ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿರುವ ಕೆಜಿಎಫ್ 2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.ಈಗ ವಿಶ್ವದಾದ್ಯಂತ 1000 ಕೋಟಿ ರೂ ಗಳಿಸುವತ್ತ ದಾಪುಗಾಲಿರಿಸಿದೆ.ಈಗ ಯಶ್ ಅವರು ಚಿತ್ರದ ಎರಡನೇ ಚಾಪ್ಟರ್ ಯಶಸ್ವಿಯಾಗಿರುವ ಬೆನ್ನಲ್ಲೇ ವಿದೇಶಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಅವರು ಮುಂಬರುವ ಕೆಜಿಎಫ್ 3 ಚಿತ್ರದ ಕುರಿತಾಗಿ ಮಾತನಾಡಿದ್ದಾರೆ.ಈ ಚಿತ್ರದಲ್ಲಿ ಸಾಕಷ್ಟು ಅಚ್ಚರಿದಾಯಕ ದೃಶ್ಯಗಳಿವೆ, ಅದೊಂದು ಕಲ್ಪನೆಯಾಗಿದೆ.ಈಗ ಅದನ್ನು ಅಷ್ಟಕ್ಕೇ ಬಿಟ್ಟಿದ್ದೇವೆ ಎಂದು ಅವರು ಹೇಳಿದ್ದಾರೆ.
ವೆರೈಟಿಗೆ ನೀಡಿದ ಸಂದರ್ಶನದಲ್ಲಿ, ಕೆಜಿಎಫ್: 3 ಕುರಿತು ಮಾತನಾಡಿರುವ ಯಶ್, 'ಈಗಾಗಲೇ ನಾನು ಮತ್ತು ಪ್ರಶಾಂತ್ ಸಾಕಷ್ಟು ದೃಶ್ಯಗಳ ಬಗ್ಗೆ ಯೋಚಿಸಿದ್ದೇವೆ.ಕೆಜಿಎಫ್ 2 ನಲ್ಲಿ ನಮಗೆ ಮಾಡಲು ಸಾಧ್ಯವಾಗದ ಬಹಳಷ್ಟು ಕೆಲಸಗಳಿವೆ.ಹಾಗಾಗಿ ಮುಂಬರುವ ಚಿತ್ರದಲ್ಲಿ ಸಾಕಷ್ಟು ಸಾಧ್ಯತೆಗಳಿವೆ ಎನ್ನುವುದು ನಮಗೆ ತಿಳಿದಿದೆ, ಅದರಲ್ಲಿ ಸಾಕಷ್ಟು ಅಚ್ಚರಿಯ ದೃಶ್ಯಗಳಿವೆ, ಈಗ ಅದೊಂದು ಕಲ್ಪನೆಯಾಗಿದೆ ಅದನ್ನು ನಾವು ಈಗ ಅಲ್ಲಿಗೆ ಬಿಟ್ಟಿದ್ದೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಕಿಚ್ಚನ ಕೈ ರುಚಿ ಸವಿದ ಡಾಲಿ, ವಾಸುಕಿ ವೈಭವ್! ಈ ಟ್ರೀಟ್ ಮೀಟ್‌ನ ಸ್ಪೆಷಲ್ ಏನು?
ಇದೇ ವೇಳೆ ವಿಶ್ವದಾದ್ಯಂತ ಕೆಜಿಎಫ್ 2 ಚಿತ್ರಕ್ಕೆ ಸಿಗುತ್ತಿರುವ ರಿಸ್ಪಾನ್ಸ್ ಗೆ ಯಶ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.ಅಷ್ಟೇ ಅಲ್ಲದೆ ಆರಂಭದಲ್ಲಿ ಕೆಜಿಎಫ್ ಚಿತ್ರವನ್ನು ಕೇವಲ ಒಂದೇ ಸಿನಿಮಾ ಮಾಡುವ ನಿಟ್ಟಿನಲ್ಲಿ ಯೋಚಿಸಲಾಗಿತ್ತು, ಆದರೆ ಚಿತ್ರಕ್ಕಿರುವ ಸಾಮರ್ಥ್ಯವನ್ನು ಗಮನಿಸಿ ನಿರ್ದೇಶಕರು ಇದನ್ನು ಎರಡು ಭಾಗಗಳಲ್ಲಿ ತರಲು ನಿರ್ಧರಿಸಿದರು ಎಂದು ಅವರು ಹೇಳಿದರು.
