ಗೋಬಿ ಮಂಚೂರಿ ವಿಚಾರಕ್ಕೆ ಅಜ್ಜಿಯನ್ನು ಕೊಲೆ ಮಾಡಿದ ಮೊಮ್ಮಗ ಮತ್ತು ಆತನ ತಾಯಿ ಸೇರಿ ಒಟ್ಟು ಮೂವರನ್ನು ಬೆಂಗಳೂರಿನ ಕೆಂಗೇರಿ ಪೊಲೀಸರು 5 ವರ್ಷಗಳ ನಂತರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯಲ್ಲಿ ಇದೇ ಗ್ರಾಮದ ರಣಧೀರ ಉರ್ಫ್ ಮಹೇಶ ರಾಮಚಂದ್ರ ಮುರಾರಿ(28) ಹಾಗೂ ಪ್ರಕಾಶ ನಿಂಗಪ್ಪ ಹುಂಕರಿಪಾಟೀಲ(24) ಹತ್ಯೆ ಮಾಡಲಾಗಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಯುವಕರನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಕೊಲೆಯಾದ ಇಬ್ಬರು ಗ್ರಾಮದಲ್ಲಿ ಯಾವುದೇ ಕೆಲಸ ಮಾಡದೇ ಗುಂಪು ಕಟ್ಟಿಕೊಂಡು ಓಡಾಡುತ್ತಿದ್ದರು ಎಂತಲೂ ಹೇಳಲಾಗುತ್ತಿದೆ.
51 ವರ್ಷದ ಗಣೇಶ್ ಕಳೆದ ಕೆಲ ವರ್ಷದಿಂದ ಕುಡಿತದ ದಾಸನಾಗಿದ್ದ.. ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಗಣೇಶ್ ಸಂಜೆ ಆಗುತ್ತಿದ್ದಂತೆಯೇ ಕಂಠಪೂರ್ತಿ ಕುಡಿದು ಕಿರಿಕ್ ಶುರು ಮಾಡುತ್ತಿದ್ದ. ಕುಡಿದು ಬಂದು ಹೆಂಡತಿ ಮಕ್ಕಳನ್ನ ಪೀಡಿಸೋದು ಗಣೇಶನ ನಿತ್ಯದ ಕಾಯಕವಾಗಿತ್ತು.
ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕರಿಸಿದ್ದಪ್ಪ ಕಳಸದ , ಕಳೆದ ನಾಲ್ಕು ದಿನದ ಹಿಂದೆ ರಜೆಯ ಮೇಲೆ ಊರಿಗೆ ಬಂದಿದ್ದ. ಈ ವೇಳೆ ತನ್ನ ಪತ್ನಿ ಜೊತೆ ಯೋಧ ಜಗಳವಾಡಿದ್ದಾನೆ. ಪತಿ ತನ್ನೊಂದಿಗೆ ಜಗಳವಾಡಿರುವ ವಿಚಾರವನ್ನು ಪತ್ನಿ ಆಕೆಯ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದಾಳೆ.
ಇದೇ ತಿಂಗಳ ಮೂರನೇ ತಾರೀಖು ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಸಂದ್ರದ ನಿರ್ಜನ ಪ್ರದೇಶದಲ್ಲಿ ಅರೆ ಬೆಂದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಸದ್ಯ ಈ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಪತಿಯೇ ಪತ್ನಿಯ ಶೀಲ ಶಂಕಿಸಿ ಸ್ನೇಹಿತನ ಜೊತೆಗೂಡಿ ಕೊಲೆಗೈದಿದ್ದಾನೆ ಎಂಬ ಸತ್ಯ ಬಯಲಾಗಿದೆ.
ಉದಯಪುರದಲ್ಲಿ ನಡೆದ ಟೈಲರ್ ಹತ್ಯೆಯನ್ನು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಖಂಡಿಸಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಬಸವರಾಜ ರಾಯರೆಡ್ಡಿ, ಧರ್ಮದ ಹೆಸರಲ್ಲಿ ಕೆಲ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ. ನಾನು ವೈಯಕ್ತಿಕವಾಗಿ ಇದನ್ನು ಖಂಡಿಸುತ್ತೇನೆ. ಪ್ರಧಾನಿ ಮೋದಿ ಎಲ್ಲ ಧರ್ಮದ ಸೌಹಾರ್ದತೆ ಸಭೆ ಮಾಡೋ ಅವಶ್ಯಕತೆ ಇದೆ. ಪ್ರಧಾನಿ ಹತ್ಯೆ ಮಾಡ್ತೀನಿ ಅನ್ನೋದು ತಪ್ಪು. ಅವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ರಾಯರೆಡ್ಡಿ ಆಗ್ರಹಿಸಿದ್ದಾರೆ.
ರಾಜಸ್ಥಾನದಲ್ಲಿ ಹಿಂದೂ ಟೈಲರ್ ಹತ್ಯೆ ನಾಚಿಕೆಗೇಡು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.. ಇದೊಂದು ವ್ಯವಸ್ಥಿತ ಸಂಚು, ದೇಶದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ಶುರುವಾಗಿದೆ. ರಾಜಸ್ಥಾನ ಘಟನೆ ಮತ್ತು ಗಲಭೆ ಹಿಂದೆ ವಿದೇಶಿ ಕೈವಾಡವಿದೆ. ಕಾಂಗ್ರೆಸ್ ಈಗ ಮೌನವಾಗಿರೋದ್ರ ಹಿನ್ನೆಲೆ ಏನು? ಎಂದು ಕಟೀಲ್ ಪ್ರಶ್ನಿಸಿದ್ದಾರೆ.
ರಾಜಸ್ಥಾನದಲ್ಲಿ ಹಿಂದೂ ಟೈಲರ್ ಕನ್ಹಯ್ಯ ಹತ್ಯೆಯನ್ನು ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಖಂಡಿಸಿದ್ದಾರೆ. ಇದು ಇಡಿ ದೇಶ ತಲೆ ತಗ್ಗಿಸುವಂತಹ ವಿಚಾರ. ಆರೋಪಿಗಳಾದ ಮೊಹಮ್ಮದ್ ರಿಯಾಜ್ ಮತ್ತು ಅನ್ಸಾರಿಯನ್ನು ಗುಂಡಿಟ್ಟು ಹತ್ಯೆ ಮಾಡಬೇಕು. ಇಂಥಹ ಕೊಲೆಗಡುಕರು ಐಸಿಸ್ ಏಜೆಂಟರು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.