CSK vs RCB: IPL 2024 ರ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದಿದೆ. ಚೆಪಾಕ್ ಸ್ಟೇಡಿಯಂನಲ್ಲಿ ಧೋನಿ ಪಡೆ ಮಿಂಚಿದರೆ.. ಆರ್ಸಿಬಿ ಮತ್ತೊಮ್ಮೆ ನೆಲಕಚ್ಚಿತು.. ಇದರ ಸಂಪೂರ್ಣ ವಿವರ ಈ ಕೆಳಗಿನಂತಿದೆ.
Indian Premier League 2024: 24 ವರ್ಷದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟ್ಸ್ಮನ್ ಅನುಜ್ ರಾವತ್ ಐಪಿಎಲ್ 2024ರ ಉದ್ಘಾಟನಾ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದಾರೆ. ಬಿರುಸಿನ ಬ್ಯಾಟಿಂಗ್ ಮಾಡಿ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ಗಳ ಬೆವರಿಳಿಸಿದ್ದಾರೆ. ಈ ಬ್ಯಾಟ್ಸ್ಮನ್ 48 ರನ್ಗಳ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ RCB ತಂಡವು ಗೌರವಾನ್ವಿತ ಮೊತ್ತ ಗಳಿಸಲು ನೆರವಾದರು.
CSK vs RCB, IPL 2024: ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್(IPL) ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿವೆ.
IPL GK Quiz: For You: ಇಂದು ನಾವು ನಿಮಗಾಗಿ ಐಪಿಎಲ್ ಟೂರ್ನಿಯ ಬಗ್ಗೆ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
CSK vs RCB, IPL 2024: ಟೂರ್ನಿ ಆರಂಭಕ್ಕೂ ಮುನ್ನವೇ ಚೆನ್ನೈ ತಂಡದ ನಾಯಕತ್ವ ಸ್ಥಾನದಿಂದ ಧೋನಿ ಕೆಳಗಿಳಿದಿದ್ದು, ಋತುರಾಜ್ ಗಾಯಕ್ವಾಡ್ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನೆಡೆಸುತ್ತಿದ್ದಾರೆ. ಉಭಯ ತಂಡಗಳು ಬಲಿಷ್ಠವಾಗಿರುವ ಕಾರಣ ರೋಚಕ ಸೆಣಸಾಟ ನಡೆಯುವ ಸಾಧ್ಯತೆ ಇದೆ.
IPL 2024: ಐಪಿಎಲ್ ಆರಂಭಕ್ಕೂ ಮುನ್ನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿ ಬಿ ಅನ್ಬಾಕ್ಸ್ ಈವೆಂಟ್ ನಡೆದಿದ್ದು, ಅಭಿಮಾನಿಗಳಿಂದ ಕಿಕ್ಕಿರಿದು ತುಂಬಿದ್ದ ಸ್ಟೇಡಿಯಂನಲ್ಲಿ 'ಇನ್ನು ಮುಂದೆ ನನ್ನನ್ನು 'ಕಿಂಗ್' ಅಂತಾ ಕರೆಯಬೇಡಿ, ಕೇವಲ ವಿರಾಟ್ ಎಂದು ಕರೆಯಿರಿ' ಎಂದು ಅಭಿಮಾನಿಗಳಿಗೆ ವಿನಂತಿಸಿದ್ದಾರೆ. ಅಷ್ಟೇ ಅಲ್ಲ 'ಕಿಂಗ್ ಕೇಳಿದರೆ ನನಗೆ ಮುಜುಗರವಾಗುತ್ತದೆ (Call Me Virat Instead Of King Kohli Requests Fans). ಮತ್ತು ನನ್ನನ್ನು ಕೇವಲ ವಿರಾಟ್ ಹೆಸರಿನಿಂದಲೇ ಕರೆಯಿರಿ' ಎಂದು ಕೊಹ್ಲಿ ಹೇಳಿದ್ದಾರೆ. (Sports News In Kananda)
ಮಂಗಳವಾರದಂದು ನಡೆದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫ್ರಾಂಚೈಸಿಯ UNBOX ಕಾರ್ಯಕ್ರಮದಲ್ಲಿ RCB ತಮ್ಮ ತಂಡದ ಹೆಸರಿನಲ್ಲಿರುವ ಆಂಗ್ಲೀಕೃತ 'Bangalore' ಅನ್ನು ನಗರದ ಅಧಿಕೃತ ಹೆಸರು 'Bengaluru' ಎಂದು ಬದಲಿಸಿದೆ.
Finn Allen Century vs Pakistan: ಒಂದರ ಹಿಂದೆ ಒಂದರಂತೆ 16 ಸಿಕ್ಸರ್’ಗಳನ್ನು ಬಾರಿಸಿದ ಅಲೆನ್, 5 ಬೌಂಡರಿಗಳನ್ನೂ ಸಿಡಿಸಿದ್ದರು. ಅಂದಹಾಗೆ IPL-2024 ಹರಾಜಿನ ಮೊದಲು RCB ಈ ಬ್ಯಾಟ್ಸ್ಮನ್ನನ್ನು ಬಿಡುಗಡೆ ಮಾಡಿತ್ತು.
