Income Taxಗೆ ಸಂಬಂಧಿಸಿದ 6 ಕೆಲಸಗಳಲ್ಲಿ ಬದಲಾವಣೆ, ಜುಲೈ 31ರವರೆಗೆ ತೆರಿಗೆ ವಿನಾಯ್ತಿ ಪಡೆಯಲಿ ಈ ಕೆಲಸ ತಪ್ಪದೆ ಮಾಡಿ

ಸದ್ಯ ಎಲ್ಲಾ ತೆರಿಗೆ ಪಾವತಿದಾರರು ತಮ್ಮ ITR ಕುರಿತಾದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

Last Updated : Jul 3, 2020, 12:45 PM IST
Income Taxಗೆ ಸಂಬಂಧಿಸಿದ 6 ಕೆಲಸಗಳಲ್ಲಿ ಬದಲಾವಣೆ, ಜುಲೈ 31ರವರೆಗೆ ತೆರಿಗೆ ವಿನಾಯ್ತಿ ಪಡೆಯಲಿ ಈ ಕೆಲಸ ತಪ್ಪದೆ ಮಾಡಿ title=

ನವದೆಹಲಿ: ಸದ್ಯ ಎಲ್ಲಾ ತೆರಿಗೆ ಪಾವತಿದಾರರು ತಮ್ಮ ITR ಕುರಿತಾದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ತೆರಿಗೆ ಪಾವತಿ ಬಹುತೇಕ ನೌಕರರ ಪಾಲಿಗೆ ಒಂದು ದೊಡ್ಡ ತಲೆನೋವಾಗಿರುತ್ತದೆ. ಪ್ರಸ್ತುತ ಆದಾಯ ತೆರಿಗೆ ಇಲಾಖೆ ತೆರಿಗೆ ಪಾವತಿಯ ದಿನಾಂಕವನ್ನು ಹಲವಾರು ಬಾರಿ ಮುಂದೂಡಿ, ಸದ್ಯ ತೆರಿಗೆ ಪಾವತಿಗಾಗಿ ಜುಲೈ 31ನ್ನು ಕೊನೆಯ ದಿನ ಎಂದು ನಿಗದಿಪಡಿಸಿದೆ. ಇದರ ಜೊತೆಗೆ ಇಲಾಖೆ ಈ ಬಾರಿ ಇನ್ನೂ ಹಲವಾರು ಬದಲಾವಣೆಗಳನ್ನು ಮಾಡಿದೆ. ಆದಾಯ ತೆರಿಗೆ ಪಾವತಿಗೆ ಸಂಬಂಧಿಸಿದ ಈ ಐದು ಪ್ರಮುಖ ಬದಲಾವಣೆಗಳು ನಿಮಗೂ ತಿಳಿದಿರಲಿ.

ಆದಾಯ ತೆರಿಗೆ ಇಲಾಖೆ ವತಿಯಿಂದ ಟ್ವೀಟ್
ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆ ನಾವು ಗಡುವನ್ನು ಇನ್ನಷ್ಟು ವಿಸ್ತರಿಸಿದ್ದೇವೆ ಎಂದು ಇಲಾಖೆ ತನ್ನ ಟ್ವೀಟ್‌ನಲ್ಲಿ ಬರೆದುಕೊಂಡಿದೆ. ಹೀಗಾಗಿ ಇದೀಗ 2019-20ರ ಆರ್ಥಿಕ ವರ್ಷದ ಟಿಡಿಎಸ್ / ಟಿಸಿಎಸ್ ಪಾವತಿಸುವ ಕೊನೆಯ ದಿನಾಂಕವನ್ನು ಜುಲೈ 31 ರವರೆಗೆ ವಿಸ್ತರಿಸಲಾಗಿದೆ. ಇದಲ್ಲದೆ, 2020 ಮತ್ತು ಎಫ್‌ವೈ 2019-20ರ ಟಿಡಿಎಸ್ / ಟಿಸಿಎಸ್ ದಾಖಲೆಗಳನ್ನು ಜಾರಿಗೊಳಿಸುವ ಅವಧಿಯನ್ನು 2020 ಆಗಸ್ಟ್ 15 ರವರೆಗೆ ವಿಸ್ತರಿಸಲಾಗಿದೆ.

1. ತೆರಿಗೆ ಉಳಿತಾಯಕ್ಕಾಗಿ ಮಾಡಲಾಗುವ ಹೂಡಿಕೆಯ ಅವಧಿ ವಿಸ್ತರಣೆ
ತೆರಿಗೆ ಉಳಿತಾಯಕ್ಕಾಗಿ ಮಾಡಲಾಗುವ ಹೂಡಿಕೆಯ ದಿನಾಂಕವನ್ನು ಇಲಾಖೆ 2020 ಜುಲೈ 31 ಕ್ಕೆ ವಿಸ್ತರಿಸಿದೆ. 80 ಸಿ, 80 ಡಿ ಇತ್ಯಾದಿಗಳ ಅಡಿಯಲ್ಲಿ ತೆರಿಗೆ ಉಳಿತಾಯ ಮತ್ತು ಹೂಡಿಕೆಯ ದಿನಾಂಕವನ್ನು ಇಲಾಖೆ ವಿಸ್ತರಿಸಿದೆ. ಇದಕ್ಕೂ ಮೊದಲು ಜೂನ್ 30, 2020 ಇದರ ಕೋಟೆಯ ತಿಥಿಯಾಗಿತ್ತು.

