"ಸಿದ್ರಾಮಯ್ಯನವರು ಈ ನಾಡಿಗೆ ಕೊಟ್ಟಂತಹ ಹಲವು ಜನಪರ ಯೋಜನೆಗಳನ್ನ ಜನರು ಮರೆತಿಲ್ಲ"

ಸಿದ್ರಾಮಯ್ಯನವರು ಈ ನಾಡಿಗೆ ಕೊಟ್ಟಂತಹ ಹಲವು ಜನಪರ ಯೋಜನೆಗಳನ್ನ ಜನರು ಮರೆತಿಲ್ಲ ಎಂದು ವಿಧಾನಪರಿಷತ್ ವಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಶ್ಲಾಘಿಸಿದರು.

Last Updated : Aug 3, 2022, 11:01 PM IST
  • ಸಂವಿಧಾನ ಉಳಿದರೇ ಮಾತ್ರ ಸಿದ್ದರಾಮಯ್ಯನಂತಹ ಹಿಂದುಳಿದ ಸಮುದಾಯಕ್ಕೆ ಸೇರಿದವರು ಸಿಎಂ ಆಗಬಹುದು.
  • ದಲಿತರು, ಅಲ್ಪಸಂಖ್ಯಾತರು ಯಾವ ಸಮುದಾಯದವರು ಸಿಎಂ ಆಗಲು ಸಾಧ್ಯ.ಆದರೆ ಅದಕ್ಕಿಂತ ಮೊದಲು ಸಂವಿಧಾನ ಉಳಿಯಬೇಕಿದೆ.
"ಸಿದ್ರಾಮಯ್ಯನವರು ಈ ನಾಡಿಗೆ ಕೊಟ್ಟಂತಹ ಹಲವು ಜನಪರ ಯೋಜನೆಗಳನ್ನ ಜನರು ಮರೆತಿಲ್ಲ"  title=

ಬೆಂಗಳೂರು: ಸಿದ್ರಾಮಯ್ಯನವರು ಈ ನಾಡಿಗೆ ಕೊಟ್ಟಂತಹ ಹಲವು ಜನಪರ ಯೋಜನೆಗಳನ್ನ ಜನರು ಮರೆತಿಲ್ಲ ಎಂದು ವಿಧಾನಪರಿಷತ್ ವಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಶ್ಲಾಘಿಸಿದರು.

ಅವರು ದಾವಣಗೆರೆಯಲ್ಲಿ ನಡೆದ ಮಾಜಿ ಸಿಎಂ ಸಿದ್ರಾಮಯ್ಯನವರ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿ ಮಾಡಿದರು.

ನಮ್ಮ ಅಚ್ಚುಮೆಚ್ಚಿನ ರಾಷ್ಟ್ರೀಯ ನಾಯಕರಾದ ಶ್ರೀ ರಾಹುಲ್ ಗಾಂಧಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲು ಬಂದಿರುವುದು ಎಲ್ಲರಿಗೂ ಹೆಮ್ಮೆಯ ವಿಷಯ.

ಸಾರ್ವಜನಿಕ ರಾಜಕೀಯ ಜೀವನದಲ್ಲಿ ಇದ್ದವರು 75 ವರ್ಷಗಳನ್ನ ಪೂರೈಸುವುದು ಅಷ್ಟು ಸುಲಭವಲ್ಲ. ಅದರಲ್ಲೂ ಸೈದ್ದಾಂತಿಕ ಬದ್ಧತೆಯೊಂದಿಗೆ, ಜನಪರ ಆಲೋಚನೆಗಳನ್ನ ನಂಬಿ, ಜನ ಸೇವೆ ಮಾಡುವುದು ಸವಾಲಿನ ಕೆಲಸ. ಅವರ ರಾಜಕೀಯ ಜೀವನದಲ್ಲಿ ಈ ಸನ್ನಿವೇಶ ಮಹತ್ತರ ಘಟ್ಟಗಳಲ್ಲಿ ಒಂದು.

