ಕೆಜಿಎಫ್ 2 ಚಿತ್ರವು ಬಿಡುಗಡೆಯಾದಾಗಿನಿಂದ ಹೊಸ ದಾಖಲೆಗಳನ್ನು ನಿರ್ಮಿಸುತ್ತಲೇ ಇದೆ, ಚಿತ್ರ ಬಿಡುಗಡೆಯಾಗಿ ಐದು ವಾರಗಳು ಕಳೆದರೂ ಕೂಡ ಅದರ ಯಶಸ್ವಿಯಾನ ಮಾತ್ರ ಇನ್ನೂ ನಿಂತಿಲ್ಲ,ಈಗ ಹಿಂದಿಯೊಂದರಲ್ಲೇ ಕೆಜಿಎಫ್ ಚಿತ್ರವು 430 ಕೋಟಿ ಗಳಿಸುವ ಮೂಲಕ ಈ ಸಾಧನೆ ಮಾಡಿದ ಎರಡನೇ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಾಮಾನ್ಯವಾಗಿ ನಟರ ಮಧ್ಯೆ ಬಾಂಧವ್ಯ ಚೆನ್ನಾಗಿದ್ದರೂ ಸಹಿತ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸ್ಟಾರ್ ವಾರ್ ಗಳನ್ನು ಮಾಡುತ್ತಿರುತ್ತಾರೆ.ಕೆಜಿಎಫ್ 2 ಚಿತ್ರ ಬಿಡುಗಡೆಯಾದಾಗಿನಿಂದಲೂ ಕಿಚ್ಚ ಸುದೀಪ್ ಅವರು ಈ ಚಿತ್ರದ ವಿಚಾರವಾಗಿ ಟ್ವೀಟ್ ಮಾಡಿಲ್ಲ ಎಂದು ಅಭಿಮಾನಿಗಳು ದೂರುತ್ತಿದ್ದರು.
'ಕೆಜಿಎಫ್-2' ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಯಾಕಂದ್ರೆ ಬಾಕ್ಸ್ ಆಫಿಸ್ನಲ್ಲಿ 'ಕೆಜಿಎಫ್' ಚಾಪ್ಟರ್ 2 ಮಾಡಿರುವ ಸಾಧನೆಯೇ ಅಂತಹದ್ದು.'ಕೆಜಿಎಫ್-2' ರಿಲೀಸ್ ಆದ ದಿನದಿಂದ ಇಲ್ಲಿಯವರೆಗೂ ನೂರಾರು ದಾಖಲೆಗಳನ್ನ ಪುಡಿ ಪುಡಿ ಮಾಡಿದೆ. ಅದರಲ್ಲೂ ಬಾಲಿವುಡ್ನ ಹಲವು ಹಳೆಯ ಸಿನಿಮಾಗಳು ರಾಕಿಭಾಯ್ ಆರ್ಭಟದ ಎದುರು ಧೂಳ್ ಆಗಿವೆ.ಇದೇ ಸಂದರ್ಭದಲ್ಲಿ 'ಕೆಜಿಎಫ್-2' ಮತ್ತೊಂದು ರೆಕಾರ್ಡ್ ಕ್ರಿಯೇಟ್ ಮಾಡಿದೆ.
'ಕೆಜಿಎಫ್-1' ಆಗಲಿ ಅಥವಾ 'ಕೆಜಿಎಫ್-2' ಆಗಲಿ, 'ಕೆಜಿಎಫ್' ಅನ್ನೋ ಹೆಸರೇ ಕರೆಂಟ್ ಇದ್ದಂಗೆ. ಯಾಕಂದ್ರೆ 'ಕೆಜಿಎಫ್-1' ರಿಲೀಸ್ ಆದ ಸಂದರ್ಭದಲ್ಲಿ ಜಗತ್ತೇ ಒಂದು ಕ್ಷಣ ಬೆರಗಾಗಿತ್ತು. ಇದಾದ ನಂತರ 'ಕೆಜಿಎಫ್' ಚಾಪ್ಟರ್ 2 ನೋಡಿ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳು ರಾಕಿಭಾಯ್ಗೆ ಜೈ ಅಂದಿದ್ದಾರೆ. ಆದರೆ ಈ ಹೊತ್ತಲ್ಲೇ 'ಕೆಜಿಎಫ್' ಚಾಪ್ಟರ್ 2 ಶೂಟಿಂಗ್ ಬಗ್ಗೆ ಕುತೂಹಲಕಾರಿ ಮಾಹಿತಿಗಳು ಹೊರಬೀಳುತ್ತಿದ್ದು, ಯಶ್ ಅಭಿಮಾನಿಗಳು ಮತ್ತಷ್ಟು ಖುಷ್ ಆಗಿದ್ದಾರೆ.
ಬಾಲಿವುಡ್ & ಸೌತ್ ಸಿನಿ ಇಂಡಸ್ಟ್ರಿ ಫೈಟ್ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಈ ಸದ್ಯಕ್ಕೆ ಜಗಳ ನೆಕ್ಸ್ಟ್ ಲೆವೆಲ್ ತಲುಪಿದ್ದು, ಟಾಲಿವುಡ್ ನಟ ಮಹೇಶ್ ಬಾಬು ಅವರು ಬಾಲಿವುಡ್ ಬಗ್ಗೆ ನೀಡಿದ್ದ ಹೇಳಿಕೆಗೆ ಬಾಲಿವುಡ್ ಸ್ಟಾರ್ಗಳು ಗರಂ ಆಗಿದ್ದಾರೆ. ಅದು ಯಾಕೆ..? ಹೇಗೆ ಅನ್ನೋದರ ಡೀಟೇಲ್ಸ್ ಮುಂದಿದೆ ಓದಿ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ, ಶೀಘ್ರದಲ್ಲೇ ಅದು 1200 ಕೋಟಿ ತಲುಪುವ ಸಾಧ್ಯತೆ ಇದೆ. ಚಿತ್ರದ ಕ್ರೇಜ್ ಯಾವ ರೀತಿ ಇದೆ ರಾಕಿ ಭಾಯ್ ಪಾತ್ರದ ಬಗ್ಗೆ ವಿಶ್ವದಾದ್ಯಂತ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಜೊತೆಗೆ ಅವರನ್ನು ಅನುಕರಿಸುವ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ಚಿತ್ರವನ್ನು ಆನಂದಿಸುತ್ತಿದ್ದಾರೆ. ಇನ್ನೊಂದೆಡೆಗೆ ಬಾಹುಬಲಿ 2 ನಂತರ ದೇಶಿಯ ಬಾಕ್ಸ್ ಆಫೀಸ್ ನಲ್ಲಿ ಎರಡನೇ ಆಲ್ ಟೈಮ್ ಹಿಟ್ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.