ಹುಬ್ಬಳ್ಳಿಯ ಪ್ರಾವಿಡೆಂಟ್ ಫಂಡ್ ಇಲಾಖೆಯ 6 ಜನ ನಿವೃತ್ತ ಪಿಂಚಣಿದಾರರು ತಮ್ಮ ನಿವೃತ್ತಿ ನಂತರದ ಪಿಂಚಣಿ ನಿಗದಿಪಡಿಸುವಾಗ ತಪ್ಪು ಲೆಕ್ಕ ಹಾಕಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಜಿಲಾ ್ಲಗ್ರಾಹಕರ ಆಯೋಗಕ್ಕೆ ದೂರುಗಳನ್ನು ಸಲ್ಲಿಸಿದ್ದರು.
ಪ್ರಾವಿಡೆಂಟ್ ಫಂಡ್ ಕಡ್ಡಾಯ ನಿವೃತ್ತಿ ಉಳಿತಾಯ ಕಾರ್ಯಕ್ರಮವಾಗಿದ್ದು ಇದನ್ನು ಸರ್ಕಾರದ ಮೂಲಕ ನಡೆಸಲಾಗುತ್ತಿದೆ. ನಿವೃತ್ತಿಯ ವಯಸ್ಸನ್ನು ತಲುಪಿದ ನಂತರ ಉದ್ಯೋಗಿಗೆ ಹಣಕಾಸಿನ ನೆರವು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ನಡೆಸಲಾಗುತ್ತದೆ.
ನಿಯಮಗಳಿಗೆ ಅನುಸಾರವಾಗಿ, ಯಾವುದೇ ಬ್ಯಾಂಕ್ ಅಥವಾ ಪಕ್ಕದ ಅಂಚೆ ಕಚೇರಿಯಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಲು 100 ರೂ ಠೇವಣಿ ಬಳಸಬಹುದು. ಪ್ರತಿ ವರ್ಷ ಕನಿಷ್ಠ 500 ರೂ.ಗಳನ್ನು ಖಾತೆಗೆ ಜಮಾ ಮಾಡಬೇಕು.
ನೀವು ಉದ್ಯೋಗದಲ್ಲಿದ್ದು, ನಿಮ್ಮ ಕಂಪನಿಯು ಪ್ರಾವಿಡೆಂಟ್ ಫಂಡ್(EPFO) ಹಣವನ್ನು ವೇತನದಿಂದ ಕಡಿತಗೊಳಿಸುತ್ತಿದ್ದರೆ, ಇದು ನಿಮಗೆ ಪ್ರಮುಖ ಸುದ್ದಿಯಾಗಿರಲಿದೆ. ಬಹಳ ದಿನಗಳ ನಂತರ ಪಿಎಫ್ ಖಾತೆದಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ.
PF New Rule: ಯಾವುದೇ ಒಂದು ಕಾರಣದಿಂದ ಒಂದು ವೇಳೆ 5 ವರ್ಷಗಳ ಅವಧಿಯ ಮೊದಲು ನೀವು ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಹಿಂಪಡೆಯಲು ಬಯಸುತ್ತಿದ್ದು, ನಿಮ್ಮ ಖಾತೆಗೆ ನಿಮ್ಮ ಪ್ಯಾನ್ ನಂಬರ್ ಜೋಡಣೆ ಮಾಡದೆ ಇದ್ದ ಸಂದರ್ಭದಲ್ಲಿ ನೀವು ಶೇ.20 ರಷ್ಟು ಟಿಡಿಎಸ್ ಪಾವತಿಸಬೇಕಾಗಲಿದೆ. ಈ ಮೊದಲು ಇದು ಶೇ.30 ರಷ್ಟಿತ್ತು.
Budget 2023 : ಕೇಂದ್ರ ಬಜೆಟ್ 2023 ಅನ್ನು ಪ್ರಸ್ತುತಪಡಿಸುವಾಗ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ಯಾನ್ ಲಿಂಕ್ ಮಾಡದ ಪ್ರಕರಣಗಳಿಗೆ ನೌಕರರ ಭವಿಷ್ಯ ನಿಧಿ (ಇಪಿಎಫ್) ಹಿಂಪಡೆಯುವಿಕೆಯ ಮೇಲಿನ ಟಿಡಿಎಸ್ ದರವನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದರು.
