ಪಿ‌ಎಸ್‌ಐ​​, ಬಿಟ್​​​ ಕಾಯಿನ್, ಟೆಂಡರ್​ ಹಗರಣಗಳಿಗೆ ಮರುಜೀವ

PSI, Bitcoin, Tender Scams: ಬಿಜೆಪಿ ಸರ್ಕಾರದಲ್ಲಿ ಭಾರೀ ಸದ್ದು ಮಾಡಿದ್ದ ಪಿ‌ಎಸ್‌ಐ ಹಗರಣ, ಬಿಟ್ ಕಾಯಿನ್, ಟೆಂಡರ್ ಹಗರಣಗಳಿಗೆ ಮರುಜೀವ ಬರಲಿದ್ದು, ಯಾವೆಲ್ಲಾ ಅಧಿಕಾರಿಗಳು..ರಾಜಕಾರಣಿಗಳಿಗೆ ಕಂಟಕವಾಗಲಿದೆ.  ಸ್ಕ್ಯಾಮ್​ ರೀ ಓಪನ್​ನ ಸ್ಫೋಟಕ ಸ್ಟೋರಿ ಇಲ್ಲಿದೆ. 

Written by - Yashaswini V | Last Updated : May 25, 2023, 11:22 AM IST
  • ಬಿಜೆಪಿ ಸರ್ಕಾರದಲ್ಲಿ ನಡೆದ ಹಗರಣಗಳು ರೀ ಓಪನ್​..
  • ಆ ಮೂರು ಹಗರಣಗಳೇ ಕಾಂಗ್ರೆಸ್​​​​ಗೆ ಮಹಾ ಅಸ್ತ್ರನಾ..?
  • ಯಾವೆಲ್ಲಾ ಅಧಿಕಾರಿಗಳು..ರಾಜಕಾರಣಿಗಳಿಗೆ ಕಂಟಕ..?
ಪಿ‌ಎಸ್‌ಐ​​, ಬಿಟ್​​​ ಕಾಯಿನ್, ಟೆಂಡರ್​ ಹಗರಣಗಳಿಗೆ ಮರುಜೀವ  title=

Scams in the BJP government: ಬಿಜೆಪಿ ಸರ್ಕಾರದಲ್ಲಿ ನಡೆದ ಹಗರಣಗಳಿಗೆ ಮರುಜೀವ ಬರಲಿದೆ. ಕಾಂಗ್ರೆಸ್​​​​ಗೆ ಮಹಾ ಅಸ್ತ್ರವಾಗಿರುವ ಬಿಟ್​​​ ಕಾಯಿನ್​​, ಪಿ‌ಎಸ್‌ಐ, ಟೆಂಡರ್​​​ ಸ್ಕ್ಯಾಮ್​ಗಳು ರೀ ಓಪನ್ ಆಗಲಿದ್ದು ಆ ಮೂರು ಹಗರಣಗಳಿಗೆ ಸಂಬಂಧಪಟ್ಟವರನ್ನು ಜೈಲಿಗೆ ಕಳಿಸೋಕೆ ಕಾಂಗ್ರೆಸ್​​ ಸಜ್ಜಾಗುತ್ತಿದೆ. 

ಪಿ‌ಎಸ್‌ಐ ಸ್ಕ್ಯಾಮ್​​:
ಇಡೀ ರಾಜ್ಯ ಮಾತ್ರವಲ್ಲದೆ, ದೇಶ ಮಟ್ಟದಲ್ಲಿ ಭಾರೀ ಸದ್ದು ಮಾಡಿದ್ದ ಪಿ‌ಎಸ್‌ಐ ಹಗರಣ ಕರ್ನಾಟಕಕ್ಕೆ ಕೆಟ್ಟ ಹೆಸರು ತಂದಿತ್ತು. ಪಿ‌ಎಸ್‌ಐ ನೇಮಕಾತಿಯಲ್ಲಿ ಲಕ್ಷದಿಂದ ಕೋಟಿ ಲಂಚ  ನಡೆದಿತ್ತು. ಪಿ‌ಎಸ್‌ಐ ಹಗರಣದಲ್ಲಿ ಕಿಂಗ್​ಪಿನ್​​ ಎಡಿ‌ಜಿ‌ಪಿ ಬಂಧನವಾಗಿದೆ. ಎಡಿ‌ಜಿ‌ಪಿ  ಜತೆಗೆ ಕೆಲವರನ್ನ ಅರೆಸ್ಟ್​​  ಮಾಡಿ ತನಿಖೆ ನಡೆಸಲಾಗಿತ್ತು. ಇದೀಗ ಕಾಂಗ್ರೆಸ್​​ ಸರ್ಕಾರದಿಂದ ಪಿ‌ಎಸ್‌ಐ ಸ್ಕ್ಯಾಮ್​​​ ಮರು ತನಿಖೆಗೆ ತಯಾರಿ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ- ಅಂಬೇಡ್ಕರ್ ಅವಹೇಳನ ಆರೋಪ: ತನಿಖೆಗೆ ಸಮಿತಿ ರಚಿಸಿದ ಸರ್ಕಾರ

