Manmohan Singh Love Story : ಮನಮೋಹನ್ ಸಿಂಗ್ ಗುರುವಾರ ರಾತ್ರಿ ಇಹ ಲೋಕ ತ್ಯಜಿಸಿದ್ದಾರೆ. ಅವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಡಾ. ಸಿಂಗ್ ಅವರ ಪತ್ನಿ ಗುರುಶರಣ್ ಸಿಂಗ್ ಇತಿಹಾಸ ಪ್ರಾಧ್ಯಾಪಕರು, ಬರಹಗಾರರು ಮತ್ತು ಕೀರ್ತನೆ ಗಾಯಕಿ.ಅವರ ಮತ್ತು ಮನಮೋಹನ್ ಸಿಂಗ್ ಅವರ ವಿವಾಹದ ಕಥೆಯು ತುಂಬಾ ರೋಚಕವಾಗಿದೆ. ಅವರಿಬ್ಬರದ್ದೂ ಅರೇಂಜ್ಡ್ ಮ್ಯಾರೇಜ್ ಎಂದೇ ಹೇಳಲಾಗುತ್ತದೆ. ಆದರೆ ಮೊದಲ ಭೇಟಿಯಲ್ಲೇ ಇಬ್ಬರೂ ಪರಸ್ಪರ ಮನ ಸೋತಿದ್ದರಂತೆ.
ವರದಕ್ಷಿಣೆಗೆ ನೋ ಎಂದ ಸಿಂಗ್ :
ಮನಮೋಹನ್ ಸಿಂಗ್ ಅವರು 1957 ರಲ್ಲಿ ಅಧ್ಯಯನ ಮುಗಿಸಿ ಕೇಂಬ್ರಿಡ್ಜ್‌ನಿಂದ ಹಿಂತಿರುಗಿದ್ದರು. ಆದಾಗಲೇ ಮನೆಯವರು ಅವರಿಗೆ ಮದುವೆ ಮಾಡಲು ಬಯಸಿದ್ದರು. ಅವರಿಗಾಗಿ ಒಂದು ಸಂಬಂಧ ಕೂಡಾ ಬಂದಿತ್ತು. ಆ ಹುಡುಗಿ ಓದು ಬರಹ ಕಲಿತಿರಲಿಲ್ಲ. ಆದರೆ ಕೇಳಿದಷ್ಟು ವರದಕ್ಷಿಣೆ ನೀಡಲು ಸಿದ್ದವಿದ್ದ ಕುಟುಂಬವದು. ಆದರೆ ಈ ಬಗ್ಗೆ ಮನಮೋಹನ್ ಸಿಂಗ್ ನಿಲುವು ಸ್ಪಷ್ಟವಾಗಿತ್ತು. ವರದಕ್ಷಿಣೆ ಅಗತ್ಯವಿಲ್ಲ, ಆದರೆ ಹುಡುಗಿ ವಿದ್ಯಾವಂತೆಯಾಗಿರಬೇಕು ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದರು.
ಇದನ್ನೂ ಓದಿ : ಮನಮೋಹನ್ ಸಿಂಗ್ ಯಾವಾಗಲೂ ನೀಲಿ ಟರ್ಬನ್ ಧರಿಸುತ್ತಿದ್ದಿದ್ದೇಕೆ ಗೊತ್ತಾ?
ಈ ಮಧ್ಯೆ ಗುರುಶರಣ್ ಸಿಂಗ್ ಅವರ ಅಕ್ಕ ಬಸಂತ್ ಗೆ ಮನಮೋಹನ್ ಸಿಂಗ್ ಬಗ್ಗೆ ವಿಷಯ ತಿಳಿಯಿತು. ಅವರು ತನ್ನ ಸಹೋದರಿಯ ಸಂಬಂಧದ ಬಗ್ಗೆ ಮಾತುಕತೆ ನಡೆಸಲು ಮನಮೋಹನ್ ಸಿಂಗ್ ಮನೆಗೆ ಬಂದಿದ್ದರು. ಆಗ ಗುರುಶರಣ್ ಸಿಂಗ್ ಬಿಳಿ ಸಲ್ವಾರ್ ಕಮೀಜ್ ನಲ್ಲಿ ಬಂದಿದ್ದರಂತೆ. ಮನಮೋಹನ್ ಸಿಂಗ್ ಅವರನ್ನು ನೋಡಿದ ಕೂಡಲೇ ಮದುವೆಗೆ ಒಪ್ಪಿಗೆ ಸೂಚಿಸಿದ್ದರಂತೆ. ಇದಾದ ನಂತರ ಸಂಗೀತ ಕಾರ್ಯಕ್ರಮದಲ್ಲಿ ಗುರುಶರಣ್ ಸಿಂಗ್ ಕೀರ್ತನೆ ಹಾಡುತ್ತಿದ್ದರು. ಅಲ್ಲಿ ಡಾ.ಸಿಂಗ್ ಕೂಡಾ ಉಪಸ್ಥಿತರಿದ್ದರು.
ಉಪಹಾರಕ್ಕಾಗಿ ಆಹ್ವಾನ :
ವಾಸ್ತವವಾಗಿ, ಸಂಗೀತ ಕಚೇರಿಯ ನಂತರ, ಗುರುಶರಣ್ ಸಿಂಗ್ ಅವರ ಗುರುಗಳು ಹಾಡಿನ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರಂತೆ. ಸರಿಯಾಗಿ ಹಾಡಲಿಲ್ಲ ಎನ್ನುವ ದೂರು ಅವರದ್ದಾಗಿತ್ತು. ಆದರೆ ಮನಮೋಹನ್ ಸಿಂಗ್ ಮಧ್ಯೆ ಬಂದು ಹಾಗೇನಿಲ್ಲ, ಅವರು ಚೆನ್ನಾಗಿಯೇ ಹಾಡಿದ್ದಾರೆ ಎಂದಿದ್ದರಂತೆ. ಅಲ್ಲದೆ, ಗುರುಶರಣ್ ಸಿಂಗ್ ಅವರನ್ನು ಮೆಚ್ಚಿಸಲು ತಮ್ಮ ಮನೆಗೆ ಉಪಹಾರಕ್ಕೆ ಆಹ್ವಾನಿಸಿದ್ದರಂತೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಇಬ್ಬರೂ ಪರಸ್ಪರರನ್ನು ಮೆಚ್ಚಿ ಒಪ್ಪಿಗೆ ಸೂಚಿಸಿದ ಕಾರಣ 1958 ರಲ್ಲಿ ಇವರ ವಿವಾಹ ನೆರವೇರಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.