ಏಪ್ರಿಲ್ 14 ರಂದು ಕೆಜಿಎಫ್ 2 ಚಿತ್ರದ ಜಗತ್ತಿನಾದ್ಯಂತ ಬಿಡುಗಡೆಯಾದಾಗಿನಿಂದ ಸಿನಿ ಪ್ರಿಯರನ್ನು ಹಾಗೂ ಭಾರತೀಯ ಸಿನಿಮಾ ರಂಗದ ನಟರನ್ನು ಹುಬ್ಬೇರಿಸುವಂತೆ ಮಾಡಿದೆ.ಈ ಚಿತ್ರದ ಮೇಕಿಂಗ್ ಹಾಗೂ ರಾಕಿಂಗ್ ಸ್ಟಾರ್ ಯಶ್ ನಟನೆಗೆ ಅವರು ಮಾರು ಹೋಗಿದ್ದಾರೆ.ಇತ್ತೀಚಿಗೆ ಅಂತವರ ಸಾಲಿಗೆ ಸೇರಿದ ಮತ್ತೊಬ್ಬ ವ್ಯಕ್ತಿ ಎಂದರೆ ಬಾಲಿವುಡ್ ನಟ ರಣವೀರ್ ಸಿಂಗ್..!
ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಬಿಡುಗಡೆಯಾದಾಗಿನಿಂದ, ಇದು ಹಲವಾರು ದಾಖಲೆಗಳನ್ನು ಮುರಿದು ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಾ ಸಾಗುತ್ತಿದೆ.ಈಗ ಈ ಚಿತ್ರ ಬಿಡುಗಡೆಯಾಗಿ ಸುಮಾರು 26 ದಿನಗಳಾಗುತ್ತಾ ಬಂದಿದ್ದರೂ ಸಹ ಅದರ ಹವಾ ಮಾತ್ರ ಇನ್ನೂ ಕಡಿಮೆಯಾಗಿಲ್ಲ.
ಕೆಜಿಎಫ್ ಫ್ರಾಂಚೈಸಿನ ಮೊದಲ ಎರಡು ಅಧ್ಯಾಯಗಳು ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ಈಗ ಮೂರನೇ ಚಾಪ್ಟರ್ ನಲ್ಲಿ ರಾಣಾ ದಗ್ಗುಬಟಿ ನಟಿಸಲಿದ್ದಾರೆ ಎನ್ನುವ ಸುದ್ದಿ ಈಗ ಹರಿದಾಡುತ್ತಿದೆ.ಈಗಾಗಲೇ ಕೆಜಿಎಫ್ 2 ಚಿತ್ರದಲ್ಲಿ ಅಧೀರಾ ಪಾತ್ರ ಸತ್ತಿರುವುದರಿಂದ ಮುಂಬರುವ ಕೆಜಿಎಫ್ 3 ನಲ್ಲಿ ರಾಣಾ ದಗ್ಗುಬಟಿ ಪ್ರಮುಖ ಖಳನಾಯಕನ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.
ಅದೊಂದು ಕಾಲವಿತ್ತು. ಕನ್ನಡ ಚಿತ್ರಗಳನ್ನ ಪರಭಾಷಿಕರು ನೋಡದೇ ಇರುವ ಪರಿಸ್ಥಿತಿ ಇತ್ತು. ಆದರೆ ಅದೆಲ್ಲಾ ಇದೀಗ ಬದಲಾಗಿ ಹೋಗಿದೆ. ಕನ್ನಡ ಸಿನಿಮಾ ಇಂಡಸ್ಟ್ರಿ ಜಗತ್ತಿನಾದ್ಯಂತ ಮಿರಮಿರನೆ ಮಿಂಚುತ್ತಿದೆ. ಅದರಲ್ಲೂ ಕನ್ನಡ ಸಿನಿ ರಂಗದ ಪ್ಯೂರ್ ಗೋಲ್ಡ್ 'ಕೆಜಿಎಫ್' ಚಿತ್ರ ಸ್ಯಾಂಡಲ್ವುಡ್ನ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸುತ್ತಿದೆ.
ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ ೨ ಚಿತ್ರ ಮಾಡುತ್ತಿರುವ ಮೋಡಿಗೆ ಇಡೀ ಸಿನಿ ಜಗತ್ತೇ ಬೆಕ್ಕಸ ಬೆರಗಾಗಿದೆ, ಕೊರೊನಾ ನಂತರದ ಕಾಲಾವಧಿಯಲ್ಲಿ ಬಿಡುಗಡೆಯಾದ ಈ ಸಿನಿಮಾ ಮಾಡುತ್ತಿರುವ ದಾಖಲೆಗಳು ಒಂದಲ್ಲ ಎರಡಲ್ಲ, ಸತತ ಮೂರನೇ ವಾರವೂ ಎಲ್ಲೆಡೆ ಬಾಕ್ಸ್ ಆಫೀಸ್ ನಲ್ಲಿ ನಂಬರ್ 1 ಸ್ಥಾನದಲ್ಲಿದೆ.
'ಕೆಜಿಎಫ್'... 'ಕೆಜಿಎಫ್'... 'ಕೆಜಿಎಫ್'... ಹೀಗೆ ಎಲ್ಲೆಲ್ಲೂ 'ಕೆಜಿಎಫ್' ಪದವೇ ಕಿವಿಗೆ ಬೀಳುತ್ತಿದೆ. ಇಡೀ ಜಗತ್ತೇ ಮೆಚ್ಚಿರುವ 'ಕೆಜಿಎಫ್' ಸಿನಿಮಾ, ದಿನದಿಂದ ದಿನಕ್ಕೆ ದೊಡ್ಡ ದೊಡ್ಡ ದಾಖಲೆ ಬರೆಯುತ್ತಿದೆ.ಇಂತಹ ಚಿನ್ನದಂತಹ ಕನ್ನಡ ಸಿನಿಮಾ ಬಗ್ಗೆ ವಿದೇಶಿಗರು ಸಖತ್ ಕ್ರೇಜ್ ಬೆಳೆಸಿಕೊಂಡಿದ್ದಾರೆ. ಇದೇ ರೀತಿ ಆಸ್ಟ್ರೇಲಿಯಾದ ಸುಂದರಿ ಒಬ್ಬಳು 'ಕೆಜಿಎಫ್' ಸಿನಿಮಾ ಬಗ್ಗೆ ಆಡಿರುವ ಮಾತುಗಳನ್ನ ಕೇಳಿದ್ರೆ ನೀವು ಶಾಕ್ ಆಗ್ತೀರಾ.
ಇದನ್ನೂ ಓದಿ: ₹1000 ಕೋಟಿ ಕ್ಲಬ್ ಸೇರಿದ 'ರಾಕಿ ಭಾಯ್' ಸಿನಿಮಾ ಕೆಜಿಎಫ್ ಚಾಪ್ಟರ್-2..?
ಬಾಲಿವುಡ್ ಅಂಗಳದಲ್ಲಿ ದೊಡ್ಡ ದೊಡ್ಡ ಹಿಟ್ ಸಿನಿಮಾಗಳನ್ನು ನೀಡಿ, ಚೀನಾ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಕನ್ನಡ ಸಿನಿಮಾ ಬಗ್ಗೆ ಹೆಮ್ಮೆಯ ಮಾತುಗಳನ್ನು ಆಡಿದ್ದಾರೆ. ಖಾಸಗಿ ಸಂದರ್ಶನದಲ್ಲಿ ಮಾತನಾಡಿರುವ ಆಮೀರ್ ಖಾನ್, ಕನ್ನಡದ ಈ ಸಿನಿಮಾದ ಹೆಸರು ಕೇಳಿದ್ರೆ ಭಯವಾಗುತ್ತೆ ಅಂದಿದ್ದಾರೆ. ಹಾಗಾದ್ರೆ ಯಾವುದು ಆ ಸಿನಿಮಾ ಅಂತಾ ತಿಳಿಯಲು ಮುಂದೆ ಓದಿ.
