PF ಖಾತೆಗೆ ಶೀಘ್ರದಲ್ಲೇ ಬಂದು ಸೇರಲಿದೆ ಬಡ್ಡಿ ಮೊತ್ತ ! EPFO ಬಿಗ್ ಅಪ್ಡೇಟ್

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)  2022-23 ರ ಹಣಕಾಸು ವರ್ಷದ ಬಡ್ಡಿಯನ್ನು ಚಂದಾದಾರರ ಖಾತೆಗಳಿಗೆ ಠೇವಣಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

Written by - Ranjitha R K | Last Updated : Aug 11, 2023, 01:35 PM IST
  • PFO ​​ಬಡ್ಡಿ ವರ್ಗಾವಣೆ ಪ್ರಕ್ರಿಯೆಯನ್ನು ಪ್ರಾರಂಭ
  • ಶೀಘ್ರದಲ್ಲೇ ಬಡ್ಡಿ ಖಾತೆಗೆ ಜಮಾ
  • ಟ್ವೀಟ್ ಮೂಲಕ ಮಾಹಿತಿ ನೀಡಿದ ಇಪಿಎಫ್‌ಒ
PF ಖಾತೆಗೆ ಶೀಘ್ರದಲ್ಲೇ ಬಂದು ಸೇರಲಿದೆ ಬಡ್ಡಿ ಮೊತ್ತ ! EPFO ಬಿಗ್ ಅಪ್ಡೇಟ್ title=

ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ EPFO ​​ಬಡ್ಡಿ ವರ್ಗಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. 7 ಕೋಟಿಗೂ ಹೆಚ್ಚು ಚಂದಾದಾರರ ಖಾತೆಗೆ  ಶೀಘ್ರದಲ್ಲೇ ಬಡ್ಡಿಯನ್ನು  ಪಾವತಿಸಲಾಗುವುದು. PF ಚಂದಾದಾರರು ತಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಸುಲಭವಾಗಿ ಪರಿಶೀಲಿಸಬಹುದು.

ಪಿಎಫ್ ಖಾತೆಗೆ ಬಡ್ಡಿ ಪಾವತಿ  :
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)  2022-23 ರ ಹಣಕಾಸು ವರ್ಷದ ಬಡ್ಡಿಯನ್ನು ಚಂದಾದಾರರ ಖಾತೆಗಳಿಗೆ ಠೇವಣಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಫಲಾನುಭವಿಗಳ ಪಿಎಫ್ ಖಾತೆಗೆ ಬಡ್ಡಿ ಪಾವತಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಮಾಹಿತಿಯನ್ನು ಸ್ವತಃ  ಇಪಿಎಫ್ಒ ನೀಡಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ಬಳಕೆದಾರರು  ಬಡ್ಡಿಯ  ಬಗ್ಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯನ್ನು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ EPFO ​​ಬಡ್ಡಿ ಮೊತ್ತವನ್ನು ಶೀಘ್ರದಲ್ಲೇ ವರ್ಗಾಯಿಸುವುದಾಗಿ ಹೇಳಿದೆ. 

ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಕುಸಿತ..!

ಸಂಪೂರ್ಣ ಬಡ್ಡಿಯನ್ನು ಖಾತೆಗೆ ಜಮಾ  :
ಬಡ್ಡಿ ಮೊತ್ತವನ್ನು ರವಾನೆ ಮಾಡುವ ಪ್ರಕ್ರಿಯೆಯು ನಡೆಯುತ್ತಿದೆ. ಶೀಘ್ರದಲ್ಲೇ ಬಡ್ಡಿಯನ್ನು  ಖಾತೆಗೆ ಜಮಾ ಮಾಡಲಾಗುವುದು ಎಂದು ಇಪಿಎಫ್ಒ  ಹೇಳಿದೆ.   ಸಂಪೂರ್ಣ ಬಡ್ಡಿಯನ್ನು ಖಾತೆಗೆ ಜಮಾ ಮಾಡಲಾಗುವುದು. ಬಡ್ಡಿಯ ವಿಚರಾದಲ್ಲಿ ಯಾವುದೇ ರೀತಿಯ ನಷ್ಟವಾಗುವುದಿಲ್ಲ ಎನ್ನುವುದನ್ನು ಕೂಡಾ ಸಂಸ್ಥೆ ಸ್ಪಷ್ಟಪಡಿಸಿದೆ. ಸರ್ಕಾರವು ಇತ್ತೀಚೆಗೆ ಇಪಿಎಫ್ ಹೂಡಿಕೆ ಮೇಲೆ ಶೇಕಡಾ 8.15 ರ ಬಡ್ಡಿ ದರವನ್ನು ಘೋಷಿಸಿದೆ.  

ಪಿಎಫ್ ಬ್ಯಾಲೆನ್ಸ್ ಅನ್ನು  ಹೀಗೆ ಪರಿಶೀಲಿಸಬಹುದು : 
ಈಗ ಪಿಎಫ್ ಖಾತೆದಾರರು ತಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ತಿಳಿದುಕೊಳ್ಳುವುದು ಕಷ್ಟವೇನಲ್ಲ. ಅವರು ಕುಳಿತ ಜಾಗದಿಂದಲೇ ಈ ಕೆಲಸವನ್ನು ಸುಲಭವಾಗಿ ಮಾಡಬಹುದು.  ಪಿಎಫ್ ಚಂದಾದಾರರು  4 ರೀತಿಯಲ್ಲಿ ಪಿಎಫ್ ಬ್ಯಾಲೆನ್ಸ್ ಅನ್ನು ತಿಳಿದುಕೊಳ್ಳಬಹುದು. 

