ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧನವಾಗಿರುವ ಎಡಿಜಿಪಿ ಅಮೃತ್ ಪೌಲ್ ಅವರ ಆಪ್ತರ ಮನೆಗಳ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಜಕ್ಕೂರಿನ ಶಂಭುಲಿಂಗ ಹಾಗೂ ಬೊಮ್ಮಸಂದ್ರದ ಹೂಸ್ಕೂರ್ ನಿವಾಸಿ ಆನಂದ್ ಎಂಬುವರ ಮನೆಗಳ ಮೇಲೆ ಸಿಐಡಿ ತನಿಖಾಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪತ್ರಗಳು ದೊರೆತಿದೆ ಎಂದು ಹೇಳಲಾಗುತ್ತಿದ್ದು ಅವುಗಳನ್ನು ಸೀಜ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ- Siddaramosthava: ಸಿದ್ದರಾಮಯ್ಯ ‘ಅಮೃತ ಮಹೋತ್ಸವ’ಕ್ಕೆ ಸಿದ್ಧಗೊಂಡ ಬೃಹತ್ ವೇದಿಕೆ
ಜಕ್ಕೂರಿನ ಶಂಭುಲಿಂಗ ಅವರು ರಾಯಚೂರು ಮೂಲದ ಎಎಸ್ಐ ಅವರ ಮಗನಾಗಿದ್ದು ಬೆಂಗಳೂರಿಗೆ ಬಂದು ಕೇವಲ 10 ವರ್ಷವಾಗಿದೆ. ಈತ ಜಕ್ಕೂರಿನಲ್ಲಿ 6 ಕೋಟಿ ಮೌಲ್ಯದ ಫ್ಲ್ಯಾಟ್ ಹಾಗೂ 15 ಕೋಟಿಗೂ ಅಧಿಕ ಲ್ಯಾಂಡನ್ನ ಹೊಂದಿದ್ದಾನೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- ಹುಬ್ಬಳ್ಳಿಯಲ್ಲಿ ಹುಟ್ಟುಹಬ್ಬದ ಪ್ರಯುಕ್ತ 'ಯೂನಿಟಿ ಕೇಕ್ ಕಟ್' ಮಾಡಿದ ಸಿದ್ದರಾಮಯ್ಯ
ಶಂಭುಲಿಂಗ ಅವರು ಕೊಡಿಗೆಹಳ್ಳಿಯಲ್ಲಿ ಕೃಷಿ ಉತ್ಪನ್ನಗಳ ಅಂಗಡಿಯನ್ನು ಹೊಂದಿದ್ದು ಎಡಿಜಿಪಿ ಅಮೃತ್ ಪೌಲ್ ಬೇನಾಮಿಯಾಗಿದ್ದ ಎಂದು ಆರೋಪಿಸಲಾಗಿದೆ.
ಇನ್ನು ಹುಸ್ಕೂರು ಆನಂದ್ ಸಹ ಪೌಲ್ ಜೊತೆ ಸೇರಿ ಕೋಟಿ ಕೋಟಿ ಕೊಳ್ಳೆಹೊಡೆದಿದ್ದಾನೆ ಎನ್ನಲಾಗಿದೆ. ಹುಸ್ಕೂರು ಆನಂದ್ ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.