ಬಾಕ್ಸ್ ಆಫೀಸ್ ನಲ್ಲಿ ಬಾಲಿವುಡ್ ನಟರ ಸಿನಿಮಾಗಳ ಹೆಡಮುರಿಗೆ ಕಟ್ಟಿದ ಕೆಜಿಎಫ್ 2...!

ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಈಗ ಬಾಕ್ಸ್ ಆಫೀಸ್ ನಲ್ಲಿ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದೆ.ಆ ಮೂಲಕ ಶೀಘ್ರದಲ್ಲೇ 1000 ಕೋಟಿ ರೂ ಕ್ಲಬ್ ಸೇರುವತ್ತ ಹೆಜ್ಜೆ ಇಟ್ಟಿದೆ.

Written by - Zee Kannada News Desk | Last Updated : Apr 28, 2022, 05:28 PM IST
  • ಅಮೀರ್ ಖಾನ್ ಅಭಿನಯದ ಪಿಕೆ, ರಣಬೀರ್ ಕಪೂರ್ ರ ಸಂಜು ಹಾಗೂ ಸಲ್ಮಾನ್ ಖಾನ್ ಅವರ ಟೈಗರ್ ಜಿಂದಾ ಹೈ ಸಿನಿಮಾದ ಕಲೆಕ್ಷನ್ ದಾಖಲೆಯನ್ನು ಕೆಜಿಎಫ್ 2 ಮುರಿಯುವಲ್ಲಿ ಯಶಸ್ವಿಯಾಗಿದೆ.
  • 13 ನೇ ದಿನದಂದು, ಅಂದರೆ ಬುಧವಾರದಂದು ಹಿಂದಿ ಬೆಲ್ಟ್ ನಲ್ಲಿ 6.25 ಕೋಟಿಗಳನ್ನು ಗಳಿಸುವ ಮೂಲಕ ಈಗ ಒಟ್ಟು 343.13 ಕೋಟಿ ರೂ ಗಳನ್ನು ಗಳಿಸಿದೆ.
ಬಾಕ್ಸ್ ಆಫೀಸ್ ನಲ್ಲಿ ಬಾಲಿವುಡ್ ನಟರ ಸಿನಿಮಾಗಳ ಹೆಡಮುರಿಗೆ ಕಟ್ಟಿದ ಕೆಜಿಎಫ್ 2...! title=
file photo

ನವದೆಹಲಿ: ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಈಗ ಬಾಕ್ಸ್ ಆಫೀಸ್ ನಲ್ಲಿ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದೆ.ಆ ಮೂಲಕ ಶೀಘ್ರದಲ್ಲೇ 1000 ಕೋಟಿ ರೂ ಕ್ಲಬ್ ಸೇರುವತ್ತ ಹೆಜ್ಜೆ ಇಟ್ಟಿದೆ.ವಿಶೇಷವೆಂದರೆ ಹಿಂದಿ ಸಿನಿಮಾದ ಘಟಾನುಘಟಿ ನಾಯಕರುಗಳ ಬಾಕ್ಸ್ ಆಫೀಸ್ ಕಲೆಕ್ಷನ್ ನ್ನೇ ಈಗ ಈ ಚಿತ್ರ ಹಿಂದೆ ಹಾಕಿದೆ.ಇದಕ್ಕೆ ಪೂರಕ ಎನ್ನುವಂತೆ ಅದು ಕೇವಲ 11 ದಿನಗಳಲ್ಲಿ 300 ಕೋಟಿ ರೂ ಗಳಿಸುವ ಮೂಲಕ ಹಿಂದಿ ಚಿತ್ರ ನಿರ್ಮಾಪಕರನ್ನು ಹುಬ್ಬೇರಿಸುವಂತೆ ಮಾಡಿದೆ.ಅಷ್ಟೇ ಅಲ್ಲದೇ ಕೇವಲ 14 ದಿನಗಳಲ್ಲಿ ಹಿಂದಿಯಲ್ಲಿ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಮೂರನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಮೀರ್ ಖಾನ್ ಅಭಿನಯದ ಪಿಕೆ, ರಣಬೀರ್ ಕಪೂರ್ ರ ಸಂಜು ಹಾಗೂ ಸಲ್ಮಾನ್ ಖಾನ್ ಅವರ ಟೈಗರ್ ಜಿಂದಾ ಹೈ ಸಿನಿಮಾದ ಕಲೆಕ್ಷನ್ ದಾಖಲೆಯನ್ನು ಕೆಜಿಎಫ್ 2 ಮುರಿಯುವಲ್ಲಿ ಯಶಸ್ವಿಯಾಗಿದೆ.13 ನೇ ದಿನದಂದು, ಅಂದರೆ ಬುಧವಾರದಂದು ಹಿಂದಿ ಬೆಲ್ಟ್ ನಲ್ಲಿ 6.25 ಕೋಟಿಗಳನ್ನು ಗಳಿಸುವ ಮೂಲಕ ಈಗ ಒಟ್ಟು 343.13 ಕೋಟಿ ರೂ ಗಳನ್ನು ಗಳಿಸಿದೆ.

