PF New Rule: ಯಾವುದೇ ಒಂದು ಕಾರಣದಿಂದ ಒಂದು ವೇಳೆ 5 ವರ್ಷಗಳ ಅವಧಿಯ ಮೊದಲು ನೀವು ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಹಿಂಪಡೆಯಲು ಬಯಸುತ್ತಿದ್ದು, ನಿಮ್ಮ ಖಾತೆಗೆ ನಿಮ್ಮ ಪ್ಯಾನ್ ನಂಬರ್ ಜೋಡಣೆ ಮಾಡದೆ ಇದ್ದ ಸಂದರ್ಭದಲ್ಲಿ ನೀವು ಶೇ.20 ರಷ್ಟು ಟಿಡಿಎಸ್ ಪಾವತಿಸಬೇಕಾಗಲಿದೆ. ಈ ಮೊದಲು ಇದು ಶೇ.30 ರಷ್ಟಿತ್ತು.
ಹೊಸ ಟಿಡಿಎಸ್ ನಿಯಮದ ಕುರಿತು ಸಿಬಿಡಿಟಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆದಾಯ ಸೋರಿಕೆಯನ್ನು ಪರಿಶೀಲಿಸಲು ಆದಾಯ ತೆರಿಗೆ ಕಾಯಿದೆ, 1961 ರಲ್ಲಿ ಹೊಸ ವಿಭಾಗವಾದ 194R ಅನ್ನು ಸೇರಿಸಲಾಗಿದೆ.
ಈಗ ಮಾರಾಟದ ಬೆಲೆ ಅಥವಾ 50 ಲಕ್ಷ ರೂ.ಗಿಂತ ಹೆಚ್ಚಿನ ಕೃಷಿಯೇತರ ಆಸ್ತಿಯ ವಹಿವಾಟಿನ ಮೇಲಿನ ಮುದ್ರಾಂಕ ಶುಲ್ಕದ ಮೌಲ್ಯವನ್ನು ಶೇ.1 ರಷ್ಟು TDS ಗೆ ಆಧಾರವಾಗಿ ಪರಿಗಣಿಸಲಾಗುತ್ತದೆ. ಅಂದರೆ, ಈಗ ಮನೆ ಖರೀದಿದಾರರ ಜೇಬು ಸಡಿಲವಾಗಲಿದೆ.
2021-22ರ ಆರ್ಥಿಕ ವರ್ಷದ ಬಜೆಟ್ನಲ್ಲಿ, 75 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಐಟಿಆರ್ ಸಲ್ಲಿಸುವುದರಿಂದ ವಿನಾಯಿತಿ ಪಡೆಯಲು ಅವಕಾಶವಿದೆ ಮತ್ತು ಅದೇ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿಗಳ (FD) ಪಿಂಚಣಿ ಆದಾಯ ಮತ್ತು ಬಡ್ಡಿ ಸಿಗುತ್ತದೆ. ಈ ಹಿರಿಯ ನಾಗರಿಕರು ಏಪ್ರಿಲ್ 1 ರಿಂದ ಆರಂಭವಾಗುವ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅಗತ್ಯವಿಲ್ಲ.
Not Filing ITR For Two Years? - ಕಳೆದ ಎರಡು ವರ್ಷಗಳಲ್ಲಿ ಬಾಕಿ ಇರುವ TDS ಅಥವಾ TCS (Tax Collection At Source), ರೂ.50,000 ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ, TDS ಅನ್ನು ಹೆಚ್ಚಿನ ದರದಲ್ಲಿ ಪಾವತಿಸಬೇಕಾಗಲಿದೆ. ಈ ನಿಯಮ ಜುಲೈ 1, 2021ರಿಂದ ಜಾರಿಗೆ ಬರಲಿದೆ.
Fixed Deposit: ಇತ್ತೀಚೆಗಷ್ಟೇ CBDT, ಸ್ಥಿರ ಠೇವಣಿಯಲ್ಲಿ ಹಣ ಹೂಡಿಕೆ ಮಾಡುವವರಿಗೊಂದು ಅಧಿಸೂಚನೆ ಜಾರಿಗೊಳಿಸಿದ್ದು, ಜೂನ್ 30ರೊಳಗೆ ಫಾರ್ಮ್ 15H ಹಾಗೂ ಫಾರ್ಮ್ 15G ಭರ್ತಿ ಮಾಡಲು ಸಲಹೆ ನೀಡಿದೆ. ಒಂದು ವೇಳೆ ನೀವು ಈ ರೀತಿ ಮಾಡದೆ ಹೋದಲ್ಲಿ ನಿಮ್ಮ ಹಣ ಕಡಿತವಾಗಲಿದೆ.
ಆದಾಯ ತೆರಿಗೆ ಇಲಾಖೆಯ ನಿಯಮಗಳ ಅನುಸಾರ ಒಂದು ವೇಳೆ ಕಳೆದ ಮೂರುವರ್ಷಗಳಲ್ಲಿ ನೀವು ಆದಾಯ ತೆರಿಗೆ ರಿಟರ್ನ್ ಪಾವತಿಸದೆ ಹೋಗಿದ್ದಲ್ಲಿ, 20 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಕ್ಯಾಶ್ ವಿಥ್ ಡ್ರಾ ಮೇಲೆ ಆದಾಯ ತೆರಿಗೆ ಸೆಕ್ಷನ್ 194 ಎನ್ ಅಡಿ TDS ಕಡಿತಗೊಳಿಸಲಾಗುತ್ತದೆ.
ಆದಾಯ ತೆರಿಗೆ ರಿಟರ್ನ್ ಪಾವತಿಸುವ ಗಡುವನ್ನು ಹೆಚ್ಚಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಈ ಗಡುವನ್ನು ಜುಲೈ 31 ರಿಂದ ಸೆಪ್ಟೆಂಬರ್ 30 ಕ್ಕೆ ವಿಸ್ತರಿಸಲಾಗಿದೆ. ಜೊತೆಗೆ 'ವಿವಾದ ಸೆ ವಿಶ್ವಾಸ್' ಯೋಜನೆಯ ಗಡುವನ್ನು 2020 ಡಿಸೆಂಬರ್ 31 ಕ್ಕೆ ವಿಸ್ತರಿಸಲಾಗಿದೆ. ಇದಕ್ಕೂ ಮೊದಲು ಜೂನ್ 30 ಇದರ ಅಂತಿಮ ತಿಥಿಯಾಗಿತ್ತು.
ವರ್ಷದ ಏಪ್ರಿಲ್-ಮೇನಲ್ಲಿ ನೀವು ಇಡೀ ಆರ್ಥಿಕ ವರ್ಷದಲ್ಲಿ ಮಾಡಬೇಕಾದ ಇನ್ವೆಸ್ಟ್ಮೆಂಟ್ ಡಿಕ್ಲೆರೇಶನ್ ಸಲ್ಲಿಸಬೇಕಾಗುತ್ತದೆ. ಆದರೆ ಡಿಸೆಂಬರ್-ಜನವರಿ ಬಂತೆಂದರೆ, ನೀವು ವರ್ಷವಿಡಿ ಮಾಡಿದ ಇನ್ವೆಸ್ಟ್ಮೆಂಟ್ ಕುರಿತು ದಾಖಲೆಗಳನ್ನು ಸಲ್ಲಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.