ಕಾಬೂಲ್: ರಾಜಧಾನಿ ಕಾಬೂಲ್ ಸೇರಿದಂತೆ ಅಫ್ಘಾನಿಸ್ತಾನದ ಎಲ್ಲ ಪ್ರದೇಶಗಳ ಮೇಲೂ ತಾಲಿಬಾನ್ ಉಗ್ರ ಸಂಘಟನೆ ಹಿಡಿತ ಸಾಧಿಸಿದೆ. ಮುಂದೇನು ಮಾಡುವುದು ಅಂತಾ ಅಫ್ಘಾನ್ ಪ್ರಜೆಗಳು ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ. ಉಗ್ರರ ಕಪಿಮುಷ್ಠಿಯಲ್ಲಿ ಸಿಲುಕಿ ಇಡೀ ಅಫ್ಘಾನಿಸ್ತಾನ(Afghanistan)ವೇ ನಲುಗಿ ಹೋಗಿದೆ. ರಕ್ತಪಾತವನ್ನು ತಪ್ಪಿಸಲು ದೇಶವನ್ನು ತೊರೆದಿರುವುದಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅಶ್ರಫ್ ಘನಿ ಹೇಳಿದ್ದಾರೆ.
ಅಫ್ಘಾನಿಸ್ತಾನವನ್ನು (Afghanistan) ಸಂಪೂರ್ಣವಾಗಿ ವಶಪಡಿಸಿಕೊಂಡಿರುವ ತಾಲಿಬಾನ್ ಉಗ್ರ ಸಂಘಟನೆ ಸರ್ಕಾರ ರಚಿಸುವುದಾಗಿ ಘೋಷಿಸಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗಿ ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್(Abdul Ghani Baradar) ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Afghanistan Crisis: ಅಫ್ಘಾನಿಸ್ತಾನದಲ್ಲಿ ಭಾರತೀಯರಿಗೆ ನಮ್ಮಿಂದ ಯಾವುದೇ ಅಪಾಯ ಇಲ್ಲ ಎಂದ ತಾಲಿಬಾನ್
ತಾಲಿಬಾನ್(Taliban)ರಾಷ್ಟ್ರವ್ಯಾಪಿ ಸೇನಾ ವಿಜಯ ಸಾಧಿಸಿದ ಬಳಿಕ ಅಶ್ರಫ್ ಘನಿ ಮತ್ತು ಇತರ ಉನ್ನತ ರಾಜತಾಂತ್ರಿಕರು ದೇಶವನ್ನು ತೊರೆಯಬೇಕಾಯಿತು. ವಿಜಯ ಸಾಧಿಸಿರುವ ಹೊಸ ಹುಮ್ಮಸ್ಸಿನಲ್ಲಿರುವ ಅಬ್ದುಲ್ ಘನಿ ಬರದಾರ್ ಈಗ ಬಂಡಾಯ ಗುಂಪಿನ ನಿರ್ಣಾಯಕ ನಾಯಕನಾಗಿ ಹೊರಹೊಮ್ಮಿದ್ದಾರೆ. ಅವರು ಅಫ್ಘಾನಿಸ್ತಾನದ ಅಧ್ಯಕ್ಷಗಾದಿಗೆ ಏರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಯಾರು ಈ ಮುಲ್ಲಾ ಅಬ್ದುಲ್ ಘನಿ ಬರದಾರ್?
1968ರಲ್ಲಿ ಅಫ್ಘಾನಿಸ್ತಾನ(Afghanistan)ದ ಉರುಜ್ಗಾನ್ ಪ್ರಾಂತ್ಯದಲ್ಲಿ ಜನಿಸಿದ ಬರದಾರ್ ತಾಲಿಬಾನ್ ಉಗ್ರ ಸಂಘಟನೆಯ ಸಹ ಸಂಸ್ಥಾಪಕ. ಹೈಬತುಲ್ಲಾ ಅಖುಂಡಜಾದ ನಂತರ ತಾಲಿಬಾನ್ ಶ್ರೇಣಿಯಲ್ಲಿ ಅವರು 2ನೇ ಅತ್ಯಂತ ಹಿರಿಯ ನಾಯಕ. 3 ವರ್ಷಗಳ ಹಿಂದೆ ಅಮೆರಿಕದ ಕೋರಿಕೆಯ ಮೇರೆಗೆ ಆತನನ್ನು ಪಾಕಿಸ್ತಾನದ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಬರದಾರ್ ಇಂದು ರಾಜಕೀಯ ಮುಖ್ಯಸ್ಥ ಮತ್ತು ತಾಲಿಬಾನ್ನ ಅತ್ಯಂತ ಗಮನಾರ್ಹ ಸಾರ್ವಜನಿಕ ಮುಖವಾಗಿ ಗುರುತಿಸಿಕೊಂಡಿದ್ದಾನೆ.