ಬಿಟ್​​​ ಕಾಯಿನ್ :  
ಬಿಟ್​ ಕಾಯಿನ್​ ಹಗರಣ ​​ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು,  ಬಿಜೆಪಿ ಸರ್ಕಾರದ ಅವಧಿಯಲ್ಲಿ  ಬಿಟ್​​ಕಾಯಿನ್​ ಸ್ಕ್ಯಾಮ್​ ಸದ್ದು ಮಾಡಿತ್ತು. ಈ  ಹಗರಣದಲ್ಲಿ 3 ಐ‌ಪಿ‌ಎಸ್ ,9 ಇನ್ಸ್​​ಪೆಕ್ಟರ್​, ಡಿ‌ವೈ‌ಎಸ್‌ಪಿಗಳು ಶಾಮೀಲಾಗಿದ್ದರು. ಬಿಟ್​​ ಕಾಯಿನ್​​ ಸ್ಕ್ಯಾಮ್​​ನಲ್ಲಿ 1 ಸಾವಿರ ಕೋಟಿ ದಂಧೆಯಾಗಿದೆ. ಹಗರಣದಲ್ಲಿ  ದೊಡ್ಡವರು ಕೋಟಿ ಕೋಟಿ ತಿಂದು ತೇಗಿದ್ದರು. ಬಿಟ್​ ಕಾಯಿನ್​ ದಂಧೆಯಲ್ಲಿ  ಕಿಂಗ್​ಪಿನ್​ ಶ್ರೀಕಿ ಸಿಕ್ಕಿಬಿದ್ದಿದ್ದನು. ಇದೀಗ ಈ ಹಗರಣದಲ್ಲಿ ಭಾಗಿಯಾಗಿದ್ದವರಿಗೆ ಬಿಸಿ ಮುಟ್ಟಿಸಲು ಕಾಂಗ್ರೆಸ್ ಸರ್ಕಾರ ಸಜ್ಜಾಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಐ‌ಜಿ‌ಪಿ ನೇತೃತ್ವದಲ್ಲಿ  ಎಸ್‌ಐ‌ಟಿ  ರಚನೆಯಾಗಿದ್ದು, ಬಿಟ್​ ಕಾಯಿನ್​ ಕುರಿತು ವಿಶೇಷ ತನಿಖಾ ತಂಡದಿಂದ ಮರುತನಿಖೆ ನಡೆಸಲಾಗುತ್ತದೆ. ಎಸ್‌ಐ‌ಟಿಯಿಂದಲೇ  ಹಲವರ ಮೇಲೆ ರೇಡ್​ ಆಗೋದು ಗ್ಯಾರೆಂಟಿಯಾಗಿದೆ. 
 
ಇದನ್ನೂ ಓದಿ- Special trains: ವಿವಿಧ ನಗರಗಳಿಗೆ ಏಕಮಾರ್ಗದ ವಿಶೇಷ ರೈಲುಗಳ ಸಂಚಾರ

ಟೆಂಡರ್​ ಹಗರಣ :  
ಬಿಜೆಪಿ ಸರ್ಕಾರವನ್ನೇ  ಟೆಂಡರ್​ ಹಗರಣ ಶೇಕ್​ ಮಾಡಿದ್ದು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅಕ್ರಮ ಬಿಚ್ಚಿಟ್ಟಿದ್ದರು. ಬಿಜೆಪಿ ಸರ್ಕಾರಕ್ಕೆ  40% ಸ್ಕ್ಯಾಮ್​​​ ಕಳಂಕ ತಂದಿಟ್ಟಿತ್ತು. BBMP,  BWSSB, PWD, RDPR, ನೀರಾವರಿಯಲ್ಲಿ ಸ್ಕ್ಯಾಮ್​​​ ನಡೆದಿದೆ. ಒಟ್ಟು 5 ಇಲಾಖೆಗಳಲ್ಲಿ ಅಧಿಕಾರಿಗಳು, ರಾಜಕಾರಣಿಗಳ ಲಂಚ ಪಡೆದಿದ್ದು, ಕಳಪೆ ಕಾಮಗಾರಿ ಮಾಡುವ ಮೂಲಕ ಕೋಟಿ ಕೋಟಿ ಲೂಟಿ ಹೊಡೆದಿದ್ದರು. ಟೆಂಡರ್ ಹಗರಣದಲ್ಲಿ 50 ಸಾವಿರ ಕೋಟಿ ಅಕ್ರಮವಾಗಿದೆ.  ಇದೀಗ ದಕ್ಷ ಅಧಿಕಾರಿಯಿಂದ ಟೆಂಡರ್​​ ಸ್ಕ್ಯಾಮ್​​  ತನಿಖೆ ನಡೆಸಲಾಗುತ್ತದೆ. ಟೆಂಡರ್​ ಹಗರಣ ರೀ ಓಪನ್​ ಆದ್ರೆ ಕೆಲವು ರಾಜಕಾರಣಿಗಳಿಗೂ ಕೂಡ ನಡುಕ ಶುರುವಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News