Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿಯ ಇದು ಶುಕ್ರವಾರ. ಈ ದಿನ ವಿಶಾಖಾ ನಕ್ಷತ್ರ, ಧೃತಿ ಯೋಗ, ಕೌಲವ ಕರಣ. ಇಂದು ಯಾವ ರಾಶಿಯವರಿಗೆ ಅದೃಷ್ಟ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಇಂದು ಸುಧಾರಣೆ ಕಂಡು ಬರಲಿದೆ. ಹಣಕಾಸಿನ ಅವಕಾಶಗಳು ದೊರೆಯಬಹುದು. ಮನೆಯಲ್ಲಿ ಶಾಂತಿ ವಾತಾವರಣ ಸೃಷ್ಟಿಯಲು ಪ್ರಯತ್ನಿಸಿ. ಕೆಲಸದಲ್ಲಿ ಮೇಲಾಧಿಕಾರಿಗಳನ್ನು ಆಕರ್ಷಿಸುವಿರಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಇಂದು ಹಣಕಾಸಿನ ಸ್ಥಿತಿ ಸುಗಮಗೊಳ್ಳಲಿದೆ. ಕುಟುಂಬದಲ್ಲಿ ನಿಮ್ಮ ಕೆಲಸಕ್ಕೆ ಬೆಂಬಲ ದೊರೆಯಲಿದೆ. ಆದರೆ, ನಿಮ್ಮ ಕಷ್ಟಕಾಲದಲ್ಲಿ ನಿಮ್ಮ ಜೊತೆಗೆ ನಿಂತವರನ್ನು ಮರೆಯದಿರಿ. ಕುಟುಂಬದೊಂದಿಗೆ ಸಣ್ಣ ಪ್ರವಾಸವನ್ನು ಯೋಚಿಸಬಹುದು.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಹೂಡಿಕೆಯು ಇಂದು ಲಾಭದಾಯಕವಾಗಿರಲಿದೆ. ಉದ್ಯಮಿಗಳು ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುವಿರಿ. ಕುಟುಂಬದಲ್ಲಿ ಮೂಡಿದ್ದ ಅಡೆತಡೆಗಳು ನಿವಾರಣೆಯಾಗಲಿವೆ. ಆರೋಗ್ಯ ಸ್ಥಿತಿಯೂ ಉತ್ತಮವಾಗಿರಲಿದೆ. ಸಾಹಸಮಯ ಪ್ರವಾಸಕ್ಕಾಗಿ ಯೋಜಿಸಬಹುದು.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಅತಿಥಿಗಳ ಆಗಮನವು ಇಂದು ನಿಮ್ಮ ದಿನಚರಿಯನ್ನು ಅಡ್ಡಿಪಡಿಸಬಹುದು. ವೃತ್ತಿಪರರಿಗೆ ಪ್ರಮೋಷನ್ ಭಾಗ್ಯವಿದೆ. ಉತ್ತಮ ಆರೋಗ್ಯವು ನಿಮ್ಮ ಉತ್ಸಾಹವನ್ನೂ ಹೆಚ್ಚಿಸಲಿದೆ. ವ್ಯಾಪಾರಿಗಳಿಗೆ ಇಂದು ಶ್ರಮದಾಯಕ ದಿನ.
ಸಿಂಹ ರಾಶಿಯವರ ಭವಿಷ್ಯ (Leo Horoscope):
ಬೀದಿ ಆಹಾರವು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಬಹುದು. ಈ ಬಗ್ಗೆ ಎಚ್ಚರಿಕೆಯಿಂದ ಇರಿ. ಏಕಾಂಗಿಯಾಗಿ ಪ್ರವಾಸ ಕೈಗೊಳ್ಳುವುದು ನೀರಸವಾಗಿರಬಹುದು. ಆಧ್ಯಾತ್ಮದಲ್ಲಿ ಒಲವು ಹೆಚ್ಚಾಗಲಿದೆ. ವೃತ್ತಿಯಲ್ಲಿ ನಾವಿನ್ಯತೆಯಿಂದ ಪ್ರಯೋಜನವನ್ನು ಪಡೆಯುವಿರಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಿಂದ ಮೆಚ್ಚುಗೆ ಗಳಿಸುವಿರಿ. ನೆಟ್ವರ್ಕಿಂಗ್ ಕೌಶಲ್ಯಗಳಲ್ಲಿ ಅದೃಷ್ಟ ಬಾಗಿಲುಗಳು ತೆರೆಯಲಿವೆ. ಹೊಸ ವಾಹನದಲ್ಲಿ ಸವಾರಿ ಮಾಡುವ ಅವಕಾಶ ದೊರೆಯಬಹುದು. ಕುಟುಂಬದಲ್ಲಿ ಸಂತಸದ ವಾತಾವರಣ ಮನೆ ಮಾಡಲಿದೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ನೃತ್ಯದಂತಹ ಆನಂದದಾಯಕ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಇದರಿಂದ ಮನಸ್ಸಿಗೆ ಆನಂದ ದೊರೆಯಲಿದೆ. ಅತಿಯಾದ ಖರ್ಚು ನಿಮ್ಮ ಚಿಂತೆಗೆ ಕಾರಣವಾಗಬಹುದು. ಈ ಬಗ್ಗೆ ಕುಟುಂಬಸ್ಥರೊಂದಿಗೆ ಕುಳಿತು ಮಾತುಕತೆ ನಡೆಸಿ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಕಟ್ಟುನಿಟ್ಟಾದ ತಾಲೀಮು ದಿನಚರಿಯು ನಿಮ್ಮನ್ನು ಫಿಟ್ ಆಗಿರಿಸಲು ಸಹಾಯ ಮಾಡುತ್ತದೆ. ಸಣ್ಣ ಹಣಕಾಸು ಸಮಸ್ಯೆಗಳು ನಿಮ್ಮ ಯೋಜನೆಯನ್ನು ಅಡ್ಡಪಡಿಸಬಹುದು. ನೀವಿಂದು ಉತ್ಪಾದಕ ಮನೆ ಕಾರ್ಯಗಳಲ್ಲಿ ಸಮಯವನ್ನು ಕಳೆಯಬಹುದು. ವೃತ್ತಿಪರವಾಗಿ ನೆಲೆಗೊಳ್ಳಲು ಇದು ಉತ್ತಮ ದಿನ.
