New Wage Code: ವಾರದಲ್ಲಿ ಮೂರು ದಿನ ರಜೆ, ನಾಲ್ಕೇ ದಿನ ಕೆಲಸ, ಈ ದಿನದಿಂದ ಜಾರಿ ಹೊಸ ನಿಯಮ

ಜುಲೈ 1 ರಿಂದ ದೇಶಾದ್ಯಂತ ಹೊಸ ವೇತನ ಸಂಹಿತೆಯನ್ನು ಸರ್ಕಾರ ಜಾರಿಗೊಳಿಸುವ ನಿರೀಕ್ಷೆಯಿದೆ. ಅದರ ಅನುಷ್ಠಾನದ ನಂತರ, ಕೆಲಸದ ಸಮಯ,  ಟೇಕ್ ಹೋಂ ಸ್ಯಾಲರಿ  ಪಿಎಫ್ ಎಲ್ಲಾ ನಿಯಮಗಳು ಕೂಡಾ ಬದಲಾಗಲಿವೆ. 

Written by - Ranjitha R K | Last Updated : Jun 13, 2022, 10:58 AM IST
  • ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ
  • ಜಾರಿಯಾದರೆ ಬದಲಾಗಲಿದೆ ಎಲ್ಲಾ ನಿಯಮಗಳು
  • 30 ನಿಮಿಷಗಳಿಗಿಂತ ಹೆಚ್ಚು ಕೆಲಸ ಮಾಡಿದರೆ ಸಿಗಲಿದೆ ಓಟಿ
New Wage Code: ವಾರದಲ್ಲಿ ಮೂರು ದಿನ ರಜೆ, ನಾಲ್ಕೇ ದಿನ ಕೆಲಸ, ಈ ದಿನದಿಂದ ಜಾರಿ ಹೊಸ ನಿಯಮ  title=
New Wage Code (file photo)

New Wage Code : ಕೇಂದ್ರ ಸರ್ಕಾರ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಹೊಸ ಕಾರ್ಮಿಕ ಸಂಹಿತೆಯ ಅನುಷ್ಠಾನದ ನಂತರ, ಕಚೇರಿ ಕೆಲಸಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಕಾಣಬಹುದು. ಹೊಸ ಕಾರ್ಮಿಕ ಸಂಹಿತೆ ಜಾರಿಯಾದ ನಂತರ ಕೆಲಸದ ಅವಧಿ, ಟೇಕ್ ಹೋಂ ಸ್ಯಾಲರಿ,  ಪಿಎಫ್ ಎಲ್ಲವೂ ಬದಲಾಗಲಿದೆ.

ಬದಲಾಗುತ್ತವೆ ಈ ನಿಯಮಗಳು  :
ಕಾರ್ಮಿಕ ಸಂಹಿತೆಗೆ ಸಂಬಂಧಿಸಿದ ಕಾನೂನನ್ನು ಸರ್ಕಾರ ಸಂಸತ್ತಿನಲ್ಲಿ ಅಂಗೀಕರಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಅವರು, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ. ಇದರ ಅನುಷ್ಠಾನದ ನಂತರ, ಸಂಬಳ, ಕಚೇರಿ ಸಮಯ, ಪಿಎಫ್ , ನಿವೃತ್ತಿಯವರೆಗೆ ನಿಯಮಗಳಲ್ಲಿ ಬದಲಾವಣೆಯಾಗಲಿದೆ. 

ಇದನ್ನೂ ಓದಿ Gold Price Today : ಬಂಗಾರ ಖರೀದಿ ಮುನ್ನ ಇಂದಿನ ಬೆಲೆ ಎಷ್ಟು ತಿಳಿದುಕೊಳ್ಳಿ

ಕೆಲಸದ ಸಮಯ :
ಹೊಸ ವೇತನ ಸಂಹಿತೆಯು ಗರಿಷ್ಠ ಕೆಲಸದ ಸಮಯವನ್ನು 12 ಗಂಟೆಗಳವರೆಗೆ ಹೆಚ್ಚಿಸಲು ಪ್ರಸ್ತಾವನೆ ಇಟ್ಟಿದೆ. ಇದನ್ನು 4 ದಿನ ಕಚೇರಿ, 3 ದಿನ ವಾರದ ರಜೆ ಎಂದು ವಿಂಗಡಿಸಲಾಗಿದೆ. ಪ್ರತಿ 5 ಗಂಟೆಗಳ ನಂತರ ಉದ್ಯೋಗಿಗೆ 30 ನಿಮಿಷಗಳ ವಿರಾಮ ನೀಡಬೇಕು ಎನ್ನುವುದನ್ನು ಕೂಡಾ ಇಲ್ಲಿ ಹೇಳಲಾಗಿದೆ. 