ಇದನ್ನೂ ಓದಿ :Toyota ಪರಿಚಯಿಸಿದೆ ಆಕರ್ಷಕ 7-ಸೀಟರ್ ಕಾರ್: ಬೆಲೆಯೂ ತುಂಬಾ ಕಡಿಮೆ 

ಮಿಸ್ಡ್ ಕಾಲ್ ಮೂಲಕ  ಪಡೆಯಬಹುದು ಮಾಹಿತಿ : 
ಮಿಸ್ಡ್ ಕಾಲ್ ಮೂಲಕ PF ಬ್ಯಾಲೆನ್ಸ್ ತಿಳಿಯಲು ಖಾತೆದಾರರ ಮೊಬೈಲ್ ಸಂಖ್ಯೆಯನ್ನು EPFO ​​ನಲ್ಲಿ ನೋಂದಾಯಿಸಿಕೊಳ್ಳಬೇಕು. ಪಿಎಫ್ ಚಂದಾದಾರರು ಮಿಸ್ಡ್ ಕಾಲ್ ಮೂಲಕ ಬ್ಯಾಲೆನ್ಸ್ ಮಾಹಿತಿಯನ್ನು ಪಡೆಯಲು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ನೀಡಬೇಕು. ಸ್ವಲ್ಪ ಸಮಯದ ನಂತರ, ಖಾತೆಯ ಮಾಹಿತಿಯನ್ನು ನಿಮ್ಮ ಮೊಬೈಲ್‌ಗೆ SMS ಮೂಲಕ ಕಳುಹಿಸಲಾಗುತ್ತದೆ.

SMS ಮೂಲಕ ಮಾಹಿತಿ ಪಡೆಯಬಹುದು :
ಎಸ್‌ಎಂಎಸ್ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು, ಇಪಿಎಫ್‌ಒದಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಂದ 7738299899 ಗೆ ಎಸ್‌ಎಂಎಸ್ ಕಳುಹಿಸಿ. ಇದಕ್ಕಾಗಿ, EPFO ​​UAN LAN ಎಂದು ಟೈಪ್ ಮಾಡಿ. ಇಲ್ಲಿ LAN ಎಂದರೆ ಭಾಷೆ. ಇಂಗ್ಲಿಷ್‌ನಲ್ಲಿ ಮಾಹಿತಿಗಾಗಿ, LAN ಬದಲು ಅನ್ನು ENG ಎಂದು ಟೈಪ್ ಮಾಡಿ.  ಕನ್ನಡದಲ್ಲಿ ಮಾಹಿತಿ ಪಡೆಯಬೇಕಾದರೆ LAN ಬದಲಿಗೆ KAN ಎಂದು ಬರೆಯಿರಿ. ಈ ಮೆಸೇಜ್ ಕಳುಹಿಸಿದ ಸ್ವಲ್ಪ ಹೊತ್ತಿನಲ್ಲಿ ಿ ಪಿಎಫ್ ಬ್ಯಾಲೆನ್ಸ್ ಮಾಹಿತಿ  ಇಮ್ಮ ಮೊಬೈಲ್ ಗೆ ಬರುತ್ತದೆ. 

ಇದನ್ನೂ ಓದಿ : ಹಬ್ಬದ ವೇಳೆ ಇಳಿಕೆ ಕಾಣುತ್ತಿದೆ ಬಂಗಾರದ ಬೆಲೆ ! 10 ಗ್ರಾಂ ಚಿನ್ನದ ಬೆಲೆ ಎಷ್ಟು ತಿಳಿಯಿರಿ

ವೆಬ್‌ಸೈಟ್‌ನಿಂದಲೂ ಮಾಹಿತಿ ಪಡೆಯಬಹುದು :  
ಆನ್‌ಲೈನ್‌ನಲ್ಲಿ ಪಿಎಫ್ ಬ್ಯಾಲೆನ್ಸ್ ವೀಕ್ಷಿಸಲು, ಇಪಿಎಫ್ ಪಾಸ್‌ಬುಕ್ ಪೋರ್ಟಲ್‌ಗೆ ಭೇಟಿ ನೀಡಬೇಕು. PF ಚಂದಾದಾರರು UAN ಮತ್ತು ಪಾಸ್‌ವರ್ಡ್‌ನೊಂದಿಗೆ ಈ ಪೋರ್ಟಲ್‌ಗೆ ಲಾಗಿನ್ ಮಾಡಬೇಕಾಗುತ್ತದೆ. ಇದರ ನಂತರ Download/View Passbook ಮೇಲೆ ಕ್ಲಿಕ್ ಮಾಡಿ. ಈಗ ಪಾಸ್‌ಬುಕ್ ನಿಮ್ಮ ಮುಂದೆ ತೆರೆಯುತ್ತದೆ. ಅಲ್ಲಿ ಪಿಎಫ್ ಮೊತ್ತದ ಬಾಕಿಯನ್ನು  ನೋಡಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News