ಮತ್ತೆ ಭಿನ್ನಮತ: ಸೋಮಣ್ಣಗೆ ಟಿಕೆಟ್, ಉಸ್ತುವಾರಿ ಬೇಡವೆಂದು ಬಿಜೆಪಿ ಮುಖಂಡರ ಆಗ್ರಹ!

Karnataka Assembly Election: ಸಚಿವ ವಿ. ಸೋಮಣ್ಣಗೆ ಚಾಮರಾಜನಗರ ಜಿಲ್ಲೆಯಿಂದ ಟಿಕೆಟ್ ಏನಾದರೂ ಕೊಟ್ಟರೇ "ಗೋ ಬ್ಯಾಕ್ ಸೋಮಣ್ಣ" ಚಳವಳಿ ನಡೆಸಲಾಗುವುದು.  ಜೊತೆಗೆ ಚುನಾವಣಾ ಉಸ್ತುವಾರಿಯನ್ನೂ ನೀಡಬಾರದು ಎಂದು ಒತ್ತಾಯಿಸಿರುವುದರಿಂದ ಬಿಜೆಪಿ ಪಾಳೇಯದಲ್ಲಿ ಮತ್ತೇ ಭಿನ್ನಮತ ಸ್ಪೋಟವಾಗಿದೆ.

Written by - Yashaswini V | Last Updated : Mar 21, 2023, 01:50 PM IST
  • ಸಚಿವ ಸೋಮಣ್ಣ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಆದ ಬಳಿಕ ಪಕ್ಷದ ಸಂಘಟನೆಯಲ್ಲಿ ತೊಡಗಿಲ್ಲ
  • ಕಳೆದ ಲೋಕಸಭಾ ಚುನಾವಣೆಯಲ್ಲೂ ಕೆಲಸ ಮಾಡಿಲ್ಲ
  • 2018 ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದರು, ಅವರಿಂದ ಪಕ್ಷಕ್ಕೆ ಯಾವುದೇ ಅನೂಕೂಲವಾಗಿಲ್ಲ.
ಮತ್ತೆ ಭಿನ್ನಮತ: ಸೋಮಣ್ಣಗೆ ಟಿಕೆಟ್, ಉಸ್ತುವಾರಿ ಬೇಡವೆಂದು ಬಿಜೆಪಿ ಮುಖಂಡರ ಆಗ್ರಹ! title=
Karnataka Assembly Election 2023

Karnataka Assembly Election 2023: ಸಚಿವ ವಿ. ಸೋಮಣ್ಣಗೆ ಚಾಮರಾಜನಗರ ಜಿಲ್ಲೆಯ ಚುನಾವಣಾ ಉಸ್ತುವಾರಿ ನೀಡಿರುವುದಕ್ಕೆ ಜಿಲ್ಲಾ ಬಿಜೆಪಿ ಮುಖಂಡರೇ  ವಿರೋಧ ವ್ಯಕ್ತಪಡಿಸಿದ್ದು, ಸೋಮಣ್ಣಗೆ ಟಿಕೆಟ್, ಉಸ್ತುವಾರಿ ಬೇಡವೆಂದು ಆಗ್ರಹಿಸಿದ್ದಾರೆ. 

ಈ ಕುರಿತಂತೆ ಇಂದು ಚಾಮರಾಜನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಚಾಮರಾಜನಗರ ಜಿಲ್ಲಾ ಬಿಜೆಪಿ ಘಟಕದ ವಕ್ತಾರ ಅಯ್ಯನಪುರ ಶಿವಕುಮಾರ್ ಹಾಗೂ ಇನ್ನಿತರ ಬಿಜೆಪಿ ಮುಖಂಡರು "ಗೋ ಬ್ಯಾಕ್ ಸೋಮಣ್ಣ" ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.  

ಸಚಿವ ವಿ. ಸೋಮಣ್ಣಗೆ ಚಾಮರಾಜನಗರ ಜಿಲ್ಲೆಯಿಂದ ಟಿಕೆಟ್ ಏನಾದರೂ ಕೊಟ್ಟರೇ "ಗೋ ಬ್ಯಾಕ್ ಸೋಮಣ್ಣ" ಚಳವಳಿ ನಡೆಸಲಾಗುವುದು.  ಜೊತೆಗೆ ಚುನಾವಣಾ ಉಸ್ತುವಾರಿಯನ್ನೂ ನೀಡಬಾರದು ಎಂದು ಒತ್ತಾಯಿಸಿರುವುದರಿಂದ ಬಿಜೆಪಿ ಪಾಳೇಯದಲ್ಲಿ ಮತ್ತೇ ಭಿನ್ನಮತ ಸ್ಪೋಟವಾಗಿದೆ.

