ ಬಿಡುಗಡೆ ಮಾಡಿದೆ.

ನಾಲಗೆ ರುಚಿ ಹಾಗೂ ವಾಸನೆ ಸಾಮರ್ಥ್ಯ ಕಡಿಮೆಯಾಗುವುದು ಇದು ಕೊವಿಡ್ ನ ಸಾಮಾಹ್ಯ ಲಕ್ಷಣಗಳಲ್ಲಿ ಒಂದು. ಏಕೆಂದರೆ ಕೊವಿಡ್ (Coronavirus) ಸೋಂಕಿನಿಂದ ಹಸಿವೆ ಕಡಿಮೆಯಾಗುತ್ತದೆ ಹಾಗೂ ರೋಗಿಗಳು ಆಹಾರ ನುಂಗುವಲ್ಲಿ ಅಡಚಣೆ ಎದುರಿಸುತ್ತಾರೆ. ಇದರಿಂದ ನರಗಳ ದೌರ್ಬಲ್ಯ ಎದುರಾಗುವ ಸಾದ್ಯತೆ ಇದೆ (Corona Symptoms). ಈ ಕುರಿತಾದ ಮಾರ್ಗಸೂಚಿಗಳಲ್ಲಿ ಕಾಲ-ಕಾಲಕ್ಕೆ ಮೃದುವಾದ ಆಹಾರ ಸೇವನೆ ಹಾಗೂ ಊಟದಲ್ಲಿ ಆಮ್ ಚೂರ್ ಶಾಮೀಲುಗೊಳಿಸಲು ಸಲಹೆ ನೀಡಲಾಗಿದೆ.

ಇದನ್ನೂ ಓದಿ- Corona Vaccine ಹಾಕಿಸುವ ಮುನ್ನ ಹಾಗೂ ನಂತರ ಏನು ಮಾಡ್ಬೇಕು ಮತ್ತು ಏನ್ಮಾಡಬಾರದು? ಇಲ್ಲಿವೆ ಸರ್ಕಾರದ New Guidelines

ಇಳಿದೆ ಸಂಪೂರ್ಣ ಪಟ್ಟಿ 
>> ಸಾಕಷ್ಟು ಜೀವಸತ್ವಗಳು ಮತ್ತು ಖನಿಜಗಳನ್ನು ಪಡೆಯಲು ವರ್ಣರಂಜಿತ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು

>>ಆತಂಕವನ್ನು ತೊಡೆದುಹಾಕಲು, ಕಡಿಮೆ ಪ್ರಮಾಣದ ಡಾರ್ಕ್ ಚಾಕೊಲೇಟ್ನೊಂದಿಗೆ ಕನಿಷ್ಠ ಶೇ.70 ರಷ್ಟು ಕೋಕೋ ತೆಗೆದುಕೊಳ್ಳಿ.

 >>ರೋಗನಿರೋಧಕ ಶಕ್ತಿ ಹೆಚ್ಚಿಸಲು ದಿನಕ್ಕೆ ಒಮ್ಮೆ ಅರಿಶಿನ ಹಾಲು ಸೇವಿಸಿ.

>>ನಿಶ್ಚಿತ ಸಮಯಕ್ಕೆ ತಕ್ಕಂತೆ ಮೃದುವಾದ ಆಹಾರ ಸೇವಿಸಿ ಮತ್ತು ಆಹಾರದಲ್ಲಿ ಆಮ್ ಚೂರ್ ಅಳವಡಿಸಿ.

>>ಧಾನ್ಯಗಳಾದ ರಾಗಿ, ಓಟ್ಸ್ ಮತ್ತು ಅಮರಬೆಲ್ ಅನ್ನು ಶಿಫಾರಸು ಮಾಡಲಾಗಿದೆ.

>>ಚಿಕನ್, ಮೀನು, ಇಜಿ, ಚೀಸ್, ಸೋಯಾ ಮತ್ತು ಬೀಜಗಳಂತಹ ಪ್ರೋಟೀನ್ ಯುಕ್ತ ಆಹಾರ ಸೇವಿಸಿ.