ಕನ್ನಡಿಗರ ಪಾಲಿನ ಹೆಮ್ಮೆಯ ಸಿನಿಮಾ ಕೆಜಿಎಫ್ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಕೆಜಿಎಫ್ ಚಾಪ್ಟರ್ 2 ಮಾಡಿದ ಮೋಡಿಗೆ ಇಡೀ ಜಗತ್ತೇ ಫಿದಾ ಆಗಿದ್ದು, ಎಲ್ಲರೂ ನಮ್ಮ ಹೆಮ್ಮೆಯ ಕನ್ನಡದ ಚಿತ್ರವನ್ನ ಕೊಂಡಾಡುತ್ತಿದ್ದಾರೆ. ಅದರಲ್ಲೂ ಸಾವಿರ ಕೋಟಿ ಕ್ಲಬ್ ಸೇರುವ ಮೂಲಕ ಕೆಜಿಎಫ್ ಚಾಪ್ಟರ್ 2 ಹೊಸ ದಾಖಲೆ ನಿರ್ಮಿಸಿದ್ದು, ಅಧಿಕೃತ ಘೋಷಣೆಯೊಂದೇ ಈಗ ಬಾಕಿ ಎನ್ನಲಾಗ್ತಿದೆ.
ಕನ್ನಡಿಗರ ಪಾಲಿನ ಹೆಮ್ಮೆಯ ಸಿನಿಮಾ ಕೆಜಿಎಫ್ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಕೆಜಿಎಫ್ ಚಾಪ್ಟರ್ 2 ಮಾಡಿದ ಮೋಡಿಗೆ ಇಡೀ ಜಗತ್ತೇ ಫಿದಾ ಆಗಿದ್ದು, ಎಲ್ಲರೂ ನಮ್ಮ ಹೆಮ್ಮೆಯ ಕನ್ನಡದ ಚಿತ್ರವನ್ನ ಕೊಂಡಾಡುತ್ತಿದ್ದಾರೆ. ಅದರಲ್ಲೂ ಸಾವಿರ ಕೋಟಿ ಕ್ಲಬ್ ಸೇರುವ ಮೂಲಕ ಕೆಜಿಎಫ್ ಚಾಪ್ಟರ್ 2 ಹೊಸ ದಾಖಲೆ ನಿರ್ಮಿಸಿದ್ದು, ಅಧಿಕೃತ ಘೋಷಣೆಯೊಂದೇ ಈಗ ಬಾಕಿ ಎನ್ನಲಾಗ್ತಿದೆ.
