ಕೇವಲ 86 ರೂಪಾಯಿಗೆ ಫುಲ್ ಬಾಡಿ ಮಸಾಜ್ !ಲಕ್ಸುರಿ ಮಸಾಜ್ ಪಾರ್ಲರ್ ನ ಬಿಗ್ ಆಫರ್ ಇದು !

ಈ ಪಾರ್ಲರ್ ಡಿಟಾಕ್ಸ್ ಮಸಾಜ್‌ಗಳನ್ನು ನೀಡುತ್ತಿದೆ. ಇದರಲ್ಲಿ 80 ನಿಮಿಷಗಳ ಪೂರ್ಣ-ದೇಹದ ಚೈನೀಸ್ ಮೆರಿಡಿಯನ್ ಥೆರಪಿ ಸೇರಿದೆ.ಇದರ ಬೆಲೆ ಕೇವಲ 86 ರೂಪಾಯಿ.ಈ ಮಸಾಜ್ ಪಾರ್ಲರ್ ಜನಪ್ರಿಯ ವಿಮರ್ಶೆ ಮತ್ತು ರೇಟಿಂಗ್ ಅಪ್ಲಿಕೇಶನ್‌ನಲ್ಲಿ ತನ್ನ ವಿಶೇಷ ಸೇವೆಯನ್ನು ಪ್ರಚಾರ ಮಾಡಿದೆ.  

Written by - Ranjitha R K | Last Updated : Jan 30, 2025, 11:17 AM IST
  • ಮೈ ಕೈ ನೋವು, ಸ್ನಾಯು ಬಿಗಿ ಹಿಡಿದಿರುವ ಸಂದರ್ಭಗಳಲ್ಲಿ ಈ ಮಸಾಜ್ ಸಹಕಾರಿ
  • ಈ ಮಸಾಜ್ ಹಸ್ತಚಾಲಿತ ಆಗಿರಬಹುದು ಅಥವಾ ಮೆಷಿನ್ ಗಳನ್ನೂ ಬಳಸಿ ಕೂಡಾ ಮಾಡಬಹುದು.
  • ಆದರೆ ಈ ಸೇವೆ ದುಬಾರಿಯಾಗಿರುತ್ತದೆ.
ಕೇವಲ 86 ರೂಪಾಯಿಗೆ ಫುಲ್ ಬಾಡಿ ಮಸಾಜ್ !ಲಕ್ಸುರಿ ಮಸಾಜ್ ಪಾರ್ಲರ್ ನ ಬಿಗ್ ಆಫರ್ ಇದು ! title=

ದೇಹದ ಸ್ನಾಯುಗಳ ಮೇಲೆ, ಚರ್ಮದ ಮೇಲ್ಮೈಯಲ್ಲಿ ಒತ್ತಡ ಹಾಕಿ ಮಸಾಜ್ ಹಾಕುವುದನ್ನು ಬಾಡಿ ಮಸಾಜ್ ಎಂದು ಕರೆಯಲಾಗುತ್ತದೆ. ಮೈ ಕೈ ನೋವು, ಸ್ನಾಯು ಬಿಗಿ ಹಿಡಿದಿರುವ ಸಂದರ್ಭಗಳಲ್ಲಿ ಈ ಮಸಾಜ್ ಸಹಕಾರಿಯಾಗಿರುತ್ತದೆ. ಅಲ್ಲದೆ ಒತ್ತಡ ನಿವಾರಣೆಗೂ ಇದು ಸಹಾಯ ಮಾಡುತ್ತದೆ. ಈ ಮಸಾಜ್ ಹಸ್ತಚಾಲಿತ ಆಗಿರಬಹುದು ಅಥವಾ ಮೆಷಿನ್ ಗಳನ್ನೂ ಬಳಸಿ ಕೂಡಾ ಮಾಡಬಹುದು. ಆದರೆ ಈ ಸೇವೆ ದುಬಾರಿಯಾಗಿರುತ್ತದೆ. ಆದರೆ ಇಲ್ಲೊಂದು ಮಸಾಜ್ ಪಾರ್ಲರ್ ಕೇವಲ ೮೬ ರುಪಾಯಿಗೆ ಬಾಡಿ ಮಸಾಜ್ ನೀಡುವ ಆಫರ್ ಜಾರಿ ಮಾಡಿದೆ. ಈ ಆಫಾರ್ ಜಾರಿ ಮಾಡುತ್ತಿದ್ದ ಹಾಗೆಯೇ ಪಾರ್ಲರ್ ಮುಂದೆ ಗ್ರಾಹಕರ ದೊಡ್ಡ ಸಾಲೇ ನಿಂತಿದೆ.  

