CSK vs RCB, IPL 2024: ಚೆನ್ನೈ ವಿರುದ್ಧ ಗೆದ್ದು ಶುಭಾರಂಭ ಮಾಡುತ್ತಾ RCB..?

CSK vs RCB, IPL 2024: ಟೂರ್ನಿ ಆರಂಭಕ್ಕೂ ಮುನ್ನವೇ ಚೆನ್ನೈ ತಂಡದ ನಾಯಕತ್ವ ಸ್ಥಾನದಿಂದ ಧೋನಿ ಕೆಳಗಿಳಿದಿದ್ದು, ಋತುರಾಜ್‌ ಗಾಯಕ್ವಾಡ್‌ ಕ್ಯಾಪ್ಟನ್‌ ಆಗಿ ತಂಡವನ್ನು ಮುನ್ನೆಡೆಸುತ್ತಿದ್ದಾರೆ. ಉಭಯ ತಂಡಗಳು ಬಲಿಷ್ಠವಾಗಿರುವ ಕಾರಣ ರೋಚಕ ಸೆಣಸಾಟ ನಡೆಯುವ ಸಾಧ್ಯತೆ ಇದೆ. ​

Written by - Puttaraj K Alur | Last Updated : Mar 22, 2024, 04:33 PM IST
  • ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಇಂದಿನಿಂದ ಐಪಿಎಲ್‌ ಹಬ್ಬ ಶುರುವಾಗಲಿದೆ
  • ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮುಖಾಮುಖಿ
  • ಉಭಯ ತಂಡಗಳು ಬಲಿಷ್ಠವಾಗಿರುವುದರಿಂದ ರೋಚಕ ಸೆಣಸಾಟ ನಡೆಯುವ ನಿರೀಕ್ಷೆಯಿದೆ
CSK vs RCB, IPL 2024: ಚೆನ್ನೈ ವಿರುದ್ಧ ಗೆದ್ದು ಶುಭಾರಂಭ ಮಾಡುತ್ತಾ RCB..? title=
CSK vs RCB

ಚೆನ್ನೈ: ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಇಂದಿನಿಂದ ಐಪಿಎಲ್‌ ಹಬ್ಬ ಶುರುವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್‌ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್‌ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನವೇ ಚೆನ್ನೈ ತಂಡದ ನಾಯಕತ್ವ ಸ್ಥಾನದಿಂದ ಎಂ.ಎಸ್.ಧೋನಿ ಕೆಳಗಿಳಿದಿದ್ದು, ಋತುರಾಜ್‌ ಗಾಯಕ್ವಾಡ್‌ ಕ್ಯಾಪ್ಟನ್‌ ಆಗಿ ತಂಡವನ್ನು ಮುನ್ನೆಡೆಸುತ್ತಿದ್ದಾರೆ. ಉಭಯ ತಂಡಗಳು ಬಲಿಷ್ಠವಾಗಿರುವ ಕಾರಣ ರೋಚಕ ಸೆಣಸಾಟ ನಡೆಯುವ ಸಾಧ್ಯತೆ ಇದೆ. 

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಗೆದ್ದು ಶುಭಾರಂಭ ಮಾಡುವ ನಿರೀಕ್ಷೆಯಲ್ಲಿ RCB ಇದೆ. ಅತ್ತ ಹೊಸ ನಾಯಕನನ್ನು ಪಡೆದಿರುವ ಚೆನ್ನೈ ಕೂಡ ಗೆಲುವಿಗಾಗಿ ರಣತಂತ್ರ ರೂಪಿಸಿ ಕಣಕ್ಕಿಳಿಯುತ್ತಿದೆ. ಕಳೆದ ವಿಶ್ವಕಪ್‌ ಟೂರ್ನಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ್ದ ನ್ಯೂಜಿಲ್ಯಾಂಡ್‌ನ ರಚಿನ್‌ ರವೀಂದ್ರ ಚೆನ್ನೈ ತಂಡದಲ್ಲಿ ಆಡಲಿದ್ದಾರೆ. ಉಭಯ ತಂಡಗಳಲ್ಲಿ ಉತ್ತಮ ಬ್ಯಾಟ್ಸಮನ್ಸ್‌ಗಳು, ಬೌಲರ್‌ಗಳು, ಫೀಲ್ಡರ್‌ಗಳಿದ್ದಾರೆ. ಹೀಗಾಗಿ ಬಲಿಷ್ಠ ತಂಡಗಳ ಈ ರೋಚಕ ಸೆಣಸಾಟದಿಂದ ಕ್ರಿಕೆಟ್‌ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ದೊರೆಯಲಿದೆ. ಹೀಗಾಗಿ ಇಂದಿನ ಮಹತ್ವದ ಪಂದ್ಯದಲ್ಲಿ ಯಾರು ಗೆದ್ದು ಶುಭಾರಂಭ ಮಾಡಲಿದ್ದಾರೆ ಅನ್ನೋದರ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ. 