PF Balance : 'ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ' ಎಂಬುದು ಇಪಿಎಫ್ ಖಾತೆದಾರರು ಹೆಚ್ಚು ಕೇಳುವ ಪ್ರಶ್ನೆಗಳಲ್ಲಿ ಒಂದಾಗಿದೆ. ಉದ್ಯೋಗಿ ಮತ್ತು ಇಪಿಎಫ್ (ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) ಸದಸ್ಯರಾಗಿರುವ ನೀವು ಯಾವುದೇ ಸಮಯದಲ್ಲಿ ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ತಿಳಿದುಕೊಳ್ಳುವುದು ನಿಮ್ಮ ಹಕ್ಕು.
PF Account : 1 ಅಕ್ಟೋಬರ್ 2021 ರಿಂದ 31 ಡಿಸೆಂಬರ್ 2022 ರವರೆಗಿನ ಅವಧಿಗೆ ಇಪಿಎಫ್ ಕೊಡುಗೆಯ ಮೇಲಿನ ಬಡ್ಡಿ ದರವು 8.1% ಆಗಿದೆ. ಅದೇ ಸಮಯದಲ್ಲಿ, ಪಿಎಫ್ ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸುವುದು ಎಂದು ಅನೇಕರಿಗೆ ಗೊತ್ತಿಲ್ಲ. ಹೀಗಾಗಿ, ಇಂದು ನಾವು ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವ ವಿಧಾನದ ಬಗ್ಗೆ ಮಾಹಿತಿ ತಂದಿದ್ದೇವೆ.
EPF Account : ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಭಾರತ ಸರ್ಕಾರದ ಮೇಲ್ವಿಚಾರಣೆಯಲ್ಲಿ ಇಪಿಎಫ್ಒ ಪರಿಚಯಿಸಿದ ಜನಪ್ರಿಯ ಉಳಿತಾಯ ಯೋಜನೆಯಾಗಿದೆ. ನಿವೃತ್ತಿ ನಿಧಿಯ ಹಣವನ್ನು ಉಳಿಸಲು ಸಂಬಳ ಪಡೆಯುವ ವರ್ಗದವರಿಗೆ ಉಳಿತಾಯ ಯೋಜನೆಯಾಗಿದೆ.
PF Fraud: ಇತ್ತೀಚೆಗೆ ಮುಂಬೈನ 47 ವರ್ಷದ ವ್ಯಕ್ತಿಯೊಬ್ಬರು ತಮ್ಮ ಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಇಪಿಎಫ್ಒ ಕಸ್ಟಮರ್ ಕೇರ್ನ ಸಹಾಯವನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಆದರೆ ಸಮಸ್ಯೆಯೆಂದರೆ ಆ ವ್ಯಕ್ತಿಗೆ ಕಸ್ಟಮರ್ ಕೇರ್ ಸಂಖ್ಯೆ ಗೊತ್ತಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ವ್ಯಕ್ತಿಯು ಗೂಗಲ್ನಲ್ಲಿ ಸಂಖ್ಯೆಯನ್ನು ಹುಡುಕಲು ನಿರ್ಧರಿಸಿದರು. ಅದನ್ನು ಪಡೆದ ನಂತರ ಕರೆ ಮಾಡಿದ್ದಾರೆ. ಬಳಿಕ ವಂಚನೆಗೊಳಗಾಗಿದ್ದಾರೆ.
