100 ಕೋಟಿಗೂ ಅಧಿಕ ಬೆಲೆಗೆ ಮಾರಾಟವಾದ ಅಪರೂಪದ ವಿಸ್ಕಿ ..!

ಕ್ಯಾಸ್ಕ್ ನಂ. 3 ಎಂದು ಕರೆಯಲ್ಪಡುವ ಈ ವಿಸ್ಕಿಯನ್ನು 207 ವರ್ಷಗಳ ಹಿಂದೆ ಸ್ಕಾಟಿಷ್ ದ್ವೀಪವಾದ ಇಸ್ಲೇನಲ್ಲಿರುವ ಆರ್ಡ್‌ಬೆಗ್ ಡಿಸ್ಟಿಲರಿಯಲ್ಲಿ ಉತ್ಪಾದಿಸಲಾಯಿತು. ಇದು ಡಿಸ್ಟಿಲರಿಯ ಎರಡು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಿದ್ದು, ಸಂಪೂರ್ಣ ಸ್ಟಾಕ್ ಅನ್ನು 1997 ರಲ್ಲಿ ಖರೀದಿಸಲಾಯಿತು. 

Written by - Ranjitha R K | Last Updated : Jul 11, 2022, 09:43 AM IST
  • ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಹಾನಿಕಾರಕ
  • ಮದ್ಯ ಪ್ರಿಯರಿಗೆ ಶರಾಬಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ.
  • ಅದಕ್ಕಾಗಿ ಭಾರೀ ಬೆಲೆಯನ್ನು ತೆರುವುದಕ್ಕೂ ಅವರು ಹಿಂದೆ ಮುಂದೆ ನೋಡುವುದಿಲ್ಲ
100 ಕೋಟಿಗೂ ಅಧಿಕ ಬೆಲೆಗೆ ಮಾರಾಟವಾದ ಅಪರೂಪದ  ವಿಸ್ಕಿ ..!  title=
World Most Precious Whisky (file photo)

World Most Precious Whisky: ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಅನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಮದ್ಯ ಪ್ರಿಯರಿಗೆ ಶರಾಬಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ಕೆಲವರಿಗೆ ಬೇರೆ ಬೇರೆ ಮಾದರಿಗಳನ್ನು ಸಂಗ್ರಹಿಸುವ ಅಭ್ಯಾಸವಿರುತ್ತದೆ. ಅದಕ್ಕಾಗಿ ಭಾರೀ ಬೆಲೆಯನ್ನು ತೆರುವುದಕ್ಕೂ ಅವರು ಹಿಂದೆ ಮುಂದೆ ನೋಡುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಇತ್ತಿಚೆಗೆಷ್ಟೇ ಕಂಡು ಬಂದಿದೆ. ಅಪರೂಪದ ಸ್ಕಾಚ್ ವಿಸ್ಕಿಯನ್ನು  ವ್ಯಕ್ತಿಯೊಬ್ಬರು 20 ಮಿಲಿಯನ್‌ ಡಾಲರ್ ಕೊಟ್ಟು ಖರೀದಿಸಿದ್ದಾರೆ. ಈ ಮೂಲಕ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ವರದಿಯ ಪ್ರಕಾರ, ಸಿಂಗಲ್ ಮಾಲ್ಟ್ ನವೆಂಬರ್ 1975ಕ್ಕಿಂತ ಹಿಂದಿನದುದ್ದು,  ಮಾತ್ರವಲ್ಲ, ಈ ರ್ಷದ ಏಪ್ರಿಲ್‌ನಲ್ಲಿ 1.2 ಮಿಲಿಯನ್‌ ಡಾಲರ್ ಗೆ  ಮಾರಾಟವಾದ ವಿಸ್ಕಿಯ ದಾಖಲೆಯನ್ನು ಮುರಿದಿದೆ.

ಹೆಮ್ಮೆಯ  ಪ್ರತೀಕವಂತೆ ಈ ವಿಸ್ಕಿ : 
ಮೂಲಗಳ ಪ್ರಕಾರ, ಆರ್ಡ್‌ಬೆಗ್‌ ಮತ್ತು  LVMH ಲಕ್ಸೂರಿ ಗೂಡ್ಸ್ ಗ್ರೂಪ್‌ನ ಅಂಗಸಂಸ್ಥೆ. ಇದರ  ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಥಾಮಸ್ ಮೊರಾಡ್‌ಪೋರ್, ಪ್ರಕಾರ ದಾಖಲೆ ಮುರಿಯುವ ವಿಸ್ಕಿ ಸ್ಥಳೀಯ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ. ಡಿಸ್ಟಿಲರಿಯು ಅಳಿವಿನ ಅಂಚಿನಿಂದ ಹಿಂತಿರುಗುವುದನ್ನು ಇಸ್ಲೇಯ ಜನರು ನೋಡಿದ್ದಾರೆ.  ಇದು ವಿಶ್ವದ ಅತ್ಯಂತ ಬೇಡಿಕೆಯ ವಿಸ್ಕಿಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದ್ದರೆ. 

