'ಕೆಜಿಎಫ್' ಮುಟ್ಟಿದ್ದೆಲ್ಲಾ ಚಿನ್ನ: ಭಾರತದ ನಂ.1 ಚಿತ್ರವಾಗಲು ಒಂದೇ ಹೆಜ್ಜೆ ಬಾಕಿ..!

ಅದೊಂದು ಕಾಲವಿತ್ತು. ಕನ್ನಡ ಚಿತ್ರಗಳನ್ನ ಪರಭಾಷಿಕರು ನೋಡದೇ ಇರುವ ಪರಿಸ್ಥಿತಿ ಇತ್ತು. ಆದರೆ ಅದೆಲ್ಲಾ ಇದೀಗ ಬದಲಾಗಿ ಹೋಗಿದೆ. ಕನ್ನಡ ಸಿನಿಮಾ ಇಂಡಸ್ಟ್ರಿ ಜಗತ್ತಿನಾದ್ಯಂತ ಮಿರಮಿರನೆ ಮಿಂಚುತ್ತಿದೆ. ಅದರಲ್ಲೂ ಕನ್ನಡ ಸಿನಿ ರಂಗದ ಪ್ಯೂರ್‌ ಗೋಲ್ಡ್‌ 'ಕೆಜಿಎಫ್' ಚಿತ್ರ ಸ್ಯಾಂಡಲ್‌ವುಡ್‌ನ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸುತ್ತಿದೆ. 

Written by - Malathesha M | Last Updated : May 6, 2022, 03:34 PM IST
  • ಹೊಸ ದಾಖಲೆ ಬರೆಯುವತ್ತ 'ಕೆಜಿಎಫ್' ಚಾಪ್ಟರ್‌ 2
  • ಭಾರತದ ನಂಬರ್‌ 1 ಚಿತ್ರವಾಗಲು ಒಂದು ಹೆಜ್ಜೆ ಮಾತ್ರ ಬಾಕಿ
  • ಮೊದಲ ಸ್ಥಾನದಲ್ಲಿರುವ ಬಾಹುಬಲಿ ಪಾರ್ಟ್‌ 2 ಸಿನಿಮಾ
'ಕೆಜಿಎಫ್' ಮುಟ್ಟಿದ್ದೆಲ್ಲಾ ಚಿನ್ನ: ಭಾರತದ ನಂ.1 ಚಿತ್ರವಾಗಲು ಒಂದೇ ಹೆಜ್ಜೆ ಬಾಕಿ..! title=
KGF Chapter 2

ಸದ್ಯ 'ಕೆಜಿಎಫ್-2' ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಾಗಿದೆ. ಯಾಕಂದ್ರೆ 'ಕೆಜಿಎಫ್' ಚಾಪ್ಟರ್‌ 2 ಕ್ರಿಯೇಟ್‌ ಮಾಡಿರುವ ರೆಕಾರ್ಡ್‌ ಅಂತಹದ್ದು. ಹಿಂದಿನ ಎಲ್ಲಾ ದಾಖಲೆಗಳನ್ನೂ ಪುಡಿ ಪುಡಿ ಮಾಡಿದ 'ಕೆಜಿಎಫ್' ಚಾಪ್ಟರ್‌ 2, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಹಾಗೇ ಭಾರತದ ನಂಬರ್‌ 1 ಚಿತ್ರವಾಗಲು ಕೇವಲ ಒಂದು ಹೆಜ್ಜೆ ಮಾತ್ರ ಬಾಕಿ ಇದೆ.

ಇದನ್ನು ಓದಿ: ಕೇವಲ 3 ವಾರಗಳಲ್ಲಿ 1084.37 ಕೋಟಿ ರೂ ಗಳಿಸಿದ ಕೆಜಿಎಫ್ 2..!

ಅದೊಂದು ಕಾಲವಿತ್ತು. ಕನ್ನಡ ಚಿತ್ರಗಳನ್ನ ಪರಭಾಷಿಕರು ನೋಡದೇ ಇರುವ ಪರಿಸ್ಥಿತಿ ಇತ್ತು. ಆದರೆ ಅದೆಲ್ಲಾ ಇದೀಗ ಬದಲಾಗಿ ಹೋಗಿದೆ. ಕನ್ನಡ ಸಿನಿಮಾ ಇಂಡಸ್ಟ್ರಿ ಜಗತ್ತಿನಾದ್ಯಂತ ಮಿರಮಿರನೆ ಮಿಂಚುತ್ತಿದೆ. ಅದರಲ್ಲೂ ಕನ್ನಡ ಸಿನಿ ರಂಗದ ಪ್ಯೂರ್‌ ಗೋಲ್ಡ್‌ 'ಕೆಜಿಎಫ್' ಚಿತ್ರ ಸ್ಯಾಂಡಲ್‌ವುಡ್‌ನ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸುತ್ತಿದೆ. ಹೀಗೆ ಒಂದೊಂದೇ ಹೆಜ್ಜೆ ಇಡುತ್ತಾ ಬಂದಿರುವ 'ಕೆಜಿಎಫ್' ಸಿನಿಮಾ ಈ ಹಿಂದೆ ಕ್ರಿಯೇಟ್‌ ಆಗಿದ್ದ ಎಲ್ಲಾ ದಾಖಲೆಗಳನ್ನೂ ಧೂಳ್‌ ಧೂಳ್‌ ಮಾಡಿದೆ.

