ಕೇವಲ 9000 ರೂಪಾಯಿಗೆ ಮನೆಗೆ ತನ್ನಿ ಹೋಂಡಾ ಆಕ್ಟಿವಾ ಹೆಚ್-ಸ್ಮಾರ್ಟ್ !

ಈ ಸ್ಕೂಟರ್ ಮೂರು ರೂಪಾಂತರಗಳಲ್ಲಿ ಬರುತ್ತದೆ. ಕೇವಲ 9000 ರೂಪಾಯಿಗಳಲ್ಲಿ ಈ ಸ್ಕೂಟರ್ ಅನ್ನು ಹೇಗೆ ಮನೆಗೆ ತೆಗೆದುಕೊಂಡು ಹೋಗಬಹುದು.  

Written by - Ranjitha R K | Last Updated : Jan 30, 2023, 12:21 PM IST
  • ಹೊಸ ಆಕ್ಟಿವಾ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ
  • ಹೋಂಡಾ ಆಕ್ಟಿವಾ ಹೆಚ್-ಸ್ಮಾರ್ಟ್ ಎಂದು ಹೆಸರಿಸಲಾಗಿದೆ.
  • ಈ ಸ್ಕೂಟರ್ ಗೆ ಕಾರಿನಂತೆ ಸ್ಮಾರ್ಟ್ ಕೀ ನೀಡಲಾಗಿದೆ.
ಕೇವಲ 9000 ರೂಪಾಯಿಗೆ ಮನೆಗೆ ತನ್ನಿ ಹೋಂಡಾ ಆಕ್ಟಿವಾ ಹೆಚ್-ಸ್ಮಾರ್ಟ್ ! title=

ಬೆಂಗಳೂರು : ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇತ್ತೀಚೆಗೆ ತನ್ನ ಹೊಸ ಆಕ್ಟಿವಾ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ಹೋಂಡಾ ಆಕ್ಟಿವಾ ಹೆಚ್-ಸ್ಮಾರ್ಟ್ ಎಂದು ಹೆಸರಿಸಲಾಗಿದೆ. ವಿಶೇಷವೆಂದರೆ ಈ ಸ್ಕೂಟರ್ ಗೆ ಕಾರಿನಂತೆ ಸ್ಮಾರ್ಟ್ ಕೀ ನೀಡಲಾಗಿದೆ. ಈ ಕೀಯಿಂದ ಸ್ಕೂಟರ್ ಅನ್ನು ಲಾಕ್ ಅನ್ಲಾಕ್ ಆಗುತ್ತದೆ. ಈ ಕೀಯನ್ನು ಹಾಕದೆಯೇ ಸ್ಕೂಟರ್ ಅನ್ನು  ಸ್ಟಾರ್ಟ್ ಮಾಡಬಹುದಾಗಿದೆ. ಕೀ 2 ಮೀಟರ್ ವ್ಯಾಪ್ತಿಯಿಂದ ಹೊರಗಿದ್ದರೆ ಸ್ಕೂಟರ್ ಲಾಕ್ ಆಗಿ ಬಿಡುತ್ತದೆ. ಈ ಸ್ಕೂಟರ್ ಮೂರು ರೂಪಾಂತರಗಳಲ್ಲಿ ಬರುತ್ತದೆ. ಕೇವಲ 9000 ರೂಪಾಯಿಗಳಲ್ಲಿ ಈ ಸ್ಕೂಟರ್ ಅನ್ನು ಹೇಗೆ ಮನೆಗೆ ತೆಗೆದುಕೊಂಡು ಹೋಗಬಹುದು.  

ಸ್ಕೂಟರ್‌ನ ಆನ್-ರೋಡ್ ಬೆಲೆ :
ಸ್ಕೂಟರ್ ಮೂರು ರೂಪಾಂತರಗಳಲ್ಲಿ ಬರುತ್ತದೆ. ಸ್ಟ್ಯಾಂಡರ್ಡ್, ಡಿಲಕ್ಸ್ ಮತ್ತು ಹೆಚ್-ಸ್ಮಾರ್ಟ್. ಸ್ಮಾರ್ಟ್ ಕೀ ವೈಶಿಷ್ಟ್ಯವು H-Smart ರೂಪಾಂತರದಲ್ಲಿ ಮಾತ್ರ ಲಭ್ಯವಿರುತ್ತದೆ. ಇದರ ಆನ್-ರೋಡ್ ಬೆಲೆ ಸ್ಟ್ಯಾಂಡರ್ಡ್ ರೂಪಾಂತರಕ್ಕೆ  85,298 ರೂ., ಡಿಲಕ್ಸ್ 88,027 ರೂ. ಮತ್ತು ಹೆಚ್-ಸ್ಮಾರ್ಟ್ ರೂಪಾಂತರಕ್ಕೆ  93,238 ರೂ. 

