ದಿನಭವಿಷ್ಯ 09-01-2025: ಗುರುವಾರದಂದು ಭರಣಿ ನಕ್ಷತ್ರದಲ್ಲಿ ಸಾಧ್ಯ ಯೋಗ, ಈ ರಾಶಿಯವರಿಗೆ ಮನೆ ಖರೀದಿ ಯೋಗ...!

Today Horoscope 09th January 2025: ಈ ದಿನ ಗುರುವಾರ ಭರಣಿ ನಕ್ಷತ್ರ, ಸಾಧ್ಯ ಯೋಗ, ವಣಿಜ ಕರಣ. ಇಂದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Jan 9, 2025, 08:08 AM IST
  • ಸೌರ ಶಿಶಿರ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ದಶಮಿ ತಿಥಿಯ ಈ ದಿನ ಗುರುವಾರ
  • ಇಂದು ಭರಣಿ ನಕ್ಷತ್ರ, ಸಾಧ್ಯ ಯೋಗ, ವಣಿಜ ಕರಣ.
  • ಇಂದಿನ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.
ದಿನಭವಿಷ್ಯ 09-01-2025:  ಗುರುವಾರದಂದು ಭರಣಿ ನಕ್ಷತ್ರದಲ್ಲಿ ಸಾಧ್ಯ ಯೋಗ, ಈ ರಾಶಿಯವರಿಗೆ ಮನೆ ಖರೀದಿ ಯೋಗ...!  title=

Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ದಶಮಿ ತಿಥಿಯ ಈ ದಿನ ಗುರುವಾರ ಭರಣಿ ನಕ್ಷತ್ರ, ಸಾಧ್ಯ ಯೋಗ, ವಣಿಜ ಕರಣ. ಇಂದಿನ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ನಿಮ್ಮ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದೆ. ಬುದ್ದಿವಂತಿಕೆ ಮತ್ತು ಕೌಶಲ್ಯದಿಂದ ಪ್ರತಿ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವಿರಿ. ನಿಮ್ಮ ಆಕರ್ಷಕ ಮಾತು ಮತ್ತು ನಡವಳಿಕೆಗೆ ಮನಸೋಲದವರೇ ಇರುವುದಿಲ್ಲ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಸಂಬಂಧಗಳಲ್ಲಿ ಸ್ಪಷ್ಟತೆ ಕಾಪಾಡಿಕೊಳ್ಳುವುದು ನಿಮಗೆ ಒಳ್ಳೆಯದು. ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ. ವ್ಯವವಹಾರದಲ್ಲಿ ಬುದ್ದಿವಂತಿಕೆಯಿಂದ ಮುಂದುವರೆಯುವುದು ಲಾಭದಾಯಕವಾಗಿದ್. ಹೂಡಿಕೆಗೆ ಸಂಬಂಧಿಸಿದ ವಿಚಾರಗಳು ಸುಧಾರಣೆಗೊಳ್ಳಲಿವೆ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ವಾಣಿಜ್ಯ ವಿಷಯಗಳಲ್ಲಿ ಸ್ನೇಹಿತರು ಮತ್ತು ಕುಟುಂಬದ ಸಹಕಾರವನ್ನು ಪಡೆಯುತ್ತೀರಿ. ಹಣಕಾಸಿನ ಪರಿಸ್ಥಿತಿ ಧನಾತ್ಮಕವಾಗಿರುತ್ತದೆ. ವೃತ್ತಿ ವ್ಯವಹಾರದಲ್ಲಿ ಅಭಿವೃದ್ದಿ ಕಾಣುವ ದಿನ. ಕೆಲಸದಲ್ಲಿ ಬಡ್ತಿ ಸಾಧ್ಯತೆ ಇದೆ. ಭೂಮಿ ಅಥವಾ ಮನೆ ಖರೀದಿಗಾಗಿ ಯೋಚಿಸುತ್ತಿರುವವರಿಗೆ ಶುಭ ದಿನ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ನಿಮ್ಮ ನಿರ್ದಿಷ್ಟ ಗುರಿಗಳನ್ನು ಸಾಧಿಸುವಲ್ಲಿ ನೀವಿಂದು ಯಶಸ್ವಿಯಾಗುವಿರಿ. ನಿರ್ವಹಣೆಗೆ ಸಂಬಂಧಿಸಿದ ಕಾರ್ಯಗಳಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ಹಿರಿಯರೊಂದಿಗೆ ಕುಳಿತು ಮಾತನಾಡುವುದು ನಿಮ್ಮ ಮನಸ್ಸಿಗೆ ನೆಮ್ಮದಿ ನೀಡಲಿದೆ. 

ಇದನ್ನೂ ಓದಿ- ವೈಕುಂಠ ಏಕಾದಶಿಗೂ ಮೊದಲೇ ಪ್ರಬಲ ರಾಜಯೋಗ: ಈ ರಾಶಿಯವರಿಗೆ ರಾತ್ರೋರಾತ್ರಿ ಲಕ್ಷಾಧಿಪತಿ ಯೋಗ!

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಅದೃಷ್ಟದ ದೆಸೆಯಿಂದ ನೀವಿಂದು ಉತ್ಸಾಹಭರಿತರಾಗಿ ಇರುವಿರಿ. ಬಾಕಿ ಉಳಿದಿರುವ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಪ್ರೇಮ ಸಂಬಂಧಗಳು ಸುಧಾರಿಸುತ್ತವೆ. ದೂರದ ಪ್ರಯಾಣವು ಲಾಭದಾಯಕವಾಗಿರುತ್ತದೆ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ವಾಹನ ಚಾಲನೆ ಸಂದರ್ಭದಲ್ಲಿ ನಿಯಮ ಪಾಲನೆ ಮರೆಯಬೇಡಿ. ಆರೋಗ್ಯದ ಬಗ್ಗೆ ಅರಿವು ಹೆಚ್ಚಿಸಿಕೊಳ್ಳಿ. ಪ್ರಮುಖ ಕೆಲಸಗಳಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳುವುದು ಒಳ್ಳೆಯದು. ಹಠಾತ್ ಘಟನೆಗಳು ಇಂದು ನಿಮ್ಮ ಮಾನಸನ್ನು ಘಾಸಿಗೊಳಿಸಬಹುದು. 

