Karnataka Assembly Election: ಸಚಿವ ವಿ. ಸೋಮಣ್ಣ ಮುನಿಸಿಗೆ ಚಾಮರಾಜನಗರ ಸಾರಥ್ಯದ ಮುಲಾಮು ಹಚ್ಚಿದ ಹೈಕಮಾಂಡ್!

Karnataka Assembly Election 2023: ಮೊನ್ನೆಯಷ್ಟೇ (ಮಾರ್ಚ್ 14)  ಪಕ್ಷದ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಣ್ಣೀರಿಟ್ಟಿದ್ದ ವಸತಿ ಸಚಿವ ವಿ.  ಸೋಮಣ್ಣ, ನಿನ್ನೆ (ಮಾರ್ಚ್ 15) ದಿಢೀರ್ ದೆಹಲಿ ಪ್ರವಾಸ ಕೈಗೊಂಡಿದ್ದರು. ದೆಹಲಿಯಲ್ಲಿ ಬಿಜೆಪಿ ಚಾಣಾಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಸುಮಾರು 11 ನಿಮಿಷಗಳ ಮಾತುಕತೆ ನಡೆಸಿದ್ದರು. 

Written by - Yashaswini V | Last Updated : Mar 16, 2023, 03:30 PM IST
  • ಸಚಿವ ವಿ. ಸೋಮಣ್ಣ ಮುನಿಸಿಗೆ ಬಿಜೆಪಿ ಚಾಮರಾಜನಗರದ ಸಾರಥ್ಯ ವಹಿಸಿಕೊಡುವ ಮುಲಾಮು
  • ಸುಮಾರು ನಾಲ್ಕು ದಶಕಗಳ ಸುದೀರ್ಘ ರಾಜಕಾರಣದ ಅನುಭವ ಹೊಂದಿರುವ ಸಚಿವ ವಿ. ಸೋಮಣ್ಣ
  • ಸಚಿವ ವಿ. ಸೋಮಣ್ಣ ಚಾಮರಾಜನಗರ ಜಿಲ್ಲೆಯೊಂದಿಗೆ ಎರಡು ದಶಕಗಳ ಒಡನಾಟ ಹೊಂದಿದ್ದಾರೆ.
Karnataka Assembly Election: ಸಚಿವ ವಿ. ಸೋಮಣ್ಣ ಮುನಿಸಿಗೆ ಚಾಮರಾಜನಗರ ಸಾರಥ್ಯದ ಮುಲಾಮು ಹಚ್ಚಿದ ಹೈಕಮಾಂಡ್! title=
Karnataka Assembly Election 2023

Karnataka Assembly Election 2023:  ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಪ್ರಾಂತ್ಯದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಶತಾಯ ಗತಾಯ  ಹೆಚ್ಚಿನ ಸ್ಧಾನ ಗೆಲ್ಲಲೇಬೇಕು ಎಂದು ಸರ್ಕಸ್ ಮಾಡುತ್ತಿದೆ. ಆದರೆ, ಇದುವರಗೆ ಮಾಡಿದ ತಂತ್ರಗಳು ನಿರೀಕ್ಷೆಯ ಮಟ್ಟದಲ್ಲಿ ಕೈ ಹಿಡಿಯುತ್ತಿಲ್ಲ. ಸಾರಥ್ಯ ವಹಿಸಿಕೊಳ್ಳಲು ಯಾವ ನಾಯಕರು ಮುಂದೆ ಬರುತ್ತಿಲ್ಲ. ಇದೀಗ  ಬಿಜೆಪಿಯೊಂದಿಗಿನ  ವಸತಿ ಸಚಿವ ವಿ.  ಸೋಮಣ್ಣ ಅವರ ಮುನಿಸು ಶಮನವಾಗಿದ್ದು, ಹಳೇ ಮೈಸೂರು ಪ್ರಾಂತ್ಯದಲ್ಲಿ ಅದರಲ್ಲೂ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿ ಉಸ್ತುವಾರಿ ನೀಡಲು  ಹೈಕಮಾಂಡ್ ಒಲವು ತೋರಿದೆ ಎಂದು ತಿಳಿದುಬಂದಿದೆ. 

ಮೊನ್ನೆಯಷ್ಟೇ (ಮಾರ್ಚ್ 14)  ಪಕ್ಷದ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಣ್ಣೀರಿಟ್ಟಿದ್ದ ವಸತಿ ಸಚಿವ ವಿ.  ಸೋಮಣ್ಣ, ನಿನ್ನೆ (ಮಾರ್ಚ್ 15) ದಿಢೀರ್ ದೆಹಲಿ ಪ್ರವಾಸ ಕೈಗೊಂಡಿದ್ದರು. ದೆಹಲಿಯಲ್ಲಿ ಬಿಜೆಪಿ ಚಾಣಾಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಸುಮಾರು 11 ನಿಮಿಷಗಳ ಮಾತುಕತೆ ನಡೆಸಿದ್ದರು. ಬಳಿಕ ಮಾಧ್ಯಮ ಮಿತ್ರರಿಗೆ ಪ್ರತಿಕ್ರಿಯೆ ನೀಡಿದ್ದ ಸಚಿವ ವಿ. ಸೋಮಣ್ಣ,  ಅಮಿತ್ ಶಾ ಅವರು ತಾವು ಎಲ್ಲವನ್ನೂ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಎಲ್ಲವು ಅಂದು ಕೊಂಡಂತೆ ಆಗಿದೆ ಎಂದಿದ್ದರು. 

