ನಮ್ಮ ಮಠಗಳಿಗೂ ಸರ್ಕಾರ ಅನುದಾನ ನೀಡಿದೆ. ಆದ್ರೆ ಯಾವುದೇ ಸರ್ಕಾರ ನಮ್ಮ ಬಳಿ ಕಮಿಷನ್ ಕೇಳಿಲ್ಲ ಎಂದು ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದ್ದಾರೆ. ಈ ಮೂಲಕ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.. ಇಂಥಾ ಆರೋಪ ಮಾಡೋದು ತಪ್ಪು ಎಂದಿದ್ದಾರೆ..
ಸರ್ಕಾರಕ್ಕೆ ಪರ್ಸಂಟೇಜ್ ನೀಡಬೇಕಾದ ಪ್ರಮೇಯವೇ ಬಂದಿಲ್ಲ ಎಂದು ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಬೇಕಿದ್ದರೆ ಭಿಕ್ಷೆ ಬೇಡಿ ಮಠ ಕಟ್ಟುತ್ತೇವೆ. ಒಂದು ವೇಳೆ ಕಮಿಷನ್ ಕೊಟ್ಟು ಮಠ ನಿರ್ಮಾಣ ಮಾಡೋ ಸಂದರ್ಭ ಬಂದರೆ ಅಂತಹ ಅನುದಾನದ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಮಂಡ್ಯ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದ್ದಾರೆ. ಮಂಡ್ಯ ತಾಲೂಕಿನ ಬಸರಾಳು ಗ್ರಾಮದ ಬಳಿ ಜನತಾ ಜಲಧಾರೆ ಮೆರವಣಿಗೆ ವೇಳೆ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.
ರಾಯಚೂರು ತಾಲ್ಲೂಕಿನ ಶಕ್ತಿನಗರದಲ್ಲಿರೋ RTPSನ 5 ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಕಳೆದೊಂದು ವಾರದಿಂದ ರಾಜ್ಯಾದ್ಯಂತ ಮಳೆ, ಗಾಳಿ ಹಿನ್ನೆಲೆ ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಆರ್ಟಿಪಿಎಸ್ನಿಂದ ಬೇಡಿಕೆಗೆ ತಕ್ಕಂತೆ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು RTPSನ ಹಿರಿಯ ಅಧಿಕಾರಿ ಶಶಿಕಾಂತ್ ಮಾಹಿತಿ ನೀಡಿದ್ದಾರೆ.
ತುಮಕೂರು ತಾಲ್ಲೂಕಿನ ಜಕ್ಕೆನಹಳ್ಳಿಯ ಗುಗ್ರಿಮಾರಮ್ಮ ಹಾಗೂ ಮುತ್ತುರಾಯಸ್ವಾಮಿ ಜಾತ್ರಾ ಮಹೋತ್ಸವ ವೈಭದಿಂದ ನೇರವೇರಿತು. ಕಂಬಯ್ಯನನ್ನ ಕರೆತರುವ ಮೂಲಕ ಜಾತ್ರೆ ಆರಂಭವಾಯ್ತು. ಗುಗ್ರಿಮಾರಮ್ಮ ಹಾಗೂ ಮುತ್ತುರಾಯಸ್ವಾಮಿಯನ್ನ ರಥದ ಮೇಲಿರಿಸಿ ರಥೋತ್ಸವ ನಡೆಸಲಾಯಿತು. ಇದೇ ವೇಳೆ ಯುವಕನೊಬ್ಬ ಅಪ್ಪು ಭಾವಚಿತ್ರ ಹಿಡಿದು ಹೆಜ್ಜೆ ಹಾಕಿದ್ದಾನೆ.
ಸರ್ಕಾರದ ವಿರುದ್ಧ 30% ಕಮಿಷನ್ ಆರೋಪ ಮಾಡಿರೋ ದಿಂಗಾಲೇಶ್ವರ ಸ್ವಾಮೀಜಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆರೋಪ ಮಾಡಿರೋ ಸ್ವಾಮೀಜಿ ಸಾಕ್ಷಿ ನೀಡಲಿ ಎಂದು ಬಿಜೆಪಿ ನಾಯಕರು ಸವಾಲು ಹಾಕಿದ್ದಾರೆ. ಮಾಡಿರೋ ಆರೋಪಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಸಾಕ್ಷಿ ನೀಡ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.
ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ಕೆಲಸ ನಡೆಸುತ್ತಿದ್ದೇವೆ. ಮೂಲ ಸೌಕರ್ಯಗಳ ಒದಗಿಸುವುದು, ಅಕ್ಕಪಕ್ಕದ ರಾಜ್ಯಗಳಲ್ಲಿ ನೀತಿ ನಿಯಮ ಹೇಗಿದೆ ಎನ್ನುವುದನ್ನು ಚರ್ಚೆ ಮಾಡ್ತೇವೆ ಎಂದು ತಿಳಿಸಿದರು.
ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೇ ತಪ್ಪು ಮಾಡಿದ್ರೂ ಅವರಿಗೆ ಶಿಕ್ಷೆ ಕೊಟ್ಟೇ ಕೊಡ್ತೀವಿ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡೋದು ಅಕ್ಷಮ್ಯ ಅಪರಾಧ ಅಂತಾ ಸಿಎಂ ಹೇಳಿದ್ದಾರೆ. ಇನ್ನು ಸಂಪುಟ ವಿಸ್ತರಣೆ ವಿಚಾರವಾಗಿ ಹೈಕಮಾಂಡ್ ಕರೆದ ಕೂಡ್ಲೇ ದೆಹಲಿಗೆ ತೆರಳೋದಾಗಿ ಸಿಎಂ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.