ಈ ಪಾರ್ಲರ್ ಡಿಟಾಕ್ಸ್ ಮಸಾಜ್‌ಗಳನ್ನು ನೀಡುತ್ತಿದೆ. ಇದರಲ್ಲಿ 80 ನಿಮಿಷಗಳ ಪೂರ್ಣ-ದೇಹದ ಚೈನೀಸ್ ಮೆರಿಡಿಯನ್ ಥೆರಪಿ ಸೇರಿದೆ.ಇದರ ಬೆಲೆ ಕೇವಲ 86 ರೂಪಾಯಿ.ಈ ಮಸಾಜ್ ಪಾರ್ಲರ್ ಜನಪ್ರಿಯ ವಿಮರ್ಶೆ ಮತ್ತು ರೇಟಿಂಗ್ ಅಪ್ಲಿಕೇಶನ್‌ನಲ್ಲಿ ತನ್ನ ವಿಶೇಷ ಸೇವೆಯನ್ನು ಪ್ರಚಾರ ಮಾಡಿದೆ.

ಇದನ್ನೂ ಓದಿ : Google CEO ಪಿಚೈರನ್ನು ಮೀರಿಸುವ ಸಂಭಾವನೆ - ಕಾರ್ಪೊರೇಟ್ ಕ್ಷೇತ್ರದಲ್ಲೇ ದಾಖಲೆ ಬರೆದ ಈ ವ್ಯಕ್ತಿಯ ವೇತನ ಎಷ್ಟು ಗೊತ್ತಾ?

ಚೀನಾದ ಶೆನ್ಜೆನ್ ನಗರದಲ್ಲಿರುವ ಈ ಮಸಾಜ್ ಪಾರ್ಲರ್ ಅತ್ಯಂತ ಅಗ್ಗದ ದರದಲ್ಲಿ ವಿಶೇಷ ಸೇವೆಯನ್ನು ಪ್ರಾರಂಭಿಸಿದೆ. ಕೆಲವು ಆಯ್ದ ಮಹಿಳೆಯರಿಗೆ ಮಾತ್ರ ಇದರ ಪ್ರಯೋಜನ ಸಿಗಲಿದೆ. ಈ ಮಸಾಜ್ iPhone 16 Pro Max ಅಥವಾ ಐಷಾರಾಮಿ ಕಾರಿನಂತಹ ದುಬಾರಿ ವಸ್ತುಗಳನ್ನು ಹೊಂದಿರುವ ಮಹಿಳೆಯರಿಗೆ ಮಾತ್ರ ನೀಡಲಾಗುವುದು. 

ಯಾವ ಮಹಿಳೆಯರು ಈ ಆಫರ್ ಲಾಭ ಪಡೆಯಬಹುದು ? : 
ಈ ಆಫರ್ ನ ಲಾಭ ಎಲ್ಲಾ ಮಹಿಳೆಯರಿಗೂ ಸಿಗುವುದಿಲ್ಲ. ಈ ಅಗ್ಗದ ಮಸಾಜ್ ಪ್ಯಾಕೇಜ್‌ಗಾಗಿ ಪಾರ್ಲರ್ 27 ವಿಶೇಷ ಷರತ್ತುಗಳನ್ನು ನಿಗದಿಪಡಿಸಿದೆ. ಗ್ರಾಹಕರು ಈ ಷರತ್ತುಗಳಲ್ಲಿ ಒಂದನ್ನಾದರೂ ಪೂರೈಸಬೇಕು.

