Amazon Prime vs Disney+ Hotstar vs Netflix: ಮನರಂಜನೆಗಾಗಿ ಯಾವ ಯೋಜನೆ ಬೆಸ್ಟ್, ಇಲ್ಲಿದೆ ಮಾಹಿತಿ

Amazon Prime vs Disney+ Hotstar vs Netflix: ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ + ಹಾಟ್‌ಸ್ಟಾರ್ ತಮ್ಮ ಚಂದಾದಾರಿಕೆ ಯೋಜನೆಗಳನ್ನು ದುಬಾರಿಗೊಳಿಸಿದರೆ ನೆಟ್‌ಫ್ಲಿಕ್ಸ್ ಯೋಜನೆಗಳ ಬೆಲೆಗಳನ್ನು ಶೇಕಡಾ 50 ರಷ್ಟು ಕಡಿತಗೊಳಿಸಿದೆ.

Written by - Yashaswini V | Last Updated : Dec 20, 2021, 11:16 AM IST
  • ಇತ್ತೀಚೆಗೆ, Amazon Prime ಮತ್ತು Disney + Hotstar ತಮ್ಮ ಚಂದಾದಾರಿಕೆ ಯೋಜನೆಗಳ ಬೆಲೆಯನ್ನು ಹೆಚ್ಚಿಸಿವೆ
  • ನೆಟ್‌ಫ್ಲಿಕ್ಸ್ ತನ್ನ ಬಳಕೆದಾರರಿಗೆ ಉಡುಗೊರೆಗಳನ್ನು ನೀಡುತ್ತಾ ಚಂದಾದಾರಿಕೆ ಯೋಜನೆಗಳ ಬೆಲೆಗಳನ್ನು ಕಡಿಮೆ ಮಾಡಿದೆ
  • ನೀವು ಈ ಯಾವುದೇ ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರರಾಗಲು ಬಯಸಿದರೆ ಅದಕ್ಕೂ ಮುನ್ನ ಅವುಗಳ ಬೆಲೆಯ ಬಗ್ಗೆ ತಿಳಿದುಕೊಳ್ಳಿ
Amazon Prime vs Disney+ Hotstar vs Netflix: ಮನರಂಜನೆಗಾಗಿ ಯಾವ ಯೋಜನೆ ಬೆಸ್ಟ್, ಇಲ್ಲಿದೆ ಮಾಹಿತಿ title=
Amazon Prime vs Disney+ Hotstar vs Netflix:

Amazon Prime vs Disney+ Hotstar vs Netflix: ಇತ್ತೀಚೆಗೆ, Amazon Prime ಮತ್ತು Disney + Hotstar ತಮ್ಮ ಚಂದಾದಾರಿಕೆ ಯೋಜನೆಗಳ ಬೆಲೆಯನ್ನು ಹೆಚ್ಚಿಸಿವೆ. ಅದರ ನಂತರ ಬಳಕೆದಾರರು ಈ ಸೇವೆಗಳನ್ನು ಬಳಸಲು ಹೆಚ್ಚಿನ ಬೆಲೆಯನ್ನು  (OTT Apps) ಪಾವತಿಸಬೇಕಾಗುತ್ತದೆ. ಏತನ್ಮಧ್ಯೆ, ನೆಟ್‌ಫ್ಲಿಕ್ಸ್ ತನ್ನ ಬಳಕೆದಾರರಿಗೆ ಉಡುಗೊರೆಗಳನ್ನು ನೀಡುತ್ತಾ ಚಂದಾದಾರಿಕೆ ಯೋಜನೆಗಳ ಬೆಲೆಗಳನ್ನು ಕಡಿಮೆ ಮಾಡಿದೆ. ಅಂದರೆ, ಇತರ OTT ಪ್ಲಾಟ್‌ಫಾರ್ಮ್‌ಗಳಿಗೆ ಹೋಲಿಸಿದರೆ ನೆಟ್‌ಫ್ಲಿಕ್ಸ್‌ನಲ್ಲಿ ಚಲನಚಿತ್ರಗಳು ಮತ್ತು ಸರಣಿಗಳನ್ನು ಕಡಿಮೆ ವೆಚ್ಚದಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆ. ನೀವು ಈ ಯಾವುದೇ ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರರಾಗಲು ಬಯಸಿದರೆ ಅದಕ್ಕೂ ಮುನ್ನ ಅವುಗಳ ಬೆಲೆಯ ಬಗ್ಗೆ ತಿಳಿದುಕೊಳ್ಳಿ. ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್‌ಸ್ಟಾರ್ ಮತ್ತು ನೆಟ್‌ಫ್ಲಿಕ್ಸ್‌ನ ಯೋಜನೆಗಳು ಮತ್ತು ಬೆಲೆಗಳ ಕುರಿತು ನಾವು ಇಲ್ಲಿ ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಯಾರ ಯೋಜನೆ ಅಗ್ಗವಾಗಿದೆ ಎಂದು ತಿಳಿಯಲು ಇದನ್ನು ಓದಿ.