ಇದನ್ನೂ ಓದಿ : ಇನ್ನೆರಡು ವರ್ಷಗಳಲ್ಲಿ ಗೂಗಲ್ ಸರ್ವನಾಶ...! ಕಾರಣವೇನು ಗೊತ್ತೇ?

ನೀವು ಕೂಡ ಹೊಸ ಹೋಂಡಾ ಆಕ್ಟಿವಾ ಖರೀದಿಸಲು ಯೋಚಿಸುತ್ತಿದ್ದರೆ  ಸ್ಕೂಟರ್‌ನ ರೂಪಾಂತರ-ವಾರು ಆನ್-ರೋಡ್ ಬೆಲೆ ಮತ್ತು ಕಂತಿನ ಮೊತ್ತವನ್ನು ತೋರಿಸುವ ಟೇಬಲ್ ಇಲ್ಲಿದೆ. ಇಲ್ಲಿ 9000 ರೂಪಾಯಿ ಮುಂಗಡ ಪಾವತಿ, 3 ವರ್ಷಗಳ ಸಾಲದ ಅವಧಿ ಮತ್ತು 10% ಬಡ್ಡಿದರವನ್ನು ಇರಿಸಲಾಗಿದೆ. ಸಾಲದ ಅವಧಿ ಮತ್ತು ಡೌನ್ ಪೇಮೆಂಟ್ ಮೊತ್ತವನ್ನು ನಿಮ್ಮ ಅಗತ್ಯಕ್ಕೆ ಅನುಗುಣವಾಗಿಯೂ ಆಯ್ಕೆ ಮಾಡಬಹುದು. ಬ್ಯಾಂಕ್ ಬಡ್ಡಿ ದರವು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗುತ್ತದೆ. 

ಪ್ರತಿ ತಿಂಗಳ ಇಎಂಐ : 
ಹೋಂಡಾ ಆಕ್ಟಿವಾ ಸ್ಕೂಟರ್ ಆನ್ ರೋಡ್ ಬೆಲೆ  85,298 ರೂಪಾಯಿಯಿಂದ 93,238 ವರೆ ರೂಪಾಯಿವರೆಗೆ ಇರುತ್ತದೆ. ಹೋಂಡಾ ಸ್ಕೂಟರ್‌ನ ಟಾಪ್-ಎಂಡ್ H-ಸ್ಮಾರ್ಟ್ ರೂಪಾಂತರದ ಪ್ರಸ್ತುತ ಎಕ್ಸ್ ಶೋ ರೂಂ ಬೆಲೆ 80,537 ರೂ. ಆಗಿರುತ್ತದೆ. 93,238 ರೂ.ಗಳ ಅಂದಾಜು ಆನ್ ರೋಡ್ ಬೆಲೆಯಲ್ಲಿ 9,000 ರೂಪಾಯಿ ಡೌನ್ ಪೇಮೆಂಟ್ ಮಾಡಿದರೆ 84,238 ರೂಪಾಯಿ ಸಾಲವನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಮೊತ್ತಕ್ಕೆ 3 ವರ್ಷಗಳವರೆಗೆ 2,718 ರೂಪಾಯಿ EMI ಪಾವತಿಸಬೇಕಾಗುತ್ತದೆ. 

ಇದನ್ನೂ ಓದಿ : Airplane Mileage: ಒಂದು ಲೀಟರ್ ಇಂಧನದಲ್ಲಿ ವಿಮಾನ ಎಷ್ಟು ದೂರ ಚಲಿಸುತ್ತೆ? ಇದರ ಮೈಲೇಜ್ ನೋಡಿದ್ರೆ ಶಾಕ್ ಆಗೋದು ಪಕ್ಕಾ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News