ಬೆಂಗಳೂರು : ಪ್ರತಿಯೊಬ್ಬರೂ ಮನೆ ಖರೀದಿಸುವ ಕನಸು ಕಾಣುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮನೆ ಖರೀದಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಇದಕ್ಕೆ ಸಾಕಷ್ಟು ಹಣ ಬೇಕಾಗುತ್ತದೆ. ಜನರು ಬ್ಯಾಂಕ್‌ಗಳಲ್ಲಿ ಗೃಹ ಸಾಲ ಪಡೆದು ಮನೆ ಖರೀದಿಸಲು ಇದೇ ಕಾರಣ. ಆದರೆ, ದೊಡ್ಡ ಸಾಲದ ಮೊತ್ತ, ನೀವು ಪಾವತಿಸಬೇಕಾದ EMI ಕೂಡಾ ದೊಡ್ಡದಾಗಿರುತ್ತದೆ.
ಆದ್ದರಿಂದ, ಸಾಲದ ಮೊತ್ತವನ್ನು ಕಡಿಮೆ ಇಟ್ಟುಕೊಳ್ಳುವುದು ಉತ್ತಮ ಆಯ್ಕೆಯಾಗಿರುತ್ತದೆ. ಆದರೆ, ಈಗ ಇಂತಹ ಪರಿಸ್ಥಿತಿಯಲ್ಲಿ ಮನೆಗೆ ಹಣ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕಾಗಿ ಇಪಿಎಫ್‌ನಲ್ಲಿ ಠೇವಣಿ ಮಾಡಿದ ಮೊತ್ತವನ್ನು ಬಳಸಬಹುದು. ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ (ಇಪಿಎಫ್) ಠೇವಣಿ ಮಾಡಿದ ಮೊತ್ತವನ್ನು ಪ್ರತಿ ತಿಂಗಳು ಉದ್ಯೋಗಿಗಳ ವೇತನದಿಂದ ಕಡಿತಗೊಳಿಸಲಾಗುತ್ತದೆ. ಮನೆ ಖರೀದಿಗಾಗಿ ಯಾವುದೇ ಉದ್ಯೋಗಿ ತನ್ನ ಸಕ್ರಿಯ EPF ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ಈ ಮೊತ್ತವನ್ನು ಮರಳಿ ಪಡೆಯಲು ಎರಡು ಮಾರ್ಗಗಳಿವೆ.
ಇದನ್ನೂ ಓದಿ : ಬಹಳ ದಿನಗಳ ಬಳಿಕ ಮತ್ತೆ ಇಳಿಕೆ ಕಂಡ ಚಿನ್ನದ ಬೆಲೆ ! ಬಂಗಾರ ಖರೀದಿಗೆ ಸರಿಯಾದ ಸಮಯ
ವಿಧಾನ - 1 :
ನೀವು EPFOನಿಂದ ಹಣವನ್ನು ಹಿಂಪಡೆಯಲು ಬಯಸಿದರೆ, EPFO ವಸತಿ ಯೋಜನೆಯಡಿಯಲ್ಲಿ ಈ ಸೌಲಭ್ಯವಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ವಸತಿ ಯೋಜನೆಯಡಿ ಇಪಿಎಫ್‌ನ ಶೇ 90ರಷ್ಟು ಹಣವನ್ನು ಹಿಂಪಡೆಯುವ ಅವಕಾಶ ನೀಡುತ್ತದೆ. ಇದಲ್ಲದೆ, ಹೋಮ್ ಲೋನ್ ಮರುಪಾವತಿ ಯೋಜನೆಯಡಿಯಲ್ಲಿ, ಇಪಿಎಫ್‌ಒ ಸದಸ್ಯರು ತಮ್ಮ ಪಿಎಫ್ ಖಾತೆಯಿಂದ ಗೃಹ ಸಾಲಕ್ಕಾಗಿ ಮಾಸಿಕ ಇಎಂಐ ಅನ್ನು ಸಹ ಪಾವತಿಸಬಹುದು.
EPFO ವಸತಿ ಯೋಜನೆ ನಿಯಮಗಳು :
- ಇಪಿಎಫ್‌ಒ ವಸತಿ ಯೋಜನೆಯ ಮೂಲಕ ಹಣವನ್ನು ಹಿಂಪಡೆಯಲು, ನೀವು 10 ಸದಸ್ಯರೊಂದಿಗೆ ವಸತಿ ಉದ್ದೇಶಕ್ಕಾಗಿ ರಚಿಸಲಾದ ಸಹಕಾರಿ ಅಥವಾ ಸೊಸೈಟಿಯ ಸದಸ್ಯರಾಗಿರಬೇಕು.
- ಇದರ ಹೊರತಾಗಿ, ಇಪಿಎಫ್ ಹಣವನ್ನು ಹಿಂಪಡೆಯಲು, ಇಪಿಎಫ್‌ಒ ಸದಸ್ಯರು 3 ವರ್ಷಗಳವರೆಗೆ ಇಪಿಎಫ್‌ಗೆ ಕೊಡುಗೆ ನೀಡಿರಬೇಕು. ಇದಕ್ಕಿಂತ ಕಡಿಮೆ ಸಮಯದಲ್ಲಿ ಹಣ ಹಿಂಪಡೆಯಲು ಸಾಧ್ಯವಿಲ್ಲ.