DC vs RCB IPL 2023 Match: ಹವಾಮಾನ ಇಲಾಖೆಯ ಪ್ರಕಾರ, ದೆಹಲಿಯಲ್ಲಿ ಮತ್ತೊಮ್ಮೆ ಮೋಡ ಕವಿದ ವಾತಾವರಣ ಇದೆ. ಲಘು ಮಳೆಯಾಗುವ ಸಾಧ್ಯತೆ ಕೂಡ ಇದೆ. ಒಂದು ವೇಳೆ ಮಳೆ ಬೀಳದಿದ್ದರೆ ಪಂದ್ಯ ನಡೆಯುತ್ತದೆ, ಇಷ್ಟೇ ಅಲ್ಲದೆ, ಗಂಟೆಗೆ 16 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ತಾಪಮಾನ 26 ರಿಂದ 41 ಡಿಗ್ರಿ ಸೆಲ್ಸಿಯಸ್ ವರೆಗೆ ಇರಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ರಾತ್ರಿ 7.30ರಿಂದ ನಡೆಯಲಿದೆ.
RCB vs KKR highlights: ಜೇಸನ್ ರಾಯ್ 29 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 56 ರನ್ ಗಳಿಸಿ ತಂಡಕ್ಕೆ ಬಿರುಸಿನ ಆರಂಭ ನೀಡಿದರೆ, ರಾಣಾ 21 ಎಸೆತಗಳಲ್ಲಿ 48 ರನ್ ಕಲೆ ಹಾಕಿ ಡೆತ್ ಓವರ್’ನಲ್ಲಿ ತಂಡವು ಬೃಹತ್ ಮೊತ್ತ ಕಲೆ ಹಾಕುವಂತೆ ಮಾಡಿದರು. ಇದರಲ್ಲಿ ನಾಲ್ಕು ಸಿಕ್ಸರ್ ಮತ್ತು ಮೂರು ಬೌಂಡರಿಗಳು ಸೇರಿವೆ.
IPL 2023: ರಾಜಸ್ಥಾನ್ ರಾಯಲ್ಸ್ ವಿರುದ್ಧ 44 ಎಸೆತಗಳಲ್ಲಿ 77 ರನ್ ಗಳಿಸಿದ ಮ್ಯಾಚ್ ವಿನ್ನಿಂಗ್ ಆಟಗಾರ ಬೇರಾರೂ ಅಲ್ಲ ಅವರೇ ಗ್ಲೆನ್ ಮ್ಯಾಕ್ಸ್ವೆಲ್. ಮ್ಯಾಕ್ಸ್ವೆಲ್ ತಮ್ಮ ಇನ್ನಿಂಗ್ಸ್’ನಲ್ಲಿ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್’ಗಳನ್ನು ಬಾರಿಸಿದ್ದಲ್ಲದೆ, ಫಾಫ್ ಡು ಪ್ಲೆಸಿಸ್ (39 ಎಸೆತಗಳಲ್ಲಿ 62 ರನ್) ಅವರೊಂದಿಗೆ ಮೂರನೇ ವಿಕೆಟ್’ಗೆ 127 ರನ್ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ ಗೆಲುವಿಗೆ ಅಡಿಪಾಯ ಹಾಕಿದರು.
IPL 2023: ಐಪಿಎಲ್ 2023ರ ಮೊದಲ ಪಂದ್ಯದಲ್ಲಿ ಅಬ್ಬರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಆ ಬಳಿಕ ನಡೆದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿತ್ತು. ಇನ್ನು ಇವೆಲ್ಲದರ ಹೊರತಾಗಿ ಆರ್ ಸಿ ಬಿ ತಂಡದ ಸ್ಟಾರ್ ಆಟಗಾರರ ಪತ್ನಿಯರ ಬಗ್ಗೆ ನಾವಿಂದು ಮಾತನಾಡಲಿದ್ದೇವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ನ ಜನಪ್ರಿಯ ತಂಡ ಎಂದೇ ಹೇಳಬಹುದು. ಅನೇಕ ಅಭಿಮಾನಿಗಳನ್ನು ಈ ತಂಡ ಹೊಂದಿದೆ. ಇನ್ನು ಟ್ವಿಟ್ಟರ್ ಇಂಡಿಯಾದ ಅಧಿಕೃತ ಹೇಳಿಕೆಯ ಪ್ರಕಾರ, ಇಂಡಿಯನ್ ಪ್ರೀಮಿಯರ್ ಲೀಗ್ 2022ರಲ್ಲಿ ಬೆಂಗಳೂರು ತಂಡಕ್ಕೆ ಬೆಂಬಲವಾಗಿ ಅತೀ ಹೆಚ್ಚು ಟ್ವೀಟ್ ಮಾಡಲಾಗಿದೆಯಂತೆ. ಇದು ಆರ್ಸಿಬಿಯ ಜನಪ್ರಿಯತೆ ಬಗ್ಗೆ ತಿಳಿಸಿಕೊಡುತ್ತದೆ.
