CSK vs RCB, IPL 2024: RCBಗೆ ಆರಂಭಿಕ ಆಘಾತ, 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡ!

CSK vs RCB, IPL 2024: ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್(IPL) ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮುಖಾಮುಖಿಯಾಗಿವೆ.

Written by - Puttaraj K Alur | Last Updated : Mar 22, 2024, 09:01 PM IST
  • RCBಗೆ ಆರಂಭಿಕ ಆಘಾತ ನೀಡಿದ ಚೆನ್ನೈ ಸೂಪರ್‌ ಕಿಂಗ್ಸ್‌
  • ಮುಸ್ತಫಿಜುರ್ ರಹಮಾನ್ ದಾಳಿಗೆ ನಲುಗಿದ ಆರ್‌ಸಿಬಿ ಬ್ಯಾಟ್ಸಮನ್‌ಗಳು
  • 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ ಬೆಂಗಳೂರು
CSK vs RCB, IPL 2024: RCBಗೆ ಆರಂಭಿಕ ಆಘಾತ, 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡ! title=
CSK vs RCB

ಚೆನ್ನೈ: ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್(IPL) ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮುಖಾಮುಖಿಯಾಗಿವೆ. ಈ ಹೈವೋಲ್ಟೇಜ್‌ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದ RCB ಆರಂಭಿಕ ಆಘಾತ ಅನುಭವಿಸಿದೆ. ವಿರಾಟ್‌ ಕೊಹ್ಲಿ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿದ ಫಾಫ್ ಡು ಪ್ಲೆಸಿಸ್ ಸ್ಫೋಟಕ ಬ್ಯಾಟಿಂಗ ಪ್ರದರ್ಶನ ನೀಡುತ್ತಿದ್ದರು. 

ಇದನ್ನೂ ಓದಿ: IPL 2024: ಐಪಿಎಲ್ ಟ್ರೋಫಿ ನೋಡುತ್ತಿದ್ದಂತೆ ಕೈಮುಗಿದ RCB ನಾಯಕ… ಫಾಫ್ ನಡೆಗೆ ಮೆಚ್ಚುಗೆಯ ಮಹಾಪೂರ!

ಕೇವಲ 23 ಎಸೆತಗಳಲ್ಲಿ ಡು ಪ್ಲೆಸಿಸ್ 8 ಬೌಂಡರಿ ಇದ್ದ 35 ರನ್‌ ನೀಡಿ ಮುಸ್ತಫಿಜುರ್ ರಹಮಾನ್ ಬೌಲಿಂಗ್‌ನಲ್ಲಿ ರಚಿನ್‌ ರವೀಂದ್ರನಿಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ನಂತರ ಬಂದ ರಜತ್‌ ಪಟಿದಾರ್‌ ಸಹ ಸೊನ್ನೆ ಸುತ್ತಿದರು. ೫ನೇ ಓವರ್‌ನಲ್ಲಿ ಡು ಪ್ಲೆಸಿಸ್ ಮತ್ತು ಪಟಿದಾರ್‌ ವಿಕೆಟ್‌ ಪಡೆದ ಮುಸ್ತಫಿಜುರ್ RCBಗೆ ಆರಂಭಿಕ ಆಘಾತ ನೀಡಿದರು. ನಂತರ ಬಂದ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ದೀಪಕ್‌ ಚಹಾರ್‌ ಬೌಲಿಂಗ್‌ನಲ್ಲಿ ಧೋನಿಗೆ ಕ್ಯಾಚ್‌ ನೀಡಿ ನಿರಾಸೆ ಮೂಡಿಸಿದರು. ನಂತರ ವಿರಾಟ್‌ ಕೊಹ್ಲಿ ಕೂಡ 21 ಗಳಿಸಿ ಔಟಾದರು.

ಇದನ್ನೂ ಓದಿ: RCB Vs CSK : ಉದ್ಘಾಟನಾ ಸಮಾರಂಭದಲ್ಲಿ ಟೈಗರ್ ಶ್ರಾಫ್ ಮತ್ತು ಅಕ್ಷಯ್ ಕುಮಾರ್, ಪ್ರೇಕ್ಷಕರನ್ನು ಬೆರಗುಗೊಳಿಸಿದ ಪವರ್ ಫುಲ್ ಪ್ರದರ್ಶನ

ಸದ್ಯದ ಮಾಹಿತಿ ಪ್ರಕಾರ RCB 12 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 78 ರನ್‌ ಗಳಿಸಿದೆ. ಕ್ಯಾಮರೂನ್ ಗ್ರೀನ್(18) ಸಹ ವಿಕೆಟ್‌ ಕಳೆದುಕೊಂಡಿದ್ದಾರೆ. ಮುಸ್ತಫಿಜುರ್ ರಹಮಾನ್ ಮಾರಕ ಬೌಲಿಂಗ್‌ ದಾಳಿಗೆ RCB ವಿಕೆಟ್‌ಗಳ ಮೇಲೆ ವಿಕೆಟ್‌ ಕಳೆದುಕೊಳ್ಳುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News