Upcoming 7-Seater SUV- Mahindra XUV700 Rival : ಮಹೀಂದ್ರ XUV700 ಅನ್ನು ಆಗಸ್ಟ್ 2021 ರಲ್ಲಿ ಬಿಡುಗಡೆ ಮಾಡಲಾಯಿತು. ಇದೀಗ ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಎರಡು ವರ್ಷ ಪೂರೈಸಿದೆ. ಇದು ಅತ್ಯಂತ ಜನಪ್ರಿಯ 7 ಆಸನಗಳ SUV ಆಗಿದ್ದು, ಇಲ್ಲಿಯವರೆಗೆ 1 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟವಾಗಿವೆ. XUV700 ನ ಮಾರಾಟದ ಅಂಕಿಅಂಶಗಳು ಪ ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಲೇ ಇದೆ. ಈ ಕಾರಣದಿಂದಾಗಿಯೇ ಬಿಡುಗಡೆಯಾದ ನಂತರ ದೇಶದ ಅತ್ಯಂತ ಜನಪ್ರಿಯ 7-ಆಸನಗಳ SUV ಗಳ ಸಾಲಿಗೆ ಈ ಕಾರು ಸೇರಿಕೊಂಡಿದೆ. ಆದರೆ ಇದೀಗ ಮೂರು ಹೊಸ 7-ಸೀಟರ್ ಎಸ್‌ಯುವಿಗಳು ಈ ಕಾರಿನೊಂದಿಗೆ ಸ್ಪರ್ಧಿಸಲಿವೆ.
2023 ಟಾಟಾ ಸಫಾರಿ ಫೇಸ್‌ಲಿಫ್ಟ್ ಅನ್ನು 17 ಅಕ್ಟೋಬರ್ 2023 ರಂದು ಪ್ರಾರಂಭಿಸಲಾಗುವುದು. SUV ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಅಕಾಂಪ್ಲಿಶ್ಡ್ ಎನ್ನುವ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿರುತ್ತದೆ. ಅಪ್ಡೇಟೆಡ್ ಸಫಾರಿಯ ಎಕ್ಸ್ ಟೀರಿಯರ್ ಮತ್ತು ಇನ್ ಟೀರಿಯರ್ ಗಮನ ಸೆಳೆಯುತ್ತದೆ. ಇದು ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ಹೊಸ 12.3-ಇಂಚಿನ ಹರ್ಮನ್ ಮೂಲದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಇಲ್ಯುಮಿನೆಟೆಡ್ ಟಾಟಾ ಲೋಗೋದೊಂದಿಗೆ ಹೊಸ 4-ಸ್ಪೋಕ್ ಸ್ಟೀರಿಂಗ್ ವೀಲ್, ನ್ಯಾವಿಗೇಷನ್‌ನೊಂದಿಗೆ ಆಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 360-ಡಿಗ್ರಿ ಸರೌಂಡ್ ಕ್ಯಾಮೆರಾದೊಂದಿಗೆ ಬರುತ್ತದೆ. ಎರಡು ಟಾಗಲ್‌ಗಳೊಂದಿಗೆ ಟಚ್ ಬೇಸ್ಡ್ HVAC ನಿಯಂತ್ರಣ ಮತ್ತು ಪನೋರೆಮಿಕ್ ಸನ್‌ರೂಫ್‌ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಇದನ್ನೂ ಓದಿ : ಸಿನಿ ಪ್ರೇಮಿಗಳಿಗೆ ಭರ್ಜರಿ ಆಫರ್ ನೀಡಿದ ಪಿವಿಆರ್ ಐನಾಕ್ಸ್
ಟೊಯೋಟಾ ಕೊರೊಲ್ಲಾ ಕ್ರಾಸ್-ಆಧಾರಿತ ಎಸ್‌ಯುವಿ :
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತ್ರಿ ರೋ ಎಸ್ ಯುವಿಯನ್ನು ಪರಿಚಯಿಸಲು ಸಿದ್ದವಾಗಿದೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತವೆ. ಈ ಮಾದರಿಯು ಕೊರೊಲ್ಲಾ ಕ್ರಾಸ್ ಅನ್ನು ಆಧರಿಸಿದೆ. ಇದರಲ್ಲಿ TNGA-C ಪ್ಲಾಟ್‌ಫಾರ್ಮ್ ಅನ್ನು ಬಳಸಲಾಗುತ್ತದೆ, ಇದು ಇನ್ನೋವಾ ಹೈಕ್ರಾಸ್‌ನಲ್ಲಿಯೂ ಕಂಡುಬರುತ್ತದೆ. ಹೊಸ ಟೊಯೋಟಾ 7-ಆಸನಗಳ SUV 2.0L ನ್ಯಾಚ್ಯುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂರಿರುವ ಸಾಧ್ಯತೆ ಇದೆ.
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಬೇಸ್ಡ್ 7-ಸೀಟರ್ ಎಸ್‌ಯುವಿ (MARUTI SUZUKI GRAND VITARA-BASED 7-SEATER SUV) :
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಬೇಸ್ಡ್ 7-ಸೀಟರ್ ಎಸ್‌ಯುವಿಯನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ. ಈ ಮಾದರಿಯು ಪ್ಲಾಟ್‌ಫಾರ್ಮ್, ವಿನ್ಯಾಸ ಅಂಶಗಳು, ವೈಶಿಷ್ಟ್ಯಗಳು ಮತ್ತು ಎಂಜಿನ್ ಸೆಟಪ್ ಅನ್ನು ಗ್ರಾಂಡ್ ವಿಟಾರಾದೊಂದಿಗೆ ಸಹ್ರೆ ಮಾಡುತ್ತದೆ. ಇದರ ಬೆಲೆ 20 ರಿಂದ 30 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ : 66 ಇಂಚಿನ ಟಿವಿ ಮೇಲೆ 63 % ರಿಯಾಯಿತಿ ! ಹಬ್ಬದ ಹಿನ್ನೆಲೆಯಲ್ಲಿ ಭರ್ಜರಿ ಆಫರ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್