ಸಿದ್ದರಾಮೋತ್ಸವಕ್ಕೆ ಬಿಜೆಪಿಯಿಂದ ಕೌಂಟರ್ ಉತ್ಸವ ಪ್ಲ್ಯಾನ್..ಕಾಂಗ್ರೆಸ್ನವರು ಸಿದ್ದರಾಮಯ್ಯ ಹೆಸರಿನಲ್ಲಿ ಉತ್ಸವ ಮಾಡಿದರು.. ಬಿಜೆಪಿ ಜನರಿಗಾಗಿ ಉತ್ಸವ ಮಾಡುತ್ತೆ - ಅರುಣ್ ಸಿಂಗ್
ಸಿದ್ದರಾಮೊತ್ಸವ ಆಯ್ತು, ಈಗ ಡಿ.ಕೆ.ಶಿವಕುಮಾರ್ ಮಹೋತ್ಸವ ನಡೆಸಿ, ಆ ಮೂಲಕ ಪಕ್ಷದಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಡಿಕೆ ಬ್ರದರ್ಸ್ ಅಖಾಡಕ್ಕಿಳಿದಿದ್ದಾರೆ. ಫ್ರೀಡಂ ಮಾರ್ಚ್ಗೆ ಪ್ರಿಯಾಂಕಾ ಗಾಂಧಿ ಅವರನ್ನು ಕರೆಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಪ್ರಿಯಾಂಕಾ ಗಾಂಧಿಗೆ ಖುದ್ದು ಕೆ.ಶಿವಕುಮಾರ್ ಆಹ್ವಾನ ನೀಡಿದ್ದಾರೆ.
ಬಿಜೆಪಿ ವೈಫಲ್ಯ ಎತ್ತಿಹಿಡಿಯುವಲ್ಲಿ ನಾವು ವಿಫಲವಾಗಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಜೀ ಕನ್ನಡ ನ್ಯೂಸ್ ಡಿಜಿಟಲ್ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರ ವೈಫಲ್ಯ, ದುರಾಳಿತ, ಭ್ರಷ್ಟಾಚಾರ, ಜನವಿರೋಧಿ ಕ್ರಮಗಳನ್ನು ಬಯಲಿಗೆಳೆಯೋ ಕೆಲಸ ಮಾಡ್ತಿದ್ದೇವೆ ಎಂದಿದ್ದಾರೆ. ಬಿಜೆಪಿಯವ್ರು ಅಧಿಕಾರದಲ್ಲಿದ್ದಾಗ ಯಾವ ಹೋರಾಟ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಸಿದ್ಧರಾಮೋತ್ಸವ - ಇದು ಬಲಪ್ರದರ್ಶನವೂ ಅಲ್ಲ, ಸಿದ್ದರಾಮೋತ್ಸವವೂ ಅಲ್ಲ. ನನಗೆ 75 ವರ್ಷ ತುಂಬ್ತಿರೋದ್ರಿಂದ ಅಮೃತ ಮಹೋತ್ಸವ ಕಾರ್ಯಕ್ರಮ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಜೀ ಕನ್ನಡ ನ್ಯೂಸ್ ಡಿಜಿಟಲ್ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅಭಿಮಾನದಿಂದ ಸಿದ್ದರಾಮೋತ್ಸವ ಅಂತಿದ್ದಾರೆ ಎಂದು ಹೇಳಿದ್ದಾರೆ.
ದೇವರಾಜ ಅರಸು ಬಿಟ್ಟರೆ 5 ವರ್ಷ ಸಿಎಂ ಆಗಿ ಅಧಿಕಾರ ಪೂರ್ಣ ಮಾಡಿದ್ದು ನಾನೇ... ನಾನು ಸಿಎಂ ಆಗಿ ನಾನು ಎಲ್ಲಾ ಸಮಸ್ಯೆ ಬಗೆಹರಿಸಿದ್ದೀನಿ ಎನ್ನಲ್ಲ. ಆದರೆ ಜನರ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. 165 ಭರವಸೆ ನೀಡಿದ್ದೆವು. ಅದರಲ್ಲಿ 158 ಭರವಸೆ ಈಡೇರಿಸಿದ್ದೇವೆ ಅಂತಾ ಹೇಳಿದ್ದಾರೆ.
