Karnataka Assembly Election: ಸಚಿವ ವಿ. ಸೋಮಣ್ಣಗೆ ಚಾಮರಾಜನಗರ ಜಿಲ್ಲೆಯಿಂದ ಟಿಕೆಟ್ ಏನಾದರೂ ಕೊಟ್ಟರೇ "ಗೋ ಬ್ಯಾಕ್ ಸೋಮಣ್ಣ" ಚಳವಳಿ ನಡೆಸಲಾಗುವುದು. ಜೊತೆಗೆ ಚುನಾವಣಾ ಉಸ್ತುವಾರಿಯನ್ನೂ ನೀಡಬಾರದು ಎಂದು ಒತ್ತಾಯಿಸಿರುವುದರಿಂದ ಬಿಜೆಪಿ ಪಾಳೇಯದಲ್ಲಿ ಮತ್ತೇ ಭಿನ್ನಮತ ಸ್ಪೋಟವಾಗಿದೆ.
ಚಾಮರಾಜನಗರ: "ನಾನು ಡೈರೆಕ್ಟ್ ರಾಜಕಾರಣಿ, ಅವೆಲ್ಲಾ ಮುಗಿದ ಅಧ್ಯಾಯ" ಎಂದು ಮಾ.27 ಕ್ಕೆ ಸೋಮಣ್ಣ ಕಾಂಗ್ರೆಸ್ ಗೆ ಸೇರುತ್ತಾರೆ ಎಂಬ ಪೋಸ್ಟ್ ಹರಿದಾಡುತ್ತಿರುವ ಬಗ್ಗೆ ಸಚಿವ ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.
ಲೇಔಟ್ ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ ವಿರುದ್ಧ ಸಚಿವ ಸೋಮಣ್ಣ ಕಿಡಿಕಾರಿದ್ದಾರೆ. ನನ್ನ ಕ್ಷೇತ್ರದ ಜನರು 4 ವರ್ಷ 10 ತಿಂಗಳು ನೆಮ್ಮದಿಯಿಂದ ಇದ್ದರು, ಈಗ ಅಪ್ಪ-ಮಕ್ಕಳು ತರ್ಲೆಗಳು ರೌಡಿಸಂ ಮಾಡಿಸೊದೆ ಅವರ ಕೆಲಸವಾಗಿದೆ. ನಾನು ಹೋಗಿ ನೋಡ್ತೀನಿ, ಯಾರಿಗೆ ಹೇಳಬೇಕು ಅವರಿಗೆ ಹೇಳ್ತೀನಿ, ಅಂತ ಹೇಳಿದ್ದಾರೆ.
Karnataka Congress Women : ತಮ್ಮಸೇ ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ಬೆಲ್ಟ್ ನಲ್ಲಿ ಹೊಡೆಯೋದಾಗಿ ಹೇಳಿದ್ರು. ಸದ್ಯ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆಂದು ಕಿಡಿಕಾರಿದ್ರು. ಕಾರ್ಯಕ್ರಮ ಯಶಸ್ವಿ ಯಾಗುತ್ತೆ ಇದ್ರಿಂದ ಸೋಮಣ್ಣ ಹತಾಶರಾರಿ ಗಲಾಟೆ ಮಾಡಿಸಿದ್ದಾರೆಂದು ಆರೋಪಿಸಿದರು.
ದೆಹಲಿಯಲ್ಲಿ ಅಮಿತ್ ಶಾ ಭೇಟಿ ಮಾಡಿದ ವಿ.ಸೋಮಣ್ಣ. ದೆಹಲಿಯ ಕೃಷ್ಣ ಮೆನನ್ ರೋಡ್ನಲ್ಲಿರೋ ಮನೆಯಲ್ಲಿ ಭೇಟಿ. ಒಟ್ಟು 11 ನಿಮಿಷಗಳ ಕಾಲ ಮಾತುಕತೆ ನಡೆಸಿರೋ ನಾಯಕರು. ನಾನು ಎಲ್ಲವನ್ನ ಸರಿಪಡಿಸುವೆ, ಕೆಲಸ ಮಾಡಿ ಎಂದಿರೋ ಶಾ. ಎಲ್ಲವೂ ಅಂದುಕೊಂಡಂತೆ ಆಗಿದೆ ಎಂದ ಸಚಿವ ಸೋಮಣ್ಣ.
Karnataka Assembly Election 2023: ಮೊನ್ನೆಯಷ್ಟೇ (ಮಾರ್ಚ್ 14) ಪಕ್ಷದ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಣ್ಣೀರಿಟ್ಟಿದ್ದ ವಸತಿ ಸಚಿವ ವಿ. ಸೋಮಣ್ಣ, ನಿನ್ನೆ (ಮಾರ್ಚ್ 15) ದಿಢೀರ್ ದೆಹಲಿ ಪ್ರವಾಸ ಕೈಗೊಂಡಿದ್ದರು. ದೆಹಲಿಯಲ್ಲಿ ಬಿಜೆಪಿ ಚಾಣಾಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಸುಮಾರು 11 ನಿಮಿಷಗಳ ಮಾತುಕತೆ ನಡೆಸಿದ್ದರು.
