Weather Update: ಹಲವು ರಾಜ್ಯಗಳು ಉಷ್ಣಾಂಶದ ಹೊಡೆತಕ್ಕೆ ತತ್ತರಿಸಲಿವೆ, ಎಲ್ಲೊ ಅಲರ್ಟ್ ಜಾರಿಗೊಳಿಸಿದ ಹವಾಮಾನ ಇಲಾಖೆ, ಮಳೆ ಎಲ್ಲಿ?

Weather Alert: ರಾಷ್ಟ್ರರಾಜಧಾನಿ ದೆಹಲಿಯ ಹಲವು ಪ್ರದೇಶಗಳಲ್ಲೂ ಹೆಚ್ಚಾಗುತ್ತಿರುವ ತಾಪಮಾನದ ಹಿನ್ನೆಲೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಿಸಿಲಿನ ಬಿಸಿ ಅಲೆಗಳ ಜೊತೆಗೆ ಹಲವೆಡೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. 

Written by - Nitin Tabib | Last Updated : Jun 6, 2022, 05:36 PM IST
  • ಮುಂದಿನ ನಾಲ್ಕೈದು ದಿನಗಳ ಕಾಲ ರಾಷ್ಟ್ರ ರಾಜಧಾನಿಯಲ್ಲಿ ಆಕಾಶ ಶುಭ್ರವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
  • ದೆಹಲಿ ಮತ್ತೊಮ್ಮೆ ಬಿಸಿಗಾಳಿಯ ಅಲೆಗಳಿಗೆ ಸಿಳುಕಿಕೊಳ್ಳಲಿದೆ.
  • ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ಪಾದರಸವು 47 ಡಿಗ್ರಿ ಸೆಲ್ಸಿಯಸ್ ತಲುಪಿದೆ.
Weather Update: ಹಲವು ರಾಜ್ಯಗಳು ಉಷ್ಣಾಂಶದ ಹೊಡೆತಕ್ಕೆ ತತ್ತರಿಸಲಿವೆ, ಎಲ್ಲೊ ಅಲರ್ಟ್ ಜಾರಿಗೊಳಿಸಿದ ಹವಾಮಾನ ಇಲಾಖೆ, ಮಳೆ ಎಲ್ಲಿ? title=
IMD Weather Update

IMD weather update: ಮುಂದಿನ ನಾಲ್ಕೈದು ದಿನಗಳ ಕಾಲ ರಾಷ್ಟ್ರ ರಾಜಧಾನಿಯಲ್ಲಿ ಆಕಾಶ ಶುಭ್ರವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ದೆಹಲಿ ಮತ್ತೊಮ್ಮೆ ಬಿಸಿಗಾಳಿಯ ಅಲೆಗಳಿಗೆ ಸಿಳುಕಿಕೊಳ್ಳಲಿದೆ. ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ಪಾದರಸವು 47 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಬಿಸಿಲಿನ ತಾಪದಿಂದ ಮುಂದಿನ ಹಲವು ದಿನಗಳವರೆಗೆ ನೆಮ್ಮದಿ ಸಿಗುವುದಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ ಹವಾಮಾನ ಇಲಾಖೆಯು ಭಾನುವಾರ ಎಲ್ಲೋ ಅಲರ್ಟ್ ಜಾರಿಗೊಳಿಸಿದ್ದು, ದೆಹಲಿಯ ವಿವಿಧ ಸ್ಥಳಗಳಲ್ಲಿ ಉಷ್ಣಾಂಶದ ಅಲೆಯ ಎಚ್ಚರಿಕೆಯನ್ನು ನೀಡಿದೆ. ಒಟ್ಟು ಏಳು ದಿನಗಳ ಮುನ್ಸೂಚನೆಯಲ್ಲಿ, ಮುಂದಿನ ನಾಲ್ಕು ದಿನಗಳವರೆಗೆ ದೆಹಲಿಯಲ್ಲಿ ಬಲವಾದ ಬಿಸಿ ಗಾಳಿ ಬೀಸಲಿದ್ದು, ಆಕಾಶವು ಶುಭ್ರವಾಗಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ನಜಫ್‌ಗಢ ಹವಾಮಾನ ಕೇಂದ್ರವು ಗರಿಷ್ಠ 46.2 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದೆ.

