IMD : ಮುಂದಿನ 48 ಗಂಟೆಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಾಧಾರಣ ಮಳೆ ಮತ್ತು ಗುಡುಗುಸಹಿತಬಿರುಗಾಳಿಗಳು, ಕೆಲವು ಪ್ರದೇಶಗಳಲ್ಲಿ ಸಾಂದರ್ಭಿಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ° C ಮತ್ತು 22 ° C ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ.
Weather Alert: ರಾಷ್ಟ್ರರಾಜಧಾನಿ ದೆಹಲಿಯ ಹಲವು ಪ್ರದೇಶಗಳಲ್ಲೂ ಹೆಚ್ಚಾಗುತ್ತಿರುವ ತಾಪಮಾನದ ಹಿನ್ನೆಲೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಿಸಿಲಿನ ಬಿಸಿ ಅಲೆಗಳ ಜೊತೆಗೆ ಹಲವೆಡೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ.
ಗುಡುಗು ಸಹಿತ ಮಳೆಯಿಂದಾಗಿ ತಾಜ್ ಮಹಲ್ ಸಂಕೀರ್ಣದ ಮುಖ್ಯ ಭಾಗ ಮತ್ತು ಅದರ ಐದು ಎತ್ತರದ ಗುಮ್ಮಟಗಳ ಕೆಳಗಿರುವ ಕೆಲವು ಭಾಗಗಳನ್ನು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಮೇ 8 ಮತ್ತು 9 ರಂದು ಚಂಡಮಾರುತದ ಬಿರುಗಾಳಿಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಮಂಗಳವಾರ ಈ ಪ್ರಬಲ ಮಾರುತಗಳಿಂದ ಉತ್ತರ ಪ್ರದೇಶದ ಪೂರ್ವ-ಪಶ್ಚಿಮ ಭಾಗಗಳಲ್ಲಿ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ರಾತ್ರಿ ಸುಮಾರು 11 ಗಂಟೆ ಮತ್ತು 15 ನಿಮಿಷದ ವೇಳೆಯಲ್ಲಿ ಗಂಟೆಗೆ 70 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಿದೆ ಎಂದು ಸಫ್ದರ್ಜುಂಗ್ ವೀಕ್ಷಣಾಲಯದ ಅಧಿಕಾರಿಯೊಬ್ಬರು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.