ಎಷ್ಟು ಬಾರಿ ಪ್ಲೇ ಆಫ್‌ ಪ್ರವೇಶಿಸಿದೆ ಗೊತ್ತಾ RCB: ʼಈ ಸಲ ಕಪ್‌ ನಮ್ದೇʼ ಆಗುತ್ತಾ?

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡವು ಐದು ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಸಹ ನಾಲ್ಕು ಚಾರಿ ಚಾಂಪಿಯನ್ಸ್‌ ಆಗಿದೆ. ಆದರೆ ಇಲ್ಲಿವರೆಗೆ ನಡೆದ ಟೂರ್ನಿಯಲ್ಲಿ ಆರ್‌ಸಿಬಿ ತಂಡ ಕಪ್‌ ಗೆಲ್ಲದೆ ಪರದಾಡುತ್ತಿದೆ. ಇಲ್ಲಿ ಆಶ್ಚರ್ಯಪಡುವ ವಿಷಯವೆಂದರೆ ಪ್ಲೇ ಆಫ್‌ ತಂಡಕ್ಕೆ ಎಂಟು ಬಾರಿ ಪ್ರವೇಶ ಪಡೆದಿರುವ ಆರ್‌ಸಿಬಿ ಇಲ್ಲಿವರೆಗೆ ಕಪ್‌ ಗೆಲ್ಲಲು ಸಾಧ್ಯವಾಗಿಲ್ಲ. 

Written by - Bhavishya Shetty | Last Updated : May 22, 2022, 12:31 PM IST
  • ಎಂಟು ಬಾರಿ ಪ್ಲೇ ಆಫ್‌ ಪ್ರವೇಶಿಸಿದ ಆರ್‌ಸಿಬಿ
  • ಈ ಸಲ ಕಪ್‌ ನಮ್ದೇ ಆಗುತ್ತಾ!
  • ಇಲ್ಲಿದೆ ಆರ್‌ಸಿಬಿಯ ಪ್ಲೇ ಆಫ್‌ ಜರ್ನಿ
ಎಷ್ಟು ಬಾರಿ ಪ್ಲೇ ಆಫ್‌ ಪ್ರವೇಶಿಸಿದೆ ಗೊತ್ತಾ RCB: ʼಈ ಸಲ ಕಪ್‌ ನಮ್ದೇʼ ಆಗುತ್ತಾ?  title=
Royal Challengers Bengaluru

ಸದ್ಯ ಐಪಿಎಲ್‌ ಹದಿನೈದನೇ ಆವೃತ್ತಿ ನಡೆಯುತ್ತಿದೆ. ಈ ಆವೃತ್ತಿ ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯದ ಹಂತ ತಲುಪಲಿದ್ದು, ಪ್ಲೇ ಆಫ್‌ ಪಂದ್ಯಗಳು ಇನ್ನುಮುಂದೆ ನಡೆಯಲಿವೆ. ಈಗಾಗಲೇ ಪ್ಲೇ ಆಫ್‌ ಪ್ರವೇಶಿಸಿರುವ ರಾಜಸ್ಥಾನ ರಾಯಲ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಗುಜರಾತ್‌ ಟೈಟಾನ್ಸ್‌ ಮತ್ತು ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳು ಕಾದಾಟ ನಡೆಸಲಿವೆ. 