ಇದನ್ನೂ ಓದಿ :ಸಾಫ್ಟ್ ಡ್ರಿಂಕ್ ನಲ್ಲಿ ಸೇರಿಕೊಂಡಿದೆ ವಿಷ ! ಅಂಗಡಿಗಳಿಗೆ ವಿತರಣೆಯಾದ ಎಲ್ಲಾ ಬಾಟಲಿಗಳನ್ನು ವಾಪಸ್ ತರಿಸಿಕೊಳ್ಳುತ್ತಿರುವ Coca Cola ಕಂಪನಿ

ಇಲ್ಲಿ ಕೆಲವು ಷರತ್ತುಗಳಿವೆ:
1. iPhone 16 Pro Max ಅನ್ನು ಹೊಂದಿರಬೇಕು.
2. ಆಡಿ, ಮರ್ಸಿಡಿಸ್ ಅಥವಾ ಪೋರ್ಷೆಯಂತಹ ಐಷಾರಾಮಿ ಕಾರನ್ನು ಹೊಂದಿರಬೇಕು.
3. ಉನ್ನತ ಸಮುದಾಯದಲ್ಲಿ ಆಸ್ತಿಯನ್ನು ಹೊಂದಿರಬೇಕು.
4. ಲೂಯಿ ವಿಟಾನ್ ಅಥವಾ ಶನೆಲ್ ನಂತಹ ದುಬಾರಿ ಬ್ರ್ಯಾಂಡ್ ಗಳ ಐಷಾರಾಮಿ ಬ್ಯಾಗ್ ಗಳನ್ನು ಇಟ್ಟುಕೊಳ್ಳಬೇಕು.
5. Tencent ಅಥವಾ Huawei ನಂತಹ ತಂತ್ರಜ್ಞಾನ ಕಂಪನಿಗಳಲ್ಲಿ ಕೆಲಸ ಹೊಂದಿರಬೇಕು.
6. ಹಾಂಗ್ ಕಾಂಗ್ ಅಥವಾ ಮಕಾವು ಪೌರತ್ವವನ್ನು ಹೊಂದಿರಬೇಕು.
7. ಅಮೆರಿಕ ಅಥವಾ ಯುರೋಪ್ ಗೆ ಪ್ರಯಾಣಿಸಿರಬೇಕು.

ಸಾಮಾಜಿಕ ಜಾಲತಾಣಗಳಲ್ಲಿ  ನಡೆಯುತ್ತಿದೆ ಭಾರೀ ಚರ್ಚೆ : 
ಈ ವಿಶಿಷ್ಟ ಕೊಡುಗೆಯ ಸುದ್ದಿ ವೈರಲ್ ಆದ ತಕ್ಷಣ, ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ಇದನ್ನು ಶ್ರೀಮಂತರ ವಿಶೇಷ ತಾರತಮ್ಯದ ಯೋಜನೆ ಎಂದು ಪರಿಗಣಿಸುತ್ತಿದ್ದರೆ, ಕೆಲವರು ಇದನ್ನು ದೊಡ್ಡ ಪ್ರಚಾರದ ಸಾಹಸ ಎಂದು ಕರೆಯುತ್ತಿದ್ದಾರೆ. ಒಬ್ಬರ ಆರ್ಥಿಕ ಸ್ಥಿತಿಯು ಮಸಾಜ್ ಪಡೆಯುವ ಅರ್ಹತೆಯನ್ನು ನಿರ್ಧರಿಸುತ್ತದೆಯೇ ಎಂಬ ಬಗ್ಗೆ ಅನೇಕ ಜನರು ಪ್ರಶ್ನೆಗಳನ್ನು ಎತ್ತಿದ್ದಾರೆ? ಆದರೆ, ಈ ಬಗ್ಗೆ ಮಸಾಜ್ ಪಾರ್ಲರ್‌ನಿಂದ ಇದುವರೆಗೆ ಯಾವುದೇ ಹೇಳಿಕೆ ಬಂದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News