30 ನಿಮಿಷಗಳಿಗಿಂತ ಹೆಚ್ಚು ಕೆಲಸ ಮಾಡಿದರೆ ಸಿಗಲಿದೆ ಓಟಿ : 
ಹೊಸ ವೇತನ ಸಂಹಿತೆಯ ಪ್ರಕಾರ 30 ನಿಮಿಷ ಹೆಚ್ಚು ಕೆಲಸ ಮಾಡಿದರೂ ಅದನ್ನು ಓಟಿ ಎಂದು ಪರಿಗಣಿಸಲಾಗುತ್ತದೆ. 15 ರಿಂದ 30 ನಿಮಿಷಗಳ ಅವಧಿಗೆ ಹೆಚ್ಚು ಕೆಲಸ ಮಾಡಿದರೂ ಅದನ್ನು  30 ನಿಮಿಷಗಳ ಓಟಿ ಎಂದು ಪರಿಗಣಿಸಲಾಗುತ್ತದೆ. 

ವೇತನ ಸ್ಟ್ರಕ್ಚರ್ ಬದಲಾಗುತ್ತದೆ :
ಹೊಸ ವೇಜ್ ಕೋಡ್ ಆಕ್ಟ್ ಪ್ರಕಾರ, ಉದ್ಯೋಗಿಯ ಮೂಲ ವೇತನವು ಕಂಪನಿಯ ವೆಚ್ಚದ 50 ಪ್ರತಿಶತಕ್ಕಿಂತ ಕಡಿಮೆ ಇರುವಂತಿಲ್ಲ. ವೇತನ ಸಂಹಿತೆ ಜಾರಿಯಾದ ನಂತರ ನೌಕರರ ಟೇಕ್ ಹೋಮ್ ಸಂಬಳ ಕಡಿಮೆಯಾಗಲಿದೆ.

ಇದನ್ನೂ ಓದಿ : PM Kisan: ನೀವೂ ಈ ತಪ್ಪು ಮಾಡಿದ್ದರೆ ಖಾತೆ ಸೇರಲ್ಲ ಪಿಎಂ ಕಿಸಾನ್ ಹಣ

ನಿವೃತ್ತಿಯ ನಂತರ ಸಿಗುತ್ತದೆ ಹೆಚ್ಚಿನ ಮೊತ್ತ :
ಪಿಎಫ್ ಹೆಚ್ಚಳದೊಂದಿಗೆ, ಗ್ರಾಚ್ಯುಟಿಯ ಮೇಲಿನ ಕೊಡುಗೆಯೂ ಹೆಚ್ಚಾಗುತ್ತದೆ. ಅಂದರೆ, ಟೇಕ್ ಹೋಮ್ ಸಂಬಳ ಕಡಿಮೆಯಾದರೂ   ಪಿಎಫ್ ಮತ್ತು ನಿವೃತ್ತಿಯ ವೇಳೆ ಹೆಚ್ಚಿಗೆ ಹಣ ಸಿಗಲಿದೆ. 

ಇನ್ನೂ ಅಧಿಕೃತ ಘೋಷಣೆಯಾಗಿಲ್ಲ : 
ಜುಲೈ 1 ರಿಂದ ಹೊಸ ವೇತನ ಸಂಹಿತೆಯನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಕೇಂದ್ರದ ಕಾರ್ಮಿಕ ಸಂಹಿತೆಯ ಪ್ರಕಾರ ದೇಶದ 23 ರಾಜ್ಯಗಳು ತಮ್ಮ ಕಾರ್ಮಿಕ ಕಾನೂನುಗಳನ್ನು ರೂಪಿಸಿವೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News