ಇದನ್ನೂ ಓದಿ: Haiti Earthquake: ಹೈತಿಗಪ್ಪಳಿಸಿದ ಪ್ರಬಲ ಭೂಕಂಪ, 304 ಜನರ ಸಾವು 1800 ಜನರಿಗೆ ಗಾಯ
ಅಬ್ದುಲ್ ಘನಿ ಬರದಾರ್(Abdul Ghani Baradar) ಭಾನುವಾರ ಸಂಜೆ ದೋಹಾದಿಂದ ಕಾಬೂಲ್ ತಲುಪಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಬೂಲ್ ಪತನದ ಬಗ್ಗೆ ಹೇಳಿಕೆ ನೀಡಿರುವ ಬರದಾರ್, ‘ತಾಲಿಬಾನ್ನ ನೈಜ ಪರೀಕ್ಷೆಯು ಈಗ ಆರಂಭವಾಗಿದೆ. ನಾವು ರಾಷ್ಟ್ರದ ಸೇವೆ ಮಾಡಬೇಕು’ ಅಂತಾ ಹೇಳಿದ್ದಾರೆ.1980ರಲ್ಲಿ ಸೋವಿಯತ್ ಸೇನೆಯ ವಿರುದ್ಧ ಅಫ್ಘಾನ್ ಮುಜಾಹಿದ್ದೀನ್ ನಲ್ಲಿ ಬರದಾರ್ ಹೋರಾಡಿದ್ದರು. 1992ರಲ್ಲಿ ರಷ್ಯನ್ನರ ನಿರ್ಗಮನದ ನಂತರ ಪ್ರತಿಸ್ಪರ್ಧಿ ಸೇನಾಧಿಕಾರಿಗಳ ನಡುವೆ ಅಂತರ್ಯುದ್ಧ ಸ್ಫೋಟಗೊಂಡಿತ್ತು.
ಆ ಸಮಯದಲ್ಲಿ ಬರದಾರ್ ಮಾಜಿ ಕಮಾಂಡರ್ ಮತ್ತು ತನ್ನ ಸೋದರಮಾವ ಮೊಹಮ್ಮದ್ ಒಮರ್(Mohammed Omer)ನೊಂದಿಗೆ ಕಂದಹಾರ್ನಲ್ಲಿ ಮದರಸಾವನ್ನು ಸ್ಥಾಪಿಸಿದ್ದ. ಈ ಇಬ್ಬರು ಒಟ್ಟಾಗಿ ತಾಲಿಬಾನ್ ಭಯೋತ್ಪಾದಕ ಸಂಘಟನೆ ಯನ್ನು ಹುಟ್ಟುಹಾಕಿದ್ದರು. ಈ ಯುವ ಇಸ್ಲಾಮಿಕ್ ನಾಯಕರು ದೇಶದ ಧಾರ್ಮಿಕ ಶುದ್ಧೀಕರಣ ಮತ್ತು ಎಮಿರೇಟ್ನ ಸೃಷ್ಟಿಗೆ ಮೀಸಲಾದ ಚಳುವಳಿಯನ್ನು ಮುನ್ನಡೆಸಿದರು. ಅಫ್ಘನ್ನರಲ್ಲಿ ಸೇನಾಧಿಪತಿಗಳ ವಿರುದ್ಧ ದ್ವೇಷ ಮತ್ತು ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ISI) ಏಜೆನ್ಸಿಯ ಬೆಂಬಲದಿಂದಾಗಿ 1996ರಲ್ಲಿ ಪ್ರಾಂತೀಯ ರಾಜಧಾನಿಗಳ ಅದ್ಭುತ ವಿಜಯಗಳ ನಂತರ ತಾಲಿಬಾನ್ ಅಧಿಕಾರಕ್ಕೆ ಬಂದಿತ್ತು.
ಇದನ್ನೂ ಓದಿ: Afghanistan: ಕಾಬೂಲ್ ಅನ್ನು ನಾಲ್ಕು ದಿಕ್ಕುಗಳಿಂದಲೂ ಸುತ್ತುವರೆದಿರುವ ತಾಲಿಬಾನ್
ಮುಲ್ಲಾ ಒಮರ್ ನಂತರದ ಸ್ಥಾನದಲ್ಲಿದ್ದ ಬರದಾರ್ ಪರಿಣಾಮಕಾರಿ ಕಾರ್ಯತಂತ್ರ ರೂಪಿಸಿದ್ದರು. ಪರಿಣಾಮ ತಾಲಿಬಾನ್(Taliban)ವಿಜಯಗಳಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅಫ್ಘಾನಿಸ್ತಾನದ 5 ವರ್ಷಗಳ ತಾಲಿಬಾನ್ ಆಡಳಿತದಲ್ಲಿ ರಕ್ಷಣಾ ಉಪಮಂತ್ರಿಯಾಗಿ ಬರದಾರ್ ಮಿಲಿಟರಿ ಮತ್ತು ಆಡಳಿತಾತ್ಮಕ ಪಾತ್ರಗಳನ್ನು ನಿರ್ವಹಿಸಿದರು. ಇದೀಗ ತಾಲಿಬಾನ್ ಮುಖ್ಯಸ್ಥ ಬರದಾರ್ ಅಫ್ಘಾನಿಸ್ತಾನದ ಅಧ್ಯಕ್ಷಗಾದಿಗೆ ಏರಲು ಸಜ್ಜಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