2ನೇ ಸ್ಥಾನದಲ್ಲಿ‌ 'ಕೆಜಿಎಫ್':
ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ 'ಕೆಜಿಎಫ್' ಚಾಪ್ಟರ್ 2 ರಿಲೀಸ್ ಆಗಿ 20‌ ದಿನ ಕಳೆದರೂ ಚಿತ್ರದ ಬಗ್ಗೆ ಇರುವ ಕ್ರೇಜ್ ಕುಂದಿಲ್ಲ. ಈಗ 'ಕೆಜಿಎಫ್-2' ಮತ್ತೊಂದು ದಾಖಲೆ ಬರೆದಿದೆ. ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ 2ನೇ ಚಿತ್ರವಾಗಿ 'ಕೆಜಿಎಫ್-2' ಹೊರಹೊಮ್ಮಿದೆ. 'ಬಾಹುಬಲಿ-2' ಮತ್ತು 'RRR' ಬಳಿಕ 'ಕೆಜಿಎಫ್-2' 3ನೇ ಸ್ಥಾನದಲ್ಲಿತ್ತು. ಆದರೆ ಇದೀಗ 2ನೇ ಸ್ಥಾನಕ್ಕೆ ಜಿಗಿದಿದೆ. RRR ಚಿತ್ರದ ರೆಕಾರ್ಡ್ ಧೂಳಿಪಟ ಮಾಡಿದ 'ಕೆಜಿಎಫ್-2' 2ನೇ ಸ್ಥಾನಕ್ಕೇರಿದೆ. ಈ ಮೂಲಕ 'ಬಾಹುಬಲಿ-2' ಮೊದಲ ಸ್ಥಾನದಲ್ಲಿ ಇದ್ದರೆ, 'ಕೆಜಿಎಫ್-2' ಎರಡನೇ ಸ್ಥಾನದಲ್ಲಿ ರಾರಾಜಿಸುತ್ತಿದೆ.

ಬಾಹುಬಲಿ ಮೀರಿಸುತ್ತಾ..?
ಇಷ್ಟೇ ಅಲ್ಲ ಇನ್ನೊಂದು ಹೆಜ್ಜೆ ಮುಂದಿಟ್ಟರೆ ಸಾಕು ಕನ್ನಡದ ಸಿನಿಮಾ ಭಾರತದ ನಂಬರ್‌ 1 ಚಿತ್ರವಾಗಲಿದೆ. ಅದು ಹೇಗೆಂದರೆ ಬಾಹುಬಲಿ ಪಾರ್ಟ್‌ 2 ಗಳಿಸಿದ ಮೊತ್ತಕ್ಕಿಂತ 'ಕೆಜಿಎಫ್' ಚಾಪ್ಟರ್‌-2 700 ಕೋಟಿ ರೂ. ಹಿಂದೆ ಇದೆ. ಆದರೆ ಬಾಹುಬಲಿ ಪಾರ್ಟ್‌ 2 ಸುಮಾರು 100 ದಿನಗಳ ಕಾಲ ಸಿನಿಮಾ ಮಂದಿರಗಳಲ್ಲಿ ಸದ್ದು ಮಾಡಿ 1810 ಕೋಟಿ ರೂ. ಗಳಿಸಿತ್ತು. 'ಕೆಜಿಎಫ್' ಚಾಪ್ಟರ್‌ ಇನ್ನೂ 21 ದಿನಗಳನ್ನು ಮಾತ್ರ ಪೂರೈಸಿದ್ದು, ಇನ್ನೊಂದು ಹೆಜ್ಜೆ ಮುಂದಿಟ್ಟರೆ ಹೊಸ ಇತಿಹಾಸವನ್ನೇ ಸ್ಯಾಂಡಲ್‌ವುಡ್‌ ಸಿನಿಮಾ ಕ್ರಿಯೇಟ್‌ ಮಾಡಲಿದೆ. ಹೀಗಾಗಿ ಯಶ್ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ.

ಇದನ್ನು ಓದಿ: 'ಪ್ರಶಾಂತ್ ನೀಲ್ ಭಾರತೀಯ ಚಿತ್ರರಂಗದ ವೀರಪ್ಪನ್ ಇದ್ದ ಹಾಗೆ'

ಒಟ್ಟಾರೆ ಹೇಳುವುದಾದ್ರೆ ಈಗಲೂ ಕೆಜಿಎಫ್‌ ಚಾಪ್ಟರ್‌ 2 ಜಗತ್ತಿನಾದ್ಯಂತ ಸಾವಿರಾರು‌ ಸ್ಕ್ರೀನ್‌ಗಳಲ್ಲಿ ರಾರಾಜಿಸುತ್ತಿದೆ. ದಿನದಿಂದ ದಿನಕ್ಕೆ ತನ್ನ ಕಲೆಕ್ಷನ್‌ ಮೊತ್ತವನ್ನೂ ಹೆಚ್ಚಿಸಿಕೊಳ್ಳುತ್ತಾ ಹೊಸ ದಾಖಲೆಗಳನ್ನ ಬರೆಯುತ್ತಿದೆ. ಈ ನಡುವೆ ಭಾರತದ ನಂಬರ್‌ 2 ಸಿನಿಮಾ ಎಂಬ ಹೆಗ್ಗಳಿಕೆ ಕೂಡ ಕೆಜಿಎಫ್‌-2ಗೆ ಸಲ್ಲುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ನಂಬರ್‌ 1 ಪಟ್ಟಕ್ಕೇರುವ ನಿರೀಕ್ಷೆ ಕೂಡ ದಟ್ಟವಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News