ಸಚಿವ ವಿ.ಸೋಮಣ್ಣ ಬಿಜೆಪಿ ಪಕ್ಷ ಬಿಡುವುದಿಲ್ಲ. ಅವರು ದೆಹಲಿಗೆ ಹೋಗಿದ್ದು ಬೇರೆ ವಿಚಾರಕ್ಕೆ ಎಂದು ಬಾಗಲಕೋಟೆಯಲ್ಲಿ ಮಾಜಿ ಸಿಎಂ BSY ಹೇಳಿದ್ರು. ಸೋಮಣ್ಣ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡ್ತಿದ್ದಾರೆ. ಅವರ ಬಗ್ಗೆ ಬಿಜೆಪಿಯಲ್ಲಿ ಎಲ್ಲರಿಗೂ ಗೌರವ ಇದೆ. ಅವರ ಸಹಕಾರದಿಂದ ನಾವು ಅಧಿಕಾರಕ್ಕೆ ಬರ್ತೇವೆ. ವಿ.ಸೋಮಣ್ಣ ಪಕ್ಷ ಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.
V. Somanna : ವಿ. ಸೋಮಣ್ಣ ಯಾವ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಎಲ್ಲರಿಗೂ ಕಾಡುತ್ತಿತ್ತು. ಸಿಎಂ. ಬೊಮ್ಮಾಯಿ ಸೇರಿದಂತೆ ಹಲವಾರು ಬಿಜೆಪಿ ಅಭ್ಯರ್ಥಿಗಳು ಈ ಬಗ್ಗೆ ಹೇಳಿಕೆಗಳನ್ನೂ ನೀಡಿದ್ದರು. ಅಲ್ಲದೇ ಸ್ವತಃ ವಿ. ಸೋಮಣ್ಣ ಅವರೇ ನೆನ್ನೆಯಷ್ಟೇ ಕೆಲವು ರಾಜಕೀಯ ಏರಿಳಿತಗಳು ಉಂಟಾಗುತ್ತಿರುತ್ತವೆ. ಬಿಜೆಪಿ ಪಕ್ಷದವರು ಟಿಕೆಟ್ ಕೊಟ್ಟರೆ ನಿಂತ್ಕೋತಿನಿ ಇಲ್ಲ ಅಂದರೇ ಇಲ್ಲ ಎಂದರು.
Shobha Karandlaje : ವಿ ಸೋಮಣ್ಣ ಬಿಜೆಪಿ ನಾಯಕರ ಮೇಲಿನ ಅಸಮಾಧಾನದಿಂದಾಗಿ ಕ್ರಾಂಗ್ರೇಸ್ ಸೇರಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ವಿಚಾರವಾಗಿ ಸಿಎಂ ಬೊಮ್ಮಾಯಿ ಸಹ ಸುದ್ದಿಗಾರರೊಂದಿಗೆ ಮಾತನಾಡಿ ಈ ಬಗ್ಗೆ ಯಾವುದೇ ಮಾತುಕತೆಯಾಗಿಲ್ಲ ವಿ ಸೋಮಣ್ಣ ನಾವು ಮೊದಲಿಂದಲೂ ಸ್ನೇಹಿತರು, ಅವರು ಇಂದು, ಮುಂದೂ ನಮ್ಮ ಜೊತೆಗೆ ಇರುತ್ತಾರೆ ಇದರ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದಿದ್ದರು.
ವಿ.ಸೋಮಣ್ಣ ಡಿ.ಕೆ.ಶಿವಕುಮಾರ್ ಭೇಟಿಯಾಗಿದ್ದಾರೆ ಎಂಬ ವಿಚಾರ. ಡಿಕೆಶಿ ಎಲ್ಲರನ್ನೂ ಕರೆದು ಮಾತನಾಡುವುದು ನಿರಂತರವಾಗಿದೆ. ಯಾರು ಸಹ ಅವರ ಮಾತಿಗೆ ಬಲಿಯಾಗುವುದಿಲ್ಲ, ಹೋಗುವುದಿಲ್ಲ ಎಂದು ಬೆಳಗಾವಿ ಜಿಲ್ಲೆಯ ಅಂಕಲಿ ಗ್ರಾಮದಲ್ಲಿ ಯಡಿಯೂರಪ್ಪ ಹೇಳಿದ್ರು.
ಕಾಂಗ್ರೆಸ್ ನವರು ತಾವು ಮಾಡಿದ್ದ ತಪ್ಪನ್ನು ನಮ್ಮ ಮೇಲೆ ಹೊರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಆರೋಪ ಬಾಲಿಶತನದಿಂದ ಕೂಡಿದೆ ಎಂದು ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾವೇರಿಪುರ ಕೈಗಾರಿಕಾ ಪ್ರದೇಶದಲ್ಲಿರುವ ಬೆಂಗಳೂರು ಉತ್ತರ ಸಣ್ಣ ಕೈಗಾರಿಕೆಗಳ ಸಂಘ ಬಾನ್ಶಿಯಾ ಸಮುದಾಯ ಭವನದ ಭೂಮಿ ಪೂಜೆಯನ್ನು ಮಾನ್ಯ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವಿ.ಸೋಮಣ್ಣ ರವರು ನೆರವೇರಿಸಿದರು.
ಬಹಿರಂಗವಾಗಿ ಮಹಿಳೆ ಮೇಲೆ ದೌರ್ಜನ್ಯ ಎಸಗಿದ ಹಿನ್ನೆಲೆಯಲ್ಲಿ ಸಚಿವ ವಿ ಸೋಮಣ್ಣ ಮೇಲೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.. ಕರ್ನಾಟಕ ರಾಷ್ಟ್ರ ಸಮಿತಿಯಿಂದ ದೂರು ನೀಡಿದ್ದು, ಸೋಮಣ್ಣ ರಾಜೀನಾಮೆಗೆ ಒತ್ತಾಯ ಕೇಳಿ ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.