How To Make Yor Investment Double: ಯಾವುದೇ ಒಂದು ಯೋಜನೆಯಲ್ಲಿ ನೀವು ಮಾಡಿರುವ ಹೂಡಿಕೆ ಎಷ್ಟು ಅವಧಿಯಲ್ಲಿ ದ್ವಿಗುಣಗೊಳ್ಳಲಿದೆ? ಇದನ್ನು ತಿಳಿದುಕೊಳ್ಳಲು ಒಂದು ಸುಲಭವಾದ ನಿಯಮವಿದೆ. ಇದನ್ನು 'ರೂಲ್ ಆಫ್ 72' ಹಾಗೂ 'ರೂಲ್ ಆಫ್ 114' ಎಂದು ಕರೆಯಲಾಗುತ್ತದೆ. ಈ ನಿಯಮ ನಿಮ್ಮ ಹೂಡಿಕೆ ದ್ವಿಗುಣ ಗೊಳ್ಳಲು ಬೇಕಾಗುವ ಸಮಯದ ಕುರಿತು ಮಾಹಿತಿ ನೀಡುತ್ತದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು 2022 ರ ಹಣಕಾಸು ವರ್ಷದಲ್ಲಿ ಪಿಎಫ್ ಖಾತೆಯಲ್ಲಿ ಪಡೆದ ಬಡ್ಡಿಯನ್ನು ಲೆಕ್ಕ ಹಾಕಿದೆ. ಶೀಘ್ರದಲ್ಲೇ ಖಾತೆದಾರರ ಖಾತೆಗೆ ವರ್ಗಾಯಿಸಲಾಗುವುದು. ಈ ಬಾರಿ ಸರ್ಕಾರದ ಖಾತೆಗೆ ಜಮೆಯಾಗಿರುವ ಒಟ್ಟು 72 ಸಾವಿರ ಕೋಟಿ ರೂ.ಗಳನ್ನು ಉದ್ಯೋಗಿಗಳ ಖಾತೆಗೆ ಕಳುಹಿಸಲಾಗುವುದು.
ಜುಲೈ 1 ರಿಂದ ದೇಶಾದ್ಯಂತ ಹೊಸ ವೇತನ ಸಂಹಿತೆಯನ್ನು ಸರ್ಕಾರ ಜಾರಿಗೊಳಿಸುವ ನಿರೀಕ್ಷೆಯಿದೆ. ಅದರ ಅನುಷ್ಠಾನದ ನಂತರ, ಕೆಲಸದ ಸಮಯ, ಟೇಕ್ ಹೋಂ ಸ್ಯಾಲರಿ ಪಿಎಫ್ ಎಲ್ಲಾ ನಿಯಮಗಳು ಕೂಡಾ ಬದಲಾಗಲಿವೆ.
ಮಾರ್ಚ್ನಲ್ಲಿ ನಡೆಯುವ ತನ್ನ ಸಭೆಯಲ್ಲಿ 2021-22ರ ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇಪಿಎಫ್ಒದ ಅಪೆಕ್ಸ್ ನಿರ್ಧಾರ ಸಂಸ್ಥೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿ ಹೆಚ್ಚಿಸಬಹುದು ಎಂಬ ಭರವಸೆ ಇದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಆತ್ಮನಿರ್ಭರ್ ಭಾರತ್ ರೋಜ್ಗಾರ್ ಯೋಜನೆ- ಎಬಿಆರ್ವೈ ಅಡಿಯಲ್ಲಿ ಸುಲಭವಾಗಿ ಉದ್ಯೋಗ ಪಡೆಯುವ ಅವಕಾಶವನ್ನು ನೀಡುತ್ತಿದೆ.
EPFO Alert: ಪಿಎಫ್ ಖಾತೆದಾರರಿಗೆ EPFO ಎಚ್ಚರಿಕೆಯನ್ನು ನೀಡಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಇಪಿಎಫ್ಒ, ತನ್ನ ಸದಸ್ಯರಿಂದ ಆಧಾರ್, ಪ್ಯಾನ್, ಯುಎಎನ್, ಬ್ಯಾಂಕ್ ಖಾತೆ ಅಥವಾ ಒಟಿಪಿಯಂತಹ ವೈಯಕ್ತಿಕ ವಿವರಗಳನ್ನು ಫೋನ್ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ಅದರ ಸದಸ್ಯರನ್ನು ಎಂದಿಗೂ ಕೇಳುವುದಿಲ್ಲ ಎಂದು ಬರೆದುಕೊಂಡಿದೆ.
Withdraw From PF: ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರದ ಅಡಿಯಲ್ಲಿ, ಪಿಎಫ್ ಖಾತೆದಾರರು ಇನ್ನು ಮುಂದೆ ಹಣವನ್ನು ಹಿಂಪಡೆಯಲು 3 ದಿನಗಳವರೆಗೆ ಕಾಯಬೇಕಾಗಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.