ಆ.3ರಂದು ಸಿದ್ದರಾಮಯ್ಯ ಅಮೃತ ಮಹೋತ್ಸವ ಆಚರಿಸಿಕೊಂಡಿದ್ದಾರೆ. ಆದ್ರೆ ನನ್ನ ಪ್ರಕಾರ ಅಂದು ನನ್ನ ಹುಟ್ಟುಹಬ್ಬ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 5ನೇ ತರಗತಿಗೆ ನೇರವಾಗಿ ಸೇರಿದ್ದರಿಂದ ಮೇಷ್ಟ್ರು ಬರೆದುಕೊಂಡ ತಾರೀಕು ಅದು. ಸ್ಕೂಲ್ ರೆಕಾರ್ಡ್ ಪ್ರಕಾರ ಅಂದು ಬರ್ತ್ ಡೇ. ಆದರೆ ಐದಾರು ತಿಂಗಳು ಈಕಡೆ ಆಕಡೆ ಇರಬಹುದು ಎಂದಿದ್ದಾರೆ.
ಸಿದ್ದರಾಮೋತ್ಸವಕ್ಕೆ ಯಾರದ್ದೂ ಅಸಮಾಧಾನ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಡಿಕೆಶಿ ಕೂಡಾ ಎಲ್ಲಿಯೂ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದು ಜೀ ಕನ್ನಡ ನ್ಯೂಸ್ ಡಿಜಿಟಲ್ ವಿಶೇಷ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.
ಇವತ್ತಿನವರೆಗೂ ಇಂಥ ಸಭೆ ಆಗಿರಲಿಲ್ಲ, ಮುಂದೆ ಆಗುತ್ತೋ ಆಗುತ್ತೋ ಇಲ್ವೋ ಗೊತ್ತಿಲ್ಲ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ರು. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿಯಲ್ಲಿನ ಕನಕ ಗುರು ಪೀಠದಲ್ಲಿ ಸಿದ್ದರಾಮೋತ್ಸವ ಬಗ್ಗೆ ಮಾತನಾಡಿ, ಕಾರ್ಯಕ್ರಮ ಮೋಸ್ಟ್ ಸಕ್ಸಸ್ ಫುಲ್ ಪಂಕ್ಷನ್ ಆಗಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಸೇರುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ ಅಂತಾ ಹೇಳಿದ್ರು.
ಇಂದು ಸಿದ್ದರಾಮಯ್ಯನವರು ತಮ್ಮ 75 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಕಲಾವಿದನೊಬ್ಬ ಅಕ್ಕಿ ಕಾಳಿನಲ್ಲಿ ಅವರ ಪ್ರತಿಮೆಯನ್ನು ರಚಿಸುವುದರ ಮೂಲಕ ಗಮನ ಸೆಳೆದಿದ್ದಾರೆ.
ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ರಾಜ್ಯದ ಮೂಳೆ ಮುಲೆಗಲಿನದ ಸಾವಿರಾರು ಮಂದಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಕಂಗೊಳಿಸುತ್ತಿದೆ ಸಿದ್ದರಾಮಯ್ಯ ಕಟೌಟ್ ..
ಮಂಗಳವಾರ ರಾತ್ರಿ ಹುಬ್ಬಳ್ಳಿಯಲ್ಲಿ ಸಿದ್ಧರಾಮಯ್ಯ ಅವರ ಹುಟ್ಟುಹಬ್ಬದ ಸಂಭ್ರಮ ಜರುಗಿದೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಕೇಕ್ ತಿನ್ನಿಸಿ ಶುಭ ಕೋರಿದ ಡಿ.ಕೆ.ಶಿವಕುಮಾರ್ ಶುಭ ಹಾರೈಸಿದ್ದಾರೆ.
ಸಿದ್ಧರಾಮೋತ್ಸವ ಕಾರ್ಯಕ್ರದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ರಾಜ್ಯಕ್ಕೆ ಭೇಟಿ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ರಾತ್ರಿ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರ ಜೊತೆ ಮಹತ್ವದ ಸಭೆಯನ್ನು ನಡೆಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.