ಭಾರತದ ಹೆಸರಾಂತ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ನೇರ ನುಡಿಗೆ ಮತ್ತು ಮುಕ್ತ ಅಭಿಪ್ರಾಯಕ್ಕೆ ಹೆಸರುವಾಸಿಯಾದವರು.ಈಗ ಅವರು ಹಿಂದಿ ಭಾಷೆಯ ವಿಚಾರವಾಗಿ ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ನಡುವಿನ ಭಾಷಾ ಸಂಘರ್ಷದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಭಾರತೀಯ ಚಿತ್ರರಂಗದ ಖಾತ್ಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗ ದಕ್ಷಿಣ ಭಾರತದ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವುದಲ್ಲದೆ ಹಿಂದಿ ಸಿನಿಮಾಗಳಿಗೂ ಕೂಡ ಸಾಕಷ್ಟು ಟಕ್ಕರ್ ಕೊಡುತ್ತಿವೆ.ಈಗ ಪುಷ್ಪಾ, ಆರ್.ಆರ್.ಆರ್ ಕೆಜಿಎಫ್ 2 ನಂತಹ ಚಿತ್ರಗಳು ದೇಶಾದ್ಯಂತ ಸಾಕಷ್ಟು ಹವಾ ಸೃಷ್ಟಿಸಿದ್ದಲ್ಲದೆ ಬಾಕ್ಸ್ ಆಫೀಸ್ ನಲ್ಲಿ ಹಿಂದಿ ಸಿನಿಮಾಗಳನ್ನು ಕೂಡ ಮಂಕು ಮಾಡಿದ್ದವು.ಈ ಹಿನ್ನೆಲೆಯಲ್ಲಿ ಈಗ ಸರಣಿ ಟ್ವೀಟ್ ಮಾಡುವ ಮೂಲಕ ರಾಮ್ ಗೋಪಾಲ್ ವರ್ಮಾ ಬಾಲಿವುಡ್ ಸಿನಿಮಾಗಳ ವಿರುದ್ಧ ಕಿಡಿ ಕಾರಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿರುವ ಕೆಜಿಎಫ್ 2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.ಈಗ ವಿಶ್ವದಾದ್ಯಂತ 1000 ಕೋಟಿ ರೂ ಗಳಿಸುವತ್ತ ದಾಪುಗಾಲಿರಿಸಿದೆ.ಈಗ ಯಶ್ ಅವರು ಚಿತ್ರದ ಎರಡನೇ ಚಾಪ್ಟರ್ ಯಶಸ್ವಿಯಾಗಿರುವ ಬೆನ್ನಲ್ಲೇ ವಿದೇಶಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಅವರು ಮುಂಬರುವ ಕೆಜಿಎಫ್ 3 ಚಿತ್ರದ ಕುರಿತಾಗಿ ಮಾತನಾಡಿದ್ದಾರೆ.ಈ ಚಿತ್ರದಲ್ಲಿ ಸಾಕಷ್ಟು ಅಚ್ಚರಿದಾಯಕ ದೃಶ್ಯಗಳಿವೆ, ಅದೊಂದು ಕಲ್ಪನೆಯಾಗಿದೆ.ಈಗ ಅದನ್ನು ಅಷ್ಟಕ್ಕೇ ಬಿಟ್ಟಿದ್ದೇವೆ ಎಂದು ಅವರು ಹೇಳಿದ್ದಾರೆ.
ಈ ಚಿತ್ರವು ಬಿಡುಗಡೆಯಾದ ಮೊದಲ ವಾರದಲ್ಲಿಯೇ 720.31 ಕೋಟಿ ಗಳಿಸಿ ದೇಶಾದ್ಯಂತ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು.ಈಗ ಈ ಸಿನಿಮಾ ಭಾನುವಾರದಂತ್ಯಕ್ಕೆ 800 ಕೋಟಿ.ರೂ ಅನ್ನು ದಾಟಿದೆ ಎನ್ನಲಾಗಿದೆ.
ಕೊರೊನೋತ್ತರ ಕಾಲಾವಧಿಯಲ್ಲಿ ಬಹುತೇಕ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡಲು ಹೆಣಗಾಡುತ್ತಿವೆ.ಆದಾಗ್ಯೂ ದಕ್ಷಿಣ ಭಾರತೀಯ ಸಿನಿಮಾಗಳಾದ ಕೆಜಿಎಫ್ 2,ಆರ್,ಆರ್,ಆರ್ ಹಾಗೂ ಪುಷ್ಪಾದಂತಹ ಚಿತ್ರಗಳು ದೇಶಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ.ಈಗ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿಯಾಗುತ್ತಿರುವುದನ್ನು ನೋಡಿ ಬಾಲಿವುಡ್ ಕೂಡ ಅಚ್ಚರಿ ವ್ಯಕ್ತಪಡಿಸಿದೆ.
ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದ ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್-2 ಸಿನಿಮಾ ಜಗತ್ತಿನಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.