ಆಸ್ತಿಯ ಮಾರಾಟ ಮತ್ತು ಖರೀದಿಯ TDS ನಿಯಮದಲ್ಲಿನ ಬದಲಾವಣೆಗಳು ಇವು

 ಈ ಬಾರಿಯ ಬಜೆಟ್‌ನಲ್ಲಿ ಹಲವು ಮಹತ್ವದ ಘೋಷಣೆಗಳನ್ನು ಮಾಡಲಾಗಿದೆ. ಕೃಷಿಯೇತರ ಸ್ಥಿರಾಸ್ತಿ ವಹಿವಾಟಿಗೆ ಸಂಬಂಧಿಸಿದ ಟಿಡಿಎಸ್ ನಿಯಮದಲ್ಲಿಯೂ ಬದಲಾವಣೆ ಮಾಡಲಾಗಿದೆ. 

Written by - Ranjitha R K | Last Updated : Feb 3, 2022, 10:17 AM IST
  • ಆಸ್ತಿಯ ಮೌಲ್ಯವನ್ನು TDS ಗೆ ಆಧಾರವಾಗಿ ಪರಿಗಣಿಸಲಾಗುತ್ತದೆ
  • ಆಸ್ತಿ ವಹಿವಾಟಿನಲ್ಲಿ ನಡೆಯುವ ತೆರಿಗೆ ವಂಚನೆ ತಡೆಯಲು ಸಹಾಯವಾಗುತ್ತದೆ
  • ಏಪ್ರಿಲ್ ಒಂದು 2022 ರಿಂದ ಜಾರಿಗೆ ಬರಲಿದೆ ಹೊಸ ನಿಯಮ
ಆಸ್ತಿಯ ಮಾರಾಟ ಮತ್ತು ಖರೀದಿಯ TDS ನಿಯಮದಲ್ಲಿನ  ಬದಲಾವಣೆಗಳು ಇವು title=
ಆಸ್ತಿಯ ಮೌಲ್ಯವನ್ನು TDS ಗೆ ಆಧಾರವಾಗಿ ಪರಿಗಣಿಸಲಾಗುತ್ತದೆ (file photo)

ನವದೆಹಲಿ : Budget 2022 : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) 2022-23 ರ ಕೇಂದ್ರ ಬಜೆಟ್  (Budget 2022-23) ಅನ್ನು ಫೆಬ್ರವರಿ 1 ರಂದು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಹಲವು ಮಹತ್ವದ ಘೋಷಣೆಗಳನ್ನು ಮಾಡಲಾಗಿದೆ. ಕೃಷಿಯೇತರ ಸ್ಥಿರಾಸ್ತಿ (Immovable Property) ವಹಿವಾಟಿಗೆ ಸಂಬಂಧಿಸಿದ ಟಿಡಿಎಸ್ (TDS) ನಿಯಮದಲ್ಲಿಯೂ ಬದಲಾವಣೆ ಮಾಡಲಾಗಿದೆ. ಹೊಸ ನಿಯಮದ ಪ್ರಕಾರ, ಈಗ  50 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಕೃಷಿಯೇತರ ಆಸ್ತಿಯ ಮಾರಾಟದ ಬೆಲೆ  (Sale Price) ಅಥವಾ Stamp Duty Valueವನ್ನು 1 ಪ್ರತಿಶತ ಟಿಡಿಎಸ್‌ಗೆ ಆಧಾರವಾಗಿ ಪರಿಗಣಿಸಲಾಗುತ್ತದೆ.

ಏಪ್ರಿಲ್ 1, 2022 ರಿಂದ ಜಾರಿಗೆ  :
ಇದೀಗ ಹೊಸ ನಿಯಮದ ಪ್ರಕಾರ ಆದಾಯ ತೆರಿಗೆ ಕಾಯ್ದೆಗೆ (Income Tax Act)  ತಿದ್ದುಪಡಿ ತರಲಾಗುವುದು. ಈ ಬದಲಾವಣೆಯು ಏಪ್ರಿಲ್ 1 ರಿಂದ ಅಂದರೆ ಹೊಸ ಹಣಕಾಸು ವರ್ಷದಿಂದ ಜಾರಿಗೆ ಬರಲಿದೆ.  . ಈ ನಿಯಮದ ಬದಲಾವಣೆಯ ನಂತರ, ಆಸ್ತಿಯ ವಹಿವಾಟಿನಲ್ಲಿ ಸ್ಟ್ಯಾಂಪ್ ಡ್ಯೂಟಿ 50 ಲಕ್ಷ ಅಥವಾ (Stamp Duty Value) ಅದಕ್ಕಿಂತ ಹೆಚ್ಚಿದ್ದರೆ ಮತ್ತು ವಹಿವಾಟಿನ ಮೌಲ್ಯ 50 ಲಕ್ಷಕ್ಕಿಂತ ಕಡಿಮೆಯಿದ್ದರೂ ಸಹ, 1 ಪ್ರತಿಶತ ಟಿಡಿಎಸ್ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ : Earn Money : ನಿಮ್ಮ ಬಳಿ ಈ ಹಳೆಯ ₹ 1 ನೋಟು ಇದ್ದರೆ ನೀವು ಆಗಬಹುದು ಮಿಲಿಯನೇರ್!

