ನವದೆಹಲಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಈಗ ಅವರ ಜೊತೆ ಕಳೆದ ನೆನಪುಗಳನ್ನು ಹಲವಾರು ನಾಯಕರು ಹಂಚಿಕೊಳ್ಳುತ್ತಿದ್ದಾರೆ.
ಈಗ ಅವರ ಜೊತೆ ಕೆಲಸ ಮಾಡಿದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಸಚಿವ ಆಸಿಪ್ ಅರುಣ್ ಹೃದಯಸ್ಪರ್ಶಿ ಟಿಪ್ಪಣಿ ಮೂಲಕ ಅವರನ್ನು ಸ್ಮರಿಸಿದ್ದಾರೆ.
मैं 2004 से लगभग तीन साल उनका बॉडी गार्ड रहा। एसपीजी में पीएम की सुरक्षा का सबसे अंदरुनी घेरा होता है - क्लोज़ प्रोटेक्शन टीम जिसका नेतृत्व करने का अवसर मुझे मिला था। एआईजी सीपीटी वो व्यक्ति है जो पीएम से कभी भी दूर नहीं रह सकता। यदि एक ही बॉडी गार्ड रह सकता है तो साथ यह बंदा… pic.twitter.com/468MO2Flxe
— Asim Arun (@asim_arun) December 26, 2024
"2004 ರಿಂದ ಸುಮಾರು ಮೂರು ವರ್ಷಗಳ ಕಾಲ ನಾನು ಅವರ ಬಾಡಿ ಗಾರ್ಡ್ ಆಗಿದ್ದೆ. ಎಸ್ಪಿಜಿ ಪ್ರಧಾನಿ ಮಂತ್ರಿಯ ಆಂತರಿಕ ಭದ್ರತಾ ವಲಯದ ಭಾಗವಾಗಿದೆ. ಇಂತಹ ತಂಡದ ನೇತೃತ್ವವಹಿಸುವ ಅವಕಾಶ ನನಗೆ ಬಂದಿತ್ತು. ಎಐಜಿ ಸಿಪಿಟಿ ಎಂತಹ ಹುದ್ದೆ ಎಂದರೆ ಪ್ರಧಾನಿಯಿಂದ ಎಂದಿಗೂ ದೂರ ಇರುವಂತಿಲ್ಲ. ಹಾಗಾಗಿ ಸದಾ ಅವರ ನೆರಳಿನಂತೆ ಅವರ ಜೊತೆಯಾಗಿ ನಿಲ್ಲುವ ಜವಾಬ್ದಾರಿ ನನ್ನದಾಗಿತ್ತು. ಡಾ.ಸಾಹೇಬ್ ಅವರ ಬಳಿ ಇದಿದ್ದು ಒಂದೇ ಕಾರು, ಅದು ಮಾರುತಿ 800, ಇದು ಪ್ರಧಾನಿ ನಿವಾಸದಲ್ಲಿ ಮಿನುಗುತ್ತಿರುವ ಕಪ್ಪು BMW ಕಾರಿನ ಹಿಂದೆ ಸದಾ ನಿಂತಿರುತ್ತಿತ್ತು. ಆದರೆ ಮನಮೋಹನ್ ಸಿಂಗ್ ಅವರು ನನಗೆ ಪದೇ ಪದೇ ಅಸೀಮ್, ನನಗೆ ಈ ಕಾರಿನಲ್ಲಿ ಪ್ರಯಾಣಿಸಲು ಇಷ್ಟವಿಲ್ಲ, ನನ್ನ ಕಾರು ಇದು (ಮಾರುತಿ) ಎಂದು. ಸರ್, ಈ ಕಾರು ನಿಮ್ಮ ಐಷಾರಾಮಿಗಾಗಿ ಅಲ್ಲ, ಅದರ ಭದ್ರತಾ ವೈಶಿಷ್ಟ್ಯಗಳಿಗಾಗಿ ಇದನ್ನು ಎಸ್ಪಿಜಿ ತೆಗೆದುಕೊಂಡಿದೆ ಎಂದು ನಾನು ವಿವರಿಸಿದೆ. ಆದರೆ ಮಾರುತಿಯ ಕಾರಿನ ಮುಂದೆ ಹೋದಾಗಲೆಲ್ಲಾ ಅವರು ಬಹಳ ಆತ್ಮೀಯ ನೋಟದೊಂದಿಗೆ ಅದನ್ನು ನೋಡುತ್ತಿದ್ದರು.ನಾನು ಮಧ್ಯಮ ವರ್ಗದವನು, ಸಾಮಾನ್ಯರ ಬಗ್ಗೆ ಚಿಂತಿಸುವುದೇ ನನ್ನ ಕೆಲಸ ಎಂಬ ನಿರ್ಣಯವನ್ನು ತೆಗೆದುಕೊಂಡಂತೆ ಇದ್ದರು, ಕೋಟ್ಯಾಂತರ ರೂ ಬೆಲೆಬಾಳುವ ಕಾರು ಪ್ರಧಾನಿಯವರದ್ದಾಗಿರಬಹುದು, ಆದರೆ ನನ್ನ ಕಾರು ಮಾರುತಿ 800' ಎನ್ನುವಂತೆ ಅವರು ವರ್ತಿಸುತ್ತಿದ್ದರು' ಎಂದು ಅವರು ಸುದೀರ್ಘ ಟಿಪ್ಪಣಿ ಮೂಲಕ ಮನಮೋಹನ್ ಸಿಂಗ್ ಅವರನ್ನು ಸ್ಮರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.