ʼಸಲಾರ್‌ʼ ರಿಲೀಸ್‌ ಡೇಟ್‌ ಫಿಕ್ಸ್‌ : ಶಾರುಖ್‌-ಪ್ರಭಾಸ್‌ ಸಿನಿಮಾ ಮುಖಾಮುಖಿ, ಗೆಲುವು ಯಾರಿಗೆ..?

Salaar release date : ಕೊನೆಗೂ ಪ್ರಶಾಂತ್‌ ನೀಲ್‌ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಸಲಾರ್‌ ತೆರೆ ಮೇಲೆ ಬರಲು ರೆಡಿಯಾಗಿದೆ. ರೆಬಲ್‌ ಸ್ಟಾರ್‌ ಪ್ರಭಾಸ್‌ ನಟನೆಯ ಈ ಸಿನಿಮಾ ಡಿಸೆಂಬರ್‌ 22 ರಂದು ವಿಶ್ವದಾದ್ಯಂತ ಅಬ್ಬರಿಸಲು ರೆಡಿಯಾಗಿದೆ. ವಿಶೇಷ ಅಂದ್ರೆ ಆ ದಿನವೇ ಬಾಲಿವುಡ್‌ ಬಾದ್‌ ಶಾ ನಟ ಶಾರುಖ್‌ ಖಾನ್‌ ಅಭಿನಯದ ʼಡುಂಕಿʼ ಚಿತ್ರವೂ ಸಹ ಬಿಡುಗಡೆಯಾಗಲಿದ್ದು, ಕ್ಯೂರಿಯಾಸಿಟಿ ಮೂಡಿಸಿದೆ.

Written by - Krishna N K | Last Updated : Sep 29, 2023, 01:08 PM IST
  • ಬಹುನಿರೀಕ್ಷಿತ ಸಿನಿಮಾ ಸಲಾರ್‌ ತೆರೆ ಮೇಲೆ ಬರಲು ರೆಡಿಯಾಗಿದೆ.
  • ಡಿಸೆಂಬರ್‌ 22 ರಂದು ವಿಶ್ವದಾದ್ಯಂತ ಅಬ್ಬರಿಸಲು ಸಲಾರ್‌ ಸಿದ್ಧ.
  • ಶಾರುಖ್‌ ಡುಂಕಿ ಸಿನಿಮಾ ಎದುರು ಸಲಾರ್‌ ಬಿಡುಗಡೆಯಾಗಲಿದೆ.
ʼಸಲಾರ್‌ʼ ರಿಲೀಸ್‌ ಡೇಟ್‌ ಫಿಕ್ಸ್‌ : ಶಾರುಖ್‌-ಪ್ರಭಾಸ್‌ ಸಿನಿಮಾ ಮುಖಾಮುಖಿ, ಗೆಲುವು ಯಾರಿಗೆ..? title=

Dunki VS Salaar : ಡಿಸೆಂಬರ್ 22 ಭಾರತೀಯ ಚಿತ್ರರಂಗದ ಇಬ್ಬರು ದೊಡ್ಡ ತಾರೆಯರ ಸಿನಿಮಾಗಳ ಘರ್ಷಣೆಗೆ ಸಾಕ್ಷಿಯಾಗಲಿದೆ. ಶಾರುಖ್ ಖಾನ್ ಅವರ ʼಡುಂಕಿʼ ಮತ್ತು ಪ್ರಭಾಸ್ ನಾಯಕತ್ವದ ʼಸಲಾರ್ʼ ಎರಡೂ ಈ ವರ್ಷ ಡಿಸೆಂಬರ್ 22 ರಂದು ಥಿಯೇಟರ್‌ಗಳಲ್ಲಿ ಬರಲಿವೆ. ಡುಂಕಿ ಬಿಡುಗಡೆ ದಿನಾಂಕವನ್ನು ಕಳೆದ ವರ್ಷ ನಟ ಶಾರುಖ್ ಖಾನ್ ಮತ್ತು ಚಿತ್ರದ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಘೋಷಿಸಿದ್ದರು. ಇಂದು ಸಲಾರ್ ಚಿತ್ರತಂಡ ಸಿನಿಮಾದ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ದಾರೆ.

ಸಲಾರ್‌ ರಿಲೀಸ್‌ ಕುರಿತು ನಟ ಪ್ರಭಾಸ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡು ಮಾಹಿತಿ ನೀಡಿದ್ದಾರೆ. ಚಿತ್ರ ವಿಶ್ವಾದ್ಯಂತ ಡಿಸೆಂಬರ್ 22, 2023 ರಂದು ತೆರೆಗೆ ಬರಲಿದೆ ಎಂದು ತಿಳಿಸಿದ್ದಾರೆ. ಸೆಪ್ಟೆಂಬರ್ 28, 2023 ರಂದು ಸಲಾರ್ ಬಿಡುಗಡೆಯಾಗಬೇಕಿತ್ತು, ಕಾರಣರಾಂತದಿಂದ ರಿಲೀಸ್‌ ಡೇಟ್‌ ಮುಂದೂಡಲಾಗಿತ್ತು.

 
 
 
 

 
 
 
 
 
 
 
 
 
 
 

A post shared by Hombale Films (@hombalefilms)

ಇದನ್ನೂ ಓದಿ: ಶುರುವಾಗ್ತಿದೆ ಹೊಚ್ಚ ಹೊಸ ಭಾವನಾತ್ಮಕ ಪ್ರೀತಿ ಕಥೆ "ಅವನು ಮತ್ತೆ ಶ್ರಾವಣಿ"...!!

ಇನ್ನು ಶಾರುಖ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಡುಂಕಿಯಲ್ಲಿ ತಾಪ್ಸಿ ಪನ್ನು ಕೂಡ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಗೌರಿ ಖಾನ್ ನಿರ್ಮಿಸಲಿದ್ದಾರೆ. ಇನ್ನು ಹೊಂಬಾಳೆ ಫಿಲ್ಮಂಸ್‌ ನಿರ್ಮಾಣದ ಸಲಾರ್‌ ಸಿನಿಮಾದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪ್ರಶಾಂತ್ ನೀಲ್ ಹಿಂದಿನ ಸಿನಿಮಾ ಕೆಜಿಎಫ್: ಅಧ್ಯಾಯ 2 2022 ರಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಹಲವಾರು ದಾಖಲೆಗಳನ್ನು ಸೃಷ್ಟಿಸಿತ್ತು. ಇದೀಗ ಪಠಾಣ್‌, ಜವಾನ್‌ ದಾಖಲೆ ಮುರಿಯುತ್ತಾ ಅಂತ ಕಾಯ್ದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News