'ಕೆ.ಜಿ.ಎಫ್" ಒಂದು ಚಿತ್ರವಾಗಬೇಕಿತ್ತು, ಆದರೆ ನಿರ್ಮಾಣದ ಮಧ್ಯದಲ್ಲಿ, ಪ್ರಶಾಂತ್ ನೀಲ್ ಚಿತ್ರವನ್ನು ಎರಡು ಭಾಗಗಳಲ್ಲಿ ತರಲು ನಿರ್ಧರಿಸಿದರು, ಏಕೆಂದರೆ ಈ ಚಿತ್ರದಲ್ಲಿ ಕೆಲವು ಭಾವನಾತ್ಮಕ ದೃಶ್ಯಗಳಿವೆ, ಇದು ಭಾರತೀಯ ಪ್ರೇಕ್ಷಕರನ್ನು ಗೆಲ್ಲಲು ಪ್ರಮುಖವಾದದ್ದು, ಚಿತ್ರವು ಯಾವುದೇ ಪ್ರಕಾರದ್ದಾಗಲಿ ಇದರ ವಿಸ್ತರಣೆಯ ಅಗತ್ಯವಿದೆ ಎನ್ನುವುದನ್ನು ಮನಗಂಡು ಚಿತ್ರ ತಂಡವು ಈ ವಿಚಾರವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಒಂದು ತಿಂಗಳುಗಳ ಕಾಲ ವಿರಾಮವನ್ನು ತೆಗೆದುಕೊಂಡಿತು.ಉತ್ತಮ ಭಾಗಗಳು ಚಾಪ್ಟರ್ 2 ದಲ್ಲಿವೆ ಒಂದು ವೇಳೆ ಅದು ಅಂದುಕೊಂಡಂತೆ ಬರದಿದ್ದಲ್ಲಿ ಚಾಪ್ಟರ್ 1 ನಮ್ಮನ್ನು ಚಿಂತೆಗೀಡುಮಾಡಿತ್ತು. ಹಾಗಾಗಿ ನಮ್ಮ ಉದ್ದೇಶ ಎಂದಿಗೂ ಚಾಪ್ಟರ್ 2 ನ್ನು ತಯಾರಿಸುವುದಾಗಿರಲಿಲ್ಲ, ಆದರೆ ಇದರ ಅಂತಿಮ ನಿರ್ಧಾರ ಒಂದು ರೀತಿ ನಮಗೆ ಜೂಜಾಟವಾಗಿತ್ತು " ಎಂದು ಯಶ್ ವಿವರಿಸಿದರು.
ಇದನ್ನೂ ಓದಿ: 'ಸೂರರೈ ಪೊಟ್ರು' ಹಿಂದಿಗೆ ರಿಮೇಕ್! ಕನ್ನಡಿಗ ಕ್ಯಾ.ಗೋಪಿನಾಥ್ ಪಾತ್ರದಲ್ಲಿ ಅಕ್ಷಯ್ ಕುಮಾರ್
ಕೆಜಿಎಫ್ 2 ಚಿತ್ರವು ಈಗಾಗಲೇ ಹಲವಾರು ದಾಖಲೆಗಳನ್ನೂ ನಿರ್ಮಿಸಿದ್ದು, ಅದರಲ್ಲೂ ಎಲ್ಲಾ ಭಾಷೆಗಳಲ್ಲಿ 50 ಕೋಟಿ ಗಳಿಸಿದ ಮೊದಲ ಭಾರತೀಯ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.ಅಷ್ಟೇ ಅಲ್ಲದೆ ಬಾಕ್ಸ್ ಆಫೀಸ್ ಗಳಿಕೆಯಲ್ಲಿ 900 ಕ್ಕೂ ಅಧಿಕ ಕೋಟಿ ಗಳಿಸುವ ಮೂಲಕ ಈ ಸಾಧನೆ ಮಾಡಿದ ನಾಲ್ಕನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.ಚಿತ್ರದ ಈಗಿನ ಟ್ರೆಂಡ್ ನೋಡಿದರೆ ಇನ್ನು ಕೆಲವೇ ದಿನಗಳಲ್ಲಿ ಈ ಚಿತ್ರವು ದೇಶಿಯ ಸಿನಿ ಮಾರುಕಟ್ಟೆಯಲ್ಲಿ ದಂಗಲ್ ಸಿನಿಮಾದ ದಾಖಲೆಯನ್ನು ಅಳಿಸಿ ಹಾಕುವುದರ ಜೊತೆಗೆ ಬಾಹುಬಲಿ ೨ ಚಿತ್ರದ ದಾಖಲೆಗೂ ಕೂಡ ಟಕ್ಕರ್ ಕೊಡಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.