ಈ ಆರು ಕಾರುಗಳ ದರ ಏರಿಸಿದ ಮಾರುತಿ! ಇಲ್ಲಿದೆ ಹೊಸ ರೇಟ್ ಲಿಸ್ಟ್

Maruti Suzuki Cars Price Hike:ಮಾರುತಿ ಸುಜುಕಿ  ತನ್ನ ಆರು ಕಾರುಗಳ ಬೆಲೆಯನ್ನು ಏರಿಸಿದೆ. ಈ ಮೂಲಕ ಇನ್ನು ಮಾರುತಿ ಕಾರು ಖರೀದಿ  ಕೂಡಾ ದುಬಾರಿಯಾಗಿರಲಿದೆ. 

Written by - Ranjitha R K | Last Updated : Apr 11, 2023, 12:51 PM IST
  • ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಭಾರೀ ಏರಿಕೆ
  • 1,500 ಸಾವಿರದಿಂದ 15 ಸಾವಿರದವರೆಗೆ ಹೆಚ್ಚಳ
  • ಕಾರು ಖರೀದಿ ಆಗಲಿದೆ ದುಬಾರಿ
ಈ ಆರು ಕಾರುಗಳ  ದರ ಏರಿಸಿದ ಮಾರುತಿ! ಇಲ್ಲಿದೆ ಹೊಸ ರೇಟ್ ಲಿಸ್ಟ್  title=

Maruti Suzuki Cars Price Hike : ಮಾರುತಿ ಸುಜುಕಿ ಗ್ರಾಹಕರ ಮೇಲೆ ಬೆಲೆ ಏರಿಕೆ  ಬರೆ ಎಳೆದಿದೆ. ಕಂಪನಿಯು ತನ್ನ 6 ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ. ಈ 6 ಕಾರುಗಳು ಜನಪ್ರಿಯ ಹ್ಯಾಚ್‌ಬ್ಯಾಕ್‌ಗಳಾಗಿವೆ. ಹೌದು, ಸ್ವಿಫ್ಟ್, ಸೆಲೆರಿಯೊ, ವ್ಯಾಗನ್ಆರ್, ಡಿಜೈರ್  ಸಿಯಾಜ್ ಮತ್ತು ಎಕ್ಸ್‌ಎಲ್ 6 ಮಾದರಿಗಳ ಬೆಲೆಯನ್ನು ಏರಿಸಿವೆ. 
ಕಂಪನಿಯು ಈ ತಿಂಗಳಿನಿಂದ ಈ ಕಾರುಗಳ ಬೆಲೆಯನ್ನು 15,000 ರೂ.ವರೆಗೆ ಹೆಚ್ಚಿಸಿದೆ. ಬೆಲೆ ಏರಿಕೆಯ ನಂತರ, ಈ ಆರು ಮಾಡೆಲ್‌ಗಳನ್ನು ಖರೀದಿಸುವುದು ದುಬಾರಿಯಾಗಿದೆ. 

ಅತ್ಯಂತ ದುಬಾರಿಯಾಯಿತು ಈ ಕಾರುಗಳು :  
ಕಂಪನಿಯ XL6 MPVನ ಬೆಲೆಯನ್ನು ಅತಿ ಹೆಚ್ಚು ಏರಿಸಿದೆ. ಕಳೆದ ವರ್ಷ ಬಿಡುಗಡೆಯಾದ ಹೊಸ Xl6 ಈಗ 15,000 ರೂ.ಗಳಷ್ಟು ದುಬಾರಿಯಾಗಿದೆ. ಬೆಲೆ ಏರಿಕೆಯ ನಂತರ, XL6 ನ ಆರಂಭಿಕ ಬೆಲೆ  11.41 ಲಕ್ಷಕ್ಕೆ (ಎಕ್ಸ್ ಶೋ ರೂಂ) ಏರಿದೆ. ಭಾರತದಲ್ಲಿ ಮಾರುತಿಯ ಹೆಚ್ಚು ಮಾರಾಟವಾಗುತ್ತಿರುವ ಮಾಡೆಲ್‌ಗಳಲ್ಲಿ ಒಂದಾದ ವ್ಯಾಗನ್ಆರ್ ಬೆಲೆಯನ್ನು 1,500ರೂ.ವರೆಗೆ ಏರಿಸಲಾಗಿದೆ. ಅಂದರೆ ಬೆಲೆ ಏರಿಕೆ ನಂತರ ಈ ಹ್ಯಾಚ್ ಬ್ಯಾಕ್ 5.54 ಲಕ್ಷಕ್ಕೆ (ಎಕ್ಸ್ ಶೋ ರೂಂ) ಏರಲಿದೆ.  

