ಉತ್ತರ ಪ್ರದೇಶದ ಈ ಜಿಲ್ಲೆಗಳಲ್ಲಿ ಬೀಸಲಿದೆ ಭಾರೀ ಬಿರುಗಾಳಿ, ಮುಂದಿನ 48ಗಂಟೆ ಮಳೆ

ಮೇ 8 ಮತ್ತು 9 ರಂದು ಚಂಡಮಾರುತದ ಬಿರುಗಾಳಿಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಮಂಗಳವಾರ ಈ ಪ್ರಬಲ ಮಾರುತಗಳಿಂದ ಉತ್ತರ ಪ್ರದೇಶದ ಪೂರ್ವ-ಪಶ್ಚಿಮ ಭಾಗಗಳಲ್ಲಿ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ.

Last Updated : May 8, 2018, 09:24 AM IST
ಉತ್ತರ ಪ್ರದೇಶದ ಈ ಜಿಲ್ಲೆಗಳಲ್ಲಿ ಬೀಸಲಿದೆ ಭಾರೀ ಬಿರುಗಾಳಿ, ಮುಂದಿನ 48ಗಂಟೆ ಮಳೆ title=

ನವದೆಹಲಿ: ಮೇ 2 ರಂದು ಉತ್ತರ ಪ್ರದೇಶದ ಹಲವು ಭಾಗಗಳು ಚಂಡಮಾರುತದಿಂದ ಉಂಟಾದ ಹಾನಿಯನ್ನು ಇನ್ನೂ ಸರಿಪಡಿಸಲಾಗಿಲ್ಲ. ಮಂಗಳವಾರ (ಮೇ 8) ಮತ್ತೆ ಒಂದು ಪ್ರಮುಖ ಚಂಡಮಾರುತದ ಎಚ್ಚರಿಕೆ ನೀಡಲಾಗಿದೆ. ಹವಾಮಾನ ಇಲಾಖೆಯ ಎಚ್ಚರಿಕೆಗಳ ನಂತರ, ಆಗ್ರಾ ಜಿಲ್ಲೆಯ ಆಡಳಿತಕ್ಕೆ ಎಚ್ಚರಿಕೆ ನೀಡಲಾಗಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಉತ್ತರ ಪ್ರದೇಶದ ಪಶ್ಚಿಮ ಮತ್ತು ಪೂರ್ವ ಭಾಗದಲ್ಲಿ ಮುಂದಿನ 48 ಗಂಟೆಗಳಲ್ಲಿ ಸಾಕಷ್ಟು ಸವಾಲು ಎದುರಾಗಲಿವೆ. ಮೇ 8 ರಂದು ಮತ್ತು ಮೇ 9 ರಂದು ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ. ಪಶ್ಚಿಮ ಯುಪಿ ಜೊತೆಗೆ ಮಂಗಳವಾರದಂದು ಪೂರ್ವ ಯುಪಿಯಲ್ಲೂ ಬಲವಾದ ಗಾಳಿ, ಉಲ್ಬಣಗಳು ಮತ್ತು ಮಳೆ ಮುಂಚಿನ ಎಚ್ಚರಿಕೆಗಳನ್ನು ನೀಡಲಾಗಿದೆ.

ಹವಾಮಾನ ಇಲಾಖೆಯ ಎಚ್ಚರಿಕೆಯ ನಂತರ ಜನರಲ್ಲಿ ಒಂದು ರೀತಿಯ ಗಾಬರಿ ಮನೆ ಮಾಡಿದೆ. ಮುಂದಿನ 48 ಗಂಟೆಗಳ ಕಾಲ ಉತ್ತರ ಪ್ರದೇಶದ ಪೂರ್ವ ಮತ್ತು ಪಶ್ಚಿಮ ಭಾಗದ ಹಲವು ಜಿಲ್ಲೆಗಳಲ್ಲಿ ಮಳೆ, ಬಿರುಗಾಳಿ ಉಲ್ಬಣಗೊಳ್ಳುವ ಎಚ್ಚರಿಕೆಗಳನ್ನು ನೀಡಲಾಗಿದೆ.

ಯುಪಿಯ ಈ ಸ್ಥಳಗಳಲ್ಲಿ ಎಚ್ಚರಿಕೆ
ಸಹರಾನ್ಪುರ್, ಮೀರತ್, ಬಿಜ್ನೋರ್, ಮೊರಾದಾಬಾದ್, ಮುಜಫರ್ನಗರ, ಆಗ್ರಾ, ಬರೇಲಿ, ಘಜಿಯಾಬಾದ್, ನೋಯ್ಡಾ, ರಾಮ್ಪುರ್, ಹಾಪರ್ ಮತ್ತು ಸಂಭಲ್ನಲ್ಲಿ ಯುಪಿ ಯಲ್ಲಿ ಬಿರುಗಾಳಿಯ ಮಳೆ ಸಾಧ್ಯತೆ ಇದೆ. ಪೂರ್ವ ಉತ್ತರ ಯುಪಿ, ಗೋರಖ್ಪುರ್, ಡಿಯೋರಿಯಾ, ಮಹಾರಾಜ್ಗಂಜ್, ಬಲಿಯಾ ಮತ್ತು ಬಹ್ರೈಚ್ಗಳಿಗೆ ಕೂಡ ಚಂಡಮಾರುತ ಎಚ್ಚರಿಕೆ ನೀಡಲಾಗಿದೆ.

ಶಾಲೆಗಳಿಗೆ ರಜೆ
ಹವಾಮಾನ ಇಲಾಖೆಯ ಎಚ್ಚರಿಕೆಯನ್ನು ಅನುಸರಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಯುಪಿ ಜಿಲ್ಲಾಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಹೆಚ್ಚಿನ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಆಗ್ರಾದಲ್ಲಿ ವಿಶೇಷ ಎಚ್ಚರಿಕೆ
ಆಗ್ರಾದಲ್ಲಿ ಬಿರುಗಾಳಿಗಳ ದೃಷ್ಟಿಯಿಂದ, ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದ್ದಾರೆ. ಮೇ 8 ಮತ್ತು 9 ರಂದು ಚಂಡಮಾರುತದ ಎಚ್ಚರಿಕೆಯ ನಂತರ ಜಿಲ್ಲೆಯು ವಿಶೇಷ ಎಚ್ಚರಿಕೆಯನ್ನು ಜಾರಿಗೊಳಿಸಿದೆ. ಮೇ 2 ರಂದು, ಆಗ್ರಾದಲ್ಲಿ ಸುಮಾರು 50 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕ ಜನರು ಚಂಡಮಾರುತದಲ್ಲಿ ಗಾಯಗೊಂಡಿದ್ದಾರೆ.

ತಡರಾತ್ರಿ ಚಂಡಮಾರುತ
ಸೋಮವಾರ ರಾತ್ರಿ (ಮೇ 7) ಒಂದು ಚಂಡಮಾರುತ ಸಂಭವಿಸಿದೆ. ಚಂಡಮಾರುತದ ಉಲ್ಬಣವು ಹಲವಾರು ಜಿಲ್ಲೆಗಳಲ್ಲಿ ಹಲವಾರು ಪ್ರದೇಶಗಳ ವಿದ್ಯುತ್ ಸಮಸ್ಯೆಗೆ ಕಾರಣವಾಯಿತು. 

Trending News