Aishwarya Rai: ವಿಶ್ವಸುಂದರಿ ಖ್ಯಾತಿಯ ಐಶ್ವರ್ಯ ರೈ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಫೋಟೋಗಳು ಅವರ ಮತ್ತು ಅಭಿಷೇಕ್ ಬಚ್ಚನ್ ನಡುವಿರುವ ವೈಮನಸ್ಸನ್ನು ಎತ್ತಿ ತೋರಿದೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಡಿವೋರ್ಸ್ ಪಡೆಯುತ್ತಾರೆ ಎಂಬ ಗಾಸಿಪ್ ಗೆ ಬೂಸ್ಟ್ ನೀಡಿವೆ.
ಐಶ್ವರ್ಯ ರೈ ಪುತ್ರಿ ಆರಾಧ್ಯಾಳ ಬಿಲೇಟೆಡ್ ಬರ್ತಡೇಯ (ಆರಾಧ್ಯ ಬರ್ತಡೇ ನವೆಂಬರ್ 16) ಮತ್ತು ತಂದೆ ಕೃಷ್ಣರಾಜ್ ರೈ ಅವರಿಗೆ ಶ್ರದ್ದಾಂಜಲಿ ಸಲ್ಲಿಸುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಎರಡೂ ಸಂದರ್ಭಗಳಲ್ಲಿ ಅಭಿಷೇಕ್ ಬಚ್ಚನ್ ಹಾಜರಿ ಕಾಣುತ್ತಿಲ್ಲ. ಅಭಿಷೇಕ್ ಬಚ್ಚನ್ ಮಗಳ ಬರ್ತಡೇಗೂ ಬಾರದಿರುವಷ್ಟರ ಮಟ್ಟಿಗೆ ಐಶ್ವರ್ಯ ರೈ ಅವರಿಂದ ದೂರವಾಗಿದ್ದಾರಾ ಎನ್ನುವ ಪ್ರಶ್ನೆಗಳು ಕಾಡತೊಡಗಿವೆ.
ಆರಾಧ್ಯಾ ಈಗ 13ನೇ ವಯಸ್ಸಿಗೆ ಕಾಲಿಟ್ಟಿದ್ದಾಳೆ. ಕಳೆದ 12 ಹುಟ್ಟುಹಬ್ಬಗಳನ್ನು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಜೊತೆಜೊತೆಯಾಗಿ ಸಂಭ್ರಮಿಸಿದ್ದರು. ಆದರೆ ಈ ಸಲ ‘ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಗಿದೆ'. ಜೊತೆಗೆ ಮೊನ್ನೆ ಮೊನ್ನೆಯಷ್ಟೇ ತಮ್ಮ ‘ಐ ವಾಂಟ್ ಟು ಟಾಕ್ ಟು’ ಸಿನಿಮಾದ ಕ್ಯಾರೆಕ್ಟರ್ ಬಗ್ಗೆ ಮಾತನಾಡುತ್ತಾ ಅಭಿಷೇಕ್ ಬಚ್ಚನ್ ‘ನನ್ನ ಮಗಳೇ ನನಗೆ ಸ್ಫೂರ್ತಿ, ಧೈರ್ಯ’ ಎಂದಿದ್ದರು. ಅಷ್ಟು ಪ್ರೀತಿ-ವಿಶ್ವಾಸ ಇರುವ ಮಗಳ ಹುಟ್ಟುಹಬ್ಬದ ಸಂದರ್ಭದಲ್ಲಿ ಜೊತೆಗಿಲ್ಲ ಎಂದರೆ ಅದು ‘ಐಶ್ವರ್ಯ ರೈ ಮೇಲಿನ ಅಸಮಾಧಾನಕ್ಕೆ’ ಎನ್ನುವುದು ಯಾರಿಗಾದರೂ ಅರ್ಥವಾಗುವಂತದ್ದೇ.