ಅಸ್ತಿ ಮೌಲ್ಯದ ಪ್ರಕಾರ ಪಾವತಿಸಬೇಕು ಟಿಡಿಎಸ್ : 
ಇಲ್ಲಿಯವರೆಗೆ 50 ಲಕ್ಷ ರೂ.ಗಿಂತ ಹೆಚ್ಚಿನ ಕೃಷಿಯೇತರ ಆಸ್ತಿಯ ವಹಿವಾಟಿನ ಮೇಲೆ ಶೇಕಡಾ 1 ರಷ್ಟು ಟಿಡಿಎಸ್ (TDS)ಪಾವತಿಸುವ ನಿಯಮವಿತ್ತು.  ಶೇಕಡಾ 1 ರ ಟಿಡಿಎಸ್‌ಗೆ ಆಸ್ತಿಯ ಮೌಲ್ಯವನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. ಈ ಟಿಡಿಎಸ್ ನಿಯಮವು  50 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ.  

ತೆರಿಗೆ ವಂಚನೆಗೆ ತಡೆ : 
ಆಸ್ತಿ ವಹಿವಾಟಿನಲ್ಲಿ ತೆರಿಗೆ ವಂಚನೆಯನ್ನು ತಡೆಯಲು ಸರ್ಕಾರ ಈ ಘೋಷಣೆ ಮಾಡಿದೆ.  ಈಗ ಆಸ್ತಿಯನ್ನು ಖರೀದಿಸುವ ವ್ಯಕ್ತಿಯು ಮಾರಾಟಗಾರನಿಗೆ ಪಾವತಿ ಮಾಡುವಾಗ, 1 ಶೇಕಡಾ TDS ಅನ್ನು ಕಡಿತಗೊಳಿಸಬೇಕಾಗುತ್ತದೆ. ಅಂದರೆ, ಒಟ್ಟಾರೆ ಈ ಬದಲಾವಣೆಯು ತೆರಿಗೆ ವಂಚನೆಯನ್ನು ತಡೆಯುವಲ್ಲಿ ಅತ್ಯಂತ ಪರಿಣಾಮಕಾರಿಯಾಗಲಿದೆ.

ಇದನ್ನೂ ಓದಿ : NPS : ಸರ್ಕಾರಿ ನೌಕರರೆ ಗಮನಿಸಿ : ನಿಮಗೆ ಉಳಿತಾಯವಾಗಲಿದೆ ₹4800 ! ಹೇಗೆ? ಇಲ್ಲಿದೆ ನೋಡಿ

ಇದು ಸ್ಥಿರಾಸ್ತಿ ಮಾರಾಟದ ಟಿಡಿಎಸ್ ಮಾನದಂಡಗಳನ್ನು ಬದಲಾಯಿಸುವ ಮೂಲಕ ತೆರಿಗೆ ವಂಚನೆಯನ್ನು ತಡೆಯಲು ಸಹಾಯ ಮಾಡುತ್ತದೆ ಎನ್ನುವುದು ಹೂಡಿಕೆ ತಜ್ಞರ ಅಭಿಪ್ರಾಯ .    ಇದು ಖರೀದಿದಾರರು ಮತ್ತು ಮಾರಾಟಗಾರರ ಫಾರ್ಮ್ 26AS ನಲ್ಲಿ ಕಾಣಿಸುತ್ತದೆ.  ಹೊಂದಾಣಿಕೆಯಾಗದೆ ಇದ್ದಲ್ಲಿ ಆದಾಯ ತೆರಿಗೆ ಇಲಾಖೆಯು, ತಪ್ಪಿತಸ್ಥರನ್ನು ಪತ್ತೆ ಹಚ್ಚುವುದು ಸುಲಭವಾಗುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News