ಇದನ್ನೂ ಓದಿ: Samantha: ಇಂದು ಕೋಟಿಗಟ್ಟಲೇ ಸಂಭಾವನೆ ಪಡೆಯೋ ಸಮಂತಾ ಮೊದಲ ಸಂಬಳ ಇದು.!

ಸಿನಿ ಮಾರುಕಟ್ಟೆಯ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ, ಇದು ಸಲ್ಮಾನ್ ಖಾನ್-ಕತ್ರಿನಾ ಕೈಫ್ ಅಭಿನಯದ ಟೈಗರ್ ಜಿಂದಾ ಹೈ, ಅಮೀರ್ ಖಾನ್ ಅವರ ಪಿಕೆ ಮತ್ತು ರಣಬೀರ್ ಕಪೂರ್ ಅಭಿನಯದ ಸಂಜು ಚಿತ್ರಗಳ ಜೀವಿತಾವಧಿಯ ಗಳಿಕೆಗಿಂತಲೂ ಅಧಿಕವಾಗಿದೆ.ಕೆಜಿಎಫ್: 2 ಚಿತ್ರವು ಈಗ 1000 ಕೋಟಿ ಕ್ಲಬ್ ಸೇರಲು ಕೆಲವೇ ಕೋಟಿಗಳಷ್ಟು ಬಾಕಿ ಇದೆ.ಇದನ್ನು ಅದು ಈ ವಾರಾಂತ್ಯದಲ್ಲಿ ಮುಟ್ಟುವ ಸಾಧ್ಯತೆ ಇದೆ ಎನ್ನಲಾಗಿದೆ.ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಪ್ರಕಾರ, ಈ ಚಿತ್ರವು ಬುಧವಾರದಂದು 19.37 ಕೋಟಿ ಗಳಿಸುವ ಮೂಲಕ ವಿಶ್ವಾದ್ಯಂತ ಒಟ್ಟು 926.67 ಕೋಟಿ.ಯನ್ನು ಗಳಿಸಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್ vs ಅಜಯ್ ದೇವಗನ್ : ಇಬ್ಬರ ನಡುವೆ ಟ್ವಿಟ್ಟರ್ ವಾರ್

ಕೆಜಿಎಫ್ 2 ಚಿತ್ರವು ಬಾಹುಬಲಿ: ದಿ ಕನ್‌ಕ್ಲೂಷನ್ ನಂತರ 300 ಕೋಟಿ ಕ್ಲಬ್‌ಗೆ ಪ್ರವೇಶಿಸುತ್ತಿರುವ ಎರಡನೇ ಡಬ್ಬಿಂಗ್ ಚಿತ್ರವಾಗಿದೆ.ಯಶ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಬಾಲಿವುಡ್ ತಾರೆಯರಾದ ಸಂಜಯ್ ದತ್ ಮತ್ತು ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ

 

Trending News