ಬೆಂಗಳೂರು: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 36ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಇಂದು ಸಂಜೆ 7.30ಕ್ಕೆ ಮುಂಬೈನ ಬ್ರಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇದನ್ನು ಓದಿ: Delhi Capitals vs Rajasthan Royals: ಬಟ್ಲರ್ ಅಬ್ಬರದ ಶತಕ, ರಾಜಸ್ಥಾನಕ್ಕೆ 15 ರನ್ ಗಳ ರೋಚಕ ಗೆಲುವು
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಪ್ರದರ್ಶನ ನೀಡುತ್ತಿದ್ದು, ಮೊದಲ ಬಾರಿಗೆ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಆಟವಾಡುತ್ತಿದೆ. ಟೂರ್ನಿಯ ಆರಂಭದಲ್ಲಿ ಸೋಲು ಕಂಡಿದ್ದರೂ ಸಹ ಮುಂದಿನ ದಿನಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬೆಂಗಳೂರು ತಂಡ ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿದೆ.
ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ ಏಳು ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಸಾಧಿಸಿ, ಎರಡರಲ್ಲಿ ಸೋಲನ್ನು ಅನುಭವಿಸಿದೆ. ಈ ಮೂಲಕ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಇನ್ನು ಸನ್‌ರೈಸರ್ಸ್ ತಂಡವೂ ಸಹ ಮೊದಲೆರಡು ಪಂದ್ಯಗಳಲ್ಲಿ ಸೋಲನ್ನು ಕಂಡು ಭಾರಿ ನಿರಾಸೆಯನ್ನು ಉಂಟುಮಾಡಿತ್ತು. ಆ ಬಳಿಕ ಎಚ್ಚೆತ್ತ ಹೈದರಾಬಾದ್ ನಂತರ ನಡೆದ 4 ಪಂದ್ಯಗಳಲ್ಲಿ ಸಾಲುಸಾಲಾಗಿ ಜಯವನ್ನು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
ಇದನ್ನು ಓದಿ: ನೋ ಬಾಲ್ ವಿವಾದ: ಅಂಪೈರ್ ವಿರುದ್ಧ ರಿಷಭ್ ಪಂತ್ ಅಸಮಾಧಾನ, ವಿಡಿಯೋ ವೈರಲ್
ಹೀಗೆ ಯಶಸ್ಸಿನ ಹಾದಿಯಲ್ಲಿರುವ ಈ ಎರಡೂ ತಂಡಗಳ ಮುಖಾಮುಖಿ ಪಂದ್ಯದಲ್ಲಿ ಯಾವ ತಂಡ ಜಯ ಸಾಧಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.
ಸಂಭಾವ್ಯ ಆಟಗಾರರ ಪಟ್ಟಿ:
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಫಾಫ್ ಡು ಪ್ಲೆಸಿಸ್ (ನಾಯಕ), 2 ಅನುಜ್ ರಾವತ್, 3 ವಿರಾಟ್ ಕೊಹ್ಲಿ, 4 ಗ್ಲೆನ್ ಮ್ಯಾಕ್ಸ್‌ವೆಲ್, 5 ಸುಯಶ್ ಪ್ರಭುದೇಸಾಯಿ, 6 ಶಹಬಾಜ್ ಅಹ್ಮದ್, 7 ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), 8 ವನಿಂದು ಹಸರಂಗ, 9 ಹರ್ಷಲ್ ಪಟೇಲ್, 10, ಜೋಶ್ ಹಜಲ್‌ವುಡ್, ಸಿರಾಜ್
ಸನ್ ರೈಸರ್ಸ್ ಹೈದರಾಬಾದ್:
ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಶಶಾಂಕ್ ಸಿಂಗ್, 7 ಜೆ ಸುಚಿತ್ / ಶ್ರೇಯಸ್ ಗೋಪಾಲ್, 8 ಭುವನೇಶ್ವರ್ ಕುಮಾರ್, 9 ಮಾರ್ಕೊ ಜಾನ್ಸೆನ್, 10, ಟಿ ನಟರಾಜನ್, 11 ಉಮ್ರಾನ್ ಮಲಿಕ್