ಇದನ್ನು ಓದಿ: Bay Leaf: ಅಡುಗೆ ಮನೆಯಲ್ಲಿ ಸಿಗೋ ಈ ಎಲೆಯಿಂದ ದೇಹದ ಬೊಜ್ಜು ಕರಗಿಸಲು ಸಾಧ್ಯ

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಐದು ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಕೂಡ ನಾಲ್ಕು ಬಾರಿ ಚಾಂಪಿಯನ್‌ ಆಗಿದೆ. ಆದರೆ ಇಲ್ಲಿವರೆಗೆ ನಡೆದ ಟೂರ್ನಿಗಳಲ್ಲಿ ಆರ್‌ಸಿಬಿ ತಂಡ ಕಪ್‌ ಗೆಲ್ಲದೇ ಪರದಾಡುತ್ತಿದೆ. ಇಲ್ಲಿ ಆಶ್ಚರ್ಯಪಡುವ ವಿಷಯವೆಂದರೆ ಪ್ಲೇ ಆಫ್‌ ಹಂತಕ್ಕೆ ಎಂಟು ಬಾರಿ ಪ್ರವೇಶ ಪಡೆದಿರುವ ಆರ್‌ಸಿಬಿ ಇಲ್ಲಿವರೆಗೆ ಕಪ್‌ ಗೆಲ್ಲಲು ಸಾಧ್ಯವಾಗಿಲ್ಲ. 

ಈ ಸಲ ಕಪ್‌ ನಮ್ದೇ ಎಂದು ಪ್ರತೀ ವರ್ಷ ಐಪಿಎಲ್‌ ಪ್ರಾರಂಭವಾದಾಗ ಅಭಿಮಾನಿಗಳು ಹೇಳುತ್ತಾರೆ. ಆದರೆ ಎಂಟು ಬಾರಿ ಪ್ಲೇ ಆಫ್‌ ಪ್ರವೇಶಿಸಿದ್ದರೂ ಸಹ ಕಪ್‌ ಗೆಲ್ಲುವಲ್ಲಿ ವಿಫಲವಾಗಿದೆ. ಈ ಬಾರಿಯೂ ಐಪಿಎಲ್‌ನ ಪ್ಲೇ ಆಫ್‌ ಹಂತಕ್ಕೆ ಪ್ರವೇಶ ಪಡೆದಿರುವ ಆರ್‌ಸಿಬಿ ಕಪ್‌ ಗೆಲ್ಲುತ್ತಾ ಎಂಬುದನ್ನು ಕಾದುನೋಡಬೇಕಿದೆ. 

ಈ ಬಾರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಪ್ಲೇ ಆಫ್‌ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್‌ ರಾಹುಲ್‌ ನಾಯಕತ್ವದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು ಎದುರಿಸಲಿದೆ. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಲಕ್ನೋ ಈ ಬಾರಿ ಫೈನಲ್‌ ಪ್ರವೇಶಿಸಲು ಕಾತುರದಿಂದ ಕಾಯುತ್ತಿದೆ. 

ಫೈನಲ್‌ ಪ್ರವೇಶಿಸಬೇಕಾದರೆ ಬೆಂಗಳೂರು ತಂಡ ಇನ್ನೂ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಒಂದು ವೇಳೆ ಲಕ್ನೋ ವಿರುದ್ಧ ಗೆದ್ದರೆ, ಗುಜರಾತ್‌ ಅಥವಾ ರಾಜಸ್ಥಾನ ವಿರುದ್ಧ ಕ್ವಾಲಿಫೈಯರ್‌ ಸುತ್ತಿನಲ್ಲಿ ಗೆಲುವು ಸಾಧಿಸಬೇಕು. ಹಾಗಾದರೆ ಫೈನಲ್‌ಗೆ ಪ್ರವೇಶ ಪಡೆಯಬಹುದು. 

ಇದನ್ನು ಓದಿ: ಶನಿ ಜಯಂತಿಯ ದಿನ ಈ ರೀತಿ ಕಪ್ಪು ಬಣ್ಣದ ದಾರ ಧರಿಸಿ, ರಾಹು-ಕೇತು ಪ್ರಕೊಪದಿಂದ ಕೂಡ ಮುಕ್ತಿ

ಒಟ್ಟಾರೆ ಈ ಬಾರಿಯಾದ್ರು ಆರ್‌ಸಿಬಿ ಕಪ್‌ ಗೆದ್ದು ಅಭಿಮಾನಿಗಳಿಗೆ ಸಂತಸ ನೀಡುತ್ತಾ ಎಂಬ ಕುತೂಹಲ ಮೂಡಿದೆ. ಇನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News