ತುಲಾ ರಾಶಿಯವರ ಭವಿಷ್ಯ (Libra Horoscope): 
ದಾಂಪತ್ಯ ಜೀವನದಲ್ಲಿ ಇಂದು ಸಾಮರಸ್ಯ ಮೇಲುಗೈ ಸಾಧಿಸಲಿದೆ. ಆಸ್ತಿ ವ್ಯವಹಾರದಲ್ಲಿ ಇಂದು ಅದೃಷ್ಟ ನಿಮ್ಮ ಪಾಲಿಗಿದೆ. ಪಾಲುದಾರಿಕೆ ವ್ಯವಹಾರಗಳು ಲಾಭದಾಯಕವಾಗಿದೆ. ಕುಟುಂಬದೊಂದಿಗೆ ನಿಕಟತೆ ಹೆಚ್ಚಾಗುವುದರಿಂದ ಸಂಬಂಧಗಳು ಬಲಗೊಳ್ಳುತ್ತವೆ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಉದ್ಯೋಗ ಸಂಬಂಧಿತ ಕಾರ್ಯಕ್ಷಮತೆಯೂ ಬಲವಾಗಿ ಉಳಿಯಲಿದೆ. ಕೆಲಸಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುತ್ತೀರಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುತ್ತೀರಿ. ಅಪರಿಚಿತ ವ್ಯಕ್ತಿಗಳಿಂದ ಇಂದು ಅಂತರ ಕಾಯ್ದುಕೊಳ್ಳಿ. 

ಇದನ್ನೂ ಓದಿ- ವೈಕುಂಠ ಏಕಾದಶಿಯಂದೇ ತೆರೆಯಲಿದೆ ಈ ರಾಶಿಯವರ ಅದೃಷ್ಟದ ಬಾಗಿಲು, ವಿಷ್ಣು ಕೃಪೆಯಿಂದ ಸಂಪತ್ತಿಗೆ ಕೊರತೆಯೇ ಇಲ್ಲದ ಜೀವನ ಇವರದು..!

ಧನು ರಾಶಿಯವರ ಭವಿಷ್ಯ (Sagittarius Horoscope):  
ಸ್ನೇಹಿತರೊಂದಿಗೆ ಅನನ್ಯ ಪ್ರಯತ್ನಗಳಲ್ಲಿ ತೊಡಗುತ್ತೀರಿ. ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೀರಿ. ಆಧುನಿಕ ವಿಷಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಶೈಕ್ಷಣಿಕ ಪ್ರಯತ್ನಗಳು ಸುಧಾರಿಸಲಿವೆ. ವೃತ್ತಿಪರ ಕ್ಷೇತ್ರದಲ್ಲಿ ಪ್ರಗತಿಯ ಹಾದಿ ತೆರೆಯಲಿದೆ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಭಾವನಾತ್ಮಕ ವಿಷಯಗಳಲ್ಲಿ ವಿಶಾಲ ದೃಷ್ಟಿಕೋನವನ್ನು ಇಟ್ಟುಕೊಳ್ಳಿ. ಹಿರಿಯರೊಂದಿಗೆ ಒಡನಾಟ ಹೆಚ್ಚಿಸುವುದರಿಂದ ಕುಟುಂಬದಲ್ಲಿ ಸಮನ್ವಯ ಬಳಪಡಿಸಬಹುದು. ವ್ಯವಹಾರದಲ್ಲಿ ಸಂಪನ್ಮೂಲ ಹಾಗೂ ಸೌಲಭ್ಯಗಳು ಹೆಚ್ಚಾಗುತ್ತವೆ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ನೀವಿಂದು ಜಾಗತಿಕ ಸಹೋದರತ್ವದ ಅರ್ಥವನ್ನು ಒತ್ತಿ ಹೇಳಿತ್ತೀರಿ. ಸಾಮಾಜಿಕ ನ್ಯಾಯದ ಮೇಲೆ ಗಮನಕೇಂದ್ರೀಕರಿಸುತ್ತೀರೀ. ವೃತ್ತಿ ವ್ಯವಹಾರದಲ್ಲಿ ಸಮಸ್ಯೆಗಳು ಬಗೆಹರಿಯಲಿವೆ. ಹೊಸ ಮನೆ ಖರೀದಿಸುವ ನಿಮ್ಮ ಆಲೋಚನೆಗೆ ಪುಷ್ಟಿ ದೊರೆಯಲಿದೆ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ನಿಮ್ಮ ಮನೆಗೆ ಅತಿಥಿಗಳ ಆಗಮನವು ಸಂತೋಷವನ್ನು ತರಲಿದೆ. ಕುಟುಂಬದೊಂದಿಗೆ ಪ್ರವಾಸಕ್ಕಾಗಿ ಯೋಜಿಸಬಹುದು. ಪ್ರೀತಿಪಾತ್ರರೊಂದಿಗೆ ಸಂತೋಷದ ಕ್ಷಣಗಳನ್ನು ಆನಂದಿಸುವಿರಿ. ವೃತ್ತಿ ಮುಂಭಾಗದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News