ಮಾರುಕಟ್ಟೆಗೆ ಕಾಲಿಡುತ್ತಿದೆ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ! ಬೆಲೆ ಕೂಡಾ ಇಷ್ಟೇ

ಮೊದಲ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಮಾರ್ಚ್ 2024 ರ ವೇಳೆಗೆ ರಸ್ತೆಗಿಳಿಯಲಿದೆ ಎಂದು ಕಂಪನಿಯ ಅಧ್ಯಕ್ಷ, ಎಂಡಿ ಮತ್ತು ಸಿಇಒ ಅಟ್ಸುಶಿ ಒಗಾಟಾ ಖಚಿತಪಡಿಸಿದ್ದಾರೆ.  

Written by - Ranjitha R K | Last Updated : Feb 1, 2023, 10:45 AM IST
  • ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗಕ್ಕೆ ಪ್ರವೇಶಿಸಲು ತಯಾರಿ
  • ಆಕ್ಟಿವಾದ ಎಲೆಕ್ಟ್ರಿಕ್ ಆವೃತ್ತಿಯನ್ನು ತರಲು ನಡೆಯುತ್ತಿದೆ ತಯಾರಿ
  • ಬ್ಯಾಟರಿ ಪ್ಯಾಕ್ ಹೇಗಿರಲಿದೆ ಗೊತ್ತಾ ?
ಮಾರುಕಟ್ಟೆಗೆ ಕಾಲಿಡುತ್ತಿದೆ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ! ಬೆಲೆ ಕೂಡಾ ಇಷ್ಟೇ  title=

ಬೆಂಗಳೂರು : ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ  ಪ್ರಸ್ತುತ ಓಲಾ, ಅಥರ್ ಮತ್ತು ಟಿವಿಎಸ್‌ನಂತಹ ಕಂಪನಿಗಳ ಪ್ರಾಬಲ್ಯ ಹೊಂದಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗಕ್ಕೆ ಪ್ರವೇಶಿಸಲು ತಯಾರಿ ನಡೆಸುತ್ತಿದೆ. ಶೀಘ್ರದಲ್ಲೇ ಈ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್‌ ಸ್ಪರ್ಧೆಗೆ ಇಳಿಯಲಿವೆ. ಹೊಂಡಾ ಆಕ್ಟಿವಾ  ICE ಆವೃತ್ತಿಯಲ್ಲಿ ಸ್ಕೂಟರ್ ವಿಭಾಗದಲ್ಲಿ ತನ್ನದೇ ಪ್ರಾಬಲ್ಯ ಹೊಂದಿದೆ. ಇದೀಗ HMSI ತನ್ನ ಆಕ್ಟಿವಾದ ಎಲೆಕ್ಟ್ರಿಕ್ ಆವೃತ್ತಿಯನ್ನು ತರಲು ತಯಾರಿ ನಡೆಸುತ್ತಿದೆ. ಮುಂದಿನ ವರ್ಷ ಅಂದರೆ 2024 ರ ಜನವರಿ ತಿಂಗಳಲ್ಲಿ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ. 

ಯಾವಾಗ ರಸ್ತೆಗಿಳಿಯಲಿದೆ ಹೊಂಡಾ ಎಲೆಕ್ಟ್ರಿಕ್ ಸ್ಕೂಟರ್  :

ಮೊದಲ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಮಾರ್ಚ್ 2024 ರ ವೇಳೆಗೆ ರಸ್ತೆಗಿಳಿಯಲಿದೆ ಎಂದು ಕಂಪನಿಯ ಅಧ್ಯಕ್ಷ, ಎಂಡಿ ಮತ್ತು ಸಿಇಒ ಅಟ್ಸುಶಿ ಒಗಾಟಾ ಖಚಿತಪಡಿಸಿದ್ದಾರೆ. ಇದರ ನಂತರ, ಹೊಸ ಪ್ಲಾಟ್‌ಫಾರ್ಮ್ ಆಧಾರಿತ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ರಸ್ತೆಗಿಳಿಯಲಿದೆ. ಇದು ಸ್ವಾಪ್ ಮಾಡಬಹುದಾದ ಬ್ಯಾಟರಿಯೊಂದಿಗೆ ಉತ್ತಮ ಕಾರ್ಯಕ್ಷಮತೆಯೊಂದಿಗೆ ಕಾರ್ಯ ನಿರ್ವಹಿಸಲಿರುವ ಪ್ರೀಮಿಯಂ ಸ್ಕೂಟರ್ ಆಗಿರಲಿದೆ. ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಥಿರ ಬ್ಯಾಟರಿ ಪ್ಯಾಕ್‌ನೊಂದಿಗೆ ಬರಲಿದೆ ಮತ್ತು ಗಂಟೆಗೆ 50 ಕಿಮೀ ವೇಗವನ್ನು ನೀಡುತ್ತದೆ ಎಂದು ದ್ವಿಚಕ್ರ ವಾಹನ ತಯಾರಕರು ಖಚಿತಪಡಿಸಿದ್ದಾರೆ. 

ಇದನ್ನೂ ಓದಿ : ಗ್ರಾಹಕರ ಫೆವರಿಟ್ ಲಿಸ್ಟ್ ನಲ್ಲಿದೆ ಈ 7 ಸೀಟರ್! ಶೋರೂಂ ನಲ್ಲಿ ಹೆಚ್ಚುತ್ತಿದೆ ಖರೀದಾರರ ಸಂಖ್ಯೆ

ಏನಿರಲಿದೆ ವೈಶಿಷ್ಟ್ಯ : 

ಮಾಧ್ಯಮ ವರದಿಗಳ ಪ್ರಕಾರ, ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಎಲ್ಇಡಿ ಹೆಡ್ಲ್ಯಾಂಪ್ ಮತ್ತು ಅನಲಾಗ್ ಓಡೋಮೀಟರ್, ಸ್ಪೀಡೋಮೀಟರ್ ಮತ್ತು ಟ್ಯಾಕೋಮೀಟರ್ ನಥಹ ವೈಶಿಷ್ಟ್ಯಗಳನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ, ಆಕ್ಟಿವಾ ಮಾದರಿಯ ಶ್ರೇಣಿಯು ಮೂರು ರೂಪಾಂತರಗಳಲ್ಲಿ ಬರುತ್ತದೆ. ಸ್ಟ್ಯಾಂಡರ್ಡ್, ಡಿಲಕ್ಸ್ ಮತ್ತು ಸ್ಮಾರ್ಟ್, ಇವುಗಳ ಬೆಲೆ ಕ್ರಮವಾಗಿ  74,536 ರೂ,  77,036 ರೂ ಮತ್ತು  80,537 ರೂಪಾಯಿ.  ಆಕ್ಟಿವಾ ಎಲೆಕ್ಟ್ರಿಕ್ ಅದರ ICE ಕೌಂಟರ್ ಪಾರ್ಟ್ ಗಿಂತ ಹೆಚ್ಚು ದುಬಾರಿಯಾಗಿರಲಿದೆ. 

ಇದನ್ನೂ ಓದಿ : ಈ ಐದು ಆಪ್ ಗಳು ನಿಮ್ಮ ಮೊಬೈಲ್ ನಲ್ಲಿದ್ದರೆ ತಕ್ಷಣ ಡಿಲೀಟ್ ಮಾಡಿ.! ಇಲ್ಲವಾದರೆ ಖಾಲಿಯಾವುದು ಖಾತೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News