ಇದನ್ನೂ ಓದಿ- Karnataka Assembly Election: ಸಚಿವ ವಿ. ಸೋಮಣ್ಣ ಮುನಿಸಿಗೆ ಚಾಮರಾಜನಗರ ಸಾರಥ್ಯದ ಮುಲಾಮು ಹಚ್ಚಿದ ಹೈಕಮಾಂಡ್!

ಸಚಿವ ಸೋಮಣ್ಣ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಆದ ಬಳಿಕ ಪಕ್ಷದ ಸಂಘಟನೆಯಲ್ಲಿ ತೊಡಗಿಲ್ಲ, ಕಳೆದ ಲೋಕಸಭಾ ಚುನಾವಣೆಯಲ್ಲೂ ಕೆಲಸ ಮಾಡಿಲ್ಲ, 2018 ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದರು, ಅವರಿಂದ ಪಕ್ಷಕ್ಕೆ ಯಾವುದೇ ಅನೂಕೂಲವಾಗಿಲ್ಲ. ಇದನ್ನೆಲ್ಲ ಗಮನಿಸಿ ಚುನಾವಣಾ ಉಸ್ತುವಾರಿ ಕೊಡಬಾರದು ಎಂದು ಅವರು ಆಗ್ರಹಿಸಿದರು.

ಹನೂರು, ಚಾಮರಾಜನಗರ ಸೇರಿದಂತೆ ಕಾಂಗ್ರೆಸ್ ಶಾಸಕರನ್ನು ಹಾಡಿ ಹೊಗಳುತ್ತಾರೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಕಾರ್ಯಕ್ರಮಕ್ಕೆ ಗೈರಾಗಿ ಪಕ್ಷದ ಸಂಘಟನೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕಾಂಗ್ರೆಸ್ ಸೇರುತ್ತೇನೆಂದು ವರಿಷ್ಠರಿಗೆ ಬೆದರಿಕೆ ಒಡ್ಡುವ ತಂತ್ರವನ್ನು ಪ್ರಯೋಗಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಅಯ್ಯನಪುರ ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ- ಶಾಸಕ ಮಹೇಶ್ ವಿರುದ್ಧ ತಿರುಗಿಬಿದ್ದ ನಗರಸಭೆ ಸದಸ್ಯರು!!

ಇದೇ ವೇಳೆ, ಚಾಮರಾಜನಗರ ಚುನಾವಣಾ ಉಸ್ತುವಾರಿಯಾಗಿ ಬಿ.ವೈ. ವಿಜಯೇಂದ್ರ ಅವರನ್ನು ನೇಮಿಸಬೇಕು. ಯಡಿಯೂರಪ್ಪ ಅವರು ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಪ್ರಚಾರ ನಡೆಸಬೇಕು. ಚಾಮರಾಜನಗರ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇದೆ ಎಂದು ಬಿಎಸ್ ವೈ ಹಾಗೂ ವಿಜಯೇಂದ್ರ ಪರ ಬ್ಯಾಟ್ ಬೀಸಿದ್ದಾರೆ.

ಒಟ್ಟಿನಲ್ಲಿ ಇನ್ನೂ ಕೂಡ ಬಿಜೆಪಿಯಲ್ಲಿ ಬಿಎಸ್ ವೈ v/s ವಿ.ಸೋಮಣ್ಣ ಪರಿಸ್ಥಿತಿ ಇದೆ ಎಂಬುದನ್ನು ಇಂದಿನ ಸುದ್ದಿಗೋಷ್ಠಿ ಮತ್ತೊಮ್ಮೆ ಸಾಕ್ಷೀಕರಿಸಿದೆ. ಜೊತೆಗೆ, ಭಾರತೀಯ ಜನತಾ ಪಕ್ಷದ ಲೆಟರ್ ಹೆಡ್ ನಲ್ಲೇ ಸುದ್ದಿಗೋಷ್ಠಿಗೆ ಆಹ್ವಾನಿಸಿದ್ದು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ತೋರಿಸಿದೆ‌.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News