ಮತ್ತೊಂದು ಸ್ಟಾರ್‌ ಜೋಡಿ ವಿಚ್ಛೇದನ? ಪತ್ನಿಗೆ ಡಿವೋರ್ಸ್‌ ನೀಡಿ ಆ ಖ್ಯಾತ ನಟಿಯನ್ನು ಮದುವೆಯಾಗ್ತಾರಾ ಈ ನಟ?!

Star Couple Divorce: ಇತ್ತೀಚೆಗೆ ಸಿನಿರಂಗದಲ್ಲಿ ಡಿವೋರ್ಸ್‌.. ಅಫೇರ್‌ ಸುದ್ದಿಗಳೇ ಸಾಕಷ್ಟು ಸದ್ದು ಮಾಡುತ್ತಿವೆ.. ಇದೀಗ ಮತ್ತೊಂದು ಸ್ಟಾರ್‌ ಜೋಡಿ ಡಿವೋರ್ಸ್‌ ಮಾಡಿಕೊಳ್ಳಲು ಹೊರಟಿದೆ ಎನ್ನುವ ಮಾತೊಂದು ಕೇಳಿಬರುತ್ತಿದೆ..  

Written by - Savita M B | Last Updated : Jul 6, 2024, 05:12 PM IST
  • ವಿಜಯ್ ದಳಪತಿ ದಕ್ಷಿಣದಲ್ಲಿ ಸ್ಟಾರ್ ಹೀರೋ ಆಗಿ ಮಿಂಚುತ್ತಿದ್ದಾರೆ.
  • , ಈ ಫೋಟೋ ಬಗ್ಗೆ ಈಗ ಭಾರೀ ಗದ್ದಲ ಎಬ್ಬಿಸಿದೆ..
ಮತ್ತೊಂದು ಸ್ಟಾರ್‌ ಜೋಡಿ ವಿಚ್ಛೇದನ? ಪತ್ನಿಗೆ ಡಿವೋರ್ಸ್‌ ನೀಡಿ ಆ ಖ್ಯಾತ ನಟಿಯನ್ನು ಮದುವೆಯಾಗ್ತಾರಾ ಈ ನಟ?! title=

Vijay Thalapathy: ವಿಜಯ್ ದಳಪತಿ ದಕ್ಷಿಣದಲ್ಲಿ ಸ್ಟಾರ್ ಹೀರೋ ಆಗಿ ಮಿಂಚುತ್ತಿದ್ದಾರೆ. ತಮಿಳುನಾಡಿನಲ್ಲಿ ಸ್ಟಾರ್ ಪಟ್ಟದೊಂದಿಗೆ ರಾಜಕೀಯಕ್ಕೂ ಕಾಲಿಟ್ಟರು. ವಿಜಯ್ ತಮಿಳು ರಾಜಕೀಯದಲ್ಲಿ ತಮಿಳು ವೆಟ್ರಿ ಕಳಗಂ ಎಂಬ ಪಕ್ಷವನ್ನು ಪ್ರಾರಂಭಿಸಿ, 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಇತ್ತೀಚೆಗಷ್ಟೇ ನಟ ವಿಜಯ್ ಹುಟ್ಟುಹಬ್ಬದ ಸಂದರ್ಭದಲ್ಲಿ ನಟಿ ತ್ರಿಷಾ ಹಂಚಿಕೊಂಡಿದ್ದ ಫೋಟೋ ವಿವಾದಕ್ಕೆ ಕಾರಣವಾಗಿತ್ತು. ತಮ್ಮ 50ನೇ ಹುಟ್ಟುಹಬ್ಬದ ಪಾರ್ಟಿಯನ್ನು ತ್ರಿಶಾ ಜೊತೆ ಮಾಡಿದ್ದ ವಿಜಯ್ ಹಾಗೂ ಅವರ ಪತ್ನಿ ಸಂಗೀತಾ ಬೇರೆ ಬೇರೆಯಾಗಿದ್ದಾರೆ ಎಂದು ವರದಿಯಾಗಿದೆ. ಪಾರ್ಟಿ ವೇಳೆ ವಿಜಯ್‌ ತ್ರಿಶಾ ಇಬ್ಬರೂ ಒಟ್ಟಿಗೆ ಲಿಫ್ಟ್‌ನಲ್ಲಿರುವ ಫೊಟೋ ಹೊರಬಿದ್ದಿದ್ದು, ಈ ಫೋಟೋ ಬಗ್ಗೆ ಈಗ ಭಾರೀ ಗದ್ದಲ ಎಬ್ಬಿಸಿದೆ..  

ಇದನ್ನೂ ಓದಿ-ಗಂಡನಿಗೆ 3 ಮದುವೆ.. ಇಂಡಸ್ಟ್ರಿಯಲ್ಲಿ ಸೂಪರ್ ಕ್ರೇಜ್.. ಅರ್ಧಗಂಟೆಗೆ ಒಂದೂವರೆ ಲಕ್ಷ ರೂ.! ಯಾರು ಆ ನಟಿ..?

ವಿಜಯ್ ಮತ್ತು ಸಂಗೀತಾ ಮದುವೆಯಾಗಿ 23 ವರ್ಷಗಳಾಗಿವೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಒಬ್ಬ ಮಗ ಜೇಸನ್ ಮತ್ತು ಮಗಳು ದಿವ್ಯಾ. ಸದಾ ಹೆಂಡತಿಯನ್ನು ಜೊತೆ ಕರೆದುಕೊಂಡು ಓಡಾಡುತ್ತಿದ್ದ ವಿಜಯ್ ಈಗ ಒಂಟಿಯಾಗಿ ಓಡಾಡುತ್ತಿದ್ದಾನೆ,..ಅಲ್ಲದೇ ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ ಎಂಬ ಮಾತುಗಳು ಚಿತ್ರರಂಗದಲ್ಲಿ ಕೇಳಿಬರುತ್ತಿವೆ.  

ಇದನ್ನೂ ಓದಿ-Kalki 2898 AD: 9 ನೇ ದಿನಕ್ಕೆ 800 ಕೋಟಿ ಲೂಟಿ ಮಾಡಿದ ʻಕಲ್ಕಿʼ..!

ವಿಜಯ್ ಅವರು ವರಿಸು ಮತ್ತು ಲಿಯೋ ಸಿನಿಮಾ ಈವೆಂಟ್‌ಗಳಿಗೆ ಏಕಾಂಗಿಯಾಗಿ ಭಾಗವಹಿಸಿದ್ದಾರೆ. ನಿಜವಾಗಿ ಇವರಿಬ್ಬರೂ ಜೊತೆಯಾಗಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಅಷ್ಟೇ ಅಲ್ಲ, ವಿಜಯ್ ಜೊತೆಗಿನ ಭಿನ್ನಾಭಿಪ್ರಾಯದಿಂದ ಸಂಗೀತಾ ಸದ್ಯ ಲಂಡನ್ ನಲ್ಲಿ ತಂಗಿದ್ದಾರೆ ಎಂಬ ವರದಿಗಳೂ ಇವೆ.

ಈ ವಿಚಾರವಾಗಿ ಸುಚಿತ್ರಾ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯ್ ಪತ್ನಿ ಸಂಗೀತಾಗೆ ವಿಚ್ಛೇದನ ನೀಡಲಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ. ಅಷ್ಟೇ ಅಲ್ಲ, ನಾಯಕಿ ತ್ರಿಷಾಳನ್ನು ಎರಡನೇ ಮದುವೆಯಾಗಲಿದ್ದಾರೆ ಎಂದು ಹೇಳಿದ್ದಾರೆ..  
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News