>>ವಾಲ್ ನಟ್ಸ್, ಬಾದಾಮಿ, ಆಲಿವ್ ಎಣ್ಣೆ ಮತ್ತು ಸಾಸಿವೆ ಎಣ್ಣೆಯಂತಹ ಆರೋಗ್ಯಕರ ಕೊಬ್ಬು ಹೊಂದಿರುವ ಆಹಾರಗಳು ಸೇವಿಸಿ,

ಇದನ್ನೂ ಓದಿ- ಪುರುಷರ ಆರೋಗ್ಯಕ್ಕೆ ಕುಂಬಳಕಾಯಿ ಬೀಜ : ಇಲ್ಲಿದೆ ನೋಡಿ ಅದರ ಪ್ರಯೋಜನ!

ದೇಶಾದ್ಯಂತ ಕೊರೊನಾ ವೈರಸ್ ನ ಎರಡನೇ ಅಲೆ ಹರಡಿರುವುದರ ಹಿನ್ನೆಲೆ ದೈನಂದಿನ ಹೊಸ ಪ್ರಕರಣಗಳು ಹಾಗೂ ಸಾವುಗಳ ಸಂಖ್ಯೆಲ್ಲಿಯೂ ಕೂಡ ಏರಿಕೆಯಾಗುತ್ತಿದೆ. ಕೇವಲ ಜ್ವರ, ಶಾರೀರಿಕ ನೋವಿನಂತಹ ಆರಂಭಿಕ ಲಕ್ಷಣಗಳಿಂದಲೇ ಜನರಲ್ಲಿ ಭೀತಿಯ ವಾತಾವರಣ ಹರಡುತ್ತಿದೆ. ಕೊವಿಡ್-19 ವಿರುದ್ಧ ಹೋರಾಡಲು ಹಲವು ವೈಜ್ಞಾನಿಕ ಮನೆಮದ್ದು ಸಲಹೆಗಳೂ ಕೂಡ ಸಾಮಾಜಿಕ ಮಾಧಯ್ಮಗಳಲ್ಲಿ ಹರಿದಾಡತೊಡಗಿವೆ. ಈ ಹಿನ್ನೆಲೆ ಪುನರುಚ್ಚರಿಸಿರುವ ಸರ್ಕಾರ, ಕೊವಿಡ್ ನ ಸುಮಾರು ಶೇ.80 ರಿಂದ ಶೇ.85ರಷ್ಟು ಸೊಂಕಿತರನ್ನು ಮನೆಯಲ್ಲಿಯೇ, ಯಾವುದೇ ಗಂಭೀರ ಚಿಕಿತ್ಸೆಯ ಹಸ್ತಕ್ಷೇಪವಿಲ್ಲದೆ, ಉಚಿತ ಪೋಷಕ ಆಹಾರ ಪದಾರ್ಥಗಳ ಸಹಾಯದಿಂದ ಗುಣಪಡಿಸಬಹುದು ಎಂದು ಹೇಳಿದೆ. ಇದಲ್ಲದೆ ದೇಹ ಸಹಿಷ್ಣುತೆಯ ಆಧಾರದ ಮೇಲೆ ಉಚಿತ ಶಾರೀರಿಕ ಚಟುವಟಿಕೆ ಹಾಗೂ ಉಸಿರಿನ ವ್ಯಾಯಾಮ ಮಾಡಲು ಸಲಹೆ ನೀಡಿದೆ.

ಇದನ್ನೂ ಓದಿ-Coronavirus: ಹ್ಯಾಂಡ್ ಸ್ಯಾನಿಟೈಸರ್ ಎಷ್ಟು ಪ್ರಮಾಣದಲ್ಲಿ ಮತ್ತು ಹೇಗೆ ಬಳಕೆ ಮಾಡಬೇಕು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News