ಹಿಂದಿ ದಾಷ್ಟ್ಯ ಮೆರೆಯುವ ಬಾಲಿವುಡ್ ಗೆ ರಾಮ್ ಗೋಪಾಲ್ ವರ್ಮಾ ಹಾಕಿದ ಸವಾಲೇನು ಗೊತ್ತೇ?

ಭಾರತದ ಹೆಸರಾಂತ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ನೇರ ನುಡಿಗೆ ಮತ್ತು ಮುಕ್ತ ಅಭಿಪ್ರಾಯಕ್ಕೆ ಹೆಸರುವಾಸಿಯಾದವರು.ಈಗ ಅವರು ಹಿಂದಿ ಭಾಷೆಯ ವಿಚಾರವಾಗಿ ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ನಡುವಿನ ಭಾಷಾ ಸಂಘರ್ಷದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

Written by - Zee Kannada News Desk | Last Updated : Apr 29, 2022, 03:30 PM IST
  • ಇನ್ನೊಂದೆಡೆಗೆ ಕೆಜಿಎಫ್ 2, ಆರ್‌ಆರ್‌ಆರ್, ಪುಷ್ಪ ಚಿತ್ರಗಳು ಕೇವಲ ಹಿಂದಿಗೆ ಮಾತ್ರವಲ್ಲ, ತೆಲುಗು, ತಮಿಳು ಮಲಯಾಳಂ ಇತ್ಯಾದಿಗಳಲ್ಲಿಯೂ ಡಬ್ ಆಗಿವೆ.
  • ಇದು ನೇರವಾಗಿ ನಿರ್ಮಾಪಕರು ಎಷ್ಟು ದೂರ ಮತ್ತು ಎಷ್ಟು ವ್ಯಾಪಕವಾಗಿ ತಲುಪಲು ಬಯಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
 ಹಿಂದಿ ದಾಷ್ಟ್ಯ ಮೆರೆಯುವ ಬಾಲಿವುಡ್ ಗೆ ರಾಮ್ ಗೋಪಾಲ್ ವರ್ಮಾ ಹಾಕಿದ ಸವಾಲೇನು ಗೊತ್ತೇ? title=

ನವದೆಹಲಿ: ಭಾರತದ ಹೆಸರಾಂತ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ನೇರ ನುಡಿಗೆ ಮತ್ತು ಮುಕ್ತ ಅಭಿಪ್ರಾಯಕ್ಕೆ ಹೆಸರುವಾಸಿಯಾದವರು.ಈಗ ಅವರು ಹಿಂದಿ ಭಾಷೆಯ ವಿಚಾರವಾಗಿ ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ನಡುವಿನ ಭಾಷಾ ಸಂಘರ್ಷದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲದೆ ಬಾಲಿವುಡ್ ಚಿತ್ರರಂಗವು ಈಗ ದಕ್ಷಿಣ ಚಿತ್ರಗಳ ಯಶಸ್ಸಿನಿಂದ ಅಸೂಹೆ ಪಡುತ್ತಿದೆ. ಹೀಗಾಗಿ ಇದನ್ನು ಅವರಿಗೆ ಸಹಿಸಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.ಈ ವಿಚಾರದಲ್ಲಿ ಕಿಚ್ಚ ಸುದೀಪ್ ಅವರ ಅಭಿಪ್ರಾಯಕ್ಕೆ ವರ್ಮಾ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈಗ ಈ ಸರಣಿ ಟ್ವೀಟ್ ಗಳ ಮೂಲಕವಾಗಿ ಅವರು ಬಾಲಿವುಡ್ ಚಿತ್ರರಂಗವನ್ನು ಹಾಗೂ ಅಲ್ಲಿನ ನಟರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

