16 ಸಿಕ್ಸರ್, 137 ರನ್… ಅಂದು RCB ಕೈಬಿಟ್ಟಿದ್ದ 24ರ ಹರೆಯದ ಈ ಬ್ಯಾಟ್ಸ್’ಮನ್ ಇಂದು ಟಿ20ಯಲ್ಲಿ ಅಬ್ಬರಿಸಿಯೇಬಿಟ್ಟ!

Finn Allen Century vs Pakistan: ಒಂದರ ಹಿಂದೆ ಒಂದರಂತೆ 16 ಸಿಕ್ಸರ್‌’ಗಳನ್ನು ಬಾರಿಸಿದ ಅಲೆನ್, 5 ಬೌಂಡರಿಗಳನ್ನೂ ಸಿಡಿಸಿದ್ದರು. ಅಂದಹಾಗೆ IPL-2024 ಹರಾಜಿನ ಮೊದಲು RCB ಈ ಬ್ಯಾಟ್ಸ್‌ಮನ್‌ನನ್ನು ಬಿಡುಗಡೆ ಮಾಡಿತ್ತು.

Written by - Bhavishya Shetty | Last Updated : Jan 17, 2024, 09:10 AM IST
    • ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಮೂರನೇ ಟಿ20 ಪಂದ್ಯ
    • ಯುವ ಬ್ಯಾಟ್ಸ್‌’ಮನ್ ಫಿನ್ ಅಲೆನ್ ರನ್ ಮಳೆ ಸುರಿಸಿದ್ದಾರೆ.
    • 62 ಎಸೆತಗಳಲ್ಲಿ 137 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.
16 ಸಿಕ್ಸರ್, 137 ರನ್… ಅಂದು RCB ಕೈಬಿಟ್ಟಿದ್ದ 24ರ ಹರೆಯದ ಈ ಬ್ಯಾಟ್ಸ್’ಮನ್ ಇಂದು ಟಿ20ಯಲ್ಲಿ ಅಬ್ಬರಿಸಿಯೇಬಿಟ್ಟ! title=
finn allen

Finn Allen Century vs Pakistan: ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಮೂರನೇ ಟಿ20 ಪಂದ್ಯದಲ್ಲಿ ಯುವ ಬ್ಯಾಟ್ಸ್‌’ಮನ್ ಫಿನ್ ಅಲೆನ್ ರನ್ ಮಳೆ ಸುರಿಸಿದ್ದಾರೆ. 62 ಎಸೆತಗಳಲ್ಲಿ 137 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.

ಒಂದರ ಹಿಂದೆ ಒಂದರಂತೆ 16 ಸಿಕ್ಸರ್‌’ಗಳನ್ನು ಬಾರಿಸಿದ ಅಲೆನ್, 5 ಬೌಂಡರಿಗಳನ್ನೂ ಸಿಡಿಸಿದ್ದರು. ಅಂದಹಾಗೆ IPL-2024 ಹರಾಜಿನ ಮೊದಲು RCB ಈ ಬ್ಯಾಟ್ಸ್‌ಮನ್‌ನನ್ನು ಬಿಡುಗಡೆ ಮಾಡಿತ್ತು.

ಇದನ್ನೂ ಓದಿ: ಮೂವರು ಬೇರೆ ರಾಜ್ಯದ ಯುವಕರಿಂದ ಕನ್ನಡದ‌ ಯುವಕನ ಮೇಲೆ ಹಲ್ಲೆ‌ ವಿಡಿಯೋ ಫುಲ್ ವೈರಲ್!

ಪಾಕಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್ ಫಿನ್ ಅಲೆನ್ 48 ಎಸೆತಗಳಲ್ಲಿ ದಾಖಲೆಯ ಶತಕ ಸಿಡಿಸಿದ್ದಾರೆ. ಶಾಹೀನ್ ಅಫ್ರಿದಿಯಿಂದ ಹಿಡಿದು ಮೊಹಮ್ಮದ್ ವಾಸಿಂ ಜೂನಿಯರ್ ವರೆಗಿನ ಪ್ರತಿ ಬೌಲರ್‌ಗಳನ್ನು ಅಲೆನ್ ಬ್ಯಾಟ್ ಮೂಲಕ ಬೆಂಡೆತ್ತಿದ್ದಾರೆ ಎಂದೇ ಹೇಳಬಹುದು. ಅದರಲ್ಲಿ ಹ್ಯಾರಿಸ್ ರೌಫ್ ಈ ಪಂದ್ಯದಲ್ಲಿ ಪಾಕಿಸ್ತಾನದ ಅತ್ಯಂತ ದುಬಾರಿ ಬೌಲರ್ ಎಂದೆನಿಸಿಕೊಂಡರು. 4 ಓವರ್ ಪೂರ್ಣಗೊಳಿಸಿದ ಅವರು 60 ರನ್ ನೀಡಿ 2 ವಿಕೆಟ್ ಪಡೆದರು.

ಅಫ್ರಿದಿ 4 ಓವರ್‌ಗಳಲ್ಲಿ 1 ವಿಕೆಟ್ ಪಡೆದು 43 ರನ್ ನೀಡಿದರೆ, ಮೊಹಮ್ಮದ್ ನವಾಜ್ 4 ಓವರ್’ಗಳಲ್ಲಿ 44 ರನ್ ನೀಡಿ 1 ವಿಕೆಟ್ ಕಿತ್ತರು. ಇನ್ನು, ಜಮಾನ್ ಖಾನ್ ಮತ್ತು ಮೊಹಮ್ಮದ್ ವಾಸಿಮ್ ಜೂನಿಯರ್ ಕ್ರಮವಾಗಿ 37 ಮತ್ತು 35 ರನ್ಗಳನ್ನು ಬಿಟ್ಟುಕೊಟ್ಟು ತಲಾ ಒಂದು ವಿಕೆಟ್ ಕಬಳಿಸಿದರು.

ಇದನ್ನೂ ಓದಿ: ಈ ಬಾರಿ ಬಿಗ್ ಬಾಸ್ ವಿನ್ನರ್’ಗೆ ಅದೃಷ್ಟವೋ ಅದೃಷ್ಟ! ಗೆದ್ದವರಿಗೆ ಸಿಗುವ ಬಹುಮಾನ ಮೊತ್ತ ಎಷ್ಟು

RCB ನಷ್ಟ:

ಐಪಿಎಲ್ 2024 ರ ಹರಾಜಿನ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫಿನ್ ಅಲೆನ್ ಅವರನ್ನು ಬಿಡುಗಡೆ ಮಾಡಿದೆ. ಫಿನ್ ಅಲೆನ್ ಐಪಿಎಲ್-2023 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. ಫ್ರಾಂಚೈಸಿ ಅವರನ್ನು 80 ಲಕ್ಷ ರೂ.ಗೆ ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ, ಋತುವಿನಲ್ಲಿ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ. ಐಪಿಎಲ್-2024ರ ಮೂಲ ಬೆಲೆಯನ್ನು ರೂ 75 ಲಕ್ಷದಲ್ಲಿ ಇಟ್ಟುಕೊಂಡಿದ್ದರು. ಆದರೆ ಯಾವುದೇ ಫ್ರಾಂಚೈಸಿ ಅವರನ್ನು ಖರೀದಿಸಲು ಆಸಕ್ತಿ ತೋರಿಸಲಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News