ಇದನ್ನೂ ಓದಿ : ಹಿರಿಯ ನಾಗರೀಕರ ಸ್ಥಿರ ಠೇವಣಿ ಯೋಜನೆಯ ಮೇಲೆ ಈ ಬ್ಯಾಂಕ್ ನೀಡುತ್ತಿದೆ ಶೇ.9.1 ರಷ್ಟು ಬಡ್ಡಿದರ!
- ಒಬ್ಬರ ಖಾತೆಯಲ್ಲಿ ಪಿಎಫ್ ಹಣ 20 ಸಾವಿರಕ್ಕಿಂತ ಕಡಿಮೆ ಇದ್ದರೆ, ಅವರು ಅದನ್ನು ಪಡೆಯಲು ಸಾಧ್ಯವಿಲ್ಲ. ಇದಲ್ಲದೆ, ಯಾವುದೇ ಸದಸ್ಯರು ಈ ಯೋಜನೆಯನ್ನು ಒಮ್ಮೆ ಮಾತ್ರ ಪಡೆಯಬಹುದು.
ವಿಧಾನ - 2 :
ವಸತಿ ಯೋಜನೆಯ ಮೂಲಕ ಇಪಿಎಫ್ ಹಣವನ್ನು ಹಿಂಪಡೆಯಲು ಬಯಸದಿದ್ದರೆ, ಇನ್ನೊಂದು ಆಯ್ಕೆ ಇದೆ. ಇಪಿಎಫ್‌ನ ಭಾಗಶಃ ವಾಪಸಾತಿ ವಿಧಾನದ ಅಡಿಯಲ್ಲಿ, ಇಪಿಎಫ್‌ಒ ಸದಸ್ಯರು ಪಿಎಫ್‌ನಿಂದ ಹಣವನ್ನು ಹಿಂಪಡೆಯಬಹುದು. ನಿಮ್ಮ ಇಪಿಎಫ್ ಸದಸ್ಯತ್ವವು 5 ವರ್ಷಗಳಾಗಿದ್ದರೆ, ಮನೆ ಅಥವಾ ಭೂಮಿಯನ್ನು ಖರೀದಿಸಲು ನೀವು ಕೆಲವು ಷರತ್ತುಗಳೊಂದಿಗೆ ಪಿಎಫ್‌ನಿಂದ ಭಾಗಶಃ ಹಿಂಪಡೆಯಬಹುದು. ಇಪಿಎಫ್ ಖಾತೆಯಿಂದ ನೀವು ಪ್ಲಾಟ್ ಖರೀದಿಸಲು ಮಾಸಿಕ ಸಂಬಳದ 24 ಪಟ್ಟು ಮತ್ತು ಮನೆ ಖರೀದಿಸಲು ಅಥವಾ ನಿರ್ಮಿಸಲು ಮಾಸಿಕ ವೇತನದ 36 ಪಟ್ಟು ವರೆಗೆ ಹಿಂಪಡೆಯಬಹುದು. ನಿಮ್ಮ ಉದ್ಯೋಗದಾತರ ಕೊಡುಗೆ ಮತ್ತು ಬಡ್ಡಿ ಎರಡನ್ನೂ ಹಿಂಪಡೆಯಬಹುದು.
ಇದನ್ನೂ ಓದಿ : ಕೈ ತುಂಬಾ ಹಣ ನೀಡುವ ಕಪ್ಪು ಅರಿಶಿನ
ಹಣವನ್ನು ಹಿಂಪಡೆಯುವುದು ಹೇಗೆ? :
- ಹಣವನ್ನು ಹಿಂಪಡೆಯಲು, ಮೊದಲು EPFO ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ https://unifiedportal-mem.epfindia.gov.in/memberinterface/
- ಯುಎಎನ್ ಸಂಖ್ಯೆ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಲಾಗಿನ್ ಮಾಡಿ.
- ಇದರ ನಂತರ KYC ಆಯ್ಕೆಯಲ್ಲಿ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ. ಯಾವುದೇ ಸಮಸ್ಯೆಯಿದ್ದಲ್ಲಿ ಸರಿ ಮಾಡಿಕೊಳ್ಳಿ. ಆನ್‌ಲೈನ್ ಸೇವೆಗೆ ಹೋಗಿ ಮತ್ತು CLAIM (FORM-31, 19&10C) ಕ್ಲಿಕ್ ಮಾಡಿ.
- ಇಲ್ಲಿ ನೀವು EPF ಹಣವನ್ನು ಹಿಂಪಡೆಯಲು ಕೆಲವು ಆಯ್ಕೆಗಳಿರುತ್ತವೆ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಆಯ್ಕೆಯನ್ನು ಆರಿಸಿಕೊಳ್ಳಿ. ಅದರ ನಂತರ ಡ್ರಾಪ್ ಮೆನು ತೆರೆಯುತ್ತದೆ. ಅಲ್ಲಿಂದ ಕ್ಲೈಮ್ ಕ್ಲಿಕ್ ಮಾಡಿ.
- ಇದರ ನಂತರ, ಗೋ ಟು ಆನ್‌ಲೈನ್ ಕ್ಲೈಮ್ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಕ್ಲೈಮ್ ಫಾರ್ಮ್ ಅನ್ನು ಸಲ್ಲಿಸಿ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, EPF ನಿಂದ ಹಿಂತೆಗೆದುಕೊಳ್ಳಲಾದ ಮೊತ್ತವು ಸುಮಾರು 10 ದಿನಗಳಲ್ಲಿ ನಿಮ್ಮ ಖಾತೆಗೆ ಬರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.