'ಭಾಷಾ ಯುದ್ದ ಮಾಡುತ್ತಿರುವವರು ಗಮನಿಸಬೇಕು ಹಾಲಿವುಡ್ ತನ್ನ ಚಿತ್ರಗಳನ್ನು ಪ್ರಪಂಚದಾದ್ಯಂತ ಬಹು ಭಾಷೆಗಳಲ್ಲಿ ಡಬ್ ಮಾಡುತ್ತಿದೆ.ಇತ್ತೀಚಿನ ನಿದರ್ಶನವನ್ನು ತೆಗೆದುಕೊಳ್ಳುವುದಾದರೆ ಸ್ಪೈಡರ್ಮ್ಯಾನ್ ಚಿತ್ರವು ಹಿಂದಿ, ತೆಲುಗು,ತಮಿಳು,ಕನ್ನಡ, ಮಲಯಾಳಂ,ಮರಾಠಿ, ಭೋಜ್ಪುರಿ ಮುಂತಾದ 10 ಭಾಷೆಗಳಲ್ಲಿ ಡಬ್ ಆಗಿದೆ.ಇನ್ನೊಂದೆಡೆಗೆ ಕೆಜಿಎಫ್ 2, ಆರ್‌ಆರ್‌ಆರ್, ಪುಷ್ಪ ಚಿತ್ರಗಳು ಕೇವಲ ಹಿಂದಿಗೆ ಮಾತ್ರವಲ್ಲ, ತೆಲುಗು, ತಮಿಳು ಮಲಯಾಳಂ ಇತ್ಯಾದಿಗಳಲ್ಲಿಯೂ ಡಬ್ ಆಗಿವೆ.ಇದು ನೇರವಾಗಿ ನಿರ್ಮಾಪಕರು ಎಷ್ಟು ದೂರ ಮತ್ತು ಎಷ್ಟು ವ್ಯಾಪಕವಾಗಿ ತಲುಪಲು ಬಯಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಹಿಂದಿ ಚಲನಚಿತ್ರಗಳ ಹಿಂದಿನ ಡಬ್ ಆವೃತ್ತಿಗಳಲ್ಲಿ ಮೈನೆ ಪ್ಯಾರ್ ಕಿಯಾ ಮತ್ತು ಹಮ್ ಆಪ್ಕೆ ಹೈ ಕೌನ್ ಮತ್ತು ಇತ್ತೀಚೆಗೆ ದಂಗಲ್ ಹಿಂದಿಯೇತರ ಪ್ರಾದೇಶಿಕ ರಾಜ್ಯಗಳಲ್ಲಿ ಯಶಸ್ವಿಯಾಗಿವೆ.ಆದರೆ ಈಗ ಬ್ಲಾಕ್ಬಸ್ಟರ್ ಪ್ರಾದೇಶಿಕ ಚಲನಚಿತ್ರಗಳಿಗೆ ಹೋಲಿಸಿದರೆ ಇದೂ ಏನು ಅಲ್ಲ.ಪ್ರಸ್ತುತ ಬಾಲಿವುಡ್‌ಗೆ ಆಘಾತವಾಗಿರುದೆನೆಂದರೆ ಕನ್ನಡದ ಹಾಗೂ ತೆಲುಗಿನ ಡಬ್ಬಿಂಗ್ ಚಿತ್ರಗಳು ಈಗ ಸಾರ್ವಕಾಲಿಕ ಬ್ಲಾಕ್ ಬಸ್ಟರ್ ಹಿಂದಿ ಚಿತ್ರಗಳಾಗಿವೆ.ಈ ಚಿತ್ರಗಳು ಈಗ ಹಿಂದಿ ಉದ್ಯಮ ಪ್ರಾರಂಭವಾದಾಗಿನಿಂದ ಮಾಡಿದ ಪ್ರತಿಯೊಂದು ಹಿಂದಿ ಮೂಲ ಚಲನಚಿತ್ರವನ್ನು ಹಿಂದಿಕ್ಕಿವೆ, ಇದನ್ನು ನೋಡಿದಾಗ ಜನರು ವಿಷಯವನ್ನು ಇಷ್ಟಪಡುತ್ತಿದ್ದಾರೆ ಮತ್ತು ಅದು ಎಲ್ಲಿಂದ ಬರುತ್ತಿದೆ ಎಂದು ಆಲೋಚಿಸುವುದಿಲ್ಲ ಎನ್ನುವುದನ್ನು ಇದು ಸಾಬೀತುಪಡಿಸುತ್ತದೆ.