ಇದನ್ನೂ ಓದಿ : ನಿಮ್ಮ ಫೋನಿಗೂ ಈ ಮೆಸೇಜ್ ಬಂದಿದ್ದರೆ ತಕ್ಷಣ ಡಿಲೀಟ್ ಮಾಡಿ! ಇಲ್ಲವಾದರೆ ಖಾತೆ ಆಗುವುದು ಖಾಲಿ

ಮಾರುತಿ ಸೆಲೆರಿಯೊ ಮತ್ತು ಸ್ವಿಫ್ಟ್ ಬೆಲೆಗಳು : 
ಮಾರುತಿ ಸ್ವಿಫ್ಟ್ ಬೆಲೆಯನ್ನು 5,000 ವರೆಗೆ ಹೆಚ್ಚಿಸಲಾಗಿದೆ. ಇದು ಕಂಪನಿಯ ಅತಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ. ಸ್ವಿಫ್ಟ್ ಬೆಲೆ ಈಗ 5.99 ಲಕ್ಷ (ಎಕ್ಸ್ ಶೋ ರೂಂ) ದಿಂದ  8.97 ಲಕ್ಷ (ಎಕ್ಸ್ ಶೋ ರೂಂ) ವರೆಗೆ ಏರಿಕೆಯಾಗಿದೆ.  ಮಾರುತಿ ಸುಜುಕಿ ಸೆಲೆರಿಯೊ ಬೆಲೆಯಲ್ಲಿ ಕೂಡಾ ಇದೇ ರೀತಿ ಏರಿಕೆ ಮಾಡಲಾಗಿದೆ. ಇದರ ಬೆಲೆಯಲ್ಲಿಯೂ 1,500 ರೂಪಾಯಿಯಷ್ಟು  ಹೆಚ್ಚಳ ಮಾಡಲಾಗಿದೆ.  ಪ್ರಸ್ತುತ  ಸೆಲೆರಿಯೊ ಹ್ಯಾಚ್‌ಬ್ಯಾಕ್ ಬೇಸ್ ಎಲ್‌ಎಕ್ಸ್‌ಐ ರೂಪಾಂತರದ ಬೆಲೆ  5.36 ಲಕ್ಷಕ್ಕೆ (ಎಕ್ಸ್-ಷೋರೂಂ) ಏರಿದೆ .  ಟಾಪ್ ವೆರಿಯಂಟ್ ಗೆ  7.14 ಲಕ್ಷ (ಎಕ್ಸ್-ಶೋರೂಂ) ವೆಚ್ಚವಾಗಲಿದೆ.  

ಮಾರುತಿ ಸಿಯಾಜ್ ಬೆಲೆ  :
ಮಾರುತಿ ಸಿಯಾಜ್ ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ ಮುಂತಾದ ಇತರ ಕಾರುಗಳೊಂದಿಗೆ ಸ್ಪರ್ಧಿಸುತ್ತದೆ. ಇದರ ಬೆಲೆಯಲ್ಲಿ 11,000ದಷ್ಟು  ಏರಿಕೆ ಮಾಡಲಾಗಿದೆ. ಅದೇ ರೀತಿ, ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸೆಡಾನ್, ಮಾರುತಿ ಡಿಜೈರ್ ಬೆಲೆಯನ್ನು ಕೂಡಾ  7,500 ವರೆಗೆ ಹೆಚ್ಚಿಸಲಾಗಿದೆ.  

ಇದನ್ನೂ ಓದಿ ಮಾರುತಿಯ ಈ ಕಾರಿಗೆ ಹೆಚ್ಚುತ್ತಿದೆ ಬೇಡಿಕೆ ! 6 ಲಕ್ಷ ಬೆಲೆಯ ಈ ಕಾರಿನಲ್ಲಿದೆ ಸೂಪರ್ ವೈಶಿಷ್ಟ್ಯ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News