ತಾಪಮಾನದಿಂದ  ಪರಿಹಾರವಿಲ್ಲ
ಇದೇ ವೇಳೆ ರಾಜಸ್ಥಾನದ ಗಂಗಾನಗರದಲ್ಲಿ ಗರಿಷ್ಠ ತಾಪಮಾನ 47.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಹರಿಯಾಣದ ಹಿಸಾರ್‌ನಲ್ಲಿ 46.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ಎರಡು-ಮೂರು ದಿನಗಳಲ್ಲಿ ವಾಯುವ್ಯ ಮತ್ತು ಮಧ್ಯ ಭಾರತದ ಪ್ರತ್ಯೇಕ ಭಾಗಗಳಲ್ಲಿ ವಿಪರೀತ ಶಾಖದ ಅಲೆಗಳು ಉಂಟಾಗುವ ಸಾಧ್ಯತೆಯಿದೆ ಎಂದು IMD ಶನಿವಾರ ತನ್ನ ಬುಲೆಟಿನ್‌ನಲ್ಲಿ ತಿಳಿಸಿದೆ. ವಾಯುವ್ಯ ಮತ್ತು ಮಧ್ಯ ಭಾರತದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉಷ್ಮಾಂಶದ ಅಲೆಯ ಹಿನ್ನೆಲೆ ಹಳದಿ ಎಚ್ಚರಿಕೆ
ಹವಾಮಾನ ಇಲಾಖೆಯು ಭಾನುವಾರ ಹಳದಿ ಎಚ್ಚರಿಕೆಯನ್ನು ಜಾರಿಗೊಳಿಸಿದ್ದು, ದೆಹಲಿಯ ವಿವಿಧ ಸ್ಥಳಗಳಲ್ಲಿ ಶಾಖದ ಅಲೆಯ ಎಚ್ಚರಿಕೆಯನ್ನು ನೀಡಿದೆ. ಭಾನುವಾರದಂದು, ಹವಾಮಾನ ಇಲಾಖೆಯು ಪ್ರತ್ಯೇಕ ಸ್ಥಳಗಳಲ್ಲಿ ಶಾಖದ ಅಲೆಗಳ ಜೊತೆಗೆ ಭಾಗಶಃ ಮೋಡ ಕವಿದ ವಾತಾವರಣ ಮತ್ತು ಹಗಲಿನಲ್ಲಿ 20-30 ಕಿಮೀ ವೇಗದಲ್ಲಿ ಬಿಸಿ ಗಾಳಿ ಬೀಸಲಿದೆ ಎಂದು ಮುನ್ಸೂಚನೆ ನೀಡಿದೆ. ದೆಹಲಿಯ ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.

IMD ನೀಡಿರುವ ಶಾಖದ ಅಲೆಯ ಮುನ್ಸೂಚನೆ ಏನು?
ಜೂನ್ 4 ಮತ್ತು 5 ರಂದು ರಾಜಸ್ಥಾನ, ಜಮ್ಮು, ಹಿಮಾಚಲ ಪ್ರದೇಶ ಮತ್ತು ದೆಹಲಿಯ ವಿವಿಧ ಸ್ಥಳಗಳಲ್ಲಿ ಬಿಸಿ ಅಲೆಗಳ ಪರಿಸ್ಥಿತಿ ಇರಲಿದೆ. 

ಜೂನ್ 4 ರಿಂದ 6 ರವರೆಗೆ ವಿದರ್ಭ, ಜಾರ್ಖಂಡ್, ಆಂತರಿಕ ಒಡಿಶಾ ಮತ್ತು ಛತ್ತೀಸ್‌ಗಢದ ಪ್ರದೇಶಗಳಲ್ಲಿ ಉಷ್ಣ ಅಲೆಯ ಪರಿಸ್ಥಿತಿ ಮೇಲುಗೈ ಸಾಧಿಸಲಿದೆ.

ಜೂನ್ 4 ರಿಂದ 8 ರವರೆಗೆ ದಕ್ಷಿಣ ಉತ್ತರ ಪ್ರದೇಶ ಮತ್ತು ಉತ್ತರ ಮಧ್ಯಪ್ರದೇಶದಲ್ಲಿ ಉಷ್ಣ ಅಲೆಯ ಪರಿಸ್ಥಿತಿ ಇರಲಿದೆ.