ಕನ್ನಡಿಗ ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಫಾಪ್ ಡು ಪ್ಲೆಸಿಸ್ ಮುಂದಾಳತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ಹಣಾಹಣಿ ನಡೆಯಲಿದೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿರುವ ಉಭಯ ತಂಡಗಳು ಇಂದು ನಡೆಯುವ ಪಂದ್ಯದಲ್ಲಿ ಯಾವರೀತಿ ಆಡಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಐದು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸಹ ನಾಲ್ಕು ಚಾರಿ ಚಾಂಪಿಯನ್ಸ್ ಆಗಿದೆ. ಆದರೆ ಇಲ್ಲಿವರೆಗೆ ನಡೆದ ಟೂರ್ನಿಯಲ್ಲಿ ಆರ್ಸಿಬಿ ತಂಡ ಕಪ್ ಗೆಲ್ಲದೆ ಪರದಾಡುತ್ತಿದೆ. ಇಲ್ಲಿ ಆಶ್ಚರ್ಯಪಡುವ ವಿಷಯವೆಂದರೆ ಪ್ಲೇ ಆಫ್ ತಂಡಕ್ಕೆ ಎಂಟು ಬಾರಿ ಪ್ರವೇಶ ಪಡೆದಿರುವ ಆರ್ಸಿಬಿ ಇಲ್ಲಿವರೆಗೆ ಕಪ್ ಗೆಲ್ಲಲು ಸಾಧ್ಯವಾಗಿಲ್ಲ.
ಐಪಿಎಲ್ ಟೂರ್ನಿಯಲ್ಲಿ ರನ್ ಗಳಿಸಲು ಹೆಣಗಾಡುತ್ತಿರುವ ವಿರಾಟ್ ಕೊಹ್ಲಿ ಈಗ ಕೊನೆಗೂ ಮೌನ ಮುರಿದಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಕಳೆದ 12 ಪಂದ್ಯಗಳಲ್ಲಿ ಕೇವಲ ಒಂದು ಅರ್ಧ ಶತಕದೊಂದಿಗೆ 216 ರನ್ ಗಳಿಸಿರುವ ಕೊಹ್ಲಿ ತಮ್ಮ ವೃತ್ತಿಜೀವನದ ಅತ್ಯಂತ ಕೆಟ್ಟ ಕ್ಷಣಗಳನ್ನು ಈಗ ಅವರು ಎದುರಿಸುತ್ತಿದ್ದಾರೆ.
ಅಚ್ಚರಿ ಎಂದರೆ ಅವರು ಈ ಋತುವಿನಲ್ಲಿ ಮೂರು ಭಾರಿ ಶೂನ್ಯಕ್ಕೆ ಔಟಾಗಿದ್ದರು.
ಎಂ.ಎಸ್ ಧೋನಿ ನಾಯಕತ್ವದಲ್ಲಿ ಸದ್ಯ ಮುಂದುವರೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟೂರ್ನಿಯಲ್ಲಿ ಒಂಬತ್ತು ಪಂದ್ಯಗಳನ್ನಾಡಿದ್ದು ಆರರಲ್ಲಿ ಸೋಲು ಕಂಡು, ಮೂರರಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆದಿದೆ.
ಗುಜರಾತ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ ಉತ್ತಮ ಫಾರ್ಮ್ನ್ನು ಕಂಡುಕೊಂಡಿದ್ದಾರೆ. ಈಗಾಗಲೇ ಐಪಿಎಲ್ ಟೂರ್ನಿಯಲ್ಲಿ ಆಡಿರುವ ಎಂಟು ಪಂದ್ಯಗಳ ಪೈಕಿ ಏಳರಲ್ಲಿ ಜಯ ಸಾಧಿಸಿದ್ದು, ಒಂದರಲ್ಲಿ ಸೋಲು ಕಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ತಂಡ ಈ ಬಾರಿ ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದು, ಉತ್ತಮವಾಗಿ ಆಡುತ್ತಿದೆ. ಆದರೆ ಕಳೆದ ಬಾರಿಯ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಭಾರೀ ಕಳಪೆ ಪ್ರದರ್ಶನ ನೀಡಿ ಕೇವಲ 68 ರನ್ಗೆ ಆಲ್ಔಟ್ ಆಗಿತ್ತು.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಪ್ರದರ್ಶನ ನೀಡುತ್ತಿದ್ದು, ಮೊದಲ ಬಾರಿಗೆ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಆಟವಾಡುತ್ತಿದೆ. ಟೂರ್ನಿಯ ಆರಂಭದಲ್ಲಿ ಸೋಲು ಕಂಡಿದ್ದರೂ ಸಹ ಮುಂದಿನ ದಿನಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬೆಂಗಳೂರು ತಂಡ ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.