ಕಳೆದುಹೋದ ನಿಮ್ಮ ಫೋನ್‌ನಲ್ಲಿರುವ.. GPay-Phonepay UPI ಐಡಿ ನಿಷ್ಕ್ರಿಯಗೊಳಿಸುವುದು ಹೇಗೆ..? 

UPI ID Block in Lost Phone : UPI ಪಾವತಿಗಳು ಬಂದ ಮೇಲೆ ಹಣಕಾಸಿನ ವಹಿವಾಟಿನ ವಿಧಾನ ಬದಲಾಗಿದೆ. ಪ್ರತಿ ಸಣ್ಣ ಅಗತ್ಯಕ್ಕೂ ಯುಪಿಐ ಮೂಲಕ ಜನ ಹಣ ಪಾವತಿ ಮಾಡುತ್ತಿದ್ದಾರೆ. ಈ ಸೇವೆಗಳು 2016 ರಲ್ಲಿ ಭಾರತದಲ್ಲಿ ಲಭ್ಯವಾದವು. ಪ್ರಸ್ತುತ, ದೇಶದಲ್ಲಿ ಯುಪಿಐ ಮೂಲಕ ಹೆಚ್ಚಿನ ಹಣ ವರ್ಗಾವಣೆ ಮಾಡಲಾಗುತ್ತಿದೆ.  

Written by - Krishna N K | Last Updated : Jul 5, 2024, 05:52 PM IST
    • UPI ಪಾವತಿಗಳು ಬಂದ ಮೇಲೆ ಹಣಕಾಸಿನ ವಹಿವಾಟಿನ ವಿಧಾನ ಬದಲಾಗಿದೆ.
    • ಪ್ರತಿ ಸಣ್ಣ ಅಗತ್ಯಕ್ಕೂ ಯುಪಿಐ ಮೂಲಕ ಜನ ಹಣ ಪಾವತಿ ಮಾಡುತ್ತಿದ್ದಾರೆ.
    • ಒಂದು ವೇಳೆ ನಿಮ್ಮ ಫೋನ್‌ ಕಳೆದರೆ ಹೇಗೆ ಯುಪಿಐ ಐಡಿ ಬ್ಲಾಕ್‌ ಮಾಡುವುದು..?
ಕಳೆದುಹೋದ ನಿಮ್ಮ ಫೋನ್‌ನಲ್ಲಿರುವ.. GPay-Phonepay UPI ಐಡಿ ನಿಷ್ಕ್ರಿಯಗೊಳಿಸುವುದು ಹೇಗೆ..?  title=

Stolen Phone UPI ID Block : ಮೇ 2024 ರಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ, ಭಾರತದಲ್ಲಿ UPI ಮೂಲಕ 14.02 ಬಿಲಿಯನ್ ವಹಿವಾಟುಗಳನ್ನು ಮಾಡಲಾಗಿದೆ. ಈ ಸೇವೆಗಳು ಇತರ ದೇಶಗಳಲ್ಲಿಯೂ ಲಭ್ಯವಿದೆ. ಅದು ಹಾಗಿರಲಿ ಇಂದು ನಾವು ನಿಮಗೆ.. ಸ್ಮಾರ್ಟ್‌ಫೋನ್ ಕಳೆದು ಹೋದಾಗ, ಪೋನ್‌ನಲ್ಲಿರುವ UPI ಐಡಿಗಳನ್ನು ಹೇಗೆ ನಿರ್ಬಂಧಿಸುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ.. 

Google Pay ID : ನೀವು Google Pay ಅನ್ನು ನಿರ್ಬಂಧಿಸಲು ಬಯಸಿದರೆ, ಮೊದಲು ಇನ್ನೊಂದು ಫೋನ್‌ನಿಂದ 18004190157 ಅನ್ನು ಡಯಲ್ ಮಾಡಿ. ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಜೊತೆ ಮಾತನಾಡುವ ಮೂಲಕ ನೀವು ಐಡಿಯನ್ನು ನಿಷ್ಕ್ರಿಯಗೊಳಿಸಬಹುದು. 

ಇದನ್ನೂ ಓದಿ: ವಿಶ್ವದ ಅತಿ ದೊಡ್ಡ ಶ್ರೀಮಂತ ಮುಖೇಶ್ ಅಂಬಾನಿ ಸೊಸೆ ರಾಧಿಕಾ ಕೂಡಾ ಕೋಟಿಗಳ ಒಡತಿ : ಹೀಗಿದೆ ನೋಡಿ ಮರ್ಚೆಂಟ್ ಪರಿವಾರದ ಸಿರಿ ವೈಭವ

Phonepe: ಫೋನ್ ಪೇ ಪಾವತಿಗೆ ಸಂಬಂಧಿಸಿದಂತೆ.. ಐಡಿಯನ್ನು ನಿರ್ಬಂಧಿಸಲು ಮೊದಲು ಮತ್ತೊಂದು ಫೋನ್ ಸಂಖ್ಯೆಯಿಂದ 02268727374 ಅಥವಾ 08068727374 ಗೆ ಕರೆ ಮಾಡಿ. ಅದರ ನಂತರ ನೀವು ಕಸ್ಟಮರ್ ಕೇರ್ ಕಾರ್ಯನಿರ್ವಾಹಕರೊಂದಿಗೆ ಮಾತನಾಡಬೇಕು. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಹಾಗು ಇತರ ಕೆಲವು ವಿವರಗಳನ್ನು ನೀಡಿದರೆ, ಅವರು ಫೋನ್ ಪೇ ಐಡಿಯನ್ನು ನಿಷ್ಕ್ರಿಯಗೊಳಿಸುತ್ತಾರೆ.

Paytm ID  : ಪೇಟಿಯಂ ಬ್ಲಾಕ್‌ಗೆ ಸಂಬಂಧಿಸಿದಂತೆ, ಸಹಾಯವಾಣಿ ಸಂಖ್ಯೆ 01204456456 ಗೆ ಕರೆ ಮಾಡಿ. ಅದರ ನಂತರ ನೀವು ನಿಮ್ಮ ಫೋನ್ ಸಂಖ್ಯೆಯ ಮೂಲಕ Paytm ನಿಂದ ಲಾಗ್ಔಟ್ ಮಾಡಬಹುದು. ಅದರ ನಂತರ Paytm ವೆಬ್‌ಸೈಟ್‌ಗೆ ಹೋಗಿ. ನಂತರ 24 X 7 ಸಹಾಯದ ಮೇಲೆ ಕ್ಲಿಕ್ ಮಾಡಿ. ನಂತರ ರಿಪೋರ್ಟ್ ಎ ಫ್ರಾಡ್ ಅಥವಾ ಮೆಸೇಜ್ ಅಸ್ ಆಯ್ಕೆಯನ್ನು ಆಯ್ಕೆಮಾಡಿ. ನಿಮ್ಮ ಫೋನ್ ಕಳೆದುಹೋಗಿದೆ ಎಂದು ವರದಿ ಮಾಡಿದರೆ, Paytm ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News