2. ITR ದಾಖಲಿಸುವ ಕೊನೆಯ ದಿನಾಂಕದಲ್ಲಿ ವಿಸ್ತರಣೆ
ಇದಲ್ಲದೆ, ಇಲಾಖೆಯು 2018-19ರ ಆರ್ಥಿಕ ವರ್ಷದ ಮೂಲ ಅಥವಾ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕವನ್ನು 2020 ಜುಲೈ 31 ಕ್ಕೆ ವಿಸ್ತರಿಸಿದೆ. ಈ ಮೊದಲು, ಈ ಕೆಲಸದ ದಿನಾಂಕವು 30 ಜೂನ್ 2020 ಆಗಿತ್ತು.

3. 2019-20 ಆರ್ಥಿಕ ವರ್ಷದ ITR ದಾಖಲಿಸುವ ಅವಧಿ ಕೂಡ ವಿಸ್ತರಣೆ
2019-20ರ ಹಣಕಾಸು ವರ್ಷಕ್ಕೆ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇಲಾಖೆ ಕೊನೆಯ ದಿನಾಂಕವನ್ನು 2020 ನವೆಂಬರ್ 30 ರವರೆಗೆ ವಿಸ್ತರಿಸಿದೆ. ಅಂದರೆ, ಜುಲೈ 31 ಮತ್ತು 2020 ರ ಅಕ್ಟೋಬರ್ 31 ರೊಳಗೆ ಸಲ್ಲಿಸಬೇಕಾದ ರಿಟರ್ನ್ಸ್ ಅನ್ನು ಈಗ ನವೆಂಬರ್ 30 ರೊಳಗೆ ಸಲ್ಲಿಸಬಹುದು.

4. PAN-AADHAAR ಜೋಡಣೆಯ ದಿನಾಂಕದಲ್ಲಿ ವಿಸ್ತರಣೆ 
ಇದಲ್ಲದೆ ಪ್ಯಾನ್-ಆಧಾರ್ ಜೋಡಣೆಯ ದಿನಾಂಕವನ್ನು ಇಲಾಖೆ ಮಾರ್ಚ್ 31, 2021ಕ್ಕೆ ವಿಸ್ತರಿಸಿದೆ. ಇದಕ್ಕೂ ಮೊದಲು ದೇಶಾದ್ಯಂತ ಘೋಷಿಸಲಾಗಿದ್ದ ಲಾಕ್ ಡೌನ್ ಹಿನ್ನೆಲೆ ಈ ಗಡುವನ್ನು ಜೂನ್ 30, 2020ರವರೆಗೆ ವಿಸ್ತರಿಸಲಾಗಿತ್ತು.  ಆದರೆ ಈ ಗಡುವನ್ನು ಇದೀಗ ಮತ್ತೊಮ್ಮೆ ಮಾರ್ಚ್ 31, 2020ರವರೆಗೆ ವಿಸ್ತರಿಸಲಾಗಿದೆ.

5. Form-16 ದಾಖಲಿಸುವ ಅವಧಿ ಕೂಡ ವಿಸ್ತರಣೆ
ಸಾಮಾನ್ಯವಾಗಿ ಮೇ ತಿಂಗಳಲ್ಲಿ ನೌಕರರು ತಮ್ಮ ಕಂಪನಿಯಿಂದ ಫಾರ್ಮ್ 16 ಪಡೆಯುತ್ತಾರೆ. ಆದಾಯ ತೆರಿಗೆ ಇಲಾಖೆಯಿಂದ ಟಿಡಿಎಸ್ ಕಡಿತಗೊಳಿಸಲು ಫಾರ್ಮ್ 16 ಮತ್ತು ಫಾರ್ಮ್ 16 ಎ ಪ್ರಮಾಣ ಪತ್ರವನ್ನು ನೀಡುವುದು ಕಡ್ಡಾಯವಾಗಿದ್ದು.  ಸದ್ಯ ಇದರ ಗಡುವನ್ನು ಇಲಾಖೆ 2020 ಆಗಸ್ಟ್ 15 ಕ್ಕೆ ವಿಸ್ತರಿಸಿದೆ.

6. ಸೆಲ್ಫ್ ಅಸ್ಸೆಸ್ಮೆಂಟ್ ಗಡುವು ವಿಸ್ತರಣೆ
ಸಣ್ಣ ಮತ್ತು ಮಧ್ಯಮ ತೆರಿಗೆ ಪಾವತಿದಾರರಿಗೆ ನೆಮ್ಮದಿಯ ಸುದ್ದಿ ಪ್ರಕಟಿಸಿರುವ ಆದಾಯ ತೆರಿಗೆ ಇಲಾಖೆ ರೂ.1 ಲಕ್ಷವರೆಗೆ ತೆರಿಗೆ ಹೊಂದಿರುವ ತೆರಿಗೆ ಪಾವತಿದಾರರಿಗೆ ಸೆಲ್ಫ್ ಅಸ್ಸೆಸ್ಮೆಂಟ್ ತೆರಿಗೆ ಪಾವತಿಸಲು ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು ನವೆಂಬರ್ 30, 2020 ರವರೆಗೆ ವಿಸ್ತರಿಸಲಾಗಿದೆ.

Trending News