ಇದನ್ನೂ ಓದಿ: ಈ ಬಾರಿ IPL ಟ್ರೋಫಿ ಗೆಲ್ಲೋದು ಇದೇ ತಂಡ, ಡೌಟೇ ಬೇಡ: ಸೀಸನ್ ಆರಂಭಕ್ಕೂ ಮುನ್ನ ಭವಿಷ್ಯ ನುಡಿದ ಸ್ಟಾರ್ ಬೌಲರ್

ಎರಡೂ ತಂಡಗಳ ಸ್ಕ್ವಾಡ್‌ ಇಂತಿದೆ ನೋಡಿ

ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್ (ನಾಯಕ), ಎಂಎಸ್ ಧೋನಿ (ವಿಕೆಟ್‌ ಕೀಪರ್), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಸಮೀರ್ ರಿಜ್ವಿ, ಡೆರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮಹೇಶ್ ತೀಕ್ಷಣ, ಮೊಯಿನ್ ಅಲಿ, ಡೆವೊನ್ ಕಾನ್ವೇ, ಮುಸ್ತಫಿಜುರ್ ರೆಹಮಾನ್, ಮಿಚೆಲ್ ಸ್ಯಾಂಟ್ನರ್, ತುಷಾರ್ ದೇಶಪಾಂಡೆ, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಮುಖೇಶ್ ಚೌಧರಿ, ಸಿಮರ್ಜೀತ್ ಸಿಂಗ್, ಆರ್‌ಎಸ್ ಹಂಗರ್ಗೇಕರ್, ಶೇಕ್ ರಶೀದ್, ನಿಶಾಂತ್ ಸಿಂಧು, ಅರವೆಲ್ಲಿ ಅವನೀಶ್ 

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್‌ ಕೀಪರ್), ವಿರಾಟ್‌ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್, ಮಹಿಪಾಲ್ ಲೊಮ್ರೋರ್, ಅಲ್ಜಾರಿ ಜೋಸೆಫ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ರೀಸ್ ಟೋಪ್ಲಿ, ಟಾಮ್ ಕರ್ರಾನ್, ಸ್ವಪ್ನಿಲ್ ಸಿಂಗ್, ವಿಜಯ್‌ಕುಮಾರ್ ವೈಶಾಕ್, ಲಾಕಿ ಫರ್ಗುಸನ್, ಮಯಾಂಕ್ ದಾಗರ್, ವಿಲ್ ಜ್ಯಾಕ್ಸ್, ಸುಯಶ್ ರಾಸ್ವಾ, ಪ್ರಭು ಮನೋಜ್ ಭಾಂಡಗೆ, ಯಶ್ ದಯಾಳ್, ಸೌರವ್ ಚೌಹಾಣ್, ರಾಜನ್ ಕುಮಾರ್, ಹಿಮಾಂಶು ಶರ್ಮಾ ‌

ಐಪಿಎಲ್‌ ಪಂದ್ಯ: 01
ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
ಸ್ಥಳ: ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
ಸಮಯ: ರಾತ್ರಿ 8 ಗಂಟೆಗೆ

ಇದನ್ನೂ ಓದಿ: Mohammed Shami: ಕ್ರಿಕೆಟಿಗ 'ಶಮಿ ಮರ್ಡರ್ ಪ್ಲಾನ್..'! ಬಿಜೆಪಿ ಸರ್ಕಾರ ಮತ್ತು ಯುಪಿ ಪೊಲೀಸರ ಸಹಾಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News