ಇದನ್ನೂ ಓದಿ : ಶ್ರೀಲಂಕಾದ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ರಾಜೀನಾಮೆ

ಕ್ಯಾಸ್ಕ್ ಸಂಖ್ಯೆ 3 ರಿಂದ ಪ್ರಸಿದ್ಧ :
ಕ್ಯಾಸ್ಕ್ ನಂ. 3 ಎಂದು ಕರೆಯಲ್ಪಡುವ ಈ ವಿಸ್ಕಿಯನ್ನು 207 ವರ್ಷಗಳ ಹಿಂದೆ ಸ್ಕಾಟಿಷ್ ದ್ವೀಪವಾದ ಇಸ್ಲೇನಲ್ಲಿರುವ ಆರ್ಡ್‌ಬೆಗ್ ಡಿಸ್ಟಿಲರಿಯಲ್ಲಿ ಉತ್ಪಾದಿಸಲಾಯಿತು. ಇದು ಡಿಸ್ಟಿಲರಿಯ ಎರಡು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಿದ್ದು, ಅದರ ಸಂಪೂರ್ಣ ಸ್ಟಾಕ್ ಅನ್ನು 1997 ರಲ್ಲಿ ಖರೀದಿಸಲಾಯಿತು. ಮುಂದಿನ ಐದು ವರ್ಷಗಳಲ್ಲಿ ಪ್ರತಿ  ಕಾಸ್ಕ್ ನಿಂದ ಸುಮಾರು 88 ಬಾಟಲಿ ವಿಸ್ಕಿಯನ್ನು ಡಿಸ್ಟಿಲರಿ ತಯಾರಿಸುತ್ತದೆ ಮತ್ತು ಅವುಗಳನ್ನು ಖರೀದಿದಾರರಿಗೆ ತಲುಪಿಸುತ್ತದೆ. ಪ್ರತಿ ಬಾಟಲಿಯ ಬೆಲೆ ಸುಮಾರು  43,000 ಡಾಲರ್ ಆಗಿರುತ್ತದೆ. ದಾಖಲೆಯ ಮಾರಾಟದ ನಂತರ, ಸೂಪರ್ಮಾರ್ಕೆಟ್ ಮಾರಿಸನ್ಸ್ ತಪ್ಪಾಗಿ ಸ್ಕಾಚ್ ವಿಸ್ಕಿಯ ಬಾಟಲಿಗಳಿಗೆ ಕೇವಲ 3 ಡಾಲರ್ ಬೆಲೆಯನ್ನು ನೀಡಿತ್ತು.  ಅಂದರೆ  93% ರಿಯಾಯಿತಿ.

ಆರ್ಡ್‌ಬೆಗ್‌ನ ಡಿಸ್ಟಿಲಿಂಗ್ ಮತ್ತು ವಿಸ್ಕಿ ತಯಾರಿಕೆಯ ಮುಖ್ಯಸ್ಥ ಬಿಲ್ ಲುಮ್ಸ್‌ಡೆನ್, ಪ್ರಕಾರ, ಅವರ ವೃತ್ತಿಜೀವನದಲ್ಲಿ ಅವರು ಎರಡು ಅಥವಾ ಮೂರು ಬಾರಿ ಮಾತ್ರ ಈ ರೀತಿಯ ವಿಸ್ಕಿಯ ರುಚಿ ನೋಡಿದ್ದರಂತೆ. ಇರದಲ್ಲಿ ಅದೇನೋ ಭಾವನಾತ್ಮಕವಾಗಿ ತೃಪ್ತಿ ನೀಡುವ ಗುಣವಿದ್ದು, ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದಿದ್ದಾರೆ. 

ಇದನ್ನೂ ಓದಿ : ಶ್ರೀಲಂಕಾ ಸರ್ಕಾರದ ವಿರುದ್ಧ ಕ್ರಿಕೆಟರ್ ಸನತ್ ಜಯಸೂರ್ಯ ಪ್ರತಿಭಟನೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News