ಇದನ್ನೂ ಓದಿ- ಮಹಿಳೆಯರು ಶಂಖವನ್ನ ಊದಬಹುದೇ? ಧಾರ್ಮಿಕ ಗ್ರಂಥಗಳು ಏನು ಹೇಳುತ್ತವೆ..?
ಧನು ರಾಶಿಯವರ ಭವಿಷ್ಯ (Sagittarius Horoscope):
ಹೆಚ್ಚುವರಿ ಆದಾಯದ ಅವಕಾಶಗಳೊಂದಿಗೆ ಹಣಕಾಸು ಸ್ಥಿತಿ ಸ್ಥಿರವಾಗಿರುತ್ತದೆ. ಯಾವುದೇ ಸ್ಥಳೀಯ ಯೋಜನೆಗಳಲ್ಲಿ ಕುಟುಂಬದ ಸಂಪೂರ್ಣ ಬೆಂಬಲ ದೊರೆಯುತ್ತದೆ. ಕೆಲವು ಆಪ್ತರೊಂದಿಗೆ ಪ್ರವಾಸಕ್ಕಾಗಿ ಯೋಜಿಸಬಹುದು. ವೃತ್ತಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮವು ನಿಮ್ಮ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಆರ್ಥಿಕ ಭದ್ರತೆಗಾಗಿ ಮಿತವ್ಯಯವನ್ನು ಅಳವಡಿಸಿಕೊಳ್ಳಿ. ವ್ಯಾಪಾರ ಸಂಬಂಧಿತ ಪ್ರಯಾಣವು ಲಾಭದಾಯಕವಾಗಿರಲಿದೆ. ಮಕ್ಕಳ ವಿಷಯಗಳಲ್ಲಿ ತಾಳ್ಮೆ ಬೇಕಾಗುತ್ತದೆ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಹಿಂದಿನ ಹೂಡಿಕೆಗಳಿಂದ ಬಂಪರ್ ಲಾಭ ಗಳಿಸುವಿರಿ. ಕುಟುಂಬದಲ್ಲಿ ಉತ್ತಮ ವಾತಾವರಣದಿಂದಾಗಿ ಆರೋಗ್ಯ ಸಮಸ್ಯೆಗಳಲ್ಲಿ ಚೇತರಿಕೆ ಕಾಣಬಹುದು. ಮನೆ ಅಥವಾ ಭೂಮಿ ಖರೀದಿಸಲು ಯೋಚಿಸುತ್ತಿರುವವರಿಗೆ ಶುಭ ದಿನ. ಶೈಕ್ಷಣಿಕ ರಂಗದಲ್ಲಿರುವವರಿಗೆ ಅದೃಷ್ಟ.
ಮೀನ ರಾಶಿಯವರ ಭವಿಷ್ಯ (Pisces Horoscope):
ಬೇರೆಯವರ ಕಷ್ಟಕ್ಕೆ ನೆರವಾಗುವ ನಿಮ್ಮ ಗುಣವೇ ಎಲ್ಲರನ್ನು ಆಕರ್ಷಿಸುತ್ತದೆ. ವಿದೇಶ ಪ್ರವಾಸ ಕೈಗೊಳ್ಳುವ ಸಾಧಯ್ತೆ ಇದೆ. ಆಸ್ತಿ ಖರೀದಿ ಬಗ್ಗೆ ಒಲವು ಹೊಂದಿರುವವರು ಈ ನಿಟ್ಟಿನಲ್ಲಿ ಮುಂದುವರೆಯುವುದರಿಂದ ಒಳ್ಳೆಯದಾಗಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.