ಇದನ್ನೂ ಓದಿ : ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಸಚಿವ ದರ್ಜೆ ಸ್ಥಾನಮಾನ

ಫ್ರೋ ನಂಜುಂಡಸ್ವಾಮಿ ಅವರ ಒಡನಾಟದೊಂದಿಗೆ ರಾಜಕೀಯ ರಂಗಕ್ಕೆ ಪ್ರವೇಶ ಪಡೆದು, ಹಲವು ಹುದ್ದೆಗಳನ್ನ, ಜವಾಬ್ದಾರಿಗಳನ್ನ ಸಮರ್ಥವಾಗಿ ನಿಭಾಯಿಸಿದ್ದಾರೆ. ಸಿದ್ರಾಮಯ್ಯನವರು ಈ ನಾಡಿಗೆ ಕೊಟ್ಟಂತಹ ಹಲವು ಜನಪರ ಯೋಜನೆಗಳನ್ನ ಜನರು ಮರೆತಿಲ್ಲ.May be an image of 11 people and people standing

ಅವರ ಆಡಳಿತದಲ್ಲಿ ಸಂವಿಧಾನ ಉಳಿಸುವ ಹಾಗೂ ಪ್ರಜಾಪ್ರಭುತ್ವವನ್ನ ಗಟ್ಟಿಗೊಳಿಸುವ ಬದ್ಧತೆ ತೋರಿದ್ದಾರೆ.ಆದರೆ ಈಗ ಭಾರತದ ಸಂವಿಧಾನ ಅಪಾಯದಲ್ಲಿದೆ.ಪ್ರಜಾಪ್ರಭುತ್ವದ ಮೌಲ್ಯಗಳು ಇಲ್ಲವಾಗಿಸುವ ಶಕ್ತಿಗಳು ಬಂದಿವೆ. ಇಲ್ಲಿ ಸೇರಿರುವ ಜನರು ಪ್ರತಿಯೊಬ್ಬರು ಪ್ರತಿಜ್ಞೆ ಮಾಡಬೇಕಿದೆ. ಸಂವಿಧಾನದ ಉಳಿವಿಗಾಗಿ ಹೋರಾಡಬೇಕಿದೆ.ನಮ್ಮ ನಾಯಕರಾದ ರಾಷ್ಟ್ರಮಟ್ಟದಲ್ಲಿ ಶ್ರೀ ರಾಹುಲ್ ಗಾಂಧಿಯವರು ನಡೆಸುತ್ತಿರುವ ಹೋರಾಟಕ್ಕೆ ಶಕ್ತಿ ತುಂಬಬೇಕಿದೆ.

ಮುಂದಿನ ದಿನಗಳಲ್ಲಿ ನಡೆಯುವ ಚುನಾವಣಾ ಹೋರಾಟದಲ್ಲಿ ಬಿಜೆಪಿಯನ್ನ ಸೋಲಿಸುವ ಹೊಸ ಸಂಕಲ್ಪವನ್ನ ಇಲ್ಲಿ ಸೇರಿರುವ ಸಿದ್ರಾಮಯ್ಯನವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಿದೆ.‌ ಸಂವಿಧಾನ ಉಳಿದರೇ ಮಾತ್ರ ಸಿದ್ದರಾಮಯ್ಯನಂತಹ ಹಿಂದುಳಿದ ಸಮುದಾಯಕ್ಕೆ ಸೇರಿದವರು ಸಿಎಂ ಆಗಬಹುದು.ದಲಿತರು, ಅಲ್ಪಸಂಖ್ಯಾತರು ಯಾವ ಸಮುದಾಯದವರು ಸಿಎಂ ಆಗಲು ಸಾಧ್ಯ.ಆದರೆ ಅದಕ್ಕಿಂತ ಮೊದಲು ಸಂವಿಧಾನ ಉಳಿಯಬೇಕಿದೆ. ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಪ್ರಜಾಪ್ರಭುತ್ವ, ಸಂವಿಧಾನವನ್ನ ನೀಡಿದೆ. ಸಿದ್ರಾಮಯ್ಯನವರ ಜನ್ಮ ದಿನೋತ್ಸವಕ್ಕೆ ಶುಭಾಶಯ ಕೋರಿ ಸಂತೃಪ್ತಿಯಾಗದೆ, ಶ್ರೀ ರಾಹುಲ್ ಗಾಂಧಿ ನೇತೃತ್ವದಲ್ಲಿ ನಾವೆಲ್ಲ ಸಂವಿಧಾನ ಉಳಿಸುವ ಪ್ರತಿಜ್ಞೆ ಮಾಡೋಣ ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News