ಜೂನ್ 7 ರಿಂದ ದಕ್ಷಿಣ ಪೆನಿನ್ಸುಲರ್ ಭಾರತದಲ್ಲಿ ಮಳೆಯ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆಯಿದೆ.

ಮುಂದಿನ ಐದು ದಿನಗಳಲ್ಲಿ ಈಶಾನ್ಯ ಭಾರತ ಮತ್ತು ಉಪ-ಹಿಮಾಲಯ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ತೀವ್ರ ಮಳೆಯಾಗುವ ಮುನ್ಸೂಚನೆ.

ಇದನ್ನೂ ಓದಿ-ಕೇರಳ ಬಳಿಕ ಈ ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ!

ಹೀಟ್ ವೇವ್ ಎಂದರೇನು?
ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದಾಗ ಮತ್ತು ಸಾಮಾನ್ಯಕ್ಕಿಂತ ಕನಿಷ್ಠ 4.5 ಡಿಗ್ರಿಗಳಷ್ಟು ಹೆಚ್ಚಾದಾಗ ಶಾಖದ ಅಲೆಗಳು ಏಳುವ ಎಚ್ಚರಿಕೆ ನೀಡಲಾಗುತ್ತದೆ. IMD ಪ್ರಕಾರ, ಸಾಮಾನ್ಯ ತಾಪಮಾನವು 6.4 ಡಿಗ್ರಿಗಿಂತ ಹೆಚ್ಚಿದ್ದರೆ, ನಂತರ ತೀವ್ರವಾದ ಶಾಖದ ಅಲೆಯನ್ನು ಘೋಷಿಸಲಾಗುತ್ತದೆ. ಗರಿಷ್ಠ ತಾಪಮಾನವು 47 ಡಿಗ್ರಿ ಸೆಲ್ಸಿಯಸ್ ದಾಟಿದರೆ ತೀವ್ರ ಶಾಖದ ಅಲೆಗಳ ಮುನ್ನೆಚ್ಚರಿಕೆಯನ್ನು ಘೋಷಿಸಲಾಗುತ್ತದೆ ಘೋಷಿಸಲಾಗುತ್ತದೆ.

ಇದನ್ನೂ ಓದಿ-Monsoon 2022: ಶೀಘ್ರದಲ್ಲಿಯೇ ಕೇರಳಕ್ಕೆ ಮಾನ್ಸೂನ್ ಆಗಮನ, ದೇಶದ ಇತರ ಭಾಗಗಳಲ್ಲಿ ಯಾವಾಗ?

ಮಳೆ ಮುನ್ಸೂಚನೆ
IMD ಪ್ರಕಾರ, ಜೂನ್ 7 ರಿಂದ ದಕ್ಷಿಣ ಪೆನಿನ್ಸುಲರ್ ಪ್ರದೇಶದಲ್ಲಿ ಮಳೆಯ ಸಿಂಚನವಾಗಲಿದೆ ಎನ್ನಲಾಗಿದೆ. ಮುಂದಿನ ಐದು ದಿನಗಳಲ್ಲಿ, ಈಶಾನ್ಯ ಭಾರತ, ಉಪ ಹಿಮಾಲಯನ್ ಪ್ರದೇಶ,  ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜೂನ್ 10 ರ ನಂತರ ಜಾರ್ಖಂಡ್‌ನಲ್ಲಿ ನಿರಂತರ ಮಳೆಯ ಎಚ್ಚರಿಕೆ ನೀಡಲಾಗಿದೆ. ಇದೇ ವೇಳೆ ಬಿಹಾರ ಕ್ರಮೇಣವಾಗಿ ಮುಂಗಾರು ಮಳೆಯ ಆಗಮನಕ್ಕೆ ಸಾಕ್ಷಿಯಾಗಲಿದೆ. ಮುಂದಿನ ವಾರ ಗೋವಾದಲ್ಲಿ ಮಾನ್ಸೂನ್ ಕದ ತಟ್ಟುವ ಸಾಧ್ಯತೆ ಇದೆ. ಸದ್ಯದಲ್ಲೇ ಬಿಹಾರಕ್ಕೆ ಮುಂಗಾರು ಪ್ರವೆಶವಾಗಲಿದ್ದು, ಈ ಬಾರಿ ಬಿಹಾರದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News