ಇದನ್ನೂ ಓದಿ- ಪುತ್ರಿ ಆರಾಧ್ಯಳೇ ಸ್ಫೂರ್ತಿ, ಧೈರ್ಯ: ಐಶ್ವರ್ಯ ರೈ ಜೊತೆಗಿನ ಡಿವೋರ್ಸ್ ವದಂತಿ ನಡುವೆ ಅಭಿಷೇಕ್ ಬಚ್ಚನ್ ಹೇಳಿಕೆ ವೈರಲ್
ಐಶ್ವರ್ಯ ರೈ ಪೋಸ್ಟ್ ಮಾಡಿರುವ ಪ್ರತಿ ಫೋಟೋಗಳೂ ಅಭಿಷೇಕ್ ಬಚ್ಚನ್ ಗೈರು ಹಾಜರಿಯನ್ನು ಒತ್ತಿ ಹೇಳುತ್ತಿವೆ. ಅಲ್ಲದೆ ಐಶ್ವರ್ಯ ರೈ ಬರಹ ಕೂಡ ಅವರ ಆದ್ಯತೆ ಯಾರು ಎನ್ನುವುದನ್ನು ತಿಳಿಸುತ್ತಿದೆ. ‘HAPPY BIRTHDAY 2 THE ETERNAL LOVE OF MY LIFE dearest Daddy-Ajjaa and my darling Aaradhya❤️MY HEART… MY SOUL… FOREVER AND BEYOND🌟❤️🧿’ ಎಂದಷ್ಟೇ ಹೇಳಿದ್ದಾರೆ. ಈ ಮೂಲಕ ಅಭಿಷೇಕ್ ಬಚ್ಚನ್ ಅವರ ಅಗತ್ಯ ಏನೇನೂ ಇಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಮಗಳ ಬರ್ತಡೆಗೆ ಅಭಿಷೇಕ್ ಬಚ್ಚನ್ ಬಂದಿಲ್ಲ ಎನ್ನುವುದರಿಂದ ಅವರ ದಾಂಪತ್ಯದಲ್ಲಿ ಮೂಡಿರುವ ಬಿರುಕು ಎಷ್ಟು ದೊಡ್ಡದು ಎಂಬುದು ಜಗತ್ ಜಾಹೀರಾಗಿದೆ. ಬಾಲಿವುಡ್ ನ ಹೈಪ್ರೊಫೈಲ್ ಜೋಡಿಯಾಗಿರುವ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಇನ್ನೂ ಜೋರಾಗಿ ಕೇಳಲ್ಪಡುತ್ತಿದೆ.
ಐಶ್ವರ್ಯ ರೈ ಇನ್ಸ್ಟಾಗ್ರಾಮ್ ನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮಾಮೂಲಿಯಂತೆ ತಲೆಬುಡ ಇಲ್ಲದ ಚರ್ಚೆ ನಡೆಯುವಂತೆ ಈ ವಿಷಯದಲ್ಲೂ ನಾನಾ ರೀತಿಯ ಕಾಮೆಂಟ್ ಗಳು ಬಂದಿವೆ. ಕೆಲವರು ಐಶ್ವರ್ಯ ರೈ ಪರ ವಕಾಲತ್ತು ವಹಿಸಿದ್ದಾರೆ. ಇನ್ನು ಕೆಲವರು ಅಭಿಷೇಕ್ ಬಚ್ಚನ್ ಮೇಲೆ ಪ್ರೀತಿ ಹುಕ್ಕಿ ಹರಿದಿದೆ. ‘ಅಭಿಷೇಕ್ ಸರ್ ಎಲ್ಲಿದ್ದಾರೆ?’ ಎಂದೊಬ್ಬರು ಕೇಳಿದ್ದಾರೆ. ‘ಚಿತ್ರಗಳಲ್ಲಿ ಅಮಿತಾಬ್ ಬಚ್ಚನ್ ಕುಟುಂಬ ಅಥವಾ ಜೂನಿಯರ್ ಎಬಿ ಇಲ್ಲ’ ಎಂದೊಬ್ಬರು ಉದ್ಗರಿಸಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