Karnataka PSI recruitment scam: ಕಲಬುರಗಿ ನಗರದ ಅಶೋಕ್ ನಗರ ಠಾಣೆಯಲ್ಲಿ ೫, ಸ್ಟೆಷನ್ ಬಜಾರ್ ಠಾಣೆಯಲ್ಲಿ ೨, ಚೌಕ್ ಠಾಣೆಯಲ್ಲಿ, ಧಾರವಾಡದ ಸಬ್ ಅರ್ಬನ್, ತುಮಕೂರಿನ ಕ್ಯಾತಸಂದ್ರ ಹಾಗೂ ಬೆಂಗಳೂರಿನ ರಾಮಮೂರ್ತಿ ನಗರ ಠಾಣೆಗಳಲ್ಲಿ ದಾಖಲಾಗಿರುವ ತಲಾ ಒಂದೊಂದು ಎಫ್ಐಆರ್ ಮತ್ತು ಆರೋಪ ಪಟ್ಟಿಯನ್ನು ಒಟ್ಟಾಗಿಸಬೇಕು ಎಂದು ಆರ್.ಡಿ.ಪಾಟೀಲ್ ಮನವಿ ಮಾಡಿದ್ದ.
PSI recruitment scam: ಅಕ್ರಮದಲ್ಲಿ ಭಾಗಿಯಾಗುವುದು, ಆರೋಪಿಗಳನ್ನು ರಕ್ಷಿಸುವುದು ಬಿಜೆಪಿಯ ಜಾಯಮಾನ ಇರಬಹುದು, ಆದರೆ ಕಾಂಗ್ರೆಸ್ ಯಾವುದೇ ಅಕ್ರಮವನ್ನು ಸಹಿಸುವುದಿಲ್ಲವೆಂದು ಕಾಂಗ್ರೆಸ್ ಟೀಕಿಸಿದೆ.
ಈಗ ಅವರು ಪೊಲೀಸ್ ಇಲಾಖೆಯ ಯಾವುದೇ ಪರೀಕ್ಷೆಯಲ್ಲಿ ಭಾಗಿಯಾಗದಂತೆ ಆದೇಶ ಹೊರಡಿಸಿದೆ.ಜಾಗೃತ್, ಗಜೇಂದ್ರ, ಸೋಮನಾಥ್ ಮಲ್ಲಿಕಾರ್ಜುನಯ್ಯ ಹಿರೇಮಠ ರಘವೀರ್, ಚೇತನ್ ಕುಮಾರ್, ವೆಂಕಟೇಶ್ ಗೌಡ, ಮನೋಜ್ ಮನುಕುಮಾರ್, ಸಿದ್ದಲಿಂಗಪ್ಪ, ಮಮತೇಶ್ ಗೌಡ, ಯಶವಂತಗೌಡ ನಾರಾಯಣ್, ನಾಗೇಶ್ ಗೌಡ, ಮಧು ಸೇರಿದಂತೆ 52 ಜನರನ್ನು ಡಿಬಾರ್ ಮಾಡಿದೆ.
#40PercentSarkara: ಚುನಾವಣೆಗೆ ಬಂಡವಾಳ ಕ್ರೋಡೀಕರಣಕ್ಕಾಗಿ 40% ಕಮಿಷನ್ ದಂಧೆಯನ್ನು ಗ್ರಾಮಪಂಚಾಯ್ತಿಗೂ ತಲುಪಿಸಿದ ಕೀರ್ತಿ ಬಸವರಾಜ ಬೊಮ್ಮಾಯಿಯವರಿಗೆ ಸಲ್ಲುತ್ತದೆ! ಎಂದು ಕಾಂಗ್ರೆಸ್ ಟೀಕಿಸಿದೆ.
545 ಪಿಎಸ್ಐ ಹುದ್ದೆಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ 2 ವಿಡಿಯೋ ಹಾಗೂ ಒಂದು ಫೋಟೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಕನಕಗಿರಿ ಬಿಜೆಪಿ ಶಾಸಕ ಬಸವರಾಜ್ ದಡೇಸುಗೂರು ಭ್ರಷ್ಟಾಚಾರ ನಡೆಸಿದ್ದಾರೆ. ಆಡಿಯೋ ವೈರಲ್ ಆದ ಬಳಿಕ ಹಣ ನೀಡಿ ಹೇಳಿಕೆಯನ್ನು ಬೇರೆ ರೀತಿ ಹೇಳಿಸಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಗಂಭೀರ ಆರೋಪ ಮಾಡಿದರು.
ಇತ್ತೀಚೆಗಷ್ಟೆ ರಾಜ್ಯದಲ್ಲಿ 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ರಾಜ್ಯ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲೂ ದೊಡ್ಡಮಟ್ಟದ ಸದ್ದು ಮಾಡಿತ್ತು. ಈ ಪ್ರಕರಣ ಇನ್ನೂ ತನಿಖಾ ಹಂತದಲ್ಲಿ ಇರುವಾಗಲೇ ಮತ್ತೊಂದು ಇಲಾಖೆಯೊಂದರ ಪರೀಕ್ಷೆಯಲ್ಲಿ ಅಕ್ರಮದ ವಾಸನೆ ಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಗೋಕಾಕ್ ಮೂಲದ ಕಿಂಗ್ಪಿನ್ ಕಲಬುರಗಿಗೆ ಬಂದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದು, ಕಲಬುರಗಿ ಪೊಲೀಸರಿಗೆ ಪ್ರಕರಣ ತಲೆನೋವಾಗಿ ಪರಿಣಮಿಸಿದೆ.
ಜಕ್ಕೂರಿನ ಶಂಭುಲಿಂಗ ಹಾಗೂ ಬೊಮ್ಮಸಂದ್ರದ ಹೂಸ್ಕೂರ್ ನಿವಾಸಿ ಆನಂದ್ ಎಂಬುವರ ಮನೆಗಳ ಮೇಲೆ ಸಿಐಡಿ ತನಿಖಾಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪತ್ರಗಳು ದೊರೆತಿದೆ ಎಂದು ಹೇಳಲಾಗುತ್ತಿದ್ದು ಅವುಗಳನ್ನು ಸೀಜ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.