ಇದನ್ನೂ ಓದಿ- ಬಿಜೆಪಿಯಲ್ಲಿ ಟಿಕೆಟ್ ಕೊಟ್ಟರೆ ನಿಂತ್ಕೊತೀನಿ, ಇಲ್ಲ ಅಂದ್ರೆ ಇಲ್ಲ - ವಿ. ಸೋಮಣ್ಣ

ಇದೀಗ ಬಿಜೆಪಿ ಉನ್ನತ ಮೂಲಗಳಿಂದ ಲಭಿಸಿರುವ ಮಾಹಿತಿ ಪ್ರಕಾರ, ಸಚಿವ ವಿ. ಸೋಮಣ್ಣ ಮುನಿಸಿಗೆ ಬಿಜೆಪಿ ಚಾಮರಾಜನಗರದ ಸಾರಥ್ಯ ವಹಿಸಿಕೊಡುವ ಮುಲಾಮು ಹಚ್ಚಿದೆ ಎಂದು ತಿಳಿದುಬಂದಿದೆ. ಸುಮಾರು ನಾಲ್ಕು ದಶಕಗಳ ಸುದೀರ್ಘ ರಾಜಕಾರಣದ ಅನುಭವ ಹೊಂದಿರುವ ಸಚಿವ ವಿ. ಸೋಮಣ್ಣ ಚಾಮರಾಜನಗರ ಜಿಲ್ಲೆಯೊಂದಿಗೆ ಎರಡು ದಶಕಗಳ ಒಡನಾಟ ಹೊಂದಿದ್ದಾರೆ. ಒಮ್ಮೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದ ಸೋಮಣ್ಣ, ಎರಡು ಬಾರಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಆಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ.

ಅಲ್ಲದೆ, ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷದಲ್ಲೂ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದು, ಈ ಹಿಂದೆ ಚಾಮುಂಡೇಶ್ವರಿ ಮತ್ತು ನಂಜನಗೂಡು ಉಪ ಚುನಾವಣೆಯಲ್ಲೂ ಕೆಲಸ ಮಾಡಿದ್ದಾರೆ. ಆದಾಗ್ಯೂ, ಅವರಿಗೆ ಈ ಭಾಗದ ಸಾರಥ್ಯ ಸಿಕ್ಕಿರಲಿಲ್ಲ. ಚಾಮರಾಜನಗರ ಭಾಗದಲ್ಲಿ ಬಿಜೆಪಿ ಅಲೆ ಇದ್ದ ಕಾಲದಲ್ಲೂ ಸಹ ನಾಯಕತ್ವದ ಕೊರತೆಯಿಂದಾಗಿ ಒಂದೆರಡು ಸ್ಥಾನವಷ್ಟೆ ಪಡೆದು ತೃಪ್ತಿ ಪಡೆದುಕೊಂಡಿದ್ದ ಬಿಜೆಪಿ ಇದೀಗ ವಿ. ಸೋಮಣ್ಣ ನಾಯಕತ್ವದಲ್ಲಿ ಹಳೇ ಮೈಸೂರು ಭಾಗದಲ್ಲಿ ಪ್ರಾಬಲ್ಯ ಸಾಧಿಸಲು ಪ್ಲಾನ್ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- ಸೋಮಣ್ಣ ಅವರು ಬಿಜೆಪಿಯ ಉನ್ನತ ನಾಯಕರು - ಶೋಭಾ ಕರಂದ್ಲಾಜೆ

ವಿಧಾನಸಭಾ ವಿರೋಧಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ  ಪ್ರಾಬಲ್ಯವಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ  ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಸ್ಧಾನ ಗೆಲ್ಲಲೇಬೇಕು ಎಂದು ಹಠಕ್ಕೆ  ಬಿದ್ದಿರುವ ಬಿಜೆಪಿ ಅಳೆದು ತೂಗಿ ಈ ಭಾಗದ ಉಸ್ತುವಾರಿ ಸಚಿವರಾಗಿ ಅನುಭವ  ಹೊಂದಿರುವ ವಿ. ಸೋಮಣ್ಣ ಅವರಿಗೆ  ಸಾರಥ್ಯ ನೀಡಲು  ನಿರ್ಧಾರ ಕೈಗೊಂಡಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News