ನೆಟ್‌ಫ್ಲಿಕ್ಸ್‌ನ ಚಂದಾದಾರಿಕೆ ಯೋಜನೆ:
ನೆಟ್‌ಫ್ಲಿಕ್ಸ್ ತನ್ನ ಯೋಜನೆಗಳ  (Netflix Plan) ಬೆಲೆಗಳನ್ನು ಶೇಕಡಾ 60 ರಷ್ಟು ಕಡಿತಗೊಳಿಸಿದೆ. ಈಗ ನೀವು ನೆಟ್‌ಫ್ಲಿಕ್ಸ್‌ನ ಮೊಬೈಲ್ ಪ್ಲಾನ್ ಖರೀದಿಸಲು ಕೇವಲ 149 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಅದರ ಮೂಲ ಬೆಲೆ 199 ರೂ. ಅದೇ ಸಮಯದಲ್ಲಿ, ಈಗ ನೀವು ಮೂಲ ಯೋಜನೆಯನ್ನು ಪಡೆಯಲು ರೂ. 199 ಖರ್ಚು ಮಾಡಬೇಕಾಗುತ್ತದೆ, ಆದರೆ ಅದರ ಮೂಲ ಬೆಲೆ ರೂ. 499 ಆಗಿತ್ತು. ಇದರ ಹೊರತಾಗಿ, ನೀವು ನೆಟ್‌ಫ್ಲಿಕ್ಸ್‌ನ ಸ್ಟ್ಯಾಂಡರ್ಡ್ ಪ್ಲಾನ್ ಅನ್ನು 649 ರೂ. ಬದಲಿಗೆ 499 ರೂ.ಗೆ ಖರೀದಿಸಬಹುದು. ಅದೇ ಸಮಯದಲ್ಲಿ, ಬಳಕೆದಾರರು ಈಗ ಪ್ರೀಮಿಯಂ ಯೋಜನೆಗಾಗಿ ಕೇವಲ 649 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಇದಕ್ಕೂ ಮೊದಲು 799 ರೂಪಾಯಿ ಖರ್ಚು ಮಾಡಬೇಕಿತ್ತು. 

ಇದನ್ನೂ ಓದಿ- Airtel-Vi-Jio Prepaid plans: 500 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ 84 ದಿನಗಳವರೆಗೆ ಈ ಪ್ರಯೋಜನಗಳನ್ನು ಪಡೆಯಿರಿ.!

Amazon Prime ನ ಸಬ್‌ಸ್ಕ್ರಿಪ್ಶನ್ ಪ್ಲಾನ್:
ಅಮೆಜಾನ್ ಪ್ರೈಮ್‌ನ  (Amazon Prime) ಬೆಲೆಗಳಲ್ಲಿ ಹೆಚ್ಚಳದ ನಂತರ, ಈಗ ನೀವು 12 ತಿಂಗಳ ವ್ಯಾಲಿಡಿಟಿ ಯೋಜನೆಯನ್ನು ಖರೀದಿಸಲು ರೂ. 999 ಬದಲಿಗೆ ರೂ 1,499 ಖರ್ಚು ಮಾಡಬೇಕಾಗುತ್ತದೆ. ನೀವು ಅಮೆಜಾನ್ ಪ್ರೈಮ್‌ನ ತ್ರೈಮಾಸಿಕ ಯೋಜನೆಯನ್ನು ತೆಗೆದುಕೊಳ್ಳಲು ಬಯಸಿದರೆ, ಈಗ ನೀವು ರೂ. 329 ಬದಲಿಗೆ ರೂ. 459 ಖರ್ಚು ಮಾಡಬೇಕಾಗುತ್ತದೆ. ಇದಲ್ಲದೆ, ಕಂಪನಿಯು ತನ್ನ ಮಾಸಿಕ ಯೋಜನೆಯ ಬೆಲೆಯನ್ನು 179 ರೂ.ಗೆ ಹೆಚ್ಚಿಸಿದೆ, ಇದು ಮೊದಲು 129 ರೂ. ಆಗಿತ್ತು.

ಇದನ್ನೂ ಓದಿ - ಭಾರತದ ಅಗ್ಗದ ಎಲೆಕ್ಟ್ರಿಕ್ ಕಾರು: ಕೇವಲ 50 ಪೈಸೆಗೆ 1 ಕೀಮಿ ಮೈಲೇಜ್ ನೀಡುತ್ತೆ

ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ ಯೋಜನೆ:
ಡಿಸ್ನಿ + ಹಾಟ್‌ಸ್ಟಾರ್ (Disney+ Hotstar) ಮೊಬೈಲ್ ಪ್ಲಾನ್ ರೂ. 499 ಮತ್ತು ಕಂಪನಿಯ ವಾರ್ಷಿಕ ಯೋಜನೆಯಾಗಿದೆ. ಈ ಯೋಜನೆಯಲ್ಲಿ, ಬಳಕೆದಾರರು 720p ರೆಸಲ್ಯೂಶನ್ ಸೌಲಭ್ಯವನ್ನು ಪಡೆಯುತ್ತಾರೆ. ಅದೇ ಸಮಯದಲ್ಲಿ, ಕಂಪನಿಯ ಎರಡನೇ ಯೋಜನೆಯು ರೂ. 899 ಮತ್ತು ಇದು 1080p ರೆಸಲ್ಯೂಶನ್ ಪಡೆಯುತ್ತದೆ. ಈ ಯೋಜನೆಯನ್ನು ಫೋನ್‌ಗಳು, ಟ್ಯಾಬ್ಲೆಟ್‌ಗಳು, ಕಂಪ್ಯೂಟರ್‌ಗಳು ಮತ್ತು ಟಿವಿಗಳಲ್ಲಿ ಬಳಸಬಹುದು. ಇದರ ಹೊರತಾಗಿ, ಕಂಪನಿಯ ಪ್ರೀಮಿಯಂ ವಾರ್ಷಿಕ ಯೋಜನೆಯು ರೂ. 1,499 ವೆಚ್ಚವಾಗುತ್ತದೆ ಮತ್ತು ಇದು 4K ರೆಸಲ್ಯೂಶನ್‌ನೊಂದಿಗೆ ಬರುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News