ಭಾಷಾಯುದ್ಧಗಳನ್ನು ನಡೆಸುವ ಬದಲು, ಎಲ್ಲಾ ಭಾಷೆಗಳಲ್ಲಿ ಒಬ್ಬರನ್ನೊಬ್ಬರು ಮೀರಿಸಲು ಭಾರತದ ಎಲ್ಲಾ ತಾರೆಗಳು ಮತ್ತು ನಿರ್ದೇಶಕರ ನಡುವೆ ಆರೋಗ್ಯಕರ ಸ್ಪರ್ಧೆಯು ಪ್ರಾರಂಭವಾದರೆ, ಪ್ರೇಕ್ಷಕರು ಎಲ್ಲಿಂದಲಾದರೂ ಎಲ್ಲವನ್ನೂ ರುಚಿ ನೋಡುತ್ತಾರೆ ಮತ್ತು ನಂತರ ಭಾರತದ ಸಾರ್ವಜನಿಕರು ಯಾವುದು ಉತ್ತಮ ಮತ್ತು ಯಾರು ಉತ್ತಮ ಎಂದು ನಿರ್ಧರಿಸಲಿ ಎಂದು ಅವರು ಹೇಳಿದರು.

ಆದರೆ ಈಗ ಅಲ್ಲಗಳೆಯಲಾಗದ ಸತ್ಯವೆಂದರೆ ಪ್ರಭಾಸ್,ಯಶ್,ರಾಮ್ ಚರಣ್,ತಾರಕ್,ಅಲ್ಲೂ ಅರ್ಜುನ್ ಹಿಂದಿ ಅಥವಾ ಬಾಲಿವುಡ್ ಚಿತ್ರ ರಂಗಕ್ಕೆ ನುಗ್ಗಿ ಅಲ್ಲಿನ ಸ್ಟಾರ್ ನಟರಾದ ರಣವೀರ್ ಸಿಂಗ್,ರಣಬೀರ್ ಕಪೂರ್, ಅಕ್ಷಯ್ ಕಪೂರ್, ಅಜಯ ದೇವಗನ್,ಹಾಗೂ ಜಾನ್ ಅಬ್ರಾಹಂ ರಂತಹ ನಟರನ್ನು ಸೆದೆಬಡಿದ್ದಾರೆ.ಹಾಗಾಗಿ ಈಗ ಅವರಿಗೆ ಸವಾಲು ಎನ್ನುವಂತೆ ರಣವೀರ್ ಸಿಂಗ್,ರಣಬೀರ್ ಕಪೂರ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ಜಾನ್ ಅಬ್ರಾಹಂ ಅವರೆಲ್ಲಾ ತಮ್ಮ ಹಿಂದಿ ಸಿನಿಮಾಗಳನ್ನು ತೆಲುಗು ಮತ್ತು ಕನ್ನಡಕ್ಕೆ ಡಬ್ ಮಾಡುವುದರ ಮೂಲಕ ಪ್ರಭಾಸ್, ರಾಮ್ ಚರಣ್, ಯಶ್ ಜೂನಿಯರ್ ಎನ್ಟಿಆರ್, ಅಲ್ಲು ಅರ್ಜುನ್ ರಂತಹ ನಟರನ್ನು ಸೆದೆಬಡಿದು ಹಿಂದಿ ಸಿನಿಮಾಗಳು ಹೆಚ್ಚಿನ ಕಲೆಕ್ಷನ್ ಮಾಡಬೇಕು ಎಂದು ರಾಮ್ ಗೋಪಾಲ್ ವರ್